Fact Check: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಸ್ಲಾಂ ಸೇರಲು ಹಿಂದೂಗಳಿಗೆ ಆಹ್ವಾನ ಎನ್ನುವ ವೀಡಿಯೋ ಹಿಂದಿನ ಸತ್ಯ ಏನು?

ಕಾಂಗ್ರೆಸ್‌, ಇಸ್ಲಾಂ, ಹಿಂದೂ, ಲೋಕಸಭಾ ಚುನಾವಣೆ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಸ್ಲಾಂ ಸೇರಲು ಮುಸ್ಲಿಂ ಧರ್ಮಗುರುಗಳಿಂದ ಹಿಂದೂಗಳಿಗೆ ಆಹ್ವಾನ

Fact
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಸ್ಲಾಂ ಸೇರಲು ಮುಸ್ಲಿಂ ಧರ್ಮಗುರುಗಳಿಂದ ಹಿಂದೂಗಳಿಗೆ ಆಹ್ವಾನ ಎನ್ನುವುದು ನಿಜವಲ್ಲ, ವೈರಲ್ ವೀಡಿಯೋ ಸ್ವಾಮಿ ನರಸಿಂಹಾನಂದ ಅವರ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ

ಮುಸ್ಲಿಂ ಧರ್ಮಗುರುವಿನಂತೆ ಕಾಣುವ ವ್ಯಕ್ತಿಯೊಬ್ಬರು, ಹಿಂದೂಗಳ ವಿರುದ್ಧ ಮಾತನಾಡುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್‌ ನಲ್ಲಿ ಕಂಡುಬಂದ ಈ ವೀಡಿಯೋ ಜೊತೆಗಿರುವ ಹೇಳಿಕೆಯಲ್ಲಿ “ಏನಾದರೂ ಖಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಹಿಂದುಗಳ ಮನೆಮನೆಗೆ ಹೋಗಿ  ಹಿಂದೂಗಳನ್ನೂ ಇಸ್ಲಾಂಗೆ ಆಹ್ವಾನಿಸುತ್ತೇವೆ.” ಎಂದಿದೆ.

Also Read: ಅಮೇಥಿಯಿಂದ ಪ್ರಿಯಾಂಕಾ, ರಾಯ್‌ ಬರೇಲಿಯಿಂದ ರಾಹುಲ್‌ ಅವರನ್ನು ಅಭ್ಯರ್ಥಿಗಳನ್ನಾಗಿ ಕಾಂಗ್ರೆಸ್ ಘೋಷಿಸಿದೆಯೇ?

Fact Check: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಸ್ಲಾಂ ಸೇರಲು ಹಿಂದೂಗಳಿಗೆ ಆಹ್ವಾನ ಎನ್ನುವ ವೀಡಿಯೋ ಹಿಂದಿನ ಸತ್ಯ ಏನು?
ವಾಟ್ಸಾಪ್‌ ಪೋಸ್ಟ್

ಈಗಿನ ಲೋಕಸಭಾ ಚುನಾವಣೆಗೆ ಸಂಬಂಧ ಕಲ್ಪಿಸಿ ಈ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ಬಾಂಗ್ಲಾದೇಶದ ವೀಡಿಯೋ ಆಗಿದ್ದು, ಚುನಾವಣೆ ಹಿನ್ನೆಲೆಗೆ ಸಂಬಂಧಿಸಿದ್ದಲ್ಲ ಎಂದು ಕಂಡುಬಂದಿದೆ.

Fact Check

ಸತ್ಯಶೋಧನೆಗಾಗಿ ನಾವು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ವೀಡಿಯೋದಲ್ಲಿ “ಇದು ಇನ್ನೂ ತಡವಾಗಿಲ್ಲ, ಆದ್ದರಿಂದ ನೀವೆಲ್ಲರೂ (ಹಿಂದೂಗಳು) ತಪ್ಪೊಪ್ಪಿಳ್ಳಿರಿ ಮತ್ತು ಅಲ್ಲಾ ಮತ್ತು ಪ್ರವಾದಿ ಮುಹಮ್ಮದ್ ಅವರಲ್ಲಿ ಕ್ಷಮೆಯನ್ನು ಕೇಳಿ. ಇಲ್ಲದಿದ್ದರೆ, ನಿಮ್ಮ ದೇಹವನ್ನು ಸುಡುವ ಅವಕಾಶವೂ ಇರುವುದಿಲ್ಲ. ಕಲಿಮಾವನ್ನು ಪಠಿಸುವ ಮೂಲಕ ಮುಸಲ್ಮಾನರಾಗಲು ನಾನು ನಿಮಗೆ ಅವಕಾಶ ನೀಡುತ್ತೇನೆ” ಎಂದು ಧರ್ಮಗುರುವಿನಂತೆ ಕಾಣುವ ವ್ಯಕ್ತಿಯೊಬ್ಬರು ಮೈಕ್ ಹಿಡಿದು ಹೇಳುವುದನ್ನು ಕೇಳಬಹುದು.

ಆ ಬಳಿಕ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ನಲ್ಲಿ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಡಾ.ಸೈಯದ್ ಇರ್ಷಾದ್ ಅಹ್ಮದ್‌ ಅಲ್‌ ಬುಖಾರಿ ಎನ್ನುವ ವೀಡಿಯೋ ಚಾನೆಲ್‌ ಲಭ್ಯವಾಗಿದೆ. ಏಪ್ರಿಲ್ 30, 2021ರ ಈ ವೀಡಿಯೋದ ಶೀರ್ಷಿಕೆಯಲ್ಲಿ ಬಾಂಗ್ಲಾದೇಶದಿಂದ ಡಾ.ಸೈಯದ್‌ ಇರ್ಷಾದ್‌ ಬುಖಾರಿ ನರಸಿಂಹಾನಂದ ಸರಸ್ವತಿ ಅವರನ್ನು ಕ್ಷಮಿಸಿ ಸವಾಲೆಸೆಯುತ್ತಿರುವುದು ಎಂದಿದೆ.

ಜೊತೆಗೆ ವೀಡಿಯೋದಲ್ಲಿರುವ ವಿವರಣೆಯಲ್ಲಿ “ಅಲ್ಲಾಮಾ ಡಾ. ಸೈಯದ್ ಇರ್ಷಾದ್ ಅಹ್ಮದ್ ಅಲ್ ಬುಖಾರಿ ಅವರಿಗೆ ಬಾಂಗ್ಲಾದೇಶದಿಂದ ಮುಬಾಹಿಲಾ ಸವಾಲನ್ನು ನೀಡಿದರು ಮತ್ತು ಭಾರತೀಯ ಕಟ್ಟಾ ಹಿಂದುತ್ವ ಪಂಡಿತ್ ಸ್ವಾಮಿ ನರಸಿಂಹಾನಂದ ಸ್ವರಸ್ವತಿ ಅವರಿಗೆ ರಸೂಲುಲ್ಲಾ ಅವರನ್ನು ಅವಮಾನಿಸುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದರು. ತಮ್ಮ ದೇಶದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ನಾವು ಕೊರೊನಾದಿಂದ ಮುಕ್ತರಾಗಬೇಕಾದರೆ, ಭಾರತ ಸರ್ಕಾರವು ಈ ಖಾಬಿಯನ್ನು ತಕ್ಷಣವೇ ಬಂಧಿಸಬೇಕು” ಎಂದಿದೆ. (ಗೂಗಲ್‌ ನೆರವಿನಿಂದ ಅನುವಾದಿಸಲಾಗಿದೆ) 7.15 ನಿಮಿಷದ ವೀಡಿಯೋ ಇದಾಗಿದ್ದು, ಇದರಲ್ಲಿ ನರಸಿಂಹಾನಂದ ಸರಸ್ವತಿ ಅವರ ವಿರುದ್ಧವಾಗಿ ಪ್ರತಿಭಟನೆ ನಡೆಸುವ, ಮಾತನಾಡುವ ದೃಶ್ಯಗಳಿವೆ. 1.30ರಿಂದ 7.15ರವರೆಗಿನ ವೀಡಿಯೋಗಳ ದೃಶ್ಯಗಳು ವೈರಲ್‌ ವೀಡಿಯೋವನ್ನು ಹೋಲುವುದನ್ನು ನಾವು ಕಂಡುಕೊಂಡಿದ್ದೇವೆ.

Also Read: ಗುಜರಾತ್ ಅದಾನಿ ಬಂದರಿನಲ್ಲಿ ಟ್ರಕ್‌ ಗಳಲ್ಲಿ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವುದು ನಿಜವೇ?

ಡಾ.ಸೈಯದ್‌ ಯೂಟ್ಯೂಬ್‌ ವೀಡಿಯೋ

ಆ ಬಳಿಕ ನಾವು ಡಾ.ಸೈಯದ್‌ ಇರ್ಷಾದ್‌ ಅಲ್ ಬುಖಾರಿ ಹೆಸರನ್ನು ಫೇಸ್‌ಬುಕ್‌ ನಲ್ಲಿ ಸರ್ಚ್‌ ಮಾಡಿದ್ದು, ಅದೇ ಹೆಸರಿನಲ್ಲಿ ಫೇಸ್ ಬುಕ್‌ ಪೇಜ್‌ ಲಭ್ಯವಾಗಿದೆ. ಈ ಮೂಲಕ ಇವರು ಬಾಂಗ್ಲಾದೇಶದವರು ಎಂದು ತಿಳಿದುಬಂದಿದೆ.

ಮಾಹಿತಿಗಳ ಪ್ರಕಾರ, ನರಸಿಂಹಾನಂದ ಸರಸ್ವತಿ ಅವರು ಪ್ರವಾದಿ ಮಹಮ್ಮದ್‌ ಅವರ ಬಗ್ಗೆ ನಿಂದನಾತ್ಮಕವಾಗಿ ಮಾತುಗಳನ್ನು ಆಡಿದ್ದು ಅದರ ವಿರುದ್ಧದ ಪ್ರತಿಭಟನೆಯಲ್ಲಿ ಡಾ.ಸೈಯದ್‌ ಅವರು ಈ ಮಾತುಗಳನ್ನು ಹೇಳಿ, ಕ್ಷಮೆ ಕೋರುವಂತೆ ಮತ್ತು ಭಾರತ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಪ್ರತಿಭಟನೆ ನಡೆಸಿದ ಡಾ.ಸೈಯದ್‌ ಅವರು ಬಾಂಗ್ಲಾದೇಶದ ದಿನಾಜ್‌ಪುರದ ಮುಸ್ಲಿಂ ಧರ್ಮಗುರುಗಳಾಗಿದ್ದಾರೆ.

Fact Check: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಸ್ಲಾಂ ಸೇರಲು ಹಿಂದೂಗಳಿಗೆ ಆಹ್ವಾನ ಎನ್ನುವ ವೀಡಿಯೋ ಹಿಂದಿನ ಸತ್ಯ ಏನು?
ಡಾ.ಸೈಯದ್‌ ಫೇಸ್‌ಬುಕ್‌ ಪೇಜ್‌

Conclusion

ಪುರಾವೆಗಳ ಪ್ರಕಾರ, “ಏನಾದರೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಹಿಂದುಗಳ ಮನೆಮನೆಗೆ ಹೋಗಿ  ಹಿಂದೂಗಳನ್ನೂ ಇಸ್ಲಾಂಗೆ ಆಹ್ವಾನಿಸುತ್ತೇವೆ” ಎಂದು ಮುಸ್ಲಿಂ ಧರ್ಮಗುರು ಹೇಳುತ್ತಾರೆ ಎನ್ನುವ ಹೇಳಿಕೆ ತಪ್ಪಾಗಿದೆ. ಇದು ಬಾಂಗ್ಲಾದೇಶದ ಪ್ರತಿಭಟನೆಯೊಂದರ ವೀಡಿಯೋ ಆಗಿದ್ದು, ಕಾಂಗ್ರೆಸ್‌ ಯಾವುದೇ ಸಂಬಂಧ ಹೊಂದಿಲ್ಲ. ಈಗ ಇದನ್ನು ಲೋಕಸಭೆ ಚುನಾವಣೆಯಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದು ಗಮನಿಸಿದ್ದೇವೆ.

Also Read: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪತ್ನಿ ಮತದಾನ ಮಾಡುವ ವೇಳೆ ಜೊತೆಗೆ ಇದ್ದು ನಿಯಮ ಉಲ್ಲಂಘಿಸಿದ್ದಾರೆಯೇ?

Result: False

Our Sources
YouTube Video By Dr Syed Irshad Ahmad Al Bukhari, Dated: April 30, 2021

Facebook Page By Dr Syed Irshad Ahmad Al Bukhari  

(Inputs from Rifat, Newschecker Bangladesh)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.