Fact Check: ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾರನ್ನು ವ್ಯಕ್ತಿಯೊಬ್ಬ ನಿಂದಿಸಿದ್ದಾನೆ ಎನ್ನಲಾದ ವೀಡಿಯೋ ಹಿಂದಿನ ಸತ್ಯವೇನು?

ವ್ಯಕ್ತಿಯಿಂದ ಮೋದಿ, ಶಾ ನಿಂದನೆ

Authors

Since 2011, JP has been a media professional working as a reporter, editor, researcher and mass presenter. His mission to save society from the ill effects of disinformation led him to become a fact-checker. He has an MA in Political Science and Mass Communication.

Claim:
ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಅವರನ್ನು ಹೀನಾಯವಾಗಿ ನಿಂದಿಸಿದ ವ್ಯಕ್ತಿ

Fact
ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಅವರನ್ನು ವ್ಯಕ್ತಿಯೊಬ್ಬ ನಿಂದಿಸುವ ಈ ವೀಡಿಯೋ ನಾಲ್ಕು ವರ್ಷ ಹಳೆಯದಾಗಿದ್ದು, ಈ ಕುರಿತು ಪೊಲೀಸರು ಕೇಸು ದಾಖಲಿಸಿದ್ದರು

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ವ್ಯಕ್ತಿಯೊಬ್ಬ ನಿಂದಿಸಿದ ನಾಲ್ಕು ವರ್ಷಗಳ ಹಿಂದಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ವ್ಯಕ್ತಿಯೊಬ್ಬ ನಿಂದಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ಇತ್ತೀಚೆಗೆ ಹಂಚಿಕೊಳ್ಳಲಾಗುತ್ತಿದೆ.

ಆದಾಗ್ಯೂ, ವೈರಲ್ ವೀಡಿಯೋ ಸುಮಾರು ನಾಲ್ಕು ವರ್ಷಗಳಷ್ಟು ಹಳೆಯದು ಎಂದು ನಮ್ಮ ತನಿಖೆಯಲ್ಲಿ ನಾವು ಕಂಡುಕೊಂಡಿದ್ದೇವೆ. 2020ರಲ್ಲಿ ಅಕೋಲಾ ಪೊಲೀಸರು ಈ ಪ್ರಕರಣ ದಾಖಲಿಸಿದ್ದರು.

ಈ ವೀಡಿಯದಲ್ಲಿ, ಅಕೋಲಾ ಮೂಲದವನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ನಿಂದಿಸುತ್ತಿರುವುದು ಕಂಡುಬರುತ್ತದೆ. ಇದಲ್ಲದೆ, ವ್ಯಕ್ತಿಯು ಅನೇಕ ಪ್ರಚೋದನಕಾರಿ ವಿಷಯಗಳನ್ನು ಹೇಳುವುದನ್ನು ಸಹ ಕಾಣಬಹುದು.

ವೀಡಿಯೋವನ್ನು ಇತ್ತೀಚಿನ ಕ್ಯಾಪ್ಷನ್ನೊಂದಿಗೆ ಹಂಚಿಕೊಳ್ಳಲಾಗಿದ್ದು, “ಈ ವ್ಯಕ್ತಿ ಮಹಾರಾಷ್ಟ್ರದ ಅಕೋಲಾ ಮೂಲದವನು, ಭಾರತದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿರುವ ವ್ಯಕ್ತಿಯನ್ನು ನಿಂದಿಸಿದರೆ ಏನಾಗುತ್ತದೆ ಎಂಬುದನ್ನು ತೋರಿಸಿ. ಇದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಈ ವೀಡಿಯೋ ಪ್ರಧಾನಿ ಮತ್ತು ಗೃಹ ಸಚಿವರಿಗೆ ತಲುಪುವಷ್ಟು ವೈರಲ್ ಮಾಡಿ” ಎಂದು ಟ್ವೀಟ್ ಮಾಡಿದ್ದಾರೆ.

Also Read: ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ 1500 ವರ್ಷ ಹಳೆಯ ವಿಷ್ಣು ಪ್ರತಿಮೆ, ಶಿವಲಿಂಗ, ಸುದರ್ಶನ ಚಕ್ರ ಪತ್ತೆಯಾಗಿದೆಯೇ?

Fact Check: ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ನಿಂದಿಸುವ ನಾಲ್ಕು ವರ್ಷ ಹಳೆಯ ವೀಡಿಯೋ ವೈರಲ್

ಈ ವೀಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

Fact Check: ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ನಿಂದಿಸುವ ನಾಲ್ಕು ವರ್ಷ ಹಳೆಯ ವೀಡಿಯೋ ವೈರಲ್

Fact Check/Verification

ವೈರಲ್ ವೀಡಿಯೋವನ್ನು ತನಿಖೆ ಮಾಡಲು ನ್ಯೂಸ್ಚೆಕರ್ ಮೊದಲು ಈ ಎಕ್ಸ್ ಪೋಸ್ಟ್ ಅನ್ನು ಪರಿಶೀಲಿಸಿದೆ. ಈ ಸಮಯದಲ್ಲಿ, 15 ಡಿಸೆಂಬರ್ 2024 ರಂದು ಅಕೋಲಾ ಪೊಲೀಸರು ನೀಡಿದ ಪ್ರತಿಕ್ರಿಯೆಯನ್ನು ನಾವು ಸ್ವೀಕರಿಸಿದ್ದೇವೆ.

Fact Check: ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ನಿಂದಿಸುವ ನಾಲ್ಕು ವರ್ಷ ಹಳೆಯ ವೀಡಿಯೋ ವೈರಲ್
ಅಕೋಲಾ ಪೊಲೀಸರ ಪ್ಪೋಸ್ಟ್

“ಇದು ಹಳೆಯ ವೀಡಿಯೋ ಮತ್ತು ಆ ವ್ಯಕ್ತಿ ಮತ್ತು ಇತರ 11 ಆರೋಪಿಗಳ ವಿರುದ್ಧ ಜನವರಿ 29, 2020 ರಂದು ಅಕೋಲಾದ ಪಾತೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ನಂತರ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.

ನಮ್ಮ ತನಿಖೆಯಲ್ಲಿ ಕಂಡುಬಂದಂತೆ, ಈ ವೀಡಿಯೋವನ್ನು ಏಪ್ರಿಲ್ 2020 ರಲ್ಲಿ ಮತ್ತೊಂದು ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಪೋಸ್ಟ್ ಗೆ  ಪ್ರತಿಕ್ರಿಯಿಸಿದ ಅಕೋಲಾ ಪೊಲೀಸರು, ಈ ಬಗ್ಗೆ ಪಾತೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬರೆದಿದ್ದಾರೆ.

Fact Check: ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ನಿಂದಿಸುವ ನಾಲ್ಕು ವರ್ಷ ಹಳೆಯ ವೀಡಿಯೋ ವೈರಲ್
ಅಕೋಲಾ ಪೊಲೀಸರ ಇನ್ನೊಂದು ಪ್ರತಿಕ್ರಿಯೆ

ಇದಲ್ಲದೆ, ವೀಡಿಯೋದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುವ ಹಲವಾರು ಪೋಸ್ಟರ್ ಗಳನ್ನು ಸಹ ನಾವು ಕಂಡುಕೊಂಡಿದ್ದೇವೆ, ಅದರಿಂದ ವೈರಲ್ ವೀಡಿಯೋ 2019-2020 ರ ಅವಧಿಯದ್ದಾಗಿದ್ದು, ದೇಶಾದ್ಯಂತ ಸಿಎಎ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದ್ದು ಎನ್ನಬಹುದು.

Fact Check: ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ನಿಂದಿಸುವ ನಾಲ್ಕು ವರ್ಷ ಹಳೆಯ ವೀಡಿಯೋ ವೈರಲ್

ನಮ್ಮ ತನಿಖೆಯ ಭಾಗವಾಗಿ ನಾವು ಪಾತೂರ್ ಪೊಲೀಸ್ ಠಾಣೆಯನ್ನು ಸಹ ಸಂಪರ್ಕಿಸಿದ್ದೇವೆ. “ವೈರಲ್ ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿ ಶೇಖ್ ಫೈಮ್ ಮತ್ತು ಅಕೋಲಾದ ಕಾಶಿದ್ಪುರ ಪ್ರದೇಶದ ನಿವಾಸಿ. 2020ರಲ್ಲಿಯೇ ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿತ್ತು” ಎಂದು ಅವರು ಮಾಹಿತಿ ನೀಡಿದ್ದಾರೆ.

Conclusion

ನಮ್ಮ ತನಿಖೆಯಲ್ಲಿ ದೊರೆತ ಪುರಾವೆಗಳಿಂದ ವೈರಲ್ ವೀಡಿಯೋ ಇತ್ತೀಚಿನದ್ದಲ್ಲ ಎಂದು ಸ್ಪಷ್ಟವಾಗಿದೆ. ಬದಲಾಗಿ ಸುಮಾರು ನಾಲ್ಕು ವರ್ಷಗಳಷ್ಟು ಹಳೆಯದು ಎಂಬುದು ಸ್ಪಷ್ಟವಾಗಿದೆ. ಪ್ರಕರಣ ದಾಖಲಿಸಿದ ನಂತರ ಅಕೋಲಾ ಪೊಲೀಸರು 2020 ರಲ್ಲಿ ವ್ಯಕ್ತಿಯನ್ನು ಬಂಧಿಸಿದ್ದರು.

Also Read: ಮುಸ್ಲಿಮರು ಕಾಫಿರರನ್ನು ಕೊಲ್ಲಲು ಆಯುಧಗಳನ್ನು ಕಳ್ಳ ಮಾರ್ಗದಲ್ಲಿ ತರುತ್ತಿದ್ದಾರೆ ಎಂಬುದು ನಿಜವೇ?

Result: Missing Context

Our Sources
X post By Akola Police, Dated: December 15, 2024

Conversation with Patur PI Hanumant Dopewad

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Since 2011, JP has been a media professional working as a reporter, editor, researcher and mass presenter. His mission to save society from the ill effects of disinformation led him to become a fact-checker. He has an MA in Political Science and Mass Communication.