Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಸೇನಾಪಡೆ ನಡೆಸಿದ ದಾಳಿ ಎಂದ ವೀಡಿಯೋ
Fact
ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಸೇನಾಪಡೆ ನಡೆಸಿದ ದಾಳಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡ ವೀಡಿಯೋ ತಪ್ಪಾಗಿದೆ. ಇದು ಇಂಡೋನೇಷ್ಯಾದ ಸಾಂಗ್ಕುಲಿರಾಂಗ್ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತವೊಂದರ ದೃಶ್ಯ
ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಸೇನಾಪಡೆ ನಡೆಸಿದ ದಾಳಿ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಇಸ್ರೇಲ್‌ನ ವಾಯುಪಡೆಯ ವೈಮಾನಿಕ ದಾಳಿಯಿಂದಾಗಿ, ವಸತಿ ಪ್ರದೇಶದಲ್ಲಿ ಹಿಜ್ಬುಲ್ಲಾ ಭಯೋತ್ಪಾದಕರು ಮರೆಮಾಡಿದ ಸಂಪೂರ್ಣ ಶಸ್ತ್ರಾಸ್ತ್ರಗಳು ಕಟ್ಟಡಗಳ ಜೊತೆಗೆ ಜ್ವಾಲೆಯಾಗಿವೆ. ಅದೊಂದು ಭಯಾನಕ ದೃಶ್ಯ ಈ ಕೋಮುವಾದಿ ಭಯೋತ್ಪಾದಕರು ತನ್ನ ರಕ್ತಸಿಕ್ತ ಇತಿಹಾಸದಿಂದ ಎಂದಿಗೂ ಕಲಿಯುವುದಿಲ್ಲ.” ಎಂದಿದೆ.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು ಈ ವೀಡಿಯೋ ಇಂಡೋನೇಷ್ಯಾದಲ್ಲಿ ಸಂಭವಿಸಿದ ಬೆಂಕಿ ಅವಗಢದ್ದಾಗಿದ್ದು, ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಆಗಸ್ಟ್ 22, 2024ರ Sangatta Info ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ “Breaking News : Kebakaran besar terjadi di Pasar Sangkulirang, Kutim.” ಎಂಬ ಶೀರ್ಷಿಕೆಯಿರುವ ವೀಡಿಯೋ ಲಭ್ಯವಾಗಿದೆ. ಈ ವೀಡಿಯೋ ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವುದನ್ನು ನಾವು ಗಮನಿಸಿದ್ದೇವೆ. ಈ ವೀಡಿಯೋದ ಶೀರ್ಷಿಕೆಯನ್ನು ನಾವು ಗೂಗಲ್ ಮೂಲಕ ಅನುವಾದಿಸಿದ್ದು, “ಕುಟಿಮ್‌ನ ಸಾಂಗ್‌ಕುಲಿರಾಂಗ್ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ” ಎಂದಿದೆ.
ಇದರನ್ವಯ ನಾವು ಇನ್ನಷ್ಟು ಶೋಧವನ್ನುನಡೆಸಿದ್ದೇವೆ. ಆಗಸ್ಟ್ 22, 2024ರಂದು ದೆಟಿಕ್ ಸುಲ್ ಸೆಲ್ ಪ್ರಕಟಿಸಿದ ವರದಿಯಲ್ಲಿ, ಸಾಂಗ್ಕುಲಿರಾಂಗ್ ಮಾರುಕಟ್ಟೆ, ಪೂರ್ವ ಕುಟೈ (ಕುಟಿಮ್), ಪೂರ್ವ ಕಾಲಿಮಂಟನ್ (ಕಲ್ತಿಮ್) ಗೆ ಬೆಂಕಿ ತಗುಲಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 350 ಗೂಡಂಗಡಿಗಳು ಮತ್ತು ಇನ್‌ಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಭಾವಿಸಲಾಗಿದೆ ಎಂದಿದೆ. (ಇಂಡೋನೇಷ್ಯಾ ಭಾಷೆಯಿಂದ ಅನುವಾದಿಸಲಾಗಿದೆ)
ಆಗಸ್ಟ್ 22, 2024ರಂದು ಟ್ರಿಬ್ಯೂನ್ ಕಲ್ತಿಮ್ ಪ್ರಕಟಿಸಿದ ವರದಿಯಲ್ಲಿ, ಸಾಂಗ್ಕುಲಿರಾಂಗ್ ಮಾರುಕಟ್ಟೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, 100 ಅಂಗಡಿಗಳು ಸಂಪೂರ್ಣ ಸುಟ್ಟುಹೋಗಿವೆ. ಸುಮಾರು 4.5 ಗಂಟೆ ಬೆಂಕಿ ಉರಿದಿದ್ದು, ಬೆಂಕಿಯಿಂದಾದ ನಷ್ಟ 10 ಶತಕೋಟಿ ಇಂಡೋನೇಷ್ಯನ್ ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ ಎಂದಿದೆ. (ಇಂಡೋನೇಷ್ಯಾ ಭಾಷೆಯಿಂದ ಅನುವಾದಿಸಲಾಗಿದೆ)
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ಸತ್ಯಶೋಧನೆಯ ಪ್ರಕಾರ, ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಸೇನಾಪಡೆ ನಡೆಸಿದ ದಾಳಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡ ವೀಡಿಯೋ ತಪ್ಪಾಗಿದೆ. ಇದು ಇಂಡೋನೇಷ್ಯಾದಲ್ಲಿ ಸಂಭವಿಸಿದ ಅಗ್ನಿ ಅನಾಹುತವೊಂದರ ದೃಶ್ಯ ಎಂದು ಕಂಡುಬಂದಿದೆ.
Also Read: ವಂದೇ ಭಾರತ್ ರೈಲಿನ ಗಾಜು ಒಡೆಯುವ ವೀಡಿಯೋ ಹಿಂದಿನ ಸತ್ಯವೇನು?
Our Sources:
YouTube post By Sangatta Info. August 22, 2024
Report By, Kaltim.tribunnews, Augst 22, 2024
Report By, Detik, August 22, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
June 14, 2025
Ishwarachandra B G
May 14, 2025
Vasudha Beri
May 6, 2025