Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಮಹಾ ಕುಂಭಮೇಳದಲ್ಲಿ ಸನ್ಯಾಸಿಯಂತೆ ವೇಷ ಧರಿಸಿದ ಉಗ್ರನ ಬಂಧನ
Fact
ಮಹಾ ಕುಂಭಮೇಳದಿಂದ ಸನ್ಯಾಸಿಯ ವೇಷ ಧರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತೋರಿಸುವ ವೈರಲ್ ಫೋಟೋ ಎಐ ರಚಿಸಲಾಗಿದೆ, ಅಯೂಬ್ ಖಾನ್ ಎನ್ನುವ ವ್ಯಕ್ತಿಯನ್ನು ಕುಂಭಮೇಳದಲ್ಲಿ ಯತಿ ನರಸಿಂಹಾನಂದ ಗಿರಿ ಅವರ ಶಿಬಿರದ ಹೊರಗಿನಿಂದ ಬಂಧಿಸಲಾಗಿದ್ದರೂ ಆತ ಭಯೋತ್ಪಾದಕನಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ
ಸನ್ಯಾಸಿ ವೇಷ ಧರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಫೋಟೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಬಳಕೆದಾರರು ಇದು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ್ದು ಎಂದು ಹೇಳಿದ್ದಾರೆ.
ಫೇಸ್ಬುಕ್ ನಲ್ಲಿ ಕಂಡು ಬಂದ ಫೊಟೋದಲ್ಲಿ, “ಉತ್ತರ ಪ್ರದೇಶದ ಕುಂಭಮೇಳದಲ್ಲಿ ಭಯೋತ್ಪಾದಕ “ಅಯೂಬ್ ಖಾನ್” ಬಂಧನ. ಋಷಿ ವೇಷ ಧರಿಸಿ ಬಂದು ಋಷಿಗಳ ಬಳಿ ಸೇರಿದರು. ಅವನು ತನ್ನ ಧರ್ಮ ಬೋಧಿಸುವ ದೊಡ್ಡ ಅಪರಾಧವನ್ನು ಮಾಡಲು ಸಂಚು ರೂಪಿಸಿದ್ದನು. ದೇವರ ದಯೆಯಿಂದ ನಮ್ಮ ಪುಣ್ಯಾತ್ಮರು ಈ ಭಯೋತ್ಪಾದಕನ ದುಷ್ಕೃತ್ಯವನ್ನು ಗಮನಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ” ಎಂದಿದೆ.
ಇದರೊಂದಿಗೆ ಅನೇಕ ಎಕ್ಸ್ ಮತ್ತು ಫೇಸ್ಬುಕ್ ಬಳಕೆದಾರರು ಈ ಫೋಟೋದಲ್ಲಿ ಮಹಾಕುಂಭದಿಂದ ಬಂಧಿಸಲ್ಪಟ್ಟ “ಉಗ್ರಗಾಮಿ” ಅಯೂಬ್ ಖಾನ್ ಅವರನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ, “ಅವರು ಸಾಧುವಾಗಿ ಬಂದು ನಮ್ಮ ಸಾಧುಗಳೊಂದಿಗೆ ಬೆರೆತಿದ್ದಾರೆ” ಎಂದು ಆರೋಪಿಸಿದ್ದಾರೆ. ಆದಾಗ್ಯೂ, ಫೋಟೋವು ಎಐ ರಚಿಸಲಾಗಿದೆ ಮತ್ತು ನಿಜವಾದ ಘಟನೆಯನ್ನು ತೋರಿಸುವುದಿಲ್ಲ ಮತ್ತು ಹೇಳಿದಂತೆ ಯಾವುದೇ ಭಯೋತ್ಪಾದಕನನ್ನು ಬಂಧಿಸಲಾಗಿಲ್ಲ ಎಂದು ನ್ಯೂಸ್ಚೆಕರ್ ಕಂಡುಕೊಂಡಿದೆ.
ತನಿಖೆಯ ಆರಂಭದಲ್ಲಿ ನಾವು ವೈರಲ್ ಆಗಿರುವ ಫೋಟೋವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ಈ ವೇಳೆ ಪೊಲೀಸ್ ಸಿಬ್ಬಂದಿಯ ಕೈಗಳು ಮತ್ತು ಆರೋಪಿಯ ಕೈ ಸಹಜವಾಗಿಲ್ಲದೇ ಇರುವುದನ್ನು ನೋಡಿದ್ದೇವೆ. ಇದಲ್ಲದೆ, ಹಿನ್ನೆಲೆಯಲ್ಲಿ ದೋಣಿಯಲ್ಲಿದ್ದ ಸನ್ಯಾಸಿಗಳ ಮುಖಗಳು ಸಹ ಮಸುಕಾಗಿವೆ, ಇದು ಫೋಟೋ ಎಐನಿಂದ ಮಾಡಿದ್ದಾಗಿದೆ ಎಂಬುದನ್ನು ಸೂಚಿಸುತ್ತದೆ.
ಅನಂತರ ನಾವು ಅನೇಕ ಎಐ ಪತ್ತೆ ಸಾಧನಗಳಲ್ಲಿ ವೈರಲ್ ಫೋಟೋವನ್ನು ಪರಿಶೀಲಿಸಿದ್ದೇವೆ, ಇದು ಎಐ ಮೂಲಕ ತಯಾರು ಮಾಡಲಾದ ಫೋಟೋ ಎಂಬುದರ ಹೆಚ್ಚಿನ ಸಂಭವನೀಯತೆಯನ್ನು ತೋರಿಸಿದೆ. ಹೈವ್ ಮೊಡರೇಶನ್ ಫೋಟೋ ಎಐ-ರಚಿಸಿದ ಅಥವಾ ಡೀಪ್ ಫೇಕ್ ಮೂಲಕ ಮಾಡಿರುವ 94.6% ಸಾಧ್ಯತೆಯನ್ನು ಕಂಡುಹಿಡಿದಿದೆ. ಮತ್ತೊಂದು ಇಮೇಜ್ ಡಿಟೆಕ್ಟರ್ ಪ್ಲಾಟ್ಫಾರ್ಮ್ ‘ವಾಸ್ ಇಟ್ ಎಐ’ ಸಹ, “ಈ ಚಿತ್ರ ಅಥವಾ ಅದರ ಗಮನಾರ್ಹ ಭಾಗವನ್ನು ಎಐ ರಚಿಸಲಾಗಿದೆ ಎಂಬ ಬಗ್ಗೆ ನಮಗೆ ಸಾಕಷ್ಟು ವಿಶ್ವಾಸವಿದೆ” ಎಂದು ತೀರ್ಮಾನಿಸಿದೆ.
ಇನ್ನು ಮಹಾ ಕುಂಭಮೇಳದಲ್ಲಿದಲ್ಲಿ ಸನ್ಯಾಸಿಯಂತೆ ನಟಿಸುತ್ತಿದ್ದ “ಭಯೋತ್ಪಾದಕನನ್ನು” ಬಂಧಿಸಲಾಗಿದೆ ಎಂದು ಹೇಳುವ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಕಂಡುಬಂದಿಲ್ಲ.
ಆದಾಗ್ಯೂ, ಅಯೂಬ್ ಎಂಬ “ಅನುಮಾನಾಸ್ಪದ” ವ್ಯಕ್ತಿಯನ್ನು ಕಳೆದ ವಾರ ಮಹಾ ಕುಂಭಮೇಳದಲ್ಲಿ ಯತಿ ನರಸಿಂಹಾನಂದ ಗಿರಿ ಅವರ ಶಿಬಿರದ ಹೊರಗಿನಿಂದ ಬಂಧಿಸಲಾಗಿದೆ ಎಂಬ ವರದಿಯಿದೆ. ಆತ ತನ್ನನ್ನು ‘ಆಯುಷ್’ ಎಂದು ಗುರುತಿಸಿಕೊಂಡಿದ್ದು, ಸಂತರನ್ನು ಭೇಟಿಯಾಗಲು ಬಂದಿದ್ದಾಗಿ ಹೇಳಿದ್ದಾನೆ. ಪೊಲೀಸ್ ವಿಚಾರಣೆಯ ನಂತರ, ಅವನ ಹೆಸರು ‘ಅಯೂಬ್ ಅಲಿ’ ಎಂದು ತಿಳಿದುಬಂದಿದೆ, ಉತ್ತರ ಪ್ರದೇಶದ ಇಟಾದ ಅಲಿಗಂಜ್ ನಿವಾಸಿಯಾಗಿದ್ದಾನೆ. ಅಯೂಬ್ ಮಾದಕ ವ್ಯಸನಿಯಾಗಿದ್ದು, ಮಾನಸಿಕವಾಗಿ ಸ್ಥಿರತೆ ಇಲ್ಲದ ವ್ಯಕ್ತಿಯಂತೆ ವರ್ತಿಸುತ್ತಾನೆ ಎಂದು ಆತನ ಸಂಬಂಧಿ ಹೇಳಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.
ಈ ರೀತಿ ಅನೇಕ ಮಾಧ್ಯಮಗಳು, ಇಲ್ಲಿ ಮತ್ತು ಇಲ್ಲಿ ಘಟನೆಯ ಬಗ್ಗೆ ವರದಿ ಮಾಡಿವೆ. ಆದಾಗ್ಯೂ, ಇವರಲ್ಲಿ ಯಾರೂ ಅಯೂಬ್ ಸನ್ಯಾಸಿಯ ವೇಷ ಧರಿಸಿದ್ದಾನೆ ಎಂದು ಉಲ್ಲೇಖಿಸಿಲ್ಲಅಥವಾ ಆತನನ್ನು ಭಯೋತ್ಪಾದಕ ಎಂದು ಗುರುತಿಸುವ ಅಥವಾ ಭಯೋತ್ಪಾದಕ ಸಂಘಟನೆಗಳ ಸಂಪರ್ಕವನ್ನು ಹೊಂದಿರುವ ಬಗ್ಗೆ ಯಾವುದೇ ಅಧಿಕಾರಿಗಳು ಹೇಳಿಕೆ ನೀಡಿಲ್ಲ.
ವರದಿಗಳು ಬಂಧಿತ ಅಯೂಬ್ ಖಾನ್ ನ ಫೋಟೋವನ್ನೂ ಹೊಂದಿವೆ. ಅದರಲ್ಲಿ ಆತ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿರುವುದನ್ನು ಕಾಣಬಹುದು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ ಚೆಕರ್ ಪ್ರಯಾಗ್ ರಾಜ್ ನ ಡಿಐಜಿ ಅವರ ಸಂಪರ್ಕಾಧಿಕಾರಿಗಳನ್ನು ಸಂಪರ್ಕಿಸಿದೆ. ಅವರು ಈ ಹೇಳಿಕೆಯನ್ನು ನಿರಾಕರಿಸಿದ್ದು, “ಕುಂಭಮೇಳದ ಆವರಣದಿಂದ ಯಾವುದೇ ಭಯೋತ್ಪಾದಕರನ್ನು ಬಂಧಿಸಲಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸತ್ಯಶೋಧನೆಯ ಪ್ರಕಾರ, ಮಹಾ ಕುಂಭಮೇಳದಿಂದ ಸನ್ಯಾಸಿಯ ವೇಷ ಧರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತೋರಿಸುವ ವೈರಲ್ ಫೋಟೋ ಎಐ ರಚಿಸಲಾಗಿದೆ ಎಂದು ಕಂಡುಬಂದಿದೆ. ಇದರೊಂದಿಗೆ ಬಂಧಿತ ವ್ಯಕ್ತಿ ಭಯೋತ್ಪಾದಕ ಎಂಬ ಹೇಳಿಕೆಯನ್ನು ಉತ್ತರ ಪ್ರದೇಶ ಪೊಲೀಸರು ನಿರಾಕರಿಸಿದ್ದಾರೆ.
Also Read: ಅಖಿಲೇಶ್ ಯಾದವ್ ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡಿದ್ದಾರೆಯೇ, ನಿಜ ಏನು?
Our Sources
Hive Moderation Website
Was It AI Website
Report By Dainik Bhaskar, Dated: January 15, 2025
Telephone Conversation With PRO-DIG Prayagraj Dated: January 24, 2025
(With inputs from Raushan Thakur of Newschecker Hindi)
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
January 22, 2025
Ishwarachandra B G
January 18, 2025
Ishwarachandra B G
December 24, 2024