Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬಾಂಗ್ಲಾದೇಶ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗ್ರಹ
ಇದು ಸುಳ್ಳು ಯೋಗಿ ಆದಿತ್ಯನಾಥ್ ಅವರು ಸದನದಲ್ಲಿ ಬಾಂಗ್ಲಾದೇಶದ ಬಗ್ಗೆ ಮಾತನಾಡುವ ವೀಡಿಯೋವನ್ನು ಎಐ ಮೂಲಕ ತಿರುಚಲಾಗಿದೆ
ಬಾಂಗ್ಲಾದೇಶ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸದನದಲ್ಲಿ ಭಾಷಣ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ರೀಲ್ನಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು “ಪ್ರಧಾನಿ ಮೋದಿಯವರು ಬಾಂಗ್ಲಾದೇಶದ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗದಿದ್ದರೆ, ಅವರು ರಾಜೀನಾಮೆ ನೀಡಬೇಕು ಮತ್ತು ಧರ್ಮಯುದ್ಧದ ಮೂಲಕ ಬಾಂಗ್ಲಾದೇಶವನ್ನು ಮತ್ತೆ ಅಖಂಡ ಭಾರತದ ಭಾಗವನ್ನಾಗಿ ಕಾರ್ಯಕರ್ತರು ಮಾಡಲಿದ್ದಾರೆ” ಎಂದು ಹೇಳುತ್ತಿರುವುದನ್ನು ನೋಡಬಹುದು.

ಇದೇ ರೀತಿಯ ವೈರಲ್ ಪೋಸ್ಟ್ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Also Read: ಉನ್ನಾವೋ ಅತ್ಯಾಚಾರ ಪ್ರಕರಣ: ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್ಗೆ ‘ಭವ್ಯ ಸ್ವಾಗತ’ ದ ವೈರಲ್ ಚಿತ್ರ ಎಐ ಸೃಷ್ಟಿ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿ ಅವರ ರಾಜೀನಾಮೆಗೆ ಆಗ್ರಹಿಸಿದರುವ ವೈರಲ್ ವೀಡಿಯೋದ ಬಗ್ಗೆ ತನಿಖೆ ನಡೆಸಲು, ನಾವು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ವೈರಲ್ ವೀಡಿಯೋಕ್ಕೆ ಸಂಬಂಧಿಸಿ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ.
ಗೂಗಲ್ ಲೆನ್ಸ್ ಸಹಾಯದಿಂದ ವೈರಲ್ ವೀಡಿಯೋದ ಕೀಫ್ರೇಮ್ ಅನ್ನು ಸರ್ಚ್ ಮಾಡಿದಾಗ, 24 ಡಿಸೆಂಬರ್ 2025 ರಂದು ಟೈಮ್ಸ್ ನೌ ನವಭಾರತ್ ಮತ್ತು ನ್ಯೂಸ್ 18 ಇಂಡಿಯಾದ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೋ ಲಭ್ಯವಾಗಿದೆ. ಈ ವೀಡಿಯೋ ಮತ್ತು ವೈರಲ್ ವೀಡಿಯೋದ ನಡುವೆ ಅನೇಕ ಸಾಮ್ಯತೆ ಇದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಡಿಸೆಂಬರ್ 24 ರಂದು ಉತ್ತರಪ್ರದೇಶ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಮಾಡಿದ ಭಾಷಣದ ವೀಡಿಯೋ ಇದು ಎಂದು ಎರಡೂ ವರದಿಗಳು ತಿಳಿಸಿವೆ. ಆದಾಗ್ಯೂ, ಯಾವುದೇ ವರದಿಗಳಲ್ಲಿ ವೈರಲ್ ಹೇಳಿಕೆ ಬಗ್ಗೆ ಯಾವುದೇ ಉಲ್ಲೇಖವಿಲ್ಲ.


ತನಿಖೆಯ ಸಮಯದಲ್ಲಿ, ಡಿಸೆಂಬರ್ 24, 2025 ರಂದು ನವಭಾರತ್ ಟೈಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ 1 ಗಂಟೆ 21 ನಿಮಿಷ ಮತ್ತು 55 ಸೆಕೆಂಡುಗಳ ವೀಡಿಯೋವನ್ನು ನಾವು ನೋಡಿದ್ದೇವೆ. ವೀಡಿಯೋ ವರದಿಯನ್ನು ಎಚ್ಚರಿಕೆಯಿಂದ ನೋಡಿದಾಗ, ಯೋಗಿ ಆದಿತ್ಯನಾಥ್ ಅವರು ತಮ್ಮ ಭಾಷಣದಲ್ಲಿ ವೈರಲ್ ವೀಡಿಯೋ ರೀತಿ ಯಾವುದೇ ಹೇಳಿಕೆ ನೀಡಿಲ್ಲ ಎಂದು ನಾವು ಗಮನಿಸಿದ್ದೇವೆ. ಈ ವೀಡಿಯೋದಲ್ಲಿ, 59 ನಿಮಿಷಗಳಿಂದ 1 ಗಂಟೆ 3 ನಿಮಿಷಗಳ ನಡುವೆ, ಯೋಗಿ ಆದಿತ್ಯನಾಥ್ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾತನಾಡಿದ್ದಾರೆ, ಆದರೆ ಬಾಂಗ್ಲಾದೇಶದ ಮೇಲೆ ಆಕ್ರಮಣ ಮಾಡದಿದ್ದರೆ ಪ್ರಧಾನಿ ಮೋದಿ ಹುದ್ದೆಯನ್ನುಬಿಡಬೇಕು ಎಂದು ಅವರು ಮಾತನಾಡಲಿಲ್ಲ.

ವೈರಲ್ ವೀಡಿಯೋವನ್ನು ಎಚ್ಚರಿಕೆಯಿಂದ ನೋಡಿದಾಗ ಮತ್ತು ಆಲಿಸಿದಾಗ, ಅದರಲ್ಲಿ ಕೆಲವು ವ್ಯತ್ಯಾಸಗಳನ್ನು ನಾವು ಗಮನಿಸಿದ್ದೇವೆ. ಈ ವೀಡಿಯೋದಲ್ಲಿ ಕೇಳಿದ ಧ್ವನಿ ಕೃತಕವಾಗಿದೆ. ಇದಲ್ಲದೆ, ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳಲ್ಲಿ ಇಲ್ಲದ ಭಾಗವನ್ನು ವೈರಲ್ ಪೋಸ್ಟ್ ನಲ್ಲಿ ಎಡಿಟ್ ಮಾಡಿರಬಹುದು ಅಥವಾ ಎಐ ಮೂಲಕ ತಿದ್ದಿರಬಹುದು ಎಂಬ ಅನುಮಾನ ಉಂಟಾಗಿದೆ. ಅದಕ್ಕಾಗಿ ನಾವು ವೈರಲ್ ವೀಡಿಯೋದ ಆಡಿಯೋವನ್ನು ಎಐ ಪತ್ತೆ ವೇದಿಕೆಗಳಾದ ಟೂಲ್ಸ್ Aurigin.ai ಮತ್ತು ಡೀಪ್ ಫೇಕ್-ಒ-ಮೀಟರ್ ಮೂಲಕ ಪರೀಕ್ಷಿಸಿದ್ದೇವೆ.
ಆ ಪ್ರಕಾರ ವೈರಲ್ ವೀಡಿಯೋದಲ್ಲಿನ ಆಡಿಯೋವನ್ನು ಹೆಚ್ಚಾಗಿ ಎಐ-ಉತ್ಪತ್ತಿಯಾಗಿದೆ ಎಂದು Aurigin.ai ಹೇಳಿದೆ.

ಡೀಪ್ ಫೇಕ್-ಒ-ಮೀಟರ್ ವೈರಲ್ ವೀಡಿಯೋದಲ್ಲಿನ ಆಡಿಯೋ ಎಐ ನಿರ್ಮಿತ ಆಗಿರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದೆ.

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿಯವರು ರಾಜೀನಾಮೆ ನೀಡಬೇಕೆಂದು ಹೇಳಿದ್ದಾರೆ ಎಂಬ ಹೇಳಿಕೆ ಸುಳ್ಳು ಎಂಬುದು ನಮ್ಮ ತನಿಖೆಯಲ್ಲಿ ದೊರೆತ ಪುರಾವೆಗಳಿಂದ ಸ್ಪಷ್ಟವಾಗಿದೆ. ವೈರಲ್ ವೀಡಿಯೋದಲ್ಲಿರುವ ಆಡಿಯೋ ಎಐ ಮೂಲಕ ಸೃಷ್ಟಿ ಮಾಡಿದ್ದಾಗಿದೆ.
Also Read: ರಾಜಸ್ಥಾನದಲ್ಲಿ ‘ಅರಾವಳಿ ರಕ್ಷಿಸಿ’ ಬೃಹತ್ ಪ್ರತಿಭಟನೆ ಎಂದು ಹೇಳಲು ಹಳೆಯ, ಸಂಬಂಧವಿಲ್ಲದ ವೀಡಿಯೋ ಹಂಚಿಕೆ
Our Sources
Analysis by Aurigin.ai
Analysis by DeepFake-O-Meter
YouTube Video by Times Now Navbharat Dated: 24th Dec 2025
YouTube Video by News18 India Dated: 24th Dec 2025
YouTube Video by NBT Dated: 24th Dec 2025
(ಈ ವರದಿಯನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Vasudha Beri
December 24, 2025
Ishwarachandra B G
November 22, 2025
Vasudha Beri
November 20, 2025