Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಚಲನ್ ನೀಡಿದ ಮುಂಬೈ ಟ್ರಾಫಿಕ್ ಪೊಲೀಸರಿಗೆ ಮುಸ್ಲಿಮರು ಥಳಿಸಿದರು, ರೌಡಿಯೊಬ್ಬನಿಗೆ ಯೋಗಿ ಆಡಳಿತದಲ್ಲಿ ಪೊಲೀಸರಿಂದ ಸ್ಥಳದಲ್ಲೇ ಪಾಠ, ಭಜನೆಯಿಂದ ಅಪೌಷ್ಠಿಕತೆ ದೂರ ಎದು ಪ್ರಧಾನಿ ಮೋದಿ ಹೇಳಿದ್ದಾರೆ, ಮಹಾಕುಂಭಮೇಳದಲ್ಲಿ ಸೆಲೆಬ್ರೆಟಿಗಳು ಎಂದು ಎಐ ಫೊಟೋ ಹಂಚಿಕೆ, ಮದ್ಯಪಾನ ಚಟ ದೂರ ಮಾಡಲು ಬಿಸಿನೀರಿಗೆ ಕಪ್ಪು ಉಪ್ಪು ಮತ್ತು ಜೇನುತುಪ್ಪ ಮಿಶ್ರ ಮಾಡಿ ನೀಡಿದರೆ ಪ್ರಯೋಜನಕಾರಿ ಎಂಬ ಹೇಳಿಕೆಗಳು ಈ ವಾರ ಪ್ರಮುಖವಾಗಿದ್ದವು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಹೇಳಿಕೆಗಳು ಸುಳ್ಳು ಎಂದು ಸಾಬೀತು ಪಡಿಸಿದೆ. ಈ ಕುರಿತ ವಿವರಗಳು ಇಲ್ಲಿವೆ.

ಚಲನ್ ನೀಡಿದ ಮುಂಬೈ ಟ್ರಾಫಿಕ್ ಪೊಲೀಸರಿಗೆ ಮುಸ್ಲಿಮರು ಥಳಿಸಿದರು ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಚಲನ್ ನೀಡಿದ ಪೊಲೀಸರಿಗೆ ಮುಸ್ಲಿಂ ಗುಂಪು ಥಳಿಸಿದ ವಿದ್ಯಮಾನ 2015ರಲ್ಲಿ ದಿಲ್ಲಿಯಲ್ಲಿ ನಡೆದಿದ್ದಾಗಿದೆ. ಇದು ಮುಂಬೈನಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನವಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದ ರೌಡಿಯೊಬ್ಬನಿಗೆ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಸ್ಥಳದಲ್ಲೇ ಬಿಸಿ ಮುಟ್ಟಿಸಿದೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಶೋಧ ನಡೆಸಿದಾಗ, ರೌಡಿಯೊಬ್ಬನ ವಿರುದ್ಧ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಪೊಲೀಸರು ತಕ್ಷಣ ಸ್ಥಳದಲ್ಲೇ ಪಾಠ ಕಲಿಸಿದರು ಎನ್ನಲಾದ ವೀಡಿಯೋ ಉತ್ತರ ಪ್ರದೇಶದ್ದಲ್ಲ. ಇದು ಪುಣೆಯದ್ದಾಗಿದ್ದು ಸಾರ್ವಜನಿಕರಿಗೆ ಭೀತಿ ಹುಟ್ಟಿಸುತ್ತಿದ್ದ ಕ್ಯೋಟೋ ಹೆಸರಿನ ಗ್ಯಾಂಗ್ನ ರೌಡಿ ವಿರುದ್ಧ ಮಹಾರಾಷ್ಟ್ರ ಪೊಲೀಸರು 2022ರಲ್ಲಿ ಕ್ರಮಕೈಗೊಂಡ ಘಟನೆಯಾಗಿದೆ. ಈ ಕುರಿತ ವರದಿ ಇಲ್ಲಿದೆ

ಮಹಾಕುಂಭಮೇಳ ನಡೆಯುತ್ತಿದ್ದಂತೆ ಅನೇಕ ಸೆಲೆಬ್ರೆಟಿಗಳು ಈ ಉತ್ಸವದಲ್ಲಿ ಭಾಗಿಯಾಗಿದ್ದಾರೆ ಎಂಬಂತೆ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಈ ಕುರಿತು ಶೋಧ ನಡೆಸಿದಾಗ, ಇವು ನಿಜವಾದ್ದಲ್ಲ, ಎಐನಿಂದ ಮಾಡಿದ ಚಿತ್ರಗಳು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಭಜನೆಯಿಂದ ಅಪೌಷ್ಠಿಕತೆ ಕಡಿಮೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತ ಶೋಧನೆ ವೇಳೆ ಭಜನೆಯಿಂದ ಅಪೌಷ್ಠಿಕತೆ ಕಡಿಮೆ ಮಾಡಬಹುದು ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಲ್ಲ. ಮಧ್ಯಪ್ರದೇಶದಲ್ಲಿ ಮೇರಾ ಬಚ್ಚಾ ಅಭಿಯಾನದ ಅಂಗವಾಗಿ ಸಮುದಾಯದ ಭಾಗೀದಾರಿಕೆಯಲ್ಲಿ ಭಜನೆ, ಕೀರ್ತನೆಗಳನ್ನು ಹೇಳುವುದರೊಂದಿಗೆ ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡುವ ವಿಶೇಷ ಯೋಜನೆಯೊಂದರ ಬಗ್ಗೆ ಹೇಳಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಮದ್ಯಪಾನದ ಚಟ ದೂರ ಮಾಡಲು ಬಿಸಿನೀರಿಗೆ ಕಪ್ಪು ಉಪ್ಪು ಮತ್ತು ಜೇನುತುಪ್ಪ ಮಿಶ್ರ ಮಾಡಿ ನಿತ್ಯ ನೀಡಿದರೆ ಪ್ರಯೋಜನಕಾರಿ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಕಪ್ಪು ಉಪ್ಪು ಮತ್ತು ಜೇನುತುಪ್ಪವು ಕೆಲವು ಸಾಮಾನ್ಯ ಆರೋಗ್ಯ ಪ್ರಯೋಜನಗಳನ್ನು ನೀಡಬಹುದಾದರೂ, ಅದು ಪರಿಣಾಮಕಾರಿ ಚಿಕಿತ್ಸೆಯಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
Kushel Madhusoodan
November 15, 2025
Salman
October 6, 2025
Ishwarachandra B G
September 11, 2025