Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬಾಂಗ್ಲಾದೇಶದ ಪೊಲೀಸರು ದೀಪು ಚಂದ್ರ ದಾಸ್ನನ್ನು ಗುಂಪೊಂದಕ್ಕೆ ಹಸ್ತಾಂತರಿಸುತ್ತಿರುವುದನ್ನು ಮತ್ತು ನಂತರ ಆ ಗುಂಪೇ ಅವರನ್ನು ಥಳಿಸಿ ಕೊಂದಿರುವುದನ್ನು ವೈರಲ್ ಆಗಿರುವ ವೀಡಿಯೋ ತೋರಿಸುತ್ತದೆ.
ಆ ವೀಡಿಯೋ ದೀಪು ಚಂದ್ರ ದಾಸ್ ಪ್ರಕರಣಕ್ಕೂ ಹಿಂದಿನದ್ದಾಗಿದ್ದು, ವೀಡಿಯೋದಲ್ಲಿರುವ ವ್ಯಕ್ತಿ ಅವರಲ್ಲ.
ಬಾಂಗ್ಲಾದೇಶದ ಮೈಮೆನ್ಸಿಂಗ್ ಎಂಬಲ್ಲಿ ಇತ್ತೀಚಿಗೆ ಕಾರ್ಖಾನೆ ಕೆಲಸಗಾರ, ಹಿಂದೂ ಧರ್ಮೀಯ ದೀಪು ಚಂದ್ರ ದಾಸ್ ಎಂಬವರನ್ನು ಗುಂಪೊಂದು ಕ್ರೂರವಾಗಿ ಹೊಡೆದು ಕೊಂದು, ಅನಂತರ ದೇಹಕ್ಕೆ ಬೆಂಕಿ ಹಚ್ಚಿತು. ದೇವರ ಅವಹೇಳನದ ಆರೋಪದ ಮೇರೆಗೆ ಈ ಹತ್ಯೆ ನಡೆದಿದೆ ಎನ್ನಲಾಗಿದ್ದು, ಇದು ಆ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಸುರಕ್ಷತೆ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಆದಾಗ್ಯೂ, ಇತ್ತೀಚಿನ ವರದಿಗಳ ಪ್ರಕಾರ , ದೀಪು ಯಾವುದೇ ಧರ್ಮವನ್ನು ಅವಮಾನಿಸಿದ್ದಾರೆ ಎಂಬ ಹೇಳಿಕೆಗಳನ್ನು ಬೆಂಬಲಿಸುವ ಯಾವುದೇ ಪುರಾವೆಗಳು ಪೊಲೀಸ್ ಮತ್ತು ಕ್ಷಿಪ್ರ ಕಾರ್ಯ ಬೆಟಾಲಿಯನ್ (RAB)ಗೆ ಇಲ್ಲಿಯವರೆಗೆ ಕಂಡುಬಂದಿಲ್ಲ. ಅವರು ದೇವರನ್ನು ದೂಷಿಸಿದ್ದಾರೆ ಎನ್ನುವ ಆರೋಪಗಳು ಬಾಯಿಮಾತಿನ ಆರೋಪಗಳಾಗಿವೆ ಎಂದು ಮೈಮೆನ್ಸಿಂಗ್ ನ ಎಎಸ್ಪಿ (ಆಡಳಿತ) ಅಬ್ದುಲ್ಲಾ ಅಲ್ ಮಾಮುನ್ ಹೇಳಿದ್ದಾರೆ.
ಏತನ್ಮಧ್ಯೆ ಪೊಲೀಸರು ವ್ಯಕ್ತಿಯೊಬ್ಬನನ್ನು ಎಳೆದುಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋ ಜೊತೆಗಿನ ಹೇಳಿಕೆಯಲ್ಲಿ “ದೀಪು ಚಂದ್ರ ದಾಸ್ ಅವರ ಕೊನೆಯ ಕ್ಷಣಗಳ ವೀಡಿಯೋ “ನಾನು ಯಾರನ್ನೂ ಅವಮಾನಿಸಿಲ್ಲ” ಎಂದು ಅವನು ಬೇಡಿಕೊಂಡರೂ ಪೊಲೀಸರು ಅವನನ್ನು ಗಲಭೆಕೋರರಿಗೆ ಒಪ್ಪಿಸುತ್ತಿದ್ದಾರೆ. ದೀಪು ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ “ಸರ್, ದಯವಿಟ್ಟು ನನ್ನನ್ನು ಉಳಿಸಿ. ನಾನು ಇಸ್ಲಾಂ ಅಥವಾ ಮುಹಮ್ಮದ್ ಬಗ್ಗೆ ಏನನ್ನೂ ಹೇಳಲಿಲ್ಲ” ಎಂದು ಬೇಡಿಕೊಳ್ಳುತ್ತಿದ್ದಾರೆ. ಇದರ ಹೊರತಾಗಿಯೂ, ಅವರನ್ನು ಜಿಹಾದಿ ಗುಂಪಿಗೆ ಒಪ್ಪಿಸಲಾಯಿತು.” ಎಂದಿದೆ.
Also Read: ಅರಾವಳಿ ಬೆಟ್ಟ ಉಳಿಸಿ ಪ್ರತಿಭಟನೆ ಎಂದು ರಾಜಸ್ಥಾನದ ಕುಸ್ತಿ ಪಂದ್ಯಾವಳಿ ವೀಡಿಯೋ ವೈರಲ್

ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ, ನೋಡಬಹುದು.

ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಬಾಂಗ್ಲಾದೇಶ ಮೂಲದ ಭೋರೆರ್ ಕಾಗೋಜ್ ಎಂಬ ಹೆಸರಿನ ಮಾಧ್ಯಮದಲ್ಲಿ ನವೆಂಬರ್ 18, 2025 ರಂದು ಅದೇ ವೀಡಿಯೋವನ್ನು ಹೊಂದಿರುವ ಫೇಸ್ ಬುಕ್ ಪೋಸ್ಟ್ ಕಂಡುಬಂದಿದೆ. ಈ ಪೋಸ್ಟ್ ನ ಶೀರ್ಷಿಕೆಯಲ್ಲಿ, “ಈ ಢಾಕಾ ಕಾಲೇಜು ವಿದ್ಯಾರ್ಥಿಗೆ ಏನಾಯಿತು? ” ಎಂದಿದೆ. ಇದು ಮೈಮೆನ್ಸಿಂಗ್ನಲ್ಲಿ ದೀಪು ಚಂದ್ರ ದಾಸ್ ಹತ್ಯೆಗೂ ಹಿಂದಿನ ಕ್ಲಿಪ್ ಎಂದು ದೃಢಪಡಿಸುತ್ತದೆ.

ನವೆಂಬರ್ 18, 2025 ರಂದು ದೈನಿಕ್ ಸೋಕಲ್ ಹಂಚಿಕೊಂಡ ವೀಡಿಯೋದಲ್ಲಿ , ಪೊಲೀಸರು ಆ ವ್ಯಕ್ತಿಯನ್ನು ರಿಕ್ಷಾ ಹತ್ತಿ ಹೊರಹೋಗುವಂತೆ ಕೇಳುತ್ತಿರುವುದನ್ನು ತೋರಿಸಲಾಗಿದೆ. ಪೋಸ್ಟ್ ಪ್ರಕಾರ, ಈ ಘಟನೆ ಧನ್ಮೊಂಡಿಯಲ್ಲಿ ನಡೆದಿದೆ. ನವೆಂಬರ್ 17, 2025 ರ ಪೋಸ್ಟ್ನಲ್ಲಿ
ಬರ್ತಾ ಬಜಾರ್ ಕೂಡ ಆ ವ್ಯಕ್ತಿಯನ್ನು ಢಾಕಾ ಕಾಲೇಜು ವಿದ್ಯಾರ್ಥಿ ಎಂದು ಗುರುತಿಸಿದೆ. ಇನ್ನು, NPB ನ್ಯೂಸ್ ಪ್ರಕಟಿಸಿದ ದೃಶ್ಯಗಳಲ್ಲಿ , ವೈರಲ್ ಕ್ಲಿಪ್ನಲ್ಲಿ ಕಂಡುಬರುವ ವ್ಯಕ್ತಿ ತನ್ನನ್ನು “ಅಬ್ದುಲ್ ಮೋಮಿನ್” ಎಂದು ಗುರುತಿಸಿಸುವುದನ್ನು ಕೇಳಬಹುದು.
ದೃಶ್ಯ ದಲ್ಲಿ ಕಂಡುಬರುವ ಅಂಶಗಳು

ದೀಪು ಚಂದ್ರ ದಾಸ್ ಅವರನ್ನು ಢಾಕಾದಲ್ಲಿ ಅಲ್ಲ, ಮೈಮೆನ್ಸಿಂಗ್ನಲ್ಲಿ ಕೊಲ್ಲಲಾಗಿದೆ. ಆದ್ದರಿಂದ ಈ ವೀಡಿಯೋ ಜೊತೆಗಿನ ಹೇಳಿಕೆ ಸುಳ್ಳು ಎಂದು ಸಾಬೀತಾಗುತ್ತದೆ.
ವೀಡಿಯೋವನ್ನು ಪರಿಶೀಲಿಸುವ ಭಾಗವಾಗಿ, ನ್ಯೂಸ್ ಚೆಕರ್ ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಸಹಾಯಕ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಶಾದತ್ ಹೊಸೇನ್ ಅವರನ್ನು ಸಂಪರ್ಕಿಸಿದೆ. ಅವರು ವೈರಲ್ ಕ್ಲಿಪ್ನಲ್ಲಿ ತೋರಿಸಿರುವ ಘಟನೆ ಢಾಕಾದ ಧನ್ಮೊಂಡಿ -32 ರದ್ದಾಗಿದ್ದು, ಇತ್ತೀಚಿನ ದೀಪು ಚಂದ್ರ ದಾಸ್ ಹತ್ಯೆಗೆ ಸಂಬಂಧಿದ್ದಲ್ಲ ಎಂದು ದೃಢಪಡಿಸಿದ್ದಾರೆ.
ಈ ಸತ್ಯಶೋಧನೆಯ ಪ್ರಕಾರ, ಬಾಂಗ್ಲಾದೇಶದ ಪೊಲೀಸರು ದೀಪು ಚಂದ್ರ ದಾಸ್ ಅವರನ್ನು ಗಲಭೆಕೋರ ಗುಂಪಿಗೆ ಹಸ್ತಾಂತರಿಸುತ್ತಿದ್ದಾರೆ ಎಂದು ತೋರಿಸುವ ವೈರಲ್ ಪೋಸ್ಟ್ಗಳು ಸುಳ್ಳು ಎಂದು ಕಂಡುಬಂದಿದೆ.
Also Read: ಬಿರಿಯಾನಿಗೆ ಚರಂಡಿ ನೀರು? ಇಲ್ಲ ಇದು ಎಐ ವೀಡಿಯೋ
FAQಗಳು
Q1. ದೀಪು ಚಂದ್ರ ದಾಸ್ ಯಾರು?
ಅವರು ಮೈಮೆನ್ಸಿಂಗ್ನಲ್ಲಿ ಕಾರ್ಖಾನೆಯ ಕೆಲಸಗಾರರಾಗಿದ್ದ ಓರ್ವ ಹಿಂದೂ ವ್ಯಕ್ತಿ. ಅವರನ್ನು ಧರ್ಮನಿಂದೆಯ ಆರೋಪದ ಮೇಲೆ ಗುಂಪೊಂದು ಹೊಡೆದು ಕೊಂದಿತು.
Q2. ವೈರಲ್ ವೀಡಿಯೋ ದೀಪು ಚಂದ್ರ ದಾಸ್ ಅವರ ಮೇಲೆ ಗುಂಪು ಹಲ್ಲೆಗೆ ಸಂಬಂಧಿಸಿದೆಯೇ?
ಇಲ್ಲ. ವೀಡಿಯೋದಲ್ಲಿರುವ ವ್ಯಕ್ತಿ ಮತ್ತು ದೀಪು ಚಂದ್ರ ದಾಸ್ ಪ್ರಕರಣಕ್ಕೂ ಸಂಬಂಧವಿಲ್ಲ. ಈ ಘಟನೆ ದೀಪು ದಾಸ್ ಪ್ರಕರಣಕ್ಕೂ ಹಿಂದಿನದ್ದು.
Q3. ವೈರಲ್ ವೀಡಿಯೋ ಎಲ್ಲಿಂದ ಬಂದಿದೆ?
ಢಾಕಾ ಮೆಟ್ರೋಪಾಲಿಟನ್ ಪೊಲೀಸರ ಪ್ರಕಾರ, ಈ ಘಟನೆ ಢಾಕಾದ ಧನ್ಮೊಂಡಿ -32 ರಲ್ಲಿ ಸಂಭವಿಸಿದೆ.
Our Sources
Facebook Post By Bhorer Kagoj, Dated November 18, 2025
Facebook Post By Dainik Sokal, Dated November 18, 2025
Facebook Post By Barta Bazaar, Dated November 17, 2025
Facebook Post By NPB News, Dated November 18, 2025
Conversation With Assistant IG, DMP, Shadat Hossain On December 24, 2025
(With inputs from Rifat Mahmdul of Newschecker Bangladesh)
(ಈ ವರದಿಯನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Raushan Thakur
December 29, 2025
Ishwarachandra B G
December 19, 2025
Ishwarachandra B G
November 22, 2025