Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹಿಂದೂ ಗುರುತುಗಳೊಂದಿಗೆ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ವಂಚಿಸಿ, ಲವ್ ಜಿಹಾದ್ ಜಾಲ ಹೆಣೆಯುತ್ತಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಪ್ ನಲ್ಲಿ ಕಂಡುಬಂದ ಮೆಸೇಜ್ ನಲ್ಲಿ “…. ಮುಸ್ಲಿಂ ಯುವಕರು ತಾನು ಹಿಂದೂ ಎಂದು ಹುಡುಗಿಯರನ್ನು ನಂಬಿಸಲು ಕೈಗಳಿಗೆ ದೇವರ ನೂಲು,ಉಂಗುರ,ಬಳೆ, ಮುಂತಾದ ಹಿಂದೂ ಹುಡುಗರು ಧರಿಸುವಂತಹುದನ್ನು ಧರಿಸಿಕ್ಕೊಂಡು ಹಿಂದೂ ಹುಡುಗಿಯರನ್ನು ಈ ಸೋಷಿಯಲ್ ಮೀಡಿಯಾ ಆಗಿರಲಿ ಅಥವಾ ಇನ್ನಿತರ ಕೆಲವೊಂದು ತಂತ್ರ ಬಳಸಿ ಲವ್ ಜಿಹಾದ್ ಗೆ ಪ್ರಯತ್ನಿಸುತ್ತಿರುವುದು ಅತೀ ಹೆಚ್ಚಾಗಿ ಕಂಡು ಬರುತ್ತಿದೆ…” ಎಂದಿದೆ.

ಈ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೋದಲ್ಲಿ ಪೊಲೀಸರು ಯುವತಿಯೊಬ್ಬಳೊಂದಿಗೆ ಇದ್ದ ಯುವಕನನ್ನು ವಿಚಾರಣೆ ಮಾಡುವುದು ಮತ್ತು ಆತನ ಐಡಿ ಕಾರ್ಡ್ ಕೇಳುವುದು, ತನ್ನ ಹೆಸರನ್ನು ಆತ ರವಿ ಎಂದಿದ್ದು, ಐಡಿ ಕಾರ್ಡ್ ನಲ್ಲಿ ಸಲೀಮ್ ಎಂದಿರುವುದನ್ನು ಪೊಲೀಸ್ ಪತ್ತೆ ಮಾಡುವ ದೃಶ್ಯವಿದೆ. ಒಟ್ಟು 4.42 ನಿಮಿಷದ ವೀಡಿಯೋದಲ್ಲಿ ಯುವಕ ಹಿಂದೂ ಎಂದು ಹೇಳಿ ವಂಚಿಸಿರುವುದನ್ನು ಪೊಲೀಸರು ಭೇದಿಸುವ ವಿಚಾರವಿದೆ.
ಈ ವೀಡಿಯೋ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸ್ಕ್ರಿಪ್ಟೆಡ್ ವೀಡಿಯೋ ಆಗಿದ್ದು ನಿಜವಾದ್ದಲ್ಲ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಇನ್ಸ್ಟಾಗ್ರಾಂನಲ್ಲಿರುವ monty_deepak_sharma_ಎಂಬ ಖಾತೆ ಲಭ್ಯವಾಗಿದ್ದು, ಇದರಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಕಂಡಿದ್ದೇವೆ. ಇದನ್ನು ಜುಲೈ 24, 2025ರಂದು ಪೋಸ್ಟ್ ಮಾಡಲಾಗಿದೆ.

ಇದೇ ಖಾತೆಯಲ್ಲಿ ವಿವಿಧ ರೀತಿಯ ವೀಡಿಯೋಗಳು ಇರುವುದನ್ನು ಕಂಡಿದ್ದೇವೆ. ಈ ಇನ್ಸ್ಟಾಗ್ರಾಂ ಖಾತೆಯಲ್ಲಿದ್ದ ಫೇಸ್ಬುಕ್ ಖಾತೆಯ ಲಿಂಕ್ ಅನ್ನು ಅನುಸರಿಸಿ ನಾವು monty_deepak_sharma_ ಫೇಸ್ಬುಕ್ ಖಾತೆಯನ್ನೂ ನೋಡಿದ್ದೇವೆ. ಇಲ್ಲೂ ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಜುಲೈ 27, 2025 ನೋಡಿದ್ದೇವೆ.

ಆ ಬಳಿಕ ನಾವು ಬಳಕೆದಾರರ ಖಾತೆಯಲ್ಲಿರುವ ಮಾಹಿತಿಯನ್ನು ಪರಿಶೀಲಿಸಿದ್ದು, ಅವರು ತಾವೊಬ್ಬ ರೀಲ್ ಕ್ರಿಯೇಟರ್, ಟಿವಿ ಆರ್ಟಿಸ್ಟ್ ಎಂದು ಬರೆದುಕೊಂಡಿರುವುದನ್ನು ನೋಡಿದ್ದೇವೆ.

ಈ ಖಾತೆಯಲ್ಲೂ ವಿವಿಧ ಸ್ಕ್ರಿಪ್ಟೆಡ್ ವೀಡಿಯೋಗಳು ಇರುವುದನ್ನು ಗಮನಿಸಿದ್ದೇವೆ.
ಹೆಚ್ಚಿನ ಮಾಹಿತಿಗಾಗಿ ನಾವು ವೀಡಿಯೋ ಪೋಸ್ಟ್ ಮಾಡಿದ monty_deepak_sharma_ ಅವರನ್ನು ಸಂಪರ್ಕಿಸಲು ಯತ್ನಿಸಿದ್ದೇವೆ. ಅವರ ಪ್ರತಿಕ್ರಿಯೆ ಬಂದ ಬಳಿಕ ನಾವು ಈ ಲೇಖನವನ್ನು ಪರಿಷ್ಕರಿಸಲಿದ್ದೇವೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಹಿಂದೂ ಗುರುತುಗಳೊಂದಿಗೆ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ವಂಚಿಸಲು ಜಾಲ ಹೆಣೆಯುತ್ತಿದ್ದಾರೆ ಎಂಬಂತೆ ಹಂಚಿಕೊಳ್ಳಲಾದ ವೀಡಿಯೋ ನಿಜವಾದ್ದಲ್ಲ, ಇದು ಸ್ಕ್ರಿಪ್ಟೆಡ್ ವೀಡಿಯೋ ಎಂದು ಕಂಡುಬಂದಿದೆ.
Also Read: ಅಮೆರಿಕದ ಟೆಕ್ಸಾಸ್ ನಲ್ಲಿ ಪ್ರವಾಹ ಎಂದು ಎಐನಲ್ಲಿ ರಚಿಸಿದ ವೀಡಿಯೋ ಹಂಚಿಕೆ
Our Sources
Instagram post By monty_deepak_sharma_, Dated: July 24, 2024
Facebook post By monty_deepak_sharma_ Dated: July 27, 2024
Ishwarachandra B G
November 3, 2025
Ishwarachandra B G
April 5, 2025
Ishwarachandra B G
September 9, 2023