Authors
Claim
ಕಾಡುಗಳ್ಳ ವೀರಪ್ಪನ್ ಮಗಳು ವಿದ್ಯಾರಾಣಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಕಂಡುಬಂದಿದ್ದು, ಇದನ್ನು ನ್ಯೂಸ್‌ಚೆಕರ್ ಸತ್ಯಶೋಧನೆಗೆ ಒಳಪಡಿಸಿದ್ದು ಇದು ಸುಳ್ಳು ಎಂದು ಕಂಡುಕೊಂಡಿದೆ.
Also Read: ಸಂಸದ ಡಿ.ಕೆ. ಸುರೇಶ್ ಪೊಲೀಸರಿಗೆ ಆವಾಜ್ ಹಾಕಿದ ಹಳೆ ವೀಡಿಯೋ ಹಂಚಿಕೆ
ಈ ಪೋಸ್ಟ್ ನ ಆರ್ಕೈವ್ ಪುಟ ಇಲ್ಲಿದೆ.
Fact
ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಲಭ್ಯವಾಗಿವೆ.
ಮಾರ್ಚ್ 26, 2024ರಂದು ಎನ್‌ಡಿಟಿವಿ ವರದಿಯಲ್ಲಿ ವೀರಪ್ಪನ್ ಪುತ್ರಿ ವಿದ್ಯಾರಾಣಿ ತಮಿಳುನಾಡಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದಿದೆ. ಬಿಜೆಪಿಯಿಂದ ಹೊರ ಬಂದ ನಂತರ, ನಾಮ್ ತಮಿಳರ್ ಕಚ್ಚಿಯಿಂದ ಟಿಕೆಟ್ ಪಡೆದಿರುವ ಅವರು ಕೃಷ್ಣಗಿರಿಯಿಂದ ಸ್ಪರ್ಧಿಸಲಿದ್ದಾರೆ ಎಂದಿದೆ.
ಮಾರ್ಚ್ 23, 2024ರ ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ, ವಕೀಲರಾಗಿರುವ ವಿದ್ಯಾರಾಣಿ 2020ರ ಜುಲೈನಲ್ಲಿ ಬಿಜೆಪಿ ಸೇರಿದ್ದು, ರಾಜ್ಯ ಯುವ ವಿಭಾಗಕ್ಕೆ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು. ಇತ್ತೀಚೆಗೆ ಅವರು ನಟ, ನಿರ್ದೇಶಕ ಸೀಮನ್ ಅವರ ಎನ್ ಟಿಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದು ತಮಿಳುನಾಡಿನ ಕೃಷ್ಣಗಿರಿಯಿಂದ ಸ್ಪರ್ಧಿಸಲಿದ್ದಾರೆ ಎಂದಿದೆ.
ಮಾರ್ಚ್ 25, 2024 ರ ಆನ್ ಮನೋರಮಾ ವರದಿ ಪ್ರಕಾರ, ಕುಖ್ಯಾತ ಶ್ರೀಗಂಧದ ಸ್ಮಗ್ಲರ್ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ವಕೀಲೆಯಾಗಿರುವ ವಿದ್ಯಾ ಅವರು ತಮಿಳು ರಾಷ್ಟ್ರೀಯ ಸಂಘಟನೆಯಾದ ನಾಮ್ ತಮಿಝರ್ ಕಚ್ಚಿ (NTK) ಯನ್ನು ಪ್ರತಿನಿಧಿಸಲಿದ್ದಾರೆ ಎಂದಿದೆ.
ಈ ಪುರಾವೆಗಳ ಪ್ರಕಾರ, ವಿದ್ಯಾರಾಣಿ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಿಲ್ಲ, ಬದಲಾಗಿ ಎನ್‌ಟಿಕೆ ಯಿಂದ ಸ್ಪರ್ಧಿಸುತ್ತಿದ್ದಾರೆ. ಆದ್ದರಿಂದ ಹೇಳಿಕೆ ತಪ್ಪಾಗಿದೆ.
Also Read: ಫೋರ್ಬ್ಸ್ ನ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ 7ನೇ ಸ್ಥಾನದಲ್ಲಿದ್ದಾರೆಯೇ?
Result: False
Our Sources
Report By NDTV, Dated: March 26, 2024
Report By Deccan Herald, Dated: March 23, 2024
Report By Onmanorama, Dated: March 25, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.