Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Election Watch
Claim:
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಚಹಾ ಕುಡಿಯುತ್ತಿದ್ದಾರೆ
Fact:
ಈ ಹೇಳಿಕೆ ತಪ್ಪುದಾರಿಗೆಳೆಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಈ ವೀಡಿಯೋ ವಾರಾಣಸಿಯದ್ದಾಗಿದ್ದು, ಒಂದು ವರ್ಷದಷ್ಟು ಹಳೆಯದು.
ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ಏರುತ್ತಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಪ್ರಧಾನಿ ಮೋದಿ ಚಹಾ ಅಂಗಡಿಯಲ್ಲಿ ಚಹಾ ಕುಡಿಯುತ್ತಿರುವ ದೃಶ್ಯ ಕಾಣಿಸುತ್ತದೆ. ಈ ವೀಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಇದು ಕರ್ನಾಟಕದಿಂದ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಚುನಾವಣೆ ಪ್ರಚಾರದ ಭರಾಟೆ ವ್ಯಾಪಕವಾಗಿದ್ದು, ಮೇ 10ರಂದು ಮತದಾನ, ಮೇ 13ರಂದು ಮತ ಎಣಿಕೆ ನಡೆಯಲಿದೆ. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ರಾಲಿಗಳು ನಡೆಯುತ್ತಿದ್ದು, ಕಳೆದ ಶನಿವಾರದಿಂದ ಚುನಾವಣಾ ಪ್ರಚಾರದ ಚುಕ್ಕಾಣಿ ಹಿಡಿದಿದ್ದಾರೆ.
ಹೇಳಿಕೆಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು, ನಾವು ಇನ್ವಿಡ್ ಉಪಕರಣದ ಸಹಾಯದಿಂದ ವೈರಲ್ ವೀಡಿಯೊದ ಕೆಲವು ಕೀಫ್ರೇಮ್ಗಳನ್ನು ಹೊರತೆಗೆದಿದ್ದೇವೆ. ಬಳಿಕ ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಲಾಗಿದೆ.
ಆ ಪ್ರಕಾರ ಮಾರ್ಚ್ 4, 2022 ರಲ್ಲಿ ನರೇಂದ್ರ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವೀಡಿಯೋ ನಮಗೆ ಲಭ್ಯವಾಗಿದೆ. ವೈರಲ್ ವೀಡಿಯೋದ ಒಂದು ತುಣುಕು ಇದರಲ್ಲಿದೆ. ಈ ವೀಡಿಯೋದಲ್ಲಿ ನೀಡಲಾದ ಮಾಹಿತಿ ಪ್ರಕಾರ, ಇದು ಪ್ರಧಾನಿ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಇರುವ ಚಹಾ ಅಂಗಡಿಯ ವೀಡಿಯೋವಾಗಿದೆ.
ಪ್ರಧಾನಿ ಮೋದಿಯವರ ಈ ವೀಡಿಯೊವನ್ನು ಅನೇಕ ಮಾಧ್ಯಮ ಸಂಸ್ಥೆಗಳು ತಮ್ಮ ವರದಿಯಲ್ಲಿ ಪ್ರಕಟಿಸಿವೆ, ಇದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ವರದಿಗಳ ಪ್ರಕಾರ, ಈ ವೀಡಿಯೋ 2022 ರಲ್ಲಿ ನಡೆಯಲಿರುವ ಯುಪಿ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದ್ದಾಗಿದೆ.
ಅಲ್ಲದೆ, ಮಾರ್ಚ್ 4, 2022ರಂದು ಆಜ್ ತಕ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರಧಾನಿ ಮೋದಿ ವಾರಣಾಸಿಯ ಪ್ರಸಿದ್ಧ ‘ಪಪ್ಪುಸ್ ಟೀ ಶಾಪ್’ ನಲ್ಲಿ ಚಹಾವನ್ನು ಕುಡಿದರು. ವಾರಣಾಸಿಯ ಅಸ್ಸಿ ಘಾಟ್ ಬಳಿ ಇರುವ ಈ ಅಂಗಡಿ ವಿಶ್ವನಾಥ ಸಿಂಗ್ ಅಲಿಯಾಸ್ ಪಪ್ಪು ಅವರಿಗೆ ಸೇರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಸಮಯದಲ್ಲಿ ಅವರ ಮಗ ಅಂಗಡಿಯಲ್ಲಿ ಹಾಜರಿದ್ದರು. 15 ನಿಮಿಷಗಳ ಕಾಲ ಅಲ್ಲಿ ನೆರೆದಿದ್ದ ಜನರೊಂದಿಗೆ ಚಹಾ ಸವಿಯುವಾಗ ಪ್ರಧಾನಿ ಮೋದಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು.
Also Read: ಕರ್ನಾಟಕ ಚುನಾವಣೆಗೆ ಮುನ್ನ ಭಯೋತ್ಪಾದಕರ ವಿರುದ್ಧದ ಕ್ರಮಕ್ಕೆ ಕಾಂಗ್ರೆಸ್ ವಿರೋಧ, ಸುಳ್ಳು ಹೇಳಿಕೆ ವೈರಲ್!
ಇದಲ್ಲದೆ, ಪಿಎಂ ಮೋದಿಯವರೊಂದಿಗೆ ಹಂಚಿಕೊಂಡ ಅನುಭವಗಳ ಬಗ್ಗೆ ಚಾಯ್ ವಾಲಾ ಹೇಳುತ್ತಿರುವುದನ್ನು ನಾವು ವೈರಲ್ ವೀಡಿಯೊದಲ್ಲಿ ನೋಡಿದ್ದೇವೆ. ಈ ಭಾಗವನ್ನು ಕಂಡುಹಿಡಿಯಲು, ನಾವು ಯೂಟ್ಯೂಬ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಅದರಂತೆಸ್ಟ್ರೀಟ್ ಫುಡ್ ಮೇನಿಯಾ ಎಂಬ ಯೂಟ್ಯೂಬ್ ಚಾನೆಲ್ ಏಪ್ರಿಲ್ 2022 ರಲ್ಲಿ ಅಪ್ಲೋಡ್ ಮಾಡಿದ ವೀಡಿಯೋ ಲಭ್ಯವಾಗಿದೆ. ಇದರಲ್ಲಿ, ವೈರಲ್ ವೀಡಿಯೋದ ಒಂದು ಭಾಗವನ್ನು ಕಾಣಬಹುದು, ಇದರಲ್ಲಿ ಚಾಯ್ ವಾಲಾ, ಪ್ರಧಾನಿ ಮೋದಿಯವರೊಂದಿಗೆ ಹಂಚಿಕೊಂಡ ಅನುಭವಗಳ ಬಗ್ಗೆ ಹೇಳುತ್ತಿದ್ದಾರೆ.
ವೀಡಿಯೋದೊಂದಿಗೆ ನೀಡಲಾದ ಮಾಹಿತಿಯ ಪ್ರಕಾರ, ಇದು ಇದೇ ಪಪ್ಪು ಚಹಾ ಮಾರಾಟಗಾರರ ಅಂಗಡಿಯಾಗಿದ್ದು, ಕಳೆದ ವರ್ಷ ಯುಪಿ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಪಿಎಂ ಮೋದಿ ಚಹಾವನ್ನು ಆನಂದಿಸಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಇದೇ ಅಂಗಡಿಯಲ್ಲಿ ಚಹಾ ಸವಿದಿದ್ದಾರೆ.
ಹೀಗಾಗಿ, ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಹಾ ಕುಡಿಯುತ್ತಿರುವ ವೀಡಿಯೋವನ್ನು ಇದು ಕರ್ನಾಟಕದಲ್ಲಿ ಎಂದು ಹೇಳಿ ತಪ್ಪುದಾರಿಗೆಳೆಯಲಾಗುತ್ತಿದೆ ಎನ್ನುವುದು ನ್ಯೂಸ್ಚೆಕರ್ ಸತ್ಯಶೋಧನೆಯಲ್ಲಿ ಸ್ಪಷ್ಟವಾಗಿದೆ.
Our Sources
Video Uploaded by Narendra Modi‘s Youtube Channel in March 4, 2022
Report Published by ‘AAJ Tak‘ Dated: March 4, 2022
Video Uploaded by Street Food Mania’s Youtube Channel in April 30, 2022
ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದನ್ನು ಇಲ್ಲಿ ಓದಬಹುದು
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
June 21, 2025
Vasudha Beri
June 20, 2025
Kushel Madhusoodan
May 31, 2025