Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಬಿರ್ಲಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರೆ
Fact
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಬಿರ್ಲಾ ಹಿಂದೂ ಸಿಂಧಿ ವ್ಯಾಪಾರಿ ಸಮುದಾಯದ ಅನೀಶ್ ರಜನಿ ಎಂಬವರನ್ನು ವಿವಾಹವಾಗಿದ್ದು ಇವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲ
ನವೆಂಬರ್ 12, 2024 ರಂದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ತಮ್ಮ ದೀರ್ಘಕಾಲದ ಸ್ನೇಹಿತ ಅನೀಶ್ ರಜನಿ ಅವರನ್ನು ರಾಜಸ್ಥಾನದ ಕೋಟಾದಲ್ಲಿ ವಿವಾಹವಾದರು. ಮದುವೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ, ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು ಮತ್ತು ಪ್ರಮುಖ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಇದಾದ ಕೆಲವೇ ದಿನಗಳಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮದುವೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದರು ಮತ್ತು ಅಂಜಲಿ ಬಿರ್ಲಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂದು ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. “ಬಿಜೆಪಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ಮಗಳು ಅಂಜಲಿಯನ್ನು ಅನೀಸ್ಗೆ ವಿವಾಹ ಮಾಡಿಕೊಟ್ಟಿದ್ದಾರೆ. ಇಷ್ಟಕ್ಕೂ, ದೇಶದ ಎಲ್ಲಾ ಮುಸ್ಲಿಂ ವಿರೋಧಿ ನಾಯಕರು ತಮ್ಮ ಅಳಿಯಂದಿರಾಗಿ ಅನೀಸ್ ಮತ್ತು ಮುಖ್ತಾರ್ ಅವರನ್ನು ಆಯ್ಕೆ ಮಾಡಲು ಕಾರಣವೇನು?” ಎಂದು ಹೇಳಿಕೆಯಲ್ಲಿದೆ.

ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಅಂಜಲಿ ಬಿರ್ಲಾ ಅವರನ್ನು ವಿವಾಹವಾದ ವ್ಯಕ್ತಿಯ ಬಗ್ಗೆ ಹುಡುಕುತ್ತಿರುವಾಗ ನವೆಂಬರ್ 13, 2024 ರಂದು ಎನ್ ಡಿಟಿವಿ ವೆಬ್ಸೈಟ್ನಲ್ಲಿ ಪ್ರಕಟವಾದ ಸುದ್ದಿ ವರದಿಯನ್ನು ನಾವು ನೋಡಿದ್ದೇವೆ, “ಓಂ ಬಿರ್ಲಾ ಅಳಿಯ ಅನೀಶ್ ರಜನಿ: ಓಂ ಬಿರ್ಲಾ ಅವರ ಮಗಳು ಅಂಜಲಿ ಮದುವೆಯಾದ ಅನೀಶ್ ರಜನಿ ಯಾರು?, ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಹೇಳಿಕೆಗಳು ಎಷ್ಟು ನಿಜ?” ಎಂಬ ಆ ವರದಿಯ ಪ್ರಕಾರ, ಓಂ ಬಿರ್ಲಾ ಅವರ ಅಳಿಯ ಅನೀಶ್ ರಜನಿ ಸಿಂಧಿಯಾಗಿದ್ದು, ಕೋಟಾದಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. “ಓಂ ಬಿರ್ಲಾ ಅವರ ಅಳಿಯ ಅನೀಶ್ ಅವರ ತಂದೆ ನರೇಶ್ ರಜನಿ ಕೋಟಾದ ಪ್ರಮುಖ ಹಿಂದೂ ಕೈಗಾರಿಕೋದ್ಯಮಿ. ಅನೀಶ್ ಅವರ ತಂದೆ ನರೇಶ್ ರಜನಿ ದೇವಾಲಯ ನಿರ್ಮಾಣ ಮತ್ತು ಸನಾತನ ಧರ್ಮ ಉನ್ನತಿ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ” ಎಂದು ವರದಿ ಹೇಳಿದೆ.

ಅನೀಶ್ ರಜನಿ ಅವರ ಸಂಬಂಧಿಕರು ತೈಲ ಉದ್ಯಮದಲ್ಲಿ ಭಾಗಿಯಾಗಿದ್ದಾರೆ ಎಂದು ಫ್ರೀ ಪ್ರೆಸ್ ಜರ್ನಲ್ವರದಿ ಮಾಡಿದೆ. ಇದಲ್ಲದೆ, ಅವರು ರಜನಿ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಎಕೆಆರ್ ಗ್ರೀನ್ಕೊ ಪ್ರೈವೇಟ್ ಲಿಮಿಟೆಡ್, ಪ್ರೈಮೆರೊ ವೇಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಧನೀಶ್ ಟ್ರೇಡ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆರ್ಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗಯಾದ ಮಾಜಿ ಸಂಸದ ಮತ್ತು ಬಿಜೆಪಿ ಮುಖಂಡ ಹರಿ ಮಾಂಝಿ ಅವರು ಅನೀಶ್ ರಜನಿ ಅವರ ಧಾರ್ಮಿಕ ಹಿನ್ನೆಲೆಯ ಬಗ್ಗೆ ವೈರಲ್ ಆದ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ. ಅವರು ಕೋಟಾದ ವ್ಯಾಪಾರ ಕುಟುಂಬದಿಂದ ಬಂದ ಸಿಂಧಿ ಹಿಂದೂ ಎಂದು ಸ್ಪಷ್ಟಪಡಿಸಿದ್ದಾರೆ. ರಜನಿ ಕುಟುಂಬವು 12 ಕ್ಕೂ ಹೆಚ್ಚು ಶಿವ ದೇವಾಲಯಗಳನ್ನು ನಿರ್ಮಿಸುವುದು ಸೇರಿದಂತೆ ಧಾರ್ಮಿಕ ಕಾರಣಗಳಿಗೆ ಗಮನಾರ್ಹ ಕೊಡುಗೆ ನೀಡಿದೆ ಎಂದು ಮಾಂಝಿ ಒತ್ತಿ ಹೇಳಿದ್ದಾರೆ. ವದಂತಿಗಳನ್ನು ನಿರಾಕರಿಸಲು, ಅವರು ಅನೀಶ್ ರಜನಿ ಮತ್ತು ಅಂಜಲಿ ಬಿರ್ಲಾ ಅವರ ವಿವಾಹ ಆಮಂತ್ರಣ ಪತ್ರಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಅನೀಶ್ ಅವರು ಮತ್ತು ನರೇಶ್ ರಜನಿ ಮತ್ತು ಸಿಮ್ರಾನ್ ಅವರ ಅವರ ಪುತ್ರ ಎಂದು ಸ್ಪಷ್ಟವಾಗಿ ಬರೆಯಲಾಗಿದೆ.
ಪಿಟಿಐ ನ್ಯೂಸ್, ದಿ ವೀಕ್ ಮತ್ತು ಎಬಿಪಿ ಲೈವ್ ನಂತಹ ಅನೇಕ ಸುದ್ದಿ ಸಂಸ್ಥೆಗಳು ಅನೀಶ್ ಸಿಂಧಿ ವ್ಯಾಪಾರ ಕುಟುಂಬಕ್ಕೆ ಸೇರಿದವರು, ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲ ಎಂದು ವೈರಲ್ ಹೇಳಿಕೆಯನ್ನು ತಳ್ಳಿಹಾಕಿವೆ.
ಸತ್ಯಶೋಧನೆಯ ಪ್ರಕಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಳಿಯ ಅನೀಶ್ ರಜನಿ ಸಿಂಧಿ ವ್ಯಾಪಾರ ಕುಟುಂಬಕ್ಕೆ ಸೇರಿದವರು, ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲ ಎಂಬುದು ಸ್ಪಷ್ಟವಾಗಿದೆ.
Our Sources
Report by NDTV, Dated: November 13, 2024
Report by Free Press Journal, Dated: November 13, 2024
Report by PTI News, Dated: November 13, 2024
Report by PTI News, Dated: November 14, 2024
Report by The Week, Dated: November 14, 2024
Report by ABP Live, Dated: November 14, 2024
X post by Hari Manjhi, Dated: November 13, 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
October 4, 2025
Vasudha Beri
August 18, 2025
Ishwarachandra B G
August 12, 2025