Fact Check: ಹೊಗೇನಕಲ್‌ ಜಲಪಾತದ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯವೆಂದು ಹಳೆಯ ವೀಡಿಯೋ ವೈರಲ್

ಹೊಗೇನಕಲ್ ಜಲಪಾತ, ಪ್ರವಾಹ,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಹೊಗೇನಕಲ್‌ ಜಲಪಾತದ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯ

Fact
ಜಲಪಾತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುತ್ತಿರುವ ವೀಡಿಯೋ ಹೊಗೇನಕಲ್ ನದ್ದಲ್ಲ, ಇದು ಸೇಲಂ ಆನೈವಾರಿ ಜಲಪಾತದಲ್ಲಿ 2021ರಲ್ಲಿ ಸಂಭವಿಸಿದ ಘಟನೆಯಾಗಿದೆ

ಹೊಗೇನಕಲ್‌ ಜಲಪಾತದಲ್ಲಿ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯವೆಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗುತ್ತಿದೆ.

ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಮಳೆಗಾಲದಲ್ಲಿನದಿಗಳ ಪಕ್ಕ ಹೋಗಬೇಡಿ ಯಾವ ಸಮಯದಲ್ಲಾದರು ನದಿ ನೀರಿನ ಮಟ್ಟ ಶರವೇಗದಲ್ಲಿ ಹೆಚ್ಚಿ ನಿಮ್ಮ ಪ್ರಾಣವನ್ನು ಹಾರಿಸಿಬಿಡುತ್ತದೆ ಇದು ನೆನ್ನೆ ಹೋಗೆನಕಲ್ಲಿನಲ್ಲಿ ನಡೆದ ಘಟನೆ”  ಎಂದಿದೆ.

Also Read: ಡೆಹ್ರಾಡೂನ್ ನಲ್ಲಿ ಹಿಂದೂಗಳು ಅಂಗಡಿ ಬೋರ್ಡ್ ಗಳನ್ನು ಕೇಸರಿ ಮಾಡಿದ್ದಾರೆ ಎನ್ನುವ ಹೇಳಿಕೆ ಸತ್ಯವೇ?

Fact Check: ಹೊಗೇನಕಲ್‌ ಜಲಪಾತದ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯವೆಂದು ಹಳೆಯ ವೀಡಿಯೋ ವೈರಲ್

ನ್ಯೂಸ್‌ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಹೊಗೇನಕಲ್ ನಲ್ಲಿ ಅಂತಹ ಘಟನೆ ನಡೆದಿಲ್ಲ ಮತ್ತು ವೈರಲ್‌ ವೀಡಿಯೋ ತಮಿಳುನಾಡಿನ ಸೇಲಂ ಜಿಲ್ಲೆಯ ಅನೈವಾರಿ ಮುತ್ತಲ್ ಜಲಪಾತದಲ್ಲಿ 2021ರಲ್ಲಿ ನಡೆದ ಘಟನೆಯದ್ದು ಎಂದು ತಿಳಿದುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಅಕ್ಟೋಬರ್ 16, 2021ರಂದು ಎಕ್ಸ್ ಪ್ರೆಸ್ ಚೆನ್ನೈ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ, ನಾಟಕೀಯ ದೃಶ್ಯವೊಂದರಲ್ಲಿ, ಸೇಲಂ ಜಿಲ್ಲೆಯ ಅತ್ತೂರ್ ಬಳಿಯ ಅನೈವಾರಿ ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಮಹಿಳೆ ಮತ್ತು ಆಕೆಯ ಮಗುವನ್ನು ತಮಿಳುನಾಡು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ. ಕೋವಿಡ್ 19 ಬಳಿಕ ಎರಡು ತಿಂಗಳ ಹಿಂದೆ ಈ ಸ್ಥಳವನ್ನು ಸಾರ್ವಜನಿಕರಿಗಾಗಿ ಪುನಃ ತೆರೆಯಲಾಯಿತು ಎಂದಿದೆ.

ಇದರ ಆಧಾರದಲ್ಲಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಮಾಧ್ಯಮ ವರದಿಗಳು ಕಂಡುಬಂದಿವೆ.

Also Read: ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ ಎಂದ ವೈರಲ್ ಫೋಟೋ ಹಿನ್ನೆಲೆ ಏನು?

ಅಕ್ಟೋಬರ್ 27, 2021ರಂದು ಫಸ್ಟ್ ಪೋಸ್ಟ್ ಮಾಡಿದ ವರದಿಯಲ್ಲಿ, ತಮಿಳುನಾಡಿನ ಅರಣ್ಯಾಧಿಕಾರಿಗಳು ನಡೆಸಿದ ವೀರ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಂತರ್ಜಾಲ ಬಳಕೆದಾರರಿಂದ ಪ್ರಶಂಸೆಗೆ ಪಾತ್ರವಾಗಿದೆ. ಕಲ್ಲವರಾಯನ ಬೆಟ್ಟದ ಅನೈವಾರಿ ಮುಟ್ಟಲ್ ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಮಹಿಳೆ ಮತ್ತು ಆಕೆಯ ಮಗುವನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ ಎಂದಿದೆ.

ಅಕ್ಟೋಬರ್ 27, 2021ರ ಎನ್‌ಡಿಟಿವಿ ವರದಿಯಲ್ಲಿ, ತಮಿಳುನಾಡಿನಲ್ಲಿ ಭೋರ್ಗರೆಯುತ್ತಿರುವ ಜಲಪಾತದಿಂದ ತಾಯಿ ಮತ್ತು ಮಗುವನ್ನು ರಕ್ಷಿಸುವ ಧೈರ್ಯಶಾಲಿ ಕಾರ್ಯಾಚರಣೆಯನ್ನು ರಾಜ್ಯದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ವ್ಯಾಪಕವಾಗಿ ಶ್ಲಾಘಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದೃಶ್ಯಾವಳಿಗಳು ಮಹಿಳೆ ತನ್ನ ಮಗುವನ್ನು ಹಿಡಿದು ಬಂಡೆಯ ಮೇಲೆ ಅಪಾಯಕಾರಿಯಾಗಿ ನಿಂತಿರುವುದನ್ನು ತೋರಿಸುತ್ತದೆ. ಆನೈವಾರಿ ಮುಟ್ಟಲ್ ಜಲಪಾತದ ನೀರು ಬೀಳುತ್ತಿರುವುದರಿಂದ ಆಕೆಗೆ ಚಲಿಸಲು ಸಾಧ್ಯವಾಗುತ್ತಿಲ್ಲ. ದಿ ನ್ಯೂಸ್ ಮಿನಿಟ್ ಪ್ರಕಾರ, ಅನೈವಾರಿ ಮುಟ್ಟಲ್ ಜಲಪಾತವು ಸೇಲಂ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾಗಿದೆ. ಆದರೆ ಭಾರೀ ಮಳೆ ಈ ಪ್ರದೇಶದಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಗಬಹುದು, ಇದು ಮಹಿಳೆ ಮತ್ತು ಆಕೆಯ ಮಗು ಜಲಪಾತದಲ್ಲಿ ಸಿಲುಕಿದ ಪ್ರಕರಣಕ್ಕೂ ಕಾರಣವಾಗಿದೆ ಎಂದಿದೆ.

ಆ ಬಳಿಕ ನಾವು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಅಕ್ಟೋಬರ್ 26, 2021ರಂದು ಮಾಡಿದ ಎಕ್ಸ್ ಪೋಸ್ಟ್ ಕಂಡುಕೊಂಡಿದ್ದೇವೆ. ಇದರಲ್ಲಿ ಅವರು ತಾಯಿ ಮಗುವನ್ನು ರಕ್ಷಿಸಿದವರನ್ನು ಅಭಿನಂದಿಸಿದ್ದು, ವೈರಲ್ ವೀಡಿಯೋವನ್ನೂ ಜೊತೆಗೆ ಪೋಸ್ಟ್ ಮಾಡಿದ್ದಾರೆ.

Conclusion

ಈ ಸಾಕ್ಷ್ಯಗಳ ಪ್ರಕಾರ, ಜಲಪಾತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುತ್ತಿರುವ ವೈರಲ್‌ ವೀಡಿಯೋ ಹೊಗೇನಕಲ್ ನಲ್ಲಿ ನಡೆದ ಘಟನೆಯಲ್ಲ, ಇದು ಸೇಲಂ ಆನೈವಾರಿ ಜಲಪಾತದಲ್ಲಿ 2021ರಲ್ಲಿ ಸಂಭವಿಸಿದ ಘಟನೆಯಾಗಿದೆ ಎಂದು ತಿಳಿದುಬಂದಿದೆ.

Also Read: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್

Result: False

Our Sources
X Post By Express Chennai, Dated: October 16, 2021

X Post By MK Stalin, Dated: October 26, 2021

Report By NDTV, Dated: October 27, 2021

Report By First post, Dated: October 27, 2021


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.