Authors
Claim
ಬಂಗಾಳದಲ್ಲಿ ಬದುಕಲು ಧರ್ಮ ಬದಲಿಸುವಂತೆ ಒತ್ತಾಯಿಸುತ್ತಿದ್ದಾರೆ
Fact
ಈ ವೀಡಿಯೋ ಬಾಂಗ್ಲಾದೇಶದ್ದಾಗಿದ್ದು, ನೆರೆ ಪರಿಹಾರ ವಿತರಣೆ ವೇಳೆ ಮುಸ್ಲಿಮರು ಶಿರ್ಕ್ (ತಾಯತ) ಧರಿಸುವುದು ಒಳ್ಳೆಯದಲ್ಲ ಎಂದು ಅದನ್ನು ತೆಗೆಸಿದ್ದಾಗಿ ಸ್ವತಃ ತಾಯತವನ್ನು ತೆಗೆಸಿದ ವೀಡಿಯೋ ಮಾಡಿರುವ ಅಬ್ದುಲ್ಲಾಹ್ ಬಿನ್ ಅರ್ಶದ್ ಹೇಳಿದ್ದಾರೆ
ಬಂಗಾಳದಲ್ಲಿ ಬದುಕಲು ಧರ್ಮ ಬದಲಿಸಲು ಒತ್ತಾಯಿಸುತ್ತಿದ್ದಾರೆ ಎನ್ನುವ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋ ಬಗ್ಗೆ ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ಟಿಪ್ ಲೈನ್ (+919999499044) ಗೆ ಮನವಿ ಮಾಡಿದ್ದು ಅದನ್ನು ಅಂಗೀಕರಿಸಲಾಗಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಆಗಸ್ಟ್ 31, 2024ರ ಅಬ್ದುಲ್ಲಾಹ್ ಬಿನ್ ಅರ್ಶದ್ ಯೂಟ್ಯೂಬ್ ಚಾನೆಲ್ ನೋಡಿದ್ದೇವೆ. ಇದು ಬಾಂಗ್ಲಾದೇಶದ್ದು ಎನ್ನವುದು ಗೊತ್ತಾಗಿದೆ. ಇದರಲ್ಲಿ “ತಾಯತವನ್ನು ತೆಗೆಯುವುದು” (ಬಾಂಗ್ಲಾದಿಂದ ಅನುವಾದಿಸಲಾಗಿದೆ) ಶೀರ್ಷಿಕೆಯಡಿಯಲ್ಲಿ ವೀಡಿಯೋವನ್ನು ನೀಡಲಾಗಿದೆ. ಈ ವೀಡಿಯೋ ವೈರಲ್ ವೀಡಿಯೋಕ್ಕೆ ಸಾಮ್ಯತೆ ಹೊಂದಿರುವದನ್ನು ಕಂಡುಕೊಂಡಿದ್ದೇವೆ.
ಆ ಬಳಿಕ ನಾವು “ಅಬ್ದುಲ್ಲಾಹ್ ಬಿನ್ ಅರ್ಶದ್” ಹೆಸರನ್ನು ಫೇಸ್‌ಬುಕ್ ನಲ್ಲಿ ಸರ್ಚ್ ಮಾಡಿದ್ದು ಫೇಸ್‌ಬುಕ್ ಖಾತೆ ಲಭ್ಯವಾಗಿದೆ.
ಅಬ್ದಲ್ಲಾಹ್ ಫೇಸ್‌ಬುಕ್ ಖಾತೆಯಲ್ಲೂ ಆಗಸ್ಟ್ 30ರಂದು ಪೋಸ್ಟ್ ಮಾಡಲಾದ ರೀಲ್ ನಲ್ಲಿ “ತಾಯತವನ್ನು ತೆಗೆಯುತ್ತಿರುವುದು” ಎಂದು ಹೇಳಲಾದ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ ಮತ್ತು ವೈರಲ್ ವೀಡಿಯೋದಲ್ಲಿ ತಾಯತವನ್ನು ತೆಗೆದ ವ್ಯಕ್ತಿ ಅವರೇ ಎಂದೂ ಖಚಿತಪಡಿಸಿಕೊಂಡಿದ್ದೇವೆ.
ಫೇಸ್ಬುಕ್ ಪೇಜ್ ನಲ್ಲಿರುವ ಮಾಹಿತಿ ಆಧರಿಸಿ ನ್ಯೂಸ್‌ಚೆಕರ್ ಬಾಂಗ್ಲಾ ಅಬ್ದುಲ್ಲಾಹ್ ಬಿನ್ ಅರ್ಶದ್ ಅವರನ್ನು ಸಂಪರ್ಕಿಸಿದೆ. ಈ ವೇಳೆ ಅವರು ನ್ಯೂಸ್ ಚೆಕರ್ ಗೆ ವೀಡಿಯೋ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಈ ವೀಡಿಯೋದಲ್ಲಿ ಅವರು ಮಾತನಾಡುತ್ತ, “ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಿಸುವುದರ ಜೊತೆಗೆ ಮುಸ್ಲಿಮರ ದೇಹದಿಂದ ತಾಯತಗಳನ್ನು ತೆಗೆಯುವ ಪ್ರಯತ್ನವನ್ನೂ ನಡೆಸಿದ್ದೇವೆ. ವ್ಯಕ್ತಿಯ ಅನುಮತಿಯೊಂದಿಗೆ ಇದನ್ನು ಮಾಡಿದ್ದು, ತಾಯತಗಳನ್ನು ಬಳಸುವುದು ಶಿರ್ಕ್ (ಗಂಭೀರ ಪಾಪ) ಎಂದು ವಿವರಿಸಲಾಗಿದೆ. ಬಾಂಗ್ಲಾದ ಕೆಲವು ಪ್ರದೇಶಗಳಲ್ಲಿ ಕೆಲವು ಮುಸ್ಲಿಂ ತಾಂತ್ರಿಕರು ಹಿಂದೂಗಳು ಮತ್ತು ಮುಸ್ಲಿಮರಿಗೆ ತಾಯತಗಳನ್ನು ನೀಡುತ್ತಿದ್ದಾರೆ ಎಂಬುದನ್ನು ಕಂಡುಕೊಂಡಿದ್ದೇವೆ. ಯಾವುದೇ ಧರ್ಮದ ವ್ಯಕ್ತಿಗಳು ತಾಯತಗಳನ್ನು ಧರಿಸಿರುವುದನ್ನು ಕಂಡಾಗಲೂ ಈ ಅಭ್ಯಾಸ ಉತ್ತಮವಾದ್ದಲ್ಲ ಎಂದು ತಿಳಿಸಿದ್ದಾಗಿ ಮತ್ತು ಮುಸ್ಲಿಮರಿಂದ ಮಾತ್ರವೇ ತಾಯತವನ್ನು ತೆಗೆಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಇದೇ ರೀತಿ ಇನ್ನೊಂದು ವೀಡಿಯೋದಲ್ಲಿ ಬಾಲಕನೊಬ್ಬನಿಂದ ತಾಯತವನ್ನು ತೆಗೆಸಿರುವುದರ ಕುರಿತೂ ಹೇಳಿಕೆಗಳು ಹರಿದಾಡಿದ್ದು, ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆಯನ್ನು ಇಲ್ಲಿ ನೋಡಬಹುದು.
ತಾಯತ ಕಟ್ಟುವುದು ಇಸ್ಲಾಂಗೆ ಪೂರಕವಾಗಿದೆಯೇ?
ಇಸ್ಲಾಮಿನ ಪರಿಭಾಷೆಯಲ್ಲಿ ಶಿರ್ಕ್ ಎಂದರೆ ಅಲ್ಲಾಹನ ಆರಾಧನೆಯಲ್ಲಿ ಯಾರನ್ನಾದರೂ ಸಂಯೋಜಿಸುವುದು ಮತ್ತು ಅವನನ್ನು ಅಲ್ಲಾಗೆ ಸಮಾನವೆಂದು ಪರಿಗಣಿಸುವುದು. ಅಂದರೆ ಅಲ್ಲಾಹನ ಹೊರತಾಗಿ ಬೇರೆಯವರಲ್ಲೂ ನಂಬಿಕೆ ಇಡುವುದು. ಕುರಾನ್‌ನ ಹಲವಾರು ಶ್ಲೋಕಗಳು ಶಿರ್ಕ್ ವಿರುದ್ಧವಾಗಿ ಹೇಳುತ್ತವೆ. ಈ ಕುರಿತು ಇಸ್ಲಾಮಿಕ್ ವಿದ್ವಾಂಸರಲ್ಲಿ ಹಲವಾರು ಅಭಿಪ್ರಾಯಗಳಿವೆ, ಇಸ್ಲಾಂ ತಾಯತಗಳನ್ನು ಧರಿಸುವುದನ್ನು ಇದು ಕ್ಷಮಿಸುತ್ತದೆ ಎಂದು ಕೆಲವರು ಹೇಳಿದರೆ, ತಾಯತಗಳನ್ನು ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಇನ್ನು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಖುರಾನ್‌ನ ಶ್ಲೋಕಗಳನ್ನು ತಾಯತದಲ್ಲಿ ಹೊಂದಿದ್ದರೆ, ಅದು ಇಸ್ಲಾಂಗೆ ಪೂರಕವಾಗಿದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಇಲ್ಲಿ ಇಲ್ಲಿ ನೋಡಿ
Conclusion
ಈ ತನಿಖೆಯ ಪ್ರಕಾರ, ಬಂಗಾಳದಲ್ಲಿ ಬದುಕಲು ಧರ್ಮ ಬದಲಿಸಲು ಒತ್ತಾಯಿಸುತ್ತಿದ್ದಾರೆ ಎನ್ನುವ ಹೇಳಿಕೆ ತಪ್ಪಾಗಿದೆ. ಬಾಂಗ್ಲಾದೇಶದಲ್ಲಿ ಪರಿಹಾರ ವಿತರಣೆ ವೇಳೆ ಮುಸ್ಲಿಂ ಧರ್ಮೀಯರಿಂದ ಮಾತ್ರವೇ ತಾಯತ ತೆಗೆಸಿರುವುದಾಗಿ ಮುಸ್ಲಿಂ ಧರ್ಮಗುರು ಹೇಳಿದ್ದಾರೆ.
Also Read: ಮೃತ ಉಗ್ರನ ದೇಹದಲ್ಲಿ ಟೈಂ ಬಾಂಬ್ ಇಟ್ಟು ಇಸ್ರೇಲ್ ಪ್ಯಾಲಸ್ತೀನ್ ನಲ್ಲಿ ಸ್ಫೋಟ ನಡೆಸಿತೇ?
Result: False
Our Sources
You Tube Video By Abdullah Bin Arshad Date: August 31, 2024
Facebook Post By Abdullah Bin Arshad: Dated: August 30, 2024
Conversation with Abdullah Bin Arshad
(Inputs By Sayeed Joy, Newschecker Bangladesh)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.