Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಹಮದಾಬಾದ್‌ನಲ್ಲಿ ನಡೆದ ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್‌ನಲ್ಲಿ ಒಂದೂವರೆ ಲಕ್ಷ ಮಂದಿ ಹನುಮಾನ್ ಚಾಲೀಸಾ ಪಠಿಸಿದ್ದಾರೆ ಎಂಬ ವೀಡಿಯೋ ವೈರಲ್ ಆಗಿದೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಮೊನ್ನೆ ನಡೆದ ಕ್ರಿಕೆಟ್ ಮ್ಯಾಚ್ ನಲ್ಲಿ ಸುಮಾರು ಒಂದುವರೆ ಲಕ್ಷ ಜನ ಒಂದೇ ಬಾರಿ ಹನುಮಾನ್ ಚಾಲೀಸ್ ಹೇಳಿದ್ದು.. ಹಿಂದುಸ್ತಾನ ಬದಲಾಗುತ್ತಿದೆ, ಹಿಂದೂ ಬದಲಾಗುತ್ತಿದ್ದಾನೆ, ಈ ಬದಲಾವಣೆ ಬಹಳ ಅವಶ್ಯಕವಾಗಿ ಬೇಕಿತ್ತು” ಎಂದು ಹೇಳಲಾಗಿದೆ.
Also Read: ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಗೆ ತರಲಾಗಿದೆ ಎಂದ ವೀಡಿಯೋ ನಿಜವೇ?
ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ಇದು ಭಾಗಶಃ ಸುಳ್ಳು ಎಂದು ಕಂಡುಕೊಂಡಿದ್ದೇವೆ.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಒಂದು ಫಲಿತಾಂಶದ ಪ್ರಕಾರ, ಈ ವಿಡಿಯೋ ಭಾರತ-ಪಾಕಿಸ್ಥಾನ ಮ್ಯಾಚ್‌ನದ್ದು ಎಂದು ಕಂಡುಬಂದಿದೆ.
ಆ ಫಲಿತಾಂಶದ ಅನ್ವಯ ನಾವು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದು, ಹಾಡುಗಾರ ದರ್ಶನ್ ರಾವಲ್ ಅವರ ಕಾರ್ಯಕ್ರಮದ ಫಲಿತಾಂಶ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಚಿಂಟು ಡಿಆರ್ ಡಿಝಡ್ ಎಂಬ ಯೂಟ್ಯೂಬ್ ಚಾನೆಲ್ ಅಕ್ಟೋಬರ್ 15, 2023ರಂದು ಪ್ರಕಟಿಸಿದ ವೀಡಿಯೋದಲ್ಲಿ “ದರ್ಶನ್ ರಾವಲ್ ಲೈವ್ ಇನ್ ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ” ಶೀರ್ಷಿಕೆಯಡಿ ವೀಡಿಯೋ ಇರುವುದನ್ನು ಪತ್ತೆ ಮಾಡಿದ್ದೇವೆ. ಈ ವೀಡಿಯೋ, ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವುದನ್ನು ಕಂಡುಹಿಡಿದಿದ್ದೇವೆ.
ಆ ಬಳಿಕ ನಾವು ಅಕ್ಟೋಬರ್ 19, 2023ರಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪ್ರೇಕ್ಷಕರಾಗಿದ್ದ ಶ್ರೀನಿಧಿ ಡಿ.ಎಸ್. ಅವರನ್ನು ಸಂಪರ್ಕಿಸಿದ್ದೇವೆ. ನ್ಯೂಸ್ ಚೆಕರ್ ನೊಂದಿಗೆ ಅವರು ಮಾತನಾಡಿ, “ ಕ್ರಿಕೆಟ್ ಪಂದ್ಯಾಟದ ವೇಳೆ ಜೈಶ್ರೀರಾಮ್, ವಂದೇಮಾತರಂ, ಇತ್ಯಾದಿಗಳು ಕೇಳುತ್ತಿದ್ದು, ಮೊದಲ ಇನ್ನಿಂಗ್ಸ್ ಮುಕ್ತಾಯ ಬಳಿಕ ಹನುಮಾನ್ ಚಾಲೀಸಾವನ್ನು ಹೇಳಿದ್ದಾರೆ. ಆದರೆ ವೈರಲ್ ವೀಡಿಯೋದಲ್ಲಿ ತೋರಿಸಿದ ರೀತಿಯಷ್ಟು ದೊಡ್ಡದಾಗಿ ಹೇಳಲಾಗಿಲ್ಲ. ಮತ್ತು ಸ್ಟೇಡಿಯಂನಲ್ಲಿ ಕುಳಿತ 1.5 ಲಕ್ಷ ಜನವೇನೂ ಹೇಳಿಲ್ಲ, ಒಂದು ವೀಕ್ಷಕರ ಸ್ಟ್ಯಾಂಡ್ ನಲ್ಲಿ ಅಂದರೆ ಸುಮಾರು 25 ಸಾವಿರ ಮಂದಿ ಕುಳಿತಿರುವ ಸ್ಟ್ಯಾಂಡ್ ನಲ್ಲಿ ಹೇಳಿರಬಹುದು” ಎಂದು ತಿಳಿಸಿದ್ದಾರೆ.
ಆ ಬಳಿಕ ನಾವು ವೈರಲ್ ವೀಡಿಯೋದಲ್ಲಿ ಕೇಳಿಬರುವ ಹನುಮಾನ್ ಚಾಲೀಸಾ ಬಗ್ಗೆ ಹೆಚ್ಚಿನ ಶೋಧನ ನಡೆಸಿದ್ದೇವೆ. ಈ ವೇಳೆ ಯೂಟ್ಯೂಬ್‌ನಲ್ಲಿ @jaipurwaley ಎಂಬ ಖಾತೆಯಿಂದ ಅಪ್‌ಲೋಡ್ ಆಗಿರುವ ಶಾರ್ಟ್ಸ್ ಒಂದು ಕಂಡುಬಂದಿದೆ.
ಈ ವೀಡಿಯೋದಲ್ಲಿ “ಸಾಮೂಹಿಕ್ ಚಾಲೀಸಾ ಪಾಠ” ಶೀರ್ಷಿಕೆಯಿದ್ದು, ಜನರು ಹನುಮಾನ್ ಚಾಲೀಸಾ ಹೇಳುವುದು ಕಂಡುಬಂದಿದೆ.
ನಮ್ಮ ತನಿಖೆಯಲ್ಲಿ ಈ ವೀಡಿಯೋದ ಆಡಿಯೋ ಮತ್ತು ವೈರಲ್ ಆಗಿರುವ ಕ್ರೀಡಾಂಗಣದ ವೀಡಿಯೋದ ಆಡಿಯೋಕ್ಕೆ ಸಾಮ್ಯತೆ ಇರುವುದು ಕಂಡುಬಂದಿದೆ. ಮತ್ತು @jaipurwaley ವೀಡಿಯೋ-ಆಡಿಯೋ ಸಮೀಕರಿಸುವಂತೆ ತುಟಿ ಚಲನೆ ಸ್ಪಷ್ಟವಾಗಿರುವುದನ್ನು ನಾವು ಗುರುತಿಸಿದ್ದೇವೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹನುಮಾನ ಚಾಲೀಸ ಹೇಳಲಾಗಿದ್ದರೂ, ವೈರಲ್ ವೀಡಿಯೋದಲ್ಲಿ ತೋರಿಸಿದ ವೀಡಿಯೋ ಭಾರತ-ಪಾಕಿಸ್ಥಾನ ಮ್ಯಾಚ್ ಸಂದರ್ಭದ್ದು ಮತ್ತು ಆ ದೃಶ್ಯಾವಳಿಯೊಂದಿಗೆ ಹಾಕಿದ ಚಾಲೀಸಾ ಪಠಣದ ಆಡಿಯೋ ಬೇರೆ ಸಂದರ್ಭದ್ದಾಗಿದೆ ಎಂದು ತಿಳಿದುಬಂದಿದೆ.
Also Read: ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್ ಗಾಂಧಿ ಅವಮಾನಿಸಿದರೇ, ಸತ್ಯ ಏನು?
Our Sources
YouTube By Chintu DRDZ, Dated: October 15, 2023
YouTube shorts By jaipurwaley
Conversation with Shreenidhi D.S., A spectator who participated in the Cricket World Cup final
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.