Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಜೂನ್ 12, 2025 ರಂದು ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿರುವ ದೃಶ್ಯ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅಂತಹ ಪೋಸ್ಟ್ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Also Read: ಜೂನ್ 15ರಿಂದ ಎಲ್ಲ ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಎನ್ನುವುದು ನಿಜವೇ?
ಸತ್ಯಶೋಧನೆಗಾಗಿ, ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಾಡಿದ್ದು, ಈ ವೇಳೆ @jaganbimal ಅವರ ಜನವರಿ 15, 2023 ರ ಎಕ್ಸ್ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ವೈರಲ್ ಆಗಿರುವ ಅದೇ ವೀಡಿಯೋ ಕಂಡುಬಂದಿದೆ. ಜೊತೆಗೆ “ನೇಪಾಳದಲ್ಲಿ ವಿಮಾನ ಅಪಘಾತದ ಕೆಲವು ಕ್ಷಣಗಳ ಮೊದಲು ಭಾರತೀಯ ಪ್ರಯಾಣಿಕರೊಬ್ಬರ ಲೈವ್ ವೀಡಿಯೋ – ಒಟ್ಟು 72 ಪ್ರಯಾಣಿಕರು ಸಾವನ್ನಪ್ಪಿದರು ‘ 4 ಭಾರತೀಯರು ಪ್ಯಾರಾಗ್ಲೈಡಿಂಗ್ಗಾಗಿ ಪೋಖರಾಗೆ ಹೋಗುತ್ತಿದ್ದರು” ಎಂದು ಹೇಳಲಾಗಿದೆ. ಆದ್ದರಿಂದ ಈ ವೀಡಿಯೋ ಇತ್ತೀಚೆಗೆ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಅಪಘಾತಕ್ಕೆ ಸಂಬಂಧಿಸಿಲ್ಲ ಎಂದು ದೃಢಪಡಿಸುತ್ತದೆ.

ಜನವರಿ 16, 2023 ರಂದು ಪ್ರಕಟಿಸಿದ ಮೋಜೋ ಸ್ಟೋರಿ ಯ ಯೂಟ್ಯೂಬ್ ಪೋಸ್ಟ್ ಕೂಡ ನಮಗೆ ಲಭ್ಯವಾಗಿದೆ. ಅದರಲ್ಲಿ ಅದೇ ಕ್ಲಿಪ್ನ ದೀರ್ಘ ಆವೃತ್ತಿಯನ್ನು ಪ್ರದರ್ಶಿಸಲಾಗಿದೆ. “ನೇಪಾಳ ವಿಮಾನ ಅಪಘಾತದ ವೀಡಿಯೋ: ಜನವರಿ 15 ರಂದು ನೇಪಾಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಾಲ್ವರು ಭಾರತೀಯರು ಸಾವನ್ನಪ್ಪಿದರು. ಪೋಖರಾದಲ್ಲಿ ಇಳಿಯುವಾಗ ವಿಮಾನ ಅಪಘಾತಕ್ಕೀಡಾಗುವ ಕೆಲವೇ ನಿಮಿಷಗಳ ಮೊದಲು ನಾಲ್ವರೂ ಫೇಸ್ಬುಕ್ನಲ್ಲಿ ಲೈವ್ ಆಗಿದ್ದರು ಎಂದು ವರದಿಯಾಗಿದೆ. ಅವರು ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯವರು. ಈ ಪ್ರಯಾಣಿಕರಲ್ಲಿ ಒಬ್ಬರು ಮಾಡಿದ ಫೇಸ್ಬುಕ್ ಲೈವ್ನ ಆಯ್ದ ಭಾಗ ಎಂದು ಹೇಳಲಾಗುವ ಒಂದು ಕ್ಲಿಪ್ ಈಗ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ. ಕ್ಲಿಪ್ನಲ್ಲಿ, ವಿಮಾನವು ತಿರುವು ಪಡೆದು ನಂತರ ಬೆಂಕಿ ಹೊತ್ತಿಕೊಳ್ಳುವುದನ್ನು ಕಾಣಬಹುದು” ಎಂದು ಅದು ಹೇಳಿದೆ.

ಜನವರಿ 16, 2023 ರಂದು ಇಂಡಿಯಾ ಟುಡೇ ಫೇಸ್ಬುಕ್ನಲ್ಲಿ ಪ್ರಕಟಿಸಲಾದ ಅದೇ ವೀಡಿಯೋದ ತುಣುಕುಗಳನ್ನು ಒಳಗೊಂಡ ಪೋಸ್ಟ್ನಲ್ಲಿ, “ಭಾನುವಾರ ನೇಪಾಳದಲ್ಲಿ ಕನಿಷ್ಠ 68 ಜನರನ್ನು ಬಲಿತೆಗೆದುಕೊಂಡ ವಿಮಾನ ಅಪಘಾತದಲ್ಲಿ ಭಾರತೀಯ ಪ್ರಯಾಣಿಕರೊಬ್ಬರು, ಮಾರಕ ಘಟನೆಯ ನಿಖರವಾದ ಕ್ಷಣವನ್ನು ಫೇಸ್ಬುಕ್ ಲೈವ್ನಲ್ಲಿ ಸೆರೆಹಿಡಿದಿದ್ದಾರೆ. ಈ ಹೃದಯವಿದ್ರಾವಕ ವೀಡಿಯೋವನ್ನು ವೀಕ್ಷಿಸಿ” ಎಂದು ಹೇಳಲಾಗಿದೆ.

ಇಲ್ಲಿ , ಇಲ್ಲಿ ಮತ್ತು ಇಲ್ಲಿ ಇದೇ ವಿಷಯದ ಕುರಿತ ವರದಿಗಳನ್ನು ನೋಡಬಹುದು.
ಆದ್ದರಿಂದ, ನೇಪಾಳದ ಹಳೆಯ ವೀಡಿಯೋವನ್ನು ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗುವ ಮೊದಲಿನ ಕ್ಷಣಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.
Our Sources
X Post By @jaganbimal, Dated January 15, 2023
YouTube Post By Mojo Story, Dated January 16, 2023
Facebook Post By India Today, Dated January 16, 2023
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 18, 2025
Ishwarachandra B G
October 18, 2025
Runjay Kumar
October 13, 2025