Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಮಾಲ್ಡೀವ್ಸ್ ಭಾರತಕ್ಕೆ 28 ದ್ವೀಪಗಳನ್ನು ನೀಡಿದೆ
Fact
ಮಾಲ್ಡೀವ್ಸ್ ಭಾರತಕ್ಕೆ 28 ದ್ವೀಪಗಳನ್ನು ನೀಡಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಭಾರತದ ಅನುದಾನದಲ್ಲಿ ಮಾಲ್ಡೀವ್ಸ್ ನ 28 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆಯ ಉದ್ಘಾಟನೆಯಾಗಿರುವುದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ
ಮಾಲ್ಡೀವ್ಸ್ ಭಾರತಕ್ಕೆ 28 ದ್ವೀಪಗಳನ್ನು ನೀಡಿದೆ ಎಂಬಂತೆ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು, ಭಾರತವು ದ್ವೀಪಸಮೂಹದ ರಾಜ್ಯದಿಂದ 28 ದ್ವೀಪಗಳನ್ನು ಖರೀದಿಸಿದೆ ಮತ್ತು ಇನ್ನು ಕೆಲವರು ಮಾಲ್ಡೀವ್ಸ್ ದ್ವೀಪಗಳನ್ನು ನೀಡಿದೆ ಎಂಬಂತೆ ಎಂದು ಹೇಳಿದ್ದಾರೆ. ಆದಾಗ್ಯೂ, ನ್ಯೂಸ್‌ಕೆಕರ್ ಈ ಹೇಳಿಕೆಯು ಸುಳ್ಳು ಎಂದು ಕಂಡುಕೊಂಡಿದೆ.

ವಿವಿಧ ಎಕ್ಸ್ ಮತ್ತು ಫೇಸ್‌ಬುಕ್ ಬಳಕೆದಾರರು ಹಂಚಿಕೊಂಡಿರುವ ಹೇಳಿಕೆಗಳ ಪ್ರಕಾರ, “ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿದೆ. ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಹಸ್ತಾಂತರಿಸುತ್ತದೆ. ಅಧ್ಯಕ್ಷ ಮುಯಿಝು ಸ್ವತಃ ಒಪ್ಪಂದಕ್ಕೆ ಸಹಿ ಹಾಕಿದರು. ಇದನ್ನು “ಲಕ್ಷದ್ವೀಪ ಕಡಲತೀರದಲ್ಲಿ 50 ಮೀಟರ್ ನಡಿಗೆಯ ಮ್ಯಾಜಿಕ್ ಮತ್ತು ಒಂದು ಟ್ವೀಟ್” ಎಂದು ಲಕ್ಷದ್ವೀಪದ ಕಡಲತೀರಕ್ಕೆ ಪ್ರಧಾನ ಮಂತ್ರಿಯ ಭೇಟಿಯನ್ನು ಉಲ್ಲೇಖಿಸಿ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ.


ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸತ್ಯಶೋಧನೆಗಾಗಿ ನಾವು ಗೂಗಲ್‌ನಲ್ಲಿ “India,” “28 islands”, “Maldives” ಎಂಬ ಕೀವರ್ಡ್ಗಳ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಲ್ಡೀವ್ಸ್ ಭಾರತಕ್ಕೆ ದ್ವೀಪಗಳನ್ನು ನೀಡಿದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಕಂಡುಬಂದಿಲ್ಲ.
ಆದಾಗ್ಯೂ, ಮಾಲ್ಡೀವ್ಸ್‌ನಲ್ಲಿ ಭಾರತದ ಅನುದಾನಿತ ನೀರು ಮತ್ತು ನೈರ್ಮಲ್ಯ ಯೋಜನೆಯ ಉದ್ಘಾಟನೆಯ ಕುರಿತು ಅನೇಕ ವರದಿಗಳು ಕಂಡುಬಂದಿವೆ. ಆಗಸ್ಟ್ 10, 2024 ಪಿಟಿಐ ಯ ವರದಿಯಲ್ಲಿ , “ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಶನಿವಾರ ಮಾಲ್ಡೀವ್ಸ್ ನ 28 ದ್ವೀಪಗಳಿಗೆ ಸುಮಾರು 923 ಕೋಟಿ ರೂಪಾಯಿಗಳ (USD 110 ಮಿಲಿಯನ್) ಮೊತ್ತದ ಬೃಹತ್ ನೀರು ಮತ್ತು ನೈರ್ಮಲ್ಯ ಯೋಜನೆಯನ್ನು ಭಾರತದಿಂದ ಹಸ್ತಾಂತರಿಸಲಾಗಿದೆ . ಇದು ದ್ವೀಪಸಮೂಹದ ರಾಷ್ಟ್ರದ ಜನಸಂಖ್ಯೆಯ ಶೇಕಡಾ ಏಳರಷ್ಟನ್ನು ಒಳಗೊಂಡಿದೆ.” ಎಂದಿದೆ.

ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾದಿಂದ ಇಂಡಿಯನ್ ಲೈನ್ ಆಫ್ ಕ್ರೆಡಿಟ್ ಫೆಸಿಲಿಟಿ ಅಡಿಯಲ್ಲಿ ನಿಯೋಜಿಸಲಾದ 28 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆಗಳನ್ನು ಜೈಶಂಕರ್ ಅವರು ‘ಅಂತರರಾಷ್ಟ್ರೀಯ ಸಹಯೋಗದೊಂದಿಗೆ ಮಾಲ್ಡೀವ್ಸ್‌ನಲ್ಲಿ ಕೈಗೊಳ್ಳಲಾದ ಅತಿದೊಡ್ಡ ಹವಾಮಾನ ಹೊಂದಾಣಿಕೆ’ ಎಂದು ವಿವರಿಸಿದ್ದಾರೆ ಎಂದು ಇದರಲ್ಲಿದೆ.
ಜೈಶಂಕರ್ ಅವರ ಇತ್ತೀಚಿನ ಮಾಲ್ಡೀವ್ಸ್ ಭೇಟಿಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ , “ಅಧ್ಯಕ್ಷರ ಕಚೇರಿಯಲ್ಲಿ, ಇಎಎಂ ಮತ್ತು ವಿದೇಶಾಂಗ ಸಚಿವರು ಜಂಟಿಯಾಗಿ ಅಧ್ಯಕ್ಷ ಮುಯಿಝು ಅವರ ಸಮ್ಮುಖದಲ್ಲಿ ಭಾರತದ ಲೈನ್ ಆಫ್ ಕ್ರೆಡಿಟ್ (ಎಲ್‌ಒಸಿ) ನೆರವಿನ ಯೋಜನೆಯಾದ ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿ ಒಳಚರಂಡಿ ಜಾಲ ಸ್ಥಾಪಿಸುವ ನೀರಿನ ಯೋಜನೆಯನ್ನು ಉದ್ಘಾಟಿಸಿದರು ಎಂದಿದೆ.

“ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆಗಳ ವರ್ಚುವಲ್ ಉದ್ಘಾಟನೆ” ಅನ್ನು ಭಾರತೀಯ ವಿದೇಶಾಂಗ ಸಚಿವಾಲಯದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 10, 2024 ರಂದು ಸ್ಟ್ರೀಮ್ ಮಾಡಲಾಗಿದೆ. ” 28 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ಸೌಲಭ್ಯಗಳ ಅಧಿಕೃತ ಹಸ್ತಾಂತರ. ಭಾರತ ಸರ್ಕಾರದ ನೆರವು, ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೈನ್ ಆಫ್ ಕ್ರೆಡಿಟ್ ಸೌಲಭ್ಯದ ಮೂಲಕ ಹಣಕಾಸು ಒದಗಿಸಲಾಗಿದೆ, ”ಎಂದು ಈವೆಂಟ್‌ನಲ್ಲಿನ ಪ್ರದರ್ಶನ ಪರದೆಯಲ್ಲಿ ಹೇಳಲಾಗಿದೆ.

MEA ಹೇಳಿಕೆಯ ಪ್ರಕಾರ, ಅಧ್ಯಕ್ಷರ ಸಮ್ಮುಖದಲ್ಲಿ ಇಂಡಿಯನ್ ಲೈನ್ ಆಫ್ ಕ್ರೆಡಿಟ್ ಅಡಿಯಲ್ಲಿ ನಿಯೋಜಿಸಲಾದ 28 ದ್ವೀಪಗಳಲ್ಲಿನ ನೀರು ಮತ್ತು ನೈರ್ಮಲ್ಯ ಯೋಜನೆಗಳ ವರ್ಚುವಲ್ ಉದ್ಘಾಟನೆ ಮತ್ತು ಹಸ್ತಾಂತರಕ್ಕಾಗಿ ಇಂದು ಮಾಲ್ಡೀವ್ಸ್‌ನ ಅಧ್ಯಕ್ಷರ ಕಚೇರಿಯಲ್ಲಿ ಇರುವುದು ನಿಜಕ್ಕೂ ತುಂಬಾ ಸಂತೋಷವಾಗಿದೆ ಎಂದು ಮಾಲ್ಡೀವ್ಸ್‌ನಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆಯ ಉದ್ಘಾಟನೆಯಲ್ಲಿ ಜೈಶಂಕರ್ ಹೇಳಿದರು ಎಂದಿದೆ.
ಜೈಶಂಕರ್ ಅವರು “ಮಾಲ್ಡೀವ್ಸ್‌ಗೆ ಫಲಕಾರಿಯಾದ ಭೇಟಿ” ಯ ವೀಡಿಯೋ ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ, ಅದು ಮಾಲ್ಡೀವ್ಸ್ ದೇಶದಿಂದ ದ್ವೀಪಗಳನ್ನು ಖರೀದಿಸಿದ ಒಪ್ಪಂದವನ್ನು ಮಾಡಿದ ಬಗ್ಗೆ ಉಲ್ಲೇಖಿಸಿಲ್ಲ.
ಗಮನಿಸಬೇಕಾದ ಅಂಶವೆಂದರೆ, ಎಕ್ಸಿಮ್ ಬ್ಯಾಂಕ್‌ನ ಲೈನ್ ಆಫ್ ಕ್ರೆಡಿಟ್ (ಎಲ್‌ಒಸಿ) ಸೌಲಭ್ಯದ ಮೂಲಕ ಭಾರತ ಸರ್ಕಾರವು ಮಾಲ್ಡೀವ್ಸ್‌ನಲ್ಲಿ
ಇಂತಹ ಮತ್ತು ಇಂತಹ ಅನೇಕ ಅಭಿವೃದ್ಧಿ ಯೋಜನೆಗಳನ್ನು ನಿಯೋಜಿಸಿದೆ . ಅಂತಹ ಎಲ್ಒಸಿಗಳು “ಹೊಸ ಭೌಗೋಳಿಕತೆಯನ್ನು ಪ್ರವೇಶಿಸಲು ಅಥವಾ ಸಾಗರೋತ್ತರ ಆಮದುದಾರರಿಂದ ಯಾವುದೇ ಪಾವತಿ ಅಪಾಯವಿಲ್ಲದೆ ಅಸ್ತಿತ್ವದಲ್ಲಿರುವ ರಫ್ತು ಮಾರುಕಟ್ಟೆಗಳಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಭಾರತೀಯ ರಫ್ತುದಾರರನ್ನು ಸಕ್ರಿಯಗೊಳಿಸುತ್ತದೆ.” ಎಂದು ಹೇಳಲಾಗಿದೆ.
ಮಾಲ್ಡೀವ್ಸ್‌ನ ಅಧ್ಯಕ್ಷರಾದ ಮೊಹಮದ್ ಮುಯಿಜ್ಜು ಅವರು ಆಗಸ್ಟ್ 10, 2024 ರಂದು X ಪೋಸ್ಟ್‌ನಲ್ಲಿ ಯೋಜನೆಯ ಹಸ್ತಾಂತರವನ್ನು ಘೋಷಿಸಿದ್ದರು. ಈ ಕುರಿತ ಟ್ವೀಟ್ ಅನ್ನು ಇಲ್ಲಿ ನೋಡಬಹುದು. ಇದರಲ್ಲಿ ಅವರು “ಇಂದು @DrSJaishankar ಅವರನ್ನು ಭೇಟಿ ಮಾಡಲು ಮತ್ತು 28 ದ್ವೀಪಗಳಲ್ಲಿ ರಲ್ಲಿ ನೀರು ಮತ್ತು ಒಳಚರಂಡಿ ಯೋಜನೆಗಳ ಅಧಿಕೃತ ಹಸ್ತಾಂತರದಲ್ಲಿ ಅವರೊಂದಿಗೆ ಇರಲು ಸಂತೋಷವಾಗಿದೆ” ಎಂದಿದ್ದಾರೆ.

ಇದರೊಂದಿಗೆ 28 ಕಡೆಗಳಲ್ಲಿ ಯೋಜನೆ ಜಾರಿಯಾದ ಬಗ್ಗೆ ಮಾಲ್ಡೀವ್ಸ್ ಅಧ್ಯಕ್ಷ ಕಚೇರಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಸತ್ಯಶೋಧನೆಯ ಪ್ರಕಾರ, ಮಾಲ್ಡೀವ್ಸ್‌ನಲ್ಲಿ ಭಾರತದ ಅನುದಾನದೊಂದಿಗೆ 28 ದ್ವೀಪಗಳಲ್ಲಿ ಮಾಡಲಾಗಿರುವ ನೀರು ಮತ್ತು ನೈರ್ಮಲ್ಯ ಯೋಜನೆಗಳ ಉದ್ಘಾಟನೆಯನ್ನು, ದ್ವೀಪವನ್ನು ನೀಡಲಾಗಿದೆ ಎಂದು ತಪ್ಪಾಗಿ ಅಥೈಸಲಾಗಿದೆ.
Our Sources
Report By PTI, Dated: August 10, 2024
Release By MEA, Dated: August 10, 2024
YouTube Video By MEA, India, Dated: August 10, 2024
Release By MEA, Dated: August 11, 2024
X Post By Mohamed Muizzu, Dated: August 10, 2024
Release By The President’s Office, Maldives, Dated: August 10, 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Vasudha Beri
November 20, 2025
Vasudha Beri
October 9, 2025
Ishwarachandra B G
September 30, 2025