Weekly wrap: ಇಂಡಿಯಾ ಮೈತ್ರಿಕೂಟ ರಾಲಿಯಲ್ಲಿ ಜನಸಾಗರ, ಬುರ್ಖಾ ತೊಡಲು ಹಿಂದೂ ಹುಡುಗಿಗೆ ಬಲವಂತ, ವಾರದ ಕ್ಲೇಮ್ ನೋಟ

weekly wrap

ಇಂಡಿಯಾ ಮೈತ್ರಿಕೂಟ ರಾಲಿಯಲ್ಲಿ ಜನಸಾಗರ, ಬುರ್ಖಾ ತೊಡಲು ಹಿಂದೂ ಹುಡುಗಿಗೆ ಬಲವಂತ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿ ಆಂಧ್ರದಲ್ಲಿ ಸೆರೆ, 21 ಬಿಲಿಯನ್‌ ವರ್ಷ ಹಳೆಯ ಡ್ರೋನ್‌ ಉತ್ತರಪ್ರದೇಶದಲ್ಲಿ ಪತ್ತೆ, ರಂಜಾನ್‌ ಉದ್ದೇಶಕ್ಕೆ ಸರ್ಕಾರಿ ಶಾಲೆಗಳ ಸಮಯ ಬದಲು ಎಂಬ ಕ್ಲೇಮ್ ಗಳು ಈ ವಾರ ಹರಿದಾಡಿವೆ. ಇದರಲ್ಲಿ ಎರಡು ಕ್ಲೇಮ್‌ ಗಳು ಕೋಮು ಭಾವನೆಗೆ ಸಂಬಂಧಿಸಿದ್ದಾಗಿದ್ದವು. ಈ ಎಲ್ಲವುಗಳ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಸಾಬೀತು ಪಡಿಸಿದೆ.

Weekly wrap: ಇಂಡಿಯಾ ಮೈತ್ರಿಕೂಟ ರಾಲಿಯಲ್ಲಿ ಜನಸಾಗರ, ಬುರ್ಖಾ ತೊಡಲು ಹಿಂದೂ ಹುಡುಗಿಗೆ ಬಲವಂತ ವಾರದ ಕ್ಲೇಮ್ ನೋಟ

ಇಂಡಿಯಾ ಮೈತ್ರಿಕೂಟದ ರಾಲಿಯಲ್ಲಿ ಜನ ಸಾಗರ ಎಂದು ಪಾಟ್ನಾದ ಹಳೆ ರಾಲಿಯ ಫೋಟೋ ವೈರಲ್

ಇಂಡಿಯಾ ಮೈತ್ರಿಕೂಟದ ರಾಲಿಯಲ್ಲಿ ಜನಸಾಗರವೇ ಸೇರಿದೆ ಎಂದು ಸಾಮಾಜಿಕ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ ಒಂದು ಚಿತ್ರ 2017ರದ್ದಾಗಿದ್ದು ಅದನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ. ಇನ್ನೊಂದೂ ಅದೇ ರಾಲಿಯದ್ದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ

Weekly wrap: ಇಂಡಿಯಾ ಮೈತ್ರಿಕೂಟ ರಾಲಿಯಲ್ಲಿ ಜನಸಾಗರ, ಬುರ್ಖಾ ತೊಡಲು ಹಿಂದೂ ಹುಡುಗಿಗೆ ಬಲವಂತ ವಾರದ ಕ್ಲೇಮ್ ನೋಟ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಆಂಧ್ರ ವ್ಯಕ್ತಿಯ ಬಂಧನವಾಗಿದೆ ಎನ್ನುವುದು ಸುಳ್ಳು

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಬಂಧನವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಗಳು ಹರಿದಾಡಿವೆ. ಆದರೆ 2022ರ ನಿಜಾಮಾಬಾದ್‌ ಪಿಎಫ್‌ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್‌ ಸಲೀಂ ಎಂಬಾತನನ್ನು ಎನ್‌ಐಎ ಆಂಧ್ರ ಪ್ರದೇಶದಲ್ಲಿ ಬಂಧಿಸಿದೆ. ಇದು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಿದ್ದಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ

Weekly wrap: ಇಂಡಿಯಾ ಮೈತ್ರಿಕೂಟ ರಾಲಿಯಲ್ಲಿ ಜನಸಾಗರ, ಬುರ್ಖಾ ತೊಡಲು ಹಿಂದೂ ಹುಡುಗಿಗೆ ಬಲವಂತ ವಾರದ ಕ್ಲೇಮ್ ನೋಟ

ಹಿಂದೂ ಹುಡುಗಿಗೆ ಬ್ರೈನ್ ವಾಶ್ ಮಾಡಿ ಬುರ್ಖಾ ತೊಡುವಂತೆ ಮುಸ್ಲಿಂ ಹುಡುಗಿಯಿಂದ ಬಲವಂತ, ಸತ್ಯ ಏನು?

ಹಿಂದೂ ಹುಡುಗಿಗೆ ಬ್ರೈನ್ ವಾಶ್ ಮಾಡಿ ಬುರ್ಖಾ ತೊಡುವಂತೆ ಮುಸ್ಲಿಂ ಹುಡುಗಿ ಬಲವಂತ ಎಂಬರ್ಥದಲ್ಲಿ ಹೇಳಿಕೆಯೊಂದಿಗೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಸತ್ಯಶೋಧನೆಯಲ್ಲಿ ಮಡಿಕೇರಿಯ ಶನಿವಾರ ಸಂತೆಯಲ್ಲಿ 2021ರಲ್ಲಿ ನಡೆದ ಪ್ರಕರಣ ಇದಾಗಿದ್ದು ಮುಸ್ಲಿಂ ಹುಡುಗಿಗೆ ಬುರ್ಖಾ ಹಸ್ತಾಂತರಿಸುವ ವೇಳೆ ಗುಂಪು ಅವರನ್ನು ಬೆದರಿಸಿ, ಥಳಿಸಿದೆ. ಈ ಕುರಿತು ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ

Weekly wrap: ಇಂಡಿಯಾ ಮೈತ್ರಿಕೂಟ ರಾಲಿಯಲ್ಲಿ ಜನಸಾಗರ, ಬುರ್ಖಾ ತೊಡಲು ಹಿಂದೂ ಹುಡುಗಿಗೆ ಬಲವಂತ ವಾರದ ಕ್ಲೇಮ್ ನೋಟ

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್‌ ವರ್ಷ ಹಳೆಯ ಡ್ರೋನ್‌ ಸಿಕ್ಕಿದೆಯೇ?

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್‌ ವರ್ಷ ಹಳೆಯ ಡ್ರೋನ್‌ ಸಿಕ್ಕಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹರಿದಾಡಿದೆ. ನ್ಯೂಸ್‌ಚೆಕರ್ ಇದರ ಬಗ್ಗೆ ಪರಿಶೀಲನೆ ನಡೆಸಿದಾಗ, ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್‌ ವರ್ಷ ಹಳೆಯ ಡ್ರೋನ್‌ ಸಿಕ್ಕಿದೆ ಎಂದು ಹೇಳಿರುವ ವೈರಲ್ ಚಿತ್ರವು ಎಐ ಮೂಲಕ ಮಾಡಿದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ

Weekly wrap: ಇಂಡಿಯಾ ಮೈತ್ರಿಕೂಟ ರಾಲಿಯಲ್ಲಿ ಜನಸಾಗರ, ಬುರ್ಖಾ ತೊಡಲು ಹಿಂದೂ ಹುಡುಗಿಗೆ ಬಲವಂತ ವಾರದ ಕ್ಲೇಮ್ ನೋಟ

ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆಯೇ?

ರಂಜಾನ್‌ ಪ್ರಯುಕ್ತ ಶಾಲೆಗಳ ಸಮಯ ಬದಲಿಸಿದ ರಾಜ್ಯ ಸರ್ಕಾರ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ರಾಜ್ಯದ ಎಲ್ಲ ಶಾಲೆಗಳಿಗೆ ಅನ್ವಯವಾಗುವಂತೆ ರಂಜಾನ್‌ ತಿಂಗಳಲ್ಲಿ ಸಮಯ ಬದಲಾವಣೆ ಮಾಡಿ ಆದೇಶ ನೀಡಲಾಗಿಲ್ಲ. ಬದಲಾಗಿ ಉರ್ದು ಶಾಲೆಗಳಿಗೆ ಮಾತ್ರ ಸಮಯದ ಬದಲಾವಣೆ ಮಾಡಲಾಗಿದೆ. ಈ ಕುರಿತ ಸುದ್ದಿಗಳಲ್ಲಿ ತಪ್ಪು ಅರ್ಥ ಬರುವಂತೆ ಹೆಡ್ ಲೈನ್‌ ಮಾತ್ರ ಬದಲಾಯಿಸಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.