ಪಾಕಿಸ್ತಾನದಲ್ಲಿ ಬಲೂಚ್ ಉಗ್ರರು ರೈಲು ಸ್ಫೋಟಿಸಿದ್ದಾರೆ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
59 ಸೆಕೆಂಡ್ ಗಳ ಈ ವೀಡಿಯೋವನ್ನು ಮಾರ್ಚ್ 11ರಂದು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ ಎ) ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಅಪಹರಿಸಿದ್ದು, ಈ ವೇಳೆ ಸ್ಫೋಟ ನಡೆಸಲಾಗಿದೆ ಎಂದು ಹೇಳಲಾಗಿದೆ.
ಪಬ್ಲಿಕ್ ಟಿವಿ ಫೇಸ್‌ಬುಕ್ ಪೋಸ್ಟ್ ನಲ್ಲಿ ಈ ವೀಡಿಯೋವನ್ನು ನಾವು ಕಂಡುಕೊಂಡಿದ್ದು, ಜಾಫರ್ ಎಕ್ಸ್ ಪ್ರೆಸ್ ರೈಲು ಅಪಹರಣ, ಪ್ರಯಾಣಿಕರ ಒತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಲೇಖನ ಬರೆಯುವ ಹೊತ್ತಿಗೆ ಪಾಕ್ ಭದ್ರತಾ ಪಡೆಗಳು ಎಲ್ಲ ಒತ್ತೆಯಾಳುಗಳನ್ನು ಬಿಡಿಸಿದ್ದು, 33 ಮಂದಿ ಉಗ್ರರನ್ನು ಹತ್ಯೆಗೈದಿರುವುದಾಗಿ ಹೇಳಿದೆ.
ಇದೇ ರೀತಿಯ ಪೋಸ್ಟ್ ಗಳನ್ನು ನಾವು ವಿವಿಧ ಸಾಮಾಜಿಕ ಬಳಕೆದಾರರು ಹಂಚಿಕೊಳ್ಳುತ್ತಿರುವುದನ್ನು ಇಲ್ಲಿ, ಇಲ್ಲಿ ಕಂಡುಕೊಂಡಿದ್ದೇವೆ.


Fact Check/Verification
ನ್ಯೂಸ್‌ಚೆಕರ್ ಒಂದು ಪೋಸ್ಟ್ ನ ಕಾಮೆಂಟ್ ವಿಭಾಗವನ್ನು ಪರಿಶೀಲಿಸಿದಾಗ ವೀಡಿಯೋ ಹಳೆಯದು ಎಂದು ಸೂಚಿಸುವ ಕಾಮೆಂಟ್ ಕಂಡುಬಂದಿದೆ . ಬಳಕೆದಾರರು ವೀಡಿಯೋದ ದೀರ್ಘ ಆವೃತ್ತಿಯನ್ನು (1:46) ಹಂಚಿಕೊಂಡಿದ್ದಾರೆ, ಅಲ್ಲಿ ಆರಂಭದಲ್ಲಿ ರೈಲಿನಲ್ಲಿ ಹಲವಾರು ಸೈನಿಕರನ್ನು ಕೊಂದ ಉದ್ದೇಶಿತ ದಾಳಿಯು ಜನವರಿ 18, 2022 ರಂದು ಬಲೂಚಿಸ್ತಾನದ ಈಶಾನ್ಯದ ಸಿಬಿಯ ಮಶ್ಕಾಫ್‌ನಲ್ಲಿ ಸಂಭವಿಸಿದೆ ಎಂದು ಹೇಳುತ್ತದೆ.
ಬಳಿಕ ಕೀವರ್ಡ್ ಸರ್ಚ್ ನಡೆಸಿದ್ದು, ಏಪ್ರಿಲ್ 15, 2022 ರಂದು X ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೋ ಲಭ್ಯವಾಗಿದೆ. ಬಲೂಚಿಸ್ತಾನದ ಸಿಬಿ ಬಳಿ FC (ಫ್ರಾಂಟಿಯರ್ ಕಾರ್ಪ್ಸ್) ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ರೈಲಿನ ಮೇಲೆ IED ದಾಳಿಯ ದೃಶ್ಯಾವಳಿಯನ್ನು BLA ಬಿಡುಗಡೆ ಮಾಡಿದೆ ಎಂದು ಅದು ಹೇಳುತ್ತದೆ.
ಪಾಕಿಸ್ತಾನದ ನೀತಿಗಳು ಬಲೂಚಿಸ್ತಾನದಲ್ಲಿ ಹಿಂಸಾತ್ಮಕ ಪ್ರತಿರೋಧವನ್ನು ಹೇಗೆ ಪ್ರಚೋದಿಸಿವೆ ಎಂಬುದರ ಕುರಿತು ಸೆಪ್ಟೆಂಬರ್ 12, 2022 ರಂದು ನ್ಯೂಸ್ 9 ಪ್ಲಸ್ ಎಕ್ಸ್ ಪೋಸ್ಟ್‌ನಲ್ಲಿ ( 00:05 ಅಂಕಗಳನ್ನು ನೋಡಿ) ವೀಡಿಯೋದ ಆರಂಭಿಕ ಭಾಗವನ್ನು ಸಹ ತೋರಿಸಲಾಗಿದೆ.
ಆ ಬಳಿಕ ನ್ಯೂಸ್ ಚೆಕರ್ BLA ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹುಡುಕಿದೆ , ಬಿಎಲ್‌ಎ ಫೇಸ್ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ ನಲ್ಲಿ ಇಲ್ಲದಿದ್ದರೂ ಕೆನಡಾದ ಸಾಮಾಜಿ ಮಾಧ್ಯಮ ರಂಬಲ್‌ನಲ್ಲಿ ಸಕ್ರಿಯವಾಗಿದೆ ಎಂದು ಕಂಡುಕೊಂಡಿದ್ದೇವೆ.
ನಾವು ಟೆಲಿಗ್ರಾಮ್‌ನಲ್ಲಿ ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, BLA ಗೆ ಸಂಬಂಧಿಸಿದ ಟೆಲಿಗ್ರಾಮ್ ಖಾತೆಯಲ್ಲಿ ಜನವರಿ 18, 2022 ರಂದು BLA ವಕ್ತಾರ ಜಿಯಾಂಡ್ ಬಲೋಚ್ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ನೋಡಿದ್ದೇವೆ.

ಈ ಪತ್ರಿಕಾ ಪ್ರಕಟಣೆಯ ಪ್ರಕಾರ, ಜನವರಿ 18, 2022 ರಂದು ಸಿಬಿ ಬಳಿಯ ಮಶ್ಕಾಫ್‌ನಲ್ಲಿ ಕ್ವೆಟ್ಟಾದಿಂದ ಪಂಜಾಬ್‌ಗೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ನಡೆದ ಐಇಡಿ ದಾಳಿಯ ಹೊಣೆಯನ್ನು ಬಿಎಲ್‌ಎ ಹೊತ್ತುಕೊಂಡಿದೆ. ಮತ್ತಷ್ಟು ಹುಡುಕಾಟ ನಡೆಸಿದಾಗ ಏಪ್ರಿಲ್ 14, 2022 ರಂದು ಬಿಎಲ್‌ಎಯ ಅಧಿಕೃತ ಮಾಧ್ಯಮ ಕೋಶ ಹಕ್ಕಲ್ ಅಪ್‌ಲೋಡ್ ಮಾಡಿದ ವೀಡಿಯೋ ಸಿಕ್ಕಿತು , ಇದು 2022 ರಲ್ಲಿ ಬಿಎಲ್‌ಎ ನಡೆಸಿದ ದಾಳಿಯ ದೃಶ್ಯಗಳನ್ನು ಒಳಗೊಂಡಿದೆ. 5:48ಕ್ಕೆ ವೈರಲ್ ಆದ ಆಯ್ದ ಭಾಗವನ್ನು ನಾವು ನೋಡಬಹುದು, ಅಲ್ಲಿ ದಾಳಿಯ ಸ್ಥಳ, ದಿನಾಂಕ ಮತ್ತು ಸಮಯವನ್ನು ಕ್ರಮವಾಗಿ ಮಶ್ಕಾಫ್, ಸಿಬಿ; 18 ಜನವರಿ 2022; ಮತ್ತು ಮಧ್ಯಾಹ್ನ 2:30ಕ್ಕೆ ಎಂದು ಬಿಎಲ್‌ಎ ಲೋಗೋ ಜೊತೆಗೆ ಪಟ್ಟಿ ಮಾಡಲಾಗಿದೆ, ಇದು ವೈರಲ್ ವೀಡಿಯೊ 2022 ರದ್ದಾಗಿದೆ ಎಂದು ಮತ್ತಷ್ಟು ದೃಢಪಡಿಸುತ್ತದೆ.
Conclusion
2022 ರ ಜನವರಿಯಲ್ಲಿ ರೈಲಿನ ಮೇಲೆ ನಡೆದ ಬಿಎಲ್‌ಎ ದಾಳಿಯ ವೀಡಿಯೊವನ್ನು 2025 ರಲ್ಲಿ ಪಾಕಿಸ್ತಾನದಲ್ಲಿ ನಡೆದ ರೈಲು ಅಪಹರಣಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ.
ಚಾಂಪಿಯನ್ಸ್ ಟ್ರೋಫಿ ವೇಳೆ ರಂಜಾನ್ ಉಪವಾಸ ಮುರಿದಿದ್ದಕ್ಕಾಗಿ ವೇಗಿ ಮೊಹಮ್ಮದ್ ಶಮಿ ಕ್ಷಮೆ ಕೇಳಿದ್ರಾ?
Our Sources
X post, Rohan Panchigar, Dated: April 15, 2022
News9Plus post, X, Dated: September 12, 2022
Press Release, BLA Telegram account
Videos uploaded by BLA media wing
(with inputs from Runjay Kumar, Newschecker Hindi)
(ಈ ಲೇಖನವನ್ನು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)