Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಾಕಿಸ್ತಾನ ವಿರೋಧಿ ಪೋಸ್ಟ್ ಮಾಡಿದ್ದಕ್ಕಾಗಿ ಪುಣೆಯಲ್ಲಿ ಹಿಂದೂ ಕುಟುಂಬದ ಮೇಲೆ ದಾಳಿ
ಹಾರ್ನ್ ಹಾಕಿದ್ದಕ್ಕಾಗಿ ನಡೆದ ಗಲಾಟೆಯನ್ನು ಪಾಕಿಸ್ತಾನ ವಿರೋಧಿ ಪೋಸ್ಟ್ ಮಾಡಿದ್ದಕ್ಕಾಗಿ ಹಿಂದೂ ಕುಟುಂಬದ ಮೇಲೆ ದಾಳಿ ಮಾಡಲಾಗಿದೆ ಎಂದು ತಪ್ಪು ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅನಂತರ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವೆ ಉದ್ವಿಗ್ನತೆ ಹೆಚ್ಚಿರುವಂತೆಯೇ ಬೀದಿ ಜಗಳವೊಂದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ವಿರೋಧಿ ಪೋಸ್ಟ್ ಹಾಕಿದ್ದಕ್ಕಾಗಿ ಪುಣೆಯಲ್ಲಿ ಹಿಂದೂ ಕುಟುಂಬದ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
“ಪಾಕಿಸ್ತಾನದ ವಿರುದ್ಧ ಪೋಸ್ಟ್ ಮಾಡಿದ್ದಕ್ಕಾಗಿ ಪುಣೆಯ ಭವಾನಿ ಪೇತ್ನಲ್ಲಿ ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆದಿದೆ” ಎಂದು 33 ಸೆಕೆಂಡುಗಳ ಉದ್ದದ ಈ ಕ್ಲಿಪ್ ಅನ್ನು ಹಲವಾರು ಫೇಸ್ಬುಕ್ ಮತ್ತು ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ! ಆದರೆ ತನಿಖೆಯ ವೇಳೆ ನ್ಯೂಸ್ಚೆಕರ್ ಈ ಹೇಳಿಕೆ ಸುಳ್ಳು ಎಂದು ಕಂಡುಹಿಡಿದಿದೆ.
ಅಂತಹ ಪೋಸ್ಟ್ಗಳನ್ನು ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಬಹುದು.
Also Read: ಮೋದಿ ನನ್ನ ಗೆಳೆಯ, ಪಾಕಿಸ್ತಾನಕ್ಕೆ ಎಚ್ಚರಿಕೆ ಎನ್ನುವ ಟ್ರಂಪ್ ವೀಡಿಯೋ ನಕಲಿ!
ವೈರಲ್ ಕ್ಲಿಪ್ನ ಕೀಫ್ರೇಮ್ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಏಪ್ರಿಲ್ 29, 2025 ರಂದು ಪತ್ರಕರ್ತ ಸೌರಭ್ ಕೊರಾಟ್ಕರ್ ( @saurabhkoratkar ) ಅವರು ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಲಭ್ಯವಾಗಿದೆ. ಅದೇ ವೀಡಿಯೋವನ್ನು ಅದು ಹೊಂದಿದ್ದು, “ಪುಣೆಯ ಭವಾನಿ ಪೇಟ್ನಲ್ಲಿ ಕಾರಿನ ಹಾರ್ನ್ ಮಾಡಿದ್ದಕ್ಕಾಗಿ ಕ್ಷುಲ್ಲಕ ಜಗಳ ನಡೆದಿದೆ. ಒಬ್ಬ ವ್ಯಕ್ತಿ ಕಲ್ಲುಗಳನ್ನು ಎಸೆದಿದ್ದಾರೆ” ( ಗೂಗಲ್ ಮೂಲಕ ಮರಾಠಿಯಿಂದ ಅನುವಾದಿಸಲಾಗಿದೆ) ” ಎಂದಿದೆ.
ಘಟನೆಯ ಬಗ್ಗೆ ವಿವರವಾಗಿ ಲೋಕಮತ್ ಟೈಮ್ಸ್ ವರದಿ ಮಾಡಿದ್ದು, ಅದರಲ್ಲಿ, ಕಿರಿದಾದ ಮಾರ್ಗವೊಂದನ್ನು ಹಾದು ಹೋಗುವಾಗ, ಹರ್ಷ್ ಕೇಶ್ವಾನಿ ಎಂಬಾತ ಹಾರ್ನ್ ಮಾಡಿದ್ದು ವಿವಾದ ಶುರುವಾಗಿದೆ. ಇದರಿಂದ ತನ್ನ ಆಟೋರಿಕ್ಷಾವನ್ನು ನಿಲ್ಲಿಸಿ ಸ್ಥಳದಲ್ಲಿ ಸರಕುಗಳನ್ನು ಇಳಿಸುತ್ತಿದ್ದ ಶೋಯೆಬ್ ಉಮರ್ ಸೈಯ್ಯದ್ ಎಂಬಾತ ಕೋಪಗೊಂಡು, ಹರ್ಷ್ ಅವರನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಆನಂತರ ಹರ್ಷ್ ತನ್ನ ಇತರ ಕುಟುಂಬ ಸದಸ್ಯರೊಂದಿಗೆ ಸಯ್ಯದ್ನನ್ನು ಎದುರಿಸಲು ಬಂದಿದ್ದು, ಆರೋಪಿಗಳು ಮತ್ತು ಅವನ ಸಹಚರರು ಮತ್ತೆ ಹಲ್ಲೆ ನಡೆಸಿದರು. ಘಟನೆ ಬಗ್ಗೆ ಪುಣೆಯ ಖಡಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ನಂತರ ಸಯ್ಯದ್ನನ್ನು ಬಂಧಿಸಲಾಗಿದೆ ಎಂದಿದೆ.
ಇತರ ಹಲವು ಮಾಧ್ಯಮಗಳೂ ಈ ಘಟನೆ ಬಗ್ಗೆ ವರದಿ ಮಾಡಿ, ಹಾರ್ನ್ ಮಾಡಿದ್ದಕ್ಕಾಗಿ ಈ ವಿದ್ಯಮಾನ ನಡೆದಿದೆ ಎಂದು ಹೇಳಿವೆ. ಆ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ಚೆಕರ್ ಖಡಕ್ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಶಶಿಕಾಂತ್ ಚವಾಣ್ ಅವರನ್ನು ಸಂಪರ್ಕಿಸಿದೆ, ಅವರು ವೈರಲ್ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಈ ಘಟನೆ ಹಾರ್ನ್ ಬಾರಿಸುವ ಕಾರಣ ಸಂಭವಿಸಿದೆ ಎಂದು ದೃಢಪಡಿಸಿದ್ದಾರೆ.
ಈ ವಿಷಯದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಸಹ ನಾವು ಪರಿಶೀಲಿಸಿದ್ದೇವೆ, ಅದರಲ್ಲಿಯೂ ಪಾಕಿಸ್ತಾನಕ್ಕೆ ವಿಚಾರಕ್ಕೆ ಸಂಬಂಧಿಸಿದ ಯಾವುದೇ ಉಲ್ಲೇಖವಿಲ್ಲ.
ನಮ್ಮ ತನಿಖೆಯ ಪ್ರಕಾರ ಪಾಕಿಸ್ತಾನದ ವಿರುದ್ಧ ಪೋಸ್ಟ್ ಮಾಡಿದ್ದಕ್ಕಾಗಿ ಪುಣೆಯಲ್ಲಿ ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳುವ ವೈರಲ್ ಪೋಸ್ಟ್ಗಳು ಸುಳ್ಳು ಎಂದು ನಾವು ಕಂಡುಕೊಂಡಿದ್ದೇವೆ.
Also Read: ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆ ವೇಳೆ ಉಡಾವಣೆ ಸ್ಥಳದಲ್ಲೇ ಸ್ಫೋಟ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
Our Sources
X Post By @saurabhkoratkar, Dated: April 29, 2025
Report By Lokmat Times, Dated: April 29, 2025
Telephonic Conversation With Senior Inspector Shashikant Chavan,
Khadak Police Station On May 5, 2025
FIR Copy
(Inputs from, Prasad Prabhu Newschecker Marathi)
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Runjay Kumar
June 19, 2025
Ishwarachandra B G
May 26, 2025
Ishwarachandra B G
May 17, 2025