Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
‘ಗ್ಯಾರೆಂಟಿ ಗುಂಡಿ’ ಎಂದ ಈ ರಸ್ತೆ ಗುಂಡಿ ಕರ್ನಾಟಕದ್ದು, ಆರ್ ಜೆಡಿ ವಕ್ತಾರೆ ಕಾಂಚನಾ ಯಾದವ್ ಮೇಲೆ ಲಾಠಿ ಚಾರ್ಜ್, ಬೇಲೂರಿನಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಮತಾಂತರ ಮಾಫಿಯಾ ಕೈವಾಡ, ಹೈದ್ರಾಬಾದ್ ನ ಹುಸೇನ್ ಸಾಗರ್ ಸರೋವರದಲ್ಲಿ 1992ರಲ್ಲಿ ಬುದ್ಧ ಪ್ರತಿಮೆ ಪ್ರತಿಷ್ಠಾಪನೆಯ ದೃಶ್ಯ, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರಿಂದ ಪಂಜಾಬ್ ಪ್ರವಾಹದಲ್ಲಿ ಹಾನಿಗೊಳಗಾದ ರೈತರಿಗೆ ಉಚಿತವಾಗಿ 600 ಟ್ರಾಕ್ಟರ್ ವಿತರಣೆ, ‘ಗ್ಯಾರೆಂಟಿ ಗುಂಡಿ’ ಎಂದ ಈ ರಸ್ತೆ ಗುಂಡಿ ಕರ್ನಾಟಕದ್ದು ಎಂಬಂತೆ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ ಎಂದು ಸತ್ಯಾಂಶವನ್ನು ತೆರೆದಿಟ್ಟಿದೆ. ಈ ಕುರಿತ ವಾರದ ನೋಟ ಇಲ್ಲಿದೆ

ಹೈದ್ರಾಬಾದ್ ನ ಹುಸೇನ್ ಸಾಗರ್ ಸರೋವರದಲ್ಲಿ ಬುದ್ಧ ಪ್ರತಿಮೆ ಪ್ರತಿಷ್ಠಾಪನೆಯ ವೀಡಿಯೋ ಎಂದು ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ವೀಡಿಯೋ ಎಐ ಮೂಲಕ ರಚಿಸಿದ ವೀಡಿಯೋ ಆಗಿದೆ, ನಿಜವಾದ್ದಲ್ಲ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪಂಜಾಬ್ ಪ್ರವಾಹದಲ್ಲಿ ಹಾನಿಗೊಳಗಾದ ರೈತರಿಗೆ ಉಚಿತವಾಗಿ ಟ್ರಾಕ್ಟರ್ ವಿತರಣೆಗೆ ಮುಂದಾಗಿದ್ದಾರೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದರನ್ನು ಸತ್ಯಶೋಧನೆಗೊಳಪಡಿಸಿದಾಗ, ಇದು ಸುಳ್ಳು ಹೇಳಿಕೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಆರ್ ಜೆಡಿ ವಕ್ತಾರೆ ಕಾಂಚನಾ ಯಾದವ್ ಅವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ, ಕರ್ನಾಟಕದ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಸಂದರ್ಭದ ಗಲಾಟೆಯಲ್ಲಿ ಜ್ಯೋತಿ ಎಂಬವರ ಮೇಲೆ ನಡೆದ ಲಾಠಿ ಚಾರ್ಜ್ ಇದಾಗಿದೆ ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣ ಹಾಸನದ ಬೇಲೂರಿನಲ್ಲಿ ನಡೆದಿದ್ದು, ಇದರಲ್ಲಿ ಮತಾಂತರ ಮಾಫಿಯಾ ಇದೆ ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಕುರಿತು ತನಿಖೆ ನಡೆಸಿದಾಗ, ಪ್ರಕರಣದಲ್ಲಿ ಲೀಲಮ್ಮ ಎಂಬಾಕೆಯನ್ನು ಬಂಧಿಸಲಾಗಿದ್ದು, ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಮತ್ತು ಇದರಲ್ಲಿ ಯಾವುದೇ ಮಾಫಿಯಾ ಕೈವಾಡ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರದಿ ಇಲ್ಲಿ ಓದಿ

ರಸ್ತೆ ಗುಂಡಿಗಳ ಬಗ್ಗೆ ಕರ್ನಾಟಕಾದ್ಯಂತ ಜನರು ಚರ್ಚೆ ನಡೆಸುತ್ತಿರುವಾಗಲೇ, ರಸ್ತೆ ಗುಂಡಿಯ ಕುರಿತು ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೋ ಒಂದನ್ನು ಕರ್ನಾಟಕದ ರಸ್ತೆ ಗುಂಡಿ ಎನ್ನಲಾಗುತ್ತಿದೆ. ಆದರೆ ಸತ್ಯಶೋಧನೆ ನಡೆಸಿದಾಗ, ಈ ವೀಡಿಯೋ ಹಳೆಯದಾಗಿದ್ದು, ಚೀನದಿಂದ ಬಂದಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ
Ishwarachandra B G
November 22, 2025
Ishwarachandra B G
November 21, 2025
Ishwarachandra B G
November 18, 2025