Authors
ಡ್ರಗ್ಸ್ ಸೇವಿಸಿದ ಯುವತಿಯ ಆಕ್ರಮಣಕಾರಿ ವರ್ತನೆ, ಮೆಡಿಕಲ್ ಕಾಲೇಜಿನಲ್ಲಿ ಚಲಿಸಿದ ಏಣಿ, ಬೆಂಗಳೂರಲ್ಲಿ ಮಳೆನೀರಲ್ಲಿ ಜಾರಿದ ವಿಮಾನ, ಕಲ್ಲುಸಕ್ಕರೆ-ಕಾಮಕಸ್ತೂರಿ ಸೇರಿಸಿ ಕುಡಿದರೆ ಪೈಲ್ಸ್ ಗುಣಮುಖ ಎಂಬ ಕ್ಲೇಮ್ ಗಳು ಈವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ನ್ಯೂಸ್‌ಚೆಕರ್ ಇವುಗಳ ಸತ್ಯಶೋಧನೆ ನಡೆಸಿದ್ದು ಇವುಗಳು ಸುಳ್ಳು ಎಂದು ಕಂಡುಬಂದಿದೆ.
ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಮಂಗಳೂರಿನಲ್ಲಿ ಡ್ರಗ್ಸ್ ಸೇವಿಸಿದ್ದಾಳೆ ಎನ್ನಲಾದ ಯುವತಿಯೊಬ್ಬಳು ಪೊಲೀಸರೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಸತ್ಯಶೋಧನೆ ವೇಳೆ ಮಂಗಳೂರು ಪೊಲೀಸರ ಸ್ಪಷ್ಟನೆ ಸಿಕ್ಕಿದ್ದು, ಆ ಪ್ರಕಾರ ಯುವತಿ ಮಾದಕ ವಸ್ತು ಸೇವಿಸಿದ ಬಗ್ಗೆ ಪರೀಕ್ಷೆಯಲ್ಲಿ ಸಾಬೀತಾಗಿಲ್ಲ ಮತ್ತು ಆಕೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮೆಡಿಕಲ್ ಕಾಲೇಜಿನಲ್ಲಿ ಚಲಿಸಿದ ಏಣಿ, ಈ ವೀಡಿಯೋ ಹಿಂದಿನ ಸತ್ಯ ಏನು?
ಬರೇಲಿಯ ಎಸ್‌ಆರ್‌ಎಂಎಸ್ ಮೆಡಿಕಲ್ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ತಾನಾಗಿಯೇ ಚಲಿಸಿದ ಬಿದಿರಿನ ಏಣಿ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಓಡಾಡಿತ್ತು ಆದರೆ ಬಿದಿರಿನ ಏಣಿ ತಾನಾಗಿಯೇ ಚಲಿಸಿದ್ದರ ಹಿಂದೆ ವೈಜ್ಞಾನಿಕ ಕಾರಣವಿದೆ. ಜೊತೆಗೆ ಇದು ಬರೇಲಿಯ ಎಸ್‌ಆರ್‌ಎಂಎಸ್ ಮೆಡಿಕಲ್ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ನಡೆದಿದೆ ಎಂಬುದು ಖಚಿತವಾಗಿಲ್ಲ ಎಂದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಬೆಂಗಳೂರಲ್ಲಿ ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ ಎಂದಿರುವುದು ನಿಜವೇ?
ಬೆಂಗಳೂರಿನಲ್ಲಿ ಮಳೆ ನೀರಿನಲ್ಲಿ ಮಗುಚಿಬಿದ್ದ ವಿಮಾನ ಎಂದು ವೀಡಿಯೋ ಒಂದು ವೈರಲ್ ಆಗಿತ್ತು. ವಿಮಾನ ಮಳೆ ನೀರಿನಿಂದಾಗಿ ಮಗುಚಿದ್ದಲ್ಲ, ಮುಂಭಾಗದ ಲ್ಯಾಂಡಿಂಗ್ ಗಿಯರ್ ಸಮಸ್ಯೆಯಿಂದಾಗಿ ತುರ್ತು ಭೂಸ್ಪರ್ಶ ಮಾಡಿದ್ದು ಈ ವೇಳೆ ಬೆಂಕಿ ಅವಘಡ ತಪ್ಪಿಸಲು ಅಗ್ನಿನಿರೋಧಕ ಫೋಮ್ ಬಳಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜ ಸೇರಿಸಿ ಕುಡಿದರೆ ಪೈಲ್ಸ್ ಗುಣವಾಗುತ್ತಾ?
ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜಗಳು ಸೇರಿಸಿ ಕುಡಿಯುವುದರಿಂದ ಪೈಲ್ಸ್ ಗುಣವಾಗುತ್ತದೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜಗಳನ್ನು ಸೇರಿಸಿ ಕುಡಿಯುವುದರಿಂದ ನಾರಿನಂಶ ಹೆಚ್ಚಿ ಇದು ಪೈಲ್ಸ್ ಕಡಿಮೆ ನೋವಿರುವಂತೆ ಮಾಡಬಹುದು. ಆದರೆ ಇದರಿಂದ ಪೈಲ್ಸ್ ಗುಣವಾಗುವುದಿಲ್ಲ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.