Fact Check: ಯಮ-ಚಿತ್ರಗುಪ್ತರು ರಸ್ತೆ ಗುಂಡಿಯನ್ನು ಅಳೆಯುವ ಹಾಸ್ಯದ ವೀಡಿಯೋ ಬೆಂಗಳೂರಿನದ್ದೇ?

ಯಮ-ಚಿತ್ರಗುಪ್ತ, ರಸ್ತೆಗುಂಡಿ, ಬೆಂಗಳೂರು, ಉಡುಪಿ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim

ಯಮ-ಚಿತ್ರಗುಪ್ತರು ರಸ್ತೆ ಗುಂಡಿಯನ್ನು ಅಳೆಯುವ ಹಾಸ್ಯದ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದು ಬೆಂಗಳೂರಿನದ್ದು ಎಂದು ಹೇಳಲಾಗುತ್ತಿದೆ.

Also Read: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಸಂತ್ರಸ್ತೆ ಮೃತರಾಗುವ ಮೊದಲಿನ ವೀಡಿಯೋ ನಿಜವಾದ್ದೇ?

Fact Check: ಯಮ-ಚಿತ್ರಗುಪ್ತರು ರಸ್ತೆ ಗುಂಡಿಯನ್ನು ಅಳೆಯುವ ಹಾಸ್ಯದ ವೀಡಿಯೋ ಬೆಂಗಳೂರಿನದ್ದೇ?

ನ್ಯೂಸ್‌ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಇದು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಯಮಚಿತ್ರಗುಪ್ತರ ವೇಷಧರಿಸಿ ರಸ್ತೆ ಗುಂಡಿ ಬಗ್ಗೆ ಮಾಡಿದ ವೀಡಿಯೋ ಎಂದು ತಿಳಿದುಬಂದಿದೆ.

Fact

ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಗುಂಡಿ ಬಿದ್ದಿದ್ದ ರಸ್ತೆಗಳ ಅಳತೆ ಮಾಡಿದ ಯಮ ಶೀರ್ಷಿಕೆಯಡಿಯಲ್ಲಿ ವಿಜಯವಾಣಿ ಯುಟ್ಯೂಬ್‌ ಚಾನೆಲ್ ಆಗಸ್ಟ್ 28 2024ರಂದು ವೀಡಿಯೋ ಪ್ರಕಟಿಸಿದ್ದು, ವಿಟ್ಲಪಿಂಡಿ ಉತ್ಸವ ನಿಮಿತ್ತ ಕಲಾವಿದರು  ರಸ್ತೆಗುಂಡಿ ಬಗ್ಗೆ ವ್ಯಂಗ್ಯವಾಗಿ ಈ ವೇಷಧರಿಸಿ ತೋರಿಸಿದ್ದರ ಕುರಿತ ವಿವರ ಇದೆ.

ದೈಜಿವರ್ಲ್ಡ್ ಆಗಸ್ಟ್ 28, 2024ರ ವರದಿ ಪ್ರಕಾರ, ಮಲ್ಪೆ ಆದಿ ಉಡುಪಿ ರಸ್ತೆ ಅವ್ಯವಸ್ಥೆ ಕುರಿತಾಗಿ ಕಲಾವಿದರ ಅಜಯ್‌ ಕುರ್ಕಾಲು ಅವರ ತಂಡ ವಿನೂತ ಪ್ರದರ್ಶನ ನಡೆಸಿತು ಎಂದಿದೆ.  

Fact Check: ಯಮ-ಚಿತ್ರಗುಪ್ತರು ರಸ್ತೆ ಗುಂಡಿಯನ್ನು ಅಳೆಯುವ ಹಾಸ್ಯದ ವೀಡಿಯೋ ಬೆಂಗಳೂರಿನದ್ದೇ?

ಆಗಸ್ಟ್ 28, 2024ರ ಸಂಜೆವಾಣಿ ವರದಿ ಪ್ರಕಾರ, ಸಂಪೂರ್ಣ ಹೊಂಡಮಯವಾದ ಆದಿಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಮಸ್ಯೆಯನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಮ ಧರ್ಮ, ಚಿತ್ರ ಗುಪ್ತ ಹಾಗೂ ಪ್ರೇತಾತ್ಮದ ವೇಷ ತೊಟ್ಟ ವೇಷಧಾರಿಗಳು ವಿಶಿಷ್ಟ ರೀತಿಯಲ್ಲಿ ಸಾರ್ವಜನಿಕರ ಗಮನ ಸೆಳೆದರು. ಪ್ರೇತಾತ್ಮದ ವೇಷ ಧರಿಸಿದ ಇಬ್ಬರು ಹೊಂಡಗಳ ಮೇಲಿಂದ ಜಿಗಿದರೆ, ಬಳಿಕ ಯಮ ಧರ್ಮ ಹಾಗೂ ಚಿತ್ರಗುಪ್ತ ಅವರ ಜಿಗಿತದ ಅಳತೆಯನ್ನು ಮಾಪನ ದಲ್ಲಿ ಅಳೆದರು. ಈ ಮೂಲಕ ಈ ಹೊಂಡಗಳು ಬಹಳ ಅಪಾಯಕಾರಿ ಎಂಬುದಾಗಿ ಬಿಂಬಿಸಿದರು.

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಈ ಪ್ರಕಾರ, ಯಮಚಿತ್ರಗುಪ್ತರು ರಸ್ತೆ ಹೊಂಡ ಅಳತೆ ಮಾಡಿದ ಈ ವೀಡಿಯೋ ಉಡುಪಿಯದ್ದಾಗಿದ್ದು, ಬೆಂಗಳೂರಿನದ್ದಲ್ಲ ಎಂದು ತಿಳಿದುಬಂದಿದೆ.

Also Read: ಮಂಕಿ ಪಾಕ್ಸ್ ಇನ್ನು ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಅಲ್ಲ? WHO ಮುಖ್ಯಸ್ಥರ ಬೇರೆ ಸಂದರ್ಭದ ಹಳೆ ವೀಡಿಯೋ ಹಂಚಿಕೆ

Result: Missing Context

Our Sources
YouTube Video By Vijyavani, August 28, 2024

Report By Daijiworld, August 28, 2024

Report By Sanjevani, August 28, 2024

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.