Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ನೀರಿನ ಹೊಡೆತಕ್ಕೆ ತತ್ತರಿಸಿದ ಸೇತುವೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಈ ಹೇಳಿಕೆ ಕಂಡುಬಂದಿದ್ದು, ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದೆ. ಇದರಲ್ಲಿ ಇದು ಎಐ ವೀಡಿಯೋ ಎಂದು ಕಂಡುಬಂದಿದೆ.

ಸತ್ಯಶೋಧನೆಗಾಗಿ ನಾವು ಸೇತುವೆ ಮೇಲೆ ನೀರಿನ ಅಲೆ ಬಂದಪ್ಪಳಿಸುವ ವೀಡಿಯೋವನ್ನು ಕೂಲಂಕಷವಾಗಿ ಗಮನಿಸಿದ್ದೇವೆ. ಈ ವೇಳೆ ಇದರ ದೃಶ್ಯಗಳು ಅಸಹಜತೆಯಿಂದ ಕೂಡಿರುವುದು ಮತ್ತು ನೀರು ಅಪ್ಪಳಿಸಿದರೂ ವಾಹನಗಳು ಸಾಮಾನ್ಯವೆಂಬಂತೆ ಮುಂದೆ ಸಾಗುತ್ತಿರುವುದು ಕಂಡುಬಂದಿದೆ.
Also Read: ವಿಮಲ್ ಪಾನ್ ಮಸಾಲಾ ಟೀಮ್ ಇಂಡಿಯಾದ ಹೊಸ ಪ್ರಾಯೋಜಕರಾಗಲಿದ್ದಾರೆಯೇ? ವೈರಲ್ ಆಗಿರುವ ಫೋಟೋ ಎಐ ಸೃಷ್ಟಿ!
ಆ ಬಳಿಕ ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಸಮಯಗಳ ಹಿಂದೆಯೂ ಈ ವೀಡಿಯೋವನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ.
ನಂತರ ನಾವು ಕೀಫ್ರೇಮ್ ಗಳನ್ನು ವಿವಿಧ ಎಐ ಪತ್ತೆ ಸಾಧನಗಳ ಮೂಲಕ ಪರಿಶೀಲಿಸಿದ್ದೇವೆ. ಎಐ ಪತ್ತೆ ಸಾಧನ ಸೈಟ್ ಎಂಜಿನ್ ಮೂಲಕ ವೈರಲ್ ಕೀಫ್ರೇಮ್ ಪರಿಶೀಲಿಸಿದಾಗ, 99%ರಷ್ಟು ಎಐನಿಂದ ಮಾಡಿದ್ದಾಗಿದೆ ಎಂದು ಅದು ಹೇಳಿದೆ.

ವಾಸ್ ಇಟ್ ಎಐ ಮೂಲಕ ಪರಿಶೀಲಿಸಿದಾಗ, ಈ ಚಿತ್ರ ಅಥವಾ ಅದರ ಭಾಗ ಎಐನಿಂದ ಮಾಡಿದ್ದಾಗಿದೆ ಎಂಬುದಾಗಿದೆ ಎಂದು ಹೇಳಿದೆ.

ಡಿಕಾಪಿ ಎಐ ಮೂಲಕ ಪರಿಶೀಲಿಸಿದಾಗ, 99.99% ಇದು ಎಐನಿಂದ ಮಾಡಿದ್ದಾಗಿದೆ ಎಂಬುದನ್ನು ಖಚಿತಪಡಿಸಿದೆ.

ಆದ್ದರಿಂದ ಈ ವೀಡಿಯೋ ಎಐನಿಂದ ಮಾಡಿದ್ದಾಗಿದ್ದು, ನೀರಿನ ಹೊಡೆತಕ್ಕೆ ತತ್ತರಿಸಿದ ಸೇತುವೆ ಎಂದ ವೀಡಿಯೋ ನಿಜವಲ್ಲ ಎಂದು ಕಂಡುಬಂದಿದೆ.
Also Read: ಅಕ್ರಮ ಬಾಂಗ್ಲಾದೇಶಿ, ಪಾಕಿಸ್ತಾನಿ ವಲಸಿಗರನ್ನು ಲಿಬಿಯಾದಿಂದಲೂ ಹೊರಹಾಕಲಾಗುತ್ತಿದೆಯೇ?
Our Sources
sightengine.com
wasitai.com
decopy.ai
Ishwarachandra B G
November 24, 2025
Vasudha Beri
November 10, 2025
Vijayalakshmi Balasubramaniyan
November 12, 2025