Authors
ಕೇರಳದಲ್ಲಿ ಹಿಂದೂ ಐಎಸ್‌ಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ, ರಕ್ಷಾಬಂಧನ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಗುಜರಾತ್ ಪೊಲೀಸರ ಥಳಿತ ಎಂಬ ಕೋಮು ಬಣ್ಣದ ಕ್ಲೇಮ್ ಗಳು ಈವಾರದ ಕ್ಲೇಮ್‌ಗಳ ಹೈಲೈಟ್. ಇದರೊಂದಿಗೆ ರೆನಾಲ್ಡ್ ಪೆನ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ, ಬೆಂಗಳೂರು ವಿಧಾನಸೌಧ ಎದುರು ಬಸ್-ಕಾರು ಡಿಕ್ಕಿಯಾಗಿದೆ, ಹಗಲಿನಲ್ಲಿ ಹೆಚ್ಚು ನುದ್ರೆ ಮಾಡುವವರು ಶೀಘ್ರ ಖಿನ್ನತೆಗೆ ಒಳಗಾಗುತ್ತಾರೆ ಎಂಬ ಕ್ಲೇಮ್ ಕೂಡ ಹರಿದಾಡಿದೆ. ಈ ಕ್ಲೇಮ್ ಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ಮಾಡಿದ್ದು, ತಪ್ಪು ಎಂದು ತಿಳಿದುಬಂದಿದೆ.
ಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದೆಯೇ, ಸತ್ಯ ಏನು?
ಕೇರಳದಲ್ಲಿ ಹಿಂದೂ ಐಎಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದೆ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ನ್ಯೂಸ್ ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಹಿಂದೂ ಐಎಎಸ್ ಅಧಿಕಾರಿ ನೇಮಕ ವಿರೋಧಿಸಿ ಪ್ರತಿಭಟನೆ ನಡೆದಿದ್ದಲ್ಲ, ಅಪಘಾತ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಜಿಲ್ಲಾಧಿಕಾರಿ ನೇಮಕ ವಿರೋಧಿಸಿ ಮಲಪ್ಪುರಂನಲ್ಲಿ ನಡೆದ ಪ್ರತಿಭಟನೆ ಇದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ರಕ್ಷಾಬಂಧನ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಗುಜರಾತ್ ಪೊಲೀಸರು ಥಳಿಸಿದರೇ?
ಹಿಂದೂ ಹುಡುಗಿಗೆ ಕಿರುಕುಳ ನೀಡುತ್ತಿದ್ದ ಮುಸ್ಲಿಂ ಯುವಕನಿಗೆ ಪೊಲೀಸರು ಥಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದೆ. ಸತ್ಯಶೋಧನೆಯಲ್ಲಿ, ಈ ಘಟನೆ 2015ರ ವೇಳೆ ನಡೆದಿದ್ದು, ಇತ್ತೀಚಿನದ್ದಲ್ಲ. ಸಂಜೆ ವೇಳೆ ಯುವತಿಯರನ್ನು ಚುಡಾಯಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಇವಕರನ್ನು ಪೊಲೀಸರು ಥಳಿಸಿದ ಪ್ರಕರಣವಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಭಾರತದಲ್ಲಿ ರೆನಾಲ್ಡ್ ಪೆನ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆಯೇ, ಸತ್ಯ ಏನು?
ಮಾರುಕಟ್ಟೆಯಲ್ಲೀಗ ನೀಲಿ ಕ್ಯಾಪ್ ಇರುವ ರೆನಾಲ್ಡ್ ಪೆನ್ ಕಾಣುತ್ತಿಲ್ಲ ಎಂಬ ಸುದ್ದಿಯೊಂದು ವೈರಲ್ ಆಗಿದೆ. ಆದರೆ ರೆನಾಲ್ಡ್ಸ್ “045 ಫೈನ್ ಕಾರ್ಬ್ಯುರ್” ಪೆನ್ ಅನ್ನು ಸ್ಥಗಿತಗೊಳಿಸಲಾಗುತ್ತದೆ ಎಂದಿರುವುದು ಅಥವಾ ನೀಲಿ ಟಾಪ್ ನ ರೆನಾಲ್ಡ್ ಪೆನ್ ಉತ್ಪಾದನೆ ಸ್ಥಗಿತಗೊಂಡಿದೆ ಎಂಬ ವೈರಲ್ ಸಂದೇಶವು ನಿಜವಲ್ಲ. ರೆನಾಲ್ಡ್ಸ್ ಈ ವೈರಲ್ ಸಂದೇಶವನ್ನು “ತಪ್ಪು ಮಾಹಿತಿ” ಎಂದು ಹೇಳಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಬೆಂಗಳೂರು ವಿಧಾನಸೌಧ ಎದುರು ರಾಜಹಂಸ ಬಸ್-ಕಾರು ಡಿಕ್ಕಿ ಎಂದ ವೈರಲ್ ವೀಡಿಯೋ ಸತ್ಯವೇ?
ಬೆಂಗಳೂರು ವಿಧಾನಸೌಧ ಮುಂದೆ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್-ಕಾರು ಡಿಕ್ಕಿಯಾಗಿದೆ ಎಂದು ವೀಡಿಯೋ ಒಂದು ವೈರಲ್ ಆಗಿದೆ. ಸತ್ಯಶೋಧನೆಯ ಪ್ರಕಾರ, ಅಪಘಾತ ಪ್ರಕರಣ ಬೆಳಗಾವಿಯಲ್ಲಿ ನಡೆದಿದ್ದು ಬೆಂಗಳೂರು ವಿಧಾನಸೌಧದ ಎದುರು ನಡೆದಿದ್ದಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಹಗಲಿನಲ್ಲಿ ಹೆಚ್ಚು ನಿದ್ರೆ ಮಾಡುವವರು ಶೀಘ್ರದಲ್ಲಿ ಖಿನ್ನತೆಗೆ ಒಳಗಾಗುತ್ತಾರೆ ಎಂಬುದು ನಿಜವೇ?
ಹಗಲಲ್ಲಿ ನಿದ್ರೆ ಮಾಡುವವರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ಹರಿದಾಡಿದೆ. ಸತ್ಯಶೋಧನೆಯಲ್ಲಿ, ಹಗಲು ನಿದ್ರೆ ಮಾಡುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ಹಗಲು ನಿದ್ರೆಯೊಂದರಿಂದಲೇ ಖಿನ್ನತೆಗೆ ಒಳಗಾಗುತ್ತಾರೆ ಎನ್ನುವುದು ಭಾಗಶಃ ತಪ್ಪು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.