Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬಾಂಗ್ಲಾದೇಶದಲ್ಲಿ ಮಹಿಳೆಯೊಬ್ಬಳ ಮೇಲೆ ಕಲ್ಲೆಸೆಯುತ್ತಿರುವ ವೀಡಿಯೋ
ಬಾಂಗ್ಲಾದೇಶದಲ್ಲಿ ಮಹಿಳೆಯೊಬ್ಬಳ ಮೇಲೆ ಕಲ್ಲೆಸೆಯುತ್ತಿರುವ ವೀಡಿಯೋ ಶೂಟಿಂಗ್ ಉದ್ದೇಶಕ್ಕಾಗಿ ಮಾಡಿದ್ದಾಗಿದೆ. ಇದು ನಿಜವಲ್ಲ
ಬಾಂಗ್ಲಾದೇಶದಲ್ಲಿ ಮಹಿಳೆಯೊಬ್ಬಳ ಮೇಲೆ ಕಲ್ಲೆಸೆಯಲಾಗುತ್ತಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಬಾಂಗ್ಲಾದೇಶದಲ್ಲಿ ಮಹಿಳೆಯೊಬ್ಬಳ ಮೇಲೆ ಕಲ್ಲೆಸೆಯಲಾಗುತ್ತಿದೆ. ಬಿಡೆನ್ ಆಡಳಿತದಲ್ಲಿ ಅಲ್ಲಿ ಆಳುವ ರಾಜ ಅಧಿಕಾರಕ್ಕೆ ಬಂದ ನಂತರ ಹೊಸ ಬಾಂಗ್ಲಾದೇಶ ಇದು” ಎಂದಿದೆ.

ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಶೂಟಿಂಗ್ ಒಂದರ ಉದ್ದೇಶಕ್ಕಾಗಿ ಮಾಡಿದ ದೃಶ್ಯ ಎಂದು ಕಂಡುಬಂದಿದೆ.
Also Read: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಾಂಗ್ಲಾದೇಶದ ಚಿತ್ತಗಾಂಗ್ ನಲ್ಲಿ ಪ್ರತಿಭಟನೆ ಎನ್ನುವುದು ನಿಜವಲ್ಲ
ಸತ್ಯಶೋಧನೆಗಾಗಿ ನಾವು ಈ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವರು ಈ ವೀಡಿಯೋವನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ. ಈ ವೇಳೆ R A K I B 760 ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ವೈರಲ್ ವೀಡಿಯೋದ ಸುದೀರ್ಘ ಆವೃತ್ತಿಯನ್ನು ನೋಡಿದ್ದೇವೆ.
ಆ ವೀಡಿಯೋವನ್ನು ಗಮನಿಸಿದಾಗ ದೃಶ್ಯಗಳ ಮಧ್ಯೆ ವಯರ್ ಗಳು, ಶೂಟಿಂಗ್ ಸ್ಪಾಟ್ ಲೈಟ್ ಗಳಿರುವುದನ್ನು ಗಮನಿಸಿದ್ದೇವೆ. ಮತ್ತು ಮುಸ್ಲಿಂ ಧರ್ಮೀಯರ ರೀತಿ ಬಟ್ಟೆ ತೊಟ್ಟವರು ಕಲ್ಲೆಸೆಯುವುದು ನಾಟಕೀಯವಾಗಿತ್ತು ಎನ್ನುವುದನ್ನು ಗಮನಿಸಿದ್ದೇವೆ.


ಆ ಬಳಿಕ ನಾವು ಸೂಕ್ತ ಬಂಗಾಳಿ ಕೀವರ್ಡ್ ಗಳೊಂದಿಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದು ಇನ್ನೊಂದು ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ.
ಮಾರ್ಚ್ 19, 2023ರಲ್ಲಿ SHAMIM AHMED CIP ಹೆಸರಿನ ಈ ಚಾನೆಲ್ ನಲ್ಲಿ 1 ನಿಮಿಷದ ವೀಡಿಯೋ ಅಪ್ ಲೋಡ್ ಮಾಡಲಾಗಿದ್ದು, ಇದು ವೈರಲ್ ವೀಡಿಯೋವನ್ನು ಹೋಲುತ್ತದೆ ಜೊತೆಗೆ ಇದಕ್ಕೆ ನೀಡಲಾದ ಶೀರ್ಷಿಕೆಯಲ್ಲಿ “ವ್ಯಭಿಚಾರಕ್ಕೆ ಏನು ಶಿಕ್ಷೆ?” (ಅನುವಾದಿಸಲಾಗಿದೆ) ಎಂದಿದೆ.
ಇದೇ ವೀಡಿಯೋದ ಕಾಮೆಂಟ್ ವಿಭಾಗದಲ್ಲಿ ಬಳಕೆದಾರ ಶಮೀಮ್ ಅಹ್ಮದ್ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದು, ಈ ವೀಡಿಯೋ ವಾಸ್ತವವಾಗಿ ಶೂಟಿಂಗ್ ಆಗಿತ್ತು ಎಂದಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಶಮೀಮ್ ಅಹ್ಮದ್ ಅವರನ್ನು ಸಂಪರ್ಕಿಸಲು ನ್ಯೂಸ್ಚೆಕರ್ ಪ್ರಯತ್ನಿಸಿದ್ದು, ಅವರ ಪ್ರತಿಕ್ರಿಯೆ ಬಂದ ಬಳಿಕ ಈ ಲೇಖನವನ್ನು ಪರಿಷ್ಕರಿಸಲಾಗುವುದು.
ಈ ಸತ್ಯಶೋಧನೆಯ ಪ್ರಕಾರ ಬಾಂಗ್ಲಾದೇಶದಲ್ಲಿ ಬಾಂಗ್ಲಾದೇಶದಲ್ಲಿ ಮಹಿಳೆಯೊಬ್ಬಳ ಮೇಲೆ ಕಲ್ಲೆಸೆಯಲಾಗುತ್ತಿದೆ ಎನ್ನುವುದು ನಿಜವಲ್ಲ, ಇದು ವೀಡಿಯೋ ಶೂಟಿಂಗ್ ಆಗಿದೆ ಎಂದು ಕಂಡುಬಂದಿದೆ.
Also Read: ಪೋಲಂಡ್ ಪ್ರವೇಶಿಸುತ್ತಿದ್ದ ಜಿಹಾದಿಗಳಿಗೆ ಗುಂಡಿಕ್ಕಿ ಕೊಲ್ಲಲಾಗಿದೆ ಎಂದ ಈ ವೀಡಿಯೋ ಹಿಂದಿನ ಸತ್ಯವೇನು?
Our Sources
YouTube Video By R A K I B 760, Dated: April 14, 2025
YouTube Video By SHAMIM AHMED CIP, March 19, 2023
(Inputs from Rifat Newschecker, Bangladesh)
Ishwarachandra B G
November 22, 2025
Tanujit Das
November 17, 2025
Ishwarachandra B G
November 3, 2025