Weekly wrap: ಬುರ್ಜ್ ಖಲೀಫಾ ಕಟ್ಟಡದ ಮೇಲೆ ರಾಮನ ಚಿತ್ರ, ಅಯೋಧ್ಯೆಯಲ್ಲಿ ವಾನರ ಸೇನೆ, ವಾರದ ಕ್ಲೇಮ್‌ ನೋಟ

weekly wrap

ಅಯೋಧ್ಯೆ ಆಗಸದಲ್ಲಿ ಡ್ರೋನ್ ಮೂಲಕ ರಾಮನ ಚಿತ್ರ, ಅಯೋಧ್ಯೆಯಲ್ಲಿ ವಾನರ ಸೇನೆ, ಬುರ್ಜ್ ಖಲೀಫಾ ಮೇಲೆ ರಾಮನ ಚಿತ್ರ, ಭಕ್ತನೊಬ್ಬ ಕೈಗಳಲ್ಲಿ ನಡೆದುಕೊಂಡು ಅಯೋಧ್ಯೆಗೆ ಹೋಗುತ್ತಿದ್ದಾನೆ. ವೃಂದಾವನದಲ್ಲಿ ಚಪ್ಪಲಿ ಕಾಯುವಾಕೆ 51 ಲಕ್ಷ ರೂ. ದೇಣಿಗೆ ನೀಡಿದ್ದಾಳೆ ಎಂಬ ಹೇಳಿಕೆಗಳು ಹರಿದಾಡಿವೆ. ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಈವಾರವೂ ಆಗ ಕುರಿತ ಕ್ಲೇಮ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಹರಿದಾಡಿವೆ. ಇದರೊಂದಿಗೆ ಮುಂಬೈ ಮೀರಾಪುರದಲ್ಲಿ ಗಲಭೆಕೋರರಿಗೆ ಪೊಲೀಸರ ಸನ್ಮಾನ, ಹೊಕ್ಕುಳಕ್ಕೆ ತುಪ್ಪ ಹಚ್ಚುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತೆ ಎಂಬ ಹೇಳಿಕೆ ಕಂಡುಬಂದಿದೆ. ಇವುಗಳ ಬಗ್ಗೆ ನ್ಯೂಸ್‌ಚೆಕರ್ ತನಿಖೆ ನಡೆಸಿದ್ದು ಇವುಗಳು ಸುಳ್ಳು ಎಂದು ಸಾಬೀತು ಪಡಿಸಿದೆ.

ಬುರ್ಜ್ ಖಲೀಫಾ ಕಟ್ಟಡದ ಮೇಲೆ ರಾಮನ ಚಿತ್ರ ಪ್ರದರ್ಶಿಸಲಾಗಿದೆಯೇ?

ರಾಮ ಮಂದಿರ ಲೋಕಾರ್ಪಣೆ ಬಳಿಕ ಯುಎಇ ಬುರ್ಜ್ ಖಲೀಫಾ ಕಟ್ಟಡದ ಮೇಲೆ ರಾಮನ ಚಿತ್ರ ಪ್ರದರ್ಶಿಸಲಾಗಿದೆ ಎಂದು
ಫೋಟೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಇದು ನಿಜವಲ್ಲ, ಫೊಟೋ ತಿದ್ದುಪಡಿ ಮಾಡಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿ ಓದಿ

ಅಯೋಧ್ಯೆಯಲ್ಲಿ ಭಾರೀ ಸಂಖ್ಯೆಯಲ್ಲಿ ವಾನರ ಸೇನೆ ಕಂಡುಬಂದಿದೆ ಎನ್ನುವುದು ನಿಜವೇ?

ಅಯೋಧ್ಯೆಯಲ್ಲಿ ಭಾರೀ ಸಂಖ್ಯೆಯಲ್ಲಿ ವಾನರ ಸೇನೆ ಕಂಡುಬಂದಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಹರಿದಾಡಿದೆ. ತನಿಖೆ ವೇಳೆ ತಿಳಿದುಬಂದ ಪ್ರಕಾರ, ಇದು ಥೈಲ್ಯಾಂಡ್ ನ ವೀಡಿಯೋವಾಗಿದ್ದು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಂಡಿರುವುದು ಕಂಡುಬಂದಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿ ಓದಿ

ಭಕ್ತನೊಬ್ಬ ಕೈಗಳಲ್ಲಿ ನಡೆದುಕೊಂಡು ಅಯೋಧ್ಯೆಗೆ ಹೋಗುತ್ತಿದ್ದಾನೆ ಎನ್ನುವುದು ನಿಜವೇ?

ಭಕ್ತನೊಬ್ಬ ತನ್ನ ಕೈಗಳ ಮೇಲೆ ನಡೆದುಕೊಂಡು ಅಯೋಧ್ಯೆಗೆ ಹೋಗುತ್ತಿದ್ದಾರೆ ಎಂದು ಹೇಳುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ತನಿಖೆ ವೇಳೆ ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ನಿಹಾಲ್‌ ಸಿಂಗ್‌ ಎಂಬವರು ಕೈಗಳ ಮೇಲೆ ನಡೆದುಕೊಂಡು ಅಯೋಧ್ಯೆಗೆ ಹೋಗುತ್ತಿಲ್ಲ, ಬದಲಾಗಿ ಜಾರ್ಖಂಡ್ ನ ಬಸುಕಿನಾಥಕ್ಕೆ ಹೋಗುತ್ತಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿ ಓದಿ

ವೃಂದಾವನದಲ್ಲಿ ಚಪ್ಪಲಿ ಕಾಯುವಾಕೆ ರಾಮ ಮಂದಿರಕ್ಕೆ ₹51 ಲಕ್ಷ ದೇಣಿಗೆ ಕೊಟ್ಟಿದ್ದು ನಿಜವೇ?

ವೃಂದಾವನದಲ್ಲಿ ಚಪ್ಪಲಿ ಕಾಯುವ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬಳು ಅಯೋಧ್ಯೆ ರಾಮ ಮಂದಿರಕ್ಕೆ ₹51 ಲಕ್ಷ ದೇಣಿಗೆ ಕೊಟ್ಟಿದ್ದಾಳೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡಿದೆ. ನ್ಯೂಸ್‌ಚೆಕರ್ ಸತ್ಯಶೋಧನೆ ಪ್ರಕಾರ, ವೃಂದಾವನದಲ್ಲಿ ಚಪ್ಪಲಿ ಕಾಯುವಾಕೆ ತನ್ನ ಊರಿನಲ್ಲಿರುವ ಮನೆ ಮಾರಾಟ ಮಾಡಿ 15 ಲಕ್ಷ ರೂ. ದೇಣಿಗೆಯನ್ನು ವೃಂದಾವನದಲ್ಲಿ ದನದ ಕೊಟ್ಟಿಗೆ ಕಟ್ಟಲು ದೇಣಿಗೆ ನೀಡಿರುವುದಾಗಿ ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿ ಓದಿ

ಮೀರಾ ರೋಡ್‌ನಲ್ಲಿ ಗಲಭೆಗೈದ ಮುಸ್ಲಿಮರಿಗೆ ಪೊಲೀಸರ ಹೊಡೆತ ಎಂದ ಈ ವೀಡಿಯೋ ಹಿಂದಿನ ಸತ್ಯ ಏನು?

ಮುಂಬೈ ಮೀರಾ ರೋಡ್ ಬ್ಯಾರಿ ಬಾಂಧವರಿಗೆ ಪೊಲೀಸರಿಂದ ಹೃದಯ ಸ್ಪರ್ಶಿ ಸತ್ಕಾರ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಆದರೆ ತನಿಖೆ ವೇಳೆ, ವೈರಲ್‌ ವೀಡಿಯೋ, ಮುಂಬೈ ಮೀರಾರೋಡ್‌ ಘಟನೆಗೆ ಸಂಬಂಧಿಸಿದ್ದಲ್ಲ. 2022ರಲ್ಲಿ ನೂಪುರ್ ಶರ್ಮಾ ವಿರುದ್ಧ ಉತ್ತರಪ್ರದೇಶದ ಸಹ್ರಾನ್‌ ಪುರದಲ್ಲಿ ಪ್ರತಿಭಟನೆ ನಡೆಸಿದ್ದ ಮುಸ್ಲಿಂ ಯುವಕರಿಗೆ ಪೊಲೀಸ್‌ ಕಸ್ಟಡಿಯಲ್ಲಿ ಹೊಡೆದಿದ್ದ ವೈರಲ್ ವೀಡಿಯೋ ಇದಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿ ಓದಿ

ಹೊಕ್ಕುಳಕ್ಕೆ ತುಪ್ಪ ಹಚ್ಚುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆಯೇ?

ಹೊಕ್ಕುಳಕ್ಕೆ ತುಪ್ಪ ಹಚ್ಚುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಪಸರಿಸಿದೆ. ಆದರೆ ಹೊಕ್ಕುಳಕ್ಕೆ ತುಪ್ಪವನ್ನು ಹಚ್ಚುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎನ್ನುವ ವಿಚಾರ ಸಾಂಪ್ರಾದಾಯಿಕವಾಗಿ ವಿಧಾನ ಚಾಲ್ತಿಯಲ್ಲಿದೆ. ಆದರೆ ಇದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿ ಓದಿ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.