Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ವೃಂದಾವನದಲ್ಲಿ ಚಪ್ಪಲಿ ಕಾಯುವಾಕೆ ರಾಮ ಮಂದಿರಕ್ಕೆ ₹51 ಲಕ್ಷ ದೇಣಿಗೆ ಕೊಟ್ಟಿದ್ದಾಳೆ
Fact
ವೃಂದಾವನದಲ್ಲಿ ಚಪ್ಪಲಿ ಕಾಯುವಾಕೆ ತನ್ನ ಊರಿನಲ್ಲಿರುವ ಮನೆ ಮಾರಾಟ ಮಾಡಿ 15 ಲಕ್ಷ ರೂ. ದೇಣಿಗೆಯನ್ನು ವೃಂದಾವನದಲ್ಲಿ ದನದ ಕೊಟ್ಟಿಗೆ ಕಟ್ಟಲು ದೇಣಿಗೆ ನೀಡಿರುವುದಾಗಿ ತಿಳಿದುಬಂದಿದೆ.
ವೃಂದಾವನದಲ್ಲಿ ಚಪ್ಪಲಿ ಕಾಯುವ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬಳು ಅಯೋಧ್ಯೆ ರಾಮ ಮಂದಿರಕ್ಕೆ ₹51 ಲಕ್ಷ ದೇಣಿಗೆ ಕೊಟ್ಟಿದ್ದಾಳೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡಿದೆ.
ಈ ಕುರಿತು ಕಂಡುಬಂದ ಕ್ಲೇಮಿನಲ್ಲಿ “ಇಲ್ಲಿ ಹಳದಿ ಸೀರೆಯುಟ್ಟುಕೊಂಡು ಕುಳಿತಿರುವ ತಾಯಿಯ ಹೆಸರು ಯಶೋದಾ. ಆಕೆ ಗಂಡ ಆಕೆಯ 20ನೇ ವಯಸ್ಸಿನಲ್ಲಿ ಆಕೆಯನ್ನು ಬಿಟ್ಟು ಹೋಗುತ್ತಾನೆ. ಆಕೆ ವೃಂದಾವನದ ಬಂಕೆ ಬಿಹಾರಿಲಾಲ್ ದೇವಸ್ಥಾನದ ಮುಂದೆ ಭಕ್ತರ ಚಪ್ಪಲಿ ಕಾಯುವ ಕೆಲಸ ಮಾಡಿಕೊಂಡು ಬಂದಿದ್ದಾಳೆ .. ಈ ಕೆಲಸವನ್ನು ಆಕೆ ಕಳೆದ 30 ವರ್ಷದಿಂದ ಮಾಡಿದ್ದಾಳೆ. ಚಪ್ಪಲಿಯನ್ನು ರಕ್ಷಿಸಿದ್ದಕ್ಕೆ ಭಕ್ತರು ಆಕೆಗೆ ಅಲ್ಪಸ್ವಲ್ಪ ದುಡ್ಡು ಕೊಡ್ತಾ ಇದ್ದರು. ಈ ದುಡ್ಡನ್ನೆಲ್ಲಾ ಉಳಿಸಿ ಆಕೆಯ ಬಳಿಯಲ್ಲಿ 30 ವರ್ಷದಲ್ಲಿ 51 ಲಕ್ಷ ದುಡ್ಡು ಒಟ್ಟಾಗಿತ್ತು. ರಾಮಮಂದಿರ ಕಟ್ಟುತ್ತಾ ಇದ್ದಾರೆ ಅನ್ನುವ ಸುದ್ದಿ ತಿಳಿದ ಆಕೆ ತನ್ನ ಬಳಿಯಿದ್ದ 51 ಲಕ್ಷದ 10 ಸಾವಿರ ರೂಪಾಯಿಯನ್ನು ನೇರವಾಗಿ ರಾಮಲಲ್ಲಾನ ಮಂದಿರ ಕಟ್ಟೋಕೆ ಕೊಟ್ಟಿದ್ದಾಳೆ.. ಇದಕ್ಕಿಂತ ದೊಡ್ಡ ಭಕ್ತಿಯ ಪರಾಕಾಷ್ಠೆ ಇದೆಯೇ! ಇವರೇ ನಿಜವಾದ ಧರ್ಮರಕ್ಷಕರು! ಜೈ ಶ್ರೀರಾಮ್!” ಎಂದಿದೆ.
ಇದನ್ನು ಸತ್ಯಶೋಧನೆ ಮಾಡುವಂತೆ ಬಳಕೆದಾರರೊಬ್ಬರು ನಮಗೆ ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್ (+91-9999499044) ಮೂಲಕ ವಿನಂತಿಸಿಕೊಂಡಿದ್ದು, ಅದನ್ನು ತನಿಖೆಗಾಗಿ ಅಂಗೀಕರಿಸಿದ್ದೇವೆ.
Also Read: ಭಕ್ತನೊಬ್ಬ ಕೈಗಳಲ್ಲಿ ನಡೆದುಕೊಂಡು ಅಯೋಧ್ಯೆಗೆ ಹೋಗುತ್ತಿದ್ದಾನೆ ಎನ್ನುವುದು ನಿಜವೇ?
ತನಿಖೆಯ ಆರಂಭದಲ್ಲಿ, ನಾವು ಮೊದಲು ಚಿತ್ರದ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಚಿತ್ರದೊಂದಿಗೆ 2017 ರಲ್ಲಿ ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾದ ಕೆಲವು ಪೋಸ್ಟ್ ಗಳನ್ನೂ ನಾವು ಗಮನಿಸಿದ್ದೇವೆ.
ಮೇ 22, 2017 ರಂದು 9 ಲಕ್ಷ ಅನುಯಾಯಿಗಳನ್ನು ಹೊಂದಿರುವ ‘ಶ್ರೀ ಬಂಕೆ ಬಿಹಾರಿ ಜಿ ವೃಂದಾವನ’ ಎಂಬ ಫೇಸ್ಬುಕ್ ಪುಟವು ತನ್ನ ಪೋಸ್ಟ್ ನಲ್ಲಿ, ಚಿತ್ರದಲ್ಲಿ ಕಂಡುಬರುವ ಮಹಿಳೆ ಯಶೋದಾ ಎಂಬವರು 20 ನೇ ವಯಸ್ಸಿನಲ್ಲಿ ವಿಧವೆಯಾದರು. ಅವರು ಕಳೆದ 30 ವರ್ಷಗಳಲ್ಲಿ 51,02,550 ರೂ.ಗಳನ್ನು ಸಂಗ್ರಹಿಸಿದ್ದಾರೆ ಮತ್ತು 40 ಲಕ್ಷ ರೂ.ಗಳ ಮೊತ್ತದೊಂದಿಗೆ ದನದ ಕೊಟ್ಟಿಗೆ ಮತ್ತು ಧರ್ಮಶಾಲೆಯನ್ನು ನಿರ್ಮಿಸಲು ಶುರುಮಾಡಿದರು ಎಂದಿದೆ.
ಇದರೊಂದಿಗೆ ನಾವು ಗೂಗಲ್ ನಲ್ಲಿ ಸಂಬಂಧಿತ ಕೀವರ್ಡ್ ಸರ್ಚ್ ಮಾಡಿದ್ದೇವೆ. ಈ ವೇಳೆ 26 ಮೇ 2017 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. 70 ವರ್ಷದ ವಿಧವೆ ದಶಕಗಳ ಉಳಿತಾಯದಿಂದ ಸಂಗ್ರಹಿಸಿದ ಹಣ ಮತ್ತು ತಮ್ಮ ಆಸ್ತಿಗಳನ್ನು ಮಾರಾಟ ಮಾಡಿದ ಒಟ್ಟು ಹಣ 40 ಲಕ್ಷ ರೂ.ಗಳನ್ನು ವೃಂದಾವನದಲ್ಲಿ ಗೋಶಾಲೆ ಮತ್ತು ಧರ್ಮಶಾಲಾ ನಿರ್ಮಿಸಲು ನೀಡಿದ್ದಾರೆ ಎಂದಿದೆ.
ಎಬಿಪಿ ನ್ಯೂಸ್ ಜೂನ್ 23, 2017 ರಂದು ಮಾಡಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ ಈ ವರದಿಯಲ್ಲಿ ವೈರಲ್ ಹೇಳಿಕೆಯನ್ನು ವರದಿಗಾರರು ಪ್ರಸ್ತಾವಿಸಿ, ಮಹಿಳೆಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಅವರು ತಾನು ಕಟ್ನಿ, ಜಬಲ್ಪುರದವಳಾಗಿದ್ದು ಪತಿಯ ಮರಣದ ನಂತರ ವೃಂದಾವನಕ್ಕೆ ಬಂದಿದ್ದೇನೆ. ದನದ ಕೊಟ್ಟಿಗೆ ನಿರ್ಮಿಸಲು 15 ಲಕ್ಷ ರೂ.ಗಳನ್ನು ನೀಡಿದ್ದೇನೆ. ಕಟ್ನಿಯಲ್ಲಿರುವ ಮನೆಯನ್ನು ಮಾರಾಟ ಮಾಡಿ ಬಂದ ಹಣವನ್ನು ಇಲ್ಲಿಗೆ ನೀಡಿದ್ದಾಗಿ ಆಕೆ ಹೇಳಿದ್ದಾಳೆ.
ನಮ್ಮ ತನಿಖೆಯ ಪ್ರಕಾರ ವೈರಲ್ ಹಕ್ಕು ನಕಲಿ ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ. ವೈರಲ್ ಹೇಳಿಕೆಯಲ್ಲಿರುವ ಚಿತ್ರ 2017 ರದ್ದಾಗಿದ್ದು, 2017 ರಲ್ಲಿ ಮಧ್ಯಪ್ರದೇಶದ ಕಟ್ನಿಯಲ್ಲಿರುವ ತನ್ನ ಮನೆಯನ್ನು ಮಾರಾಟ ಮಾಡುವ ಮೂಲಕ ಬಂದ ಹಣದಿಂದ ವೃಂದಾವನದಲ್ಲಿ ದನದ ಕೊಟ್ಟಿಗೆ ನಿರ್ಮಿಸಲು ಯಶೋದಾ ಎಂಬ ಮಹಿಳೆ ದೇಣಿಗೆ ನೀಡಿದ್ದಾರೆ ಎಂದು ಕಂಡುಬಂದಿದೆ.
Our Sources
Report published by Times of India Dated: 26th May 2017
Report published by ABP News Dated: 23rd June 2017
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Kushel Madhusoodan
May 13, 2024
Komal Singh
May 13, 2024
Ishwarachandra B G
February 3, 2024