Friday, December 5, 2025

Fact Check

ರಾಹುಲ್‌ ಗಾಂಧಿ ಶೂ ಲೇಸ್‌ ಕಟ್ಟಿದ ಮಾಜಿ ಸಚಿವ?: ಸುಳ್ಳು ಕ್ಲೇಮ್‌ನೊಂದಿಗೆ ವೀಡಿಯೋ ವೈರಲ್‌

banner_image

ಹರಿಯಾಣದಲ್ಲಿ ಸಂಚರಿಸುತ್ತಿರುವ ಕಾಂಗ್ರೆಸ್ ನ ಭಾರತ್‌ ಜೋಡೋ ಯಾತ್ರೆಯಲ್ಲಿ ಮಾಜಿ ಸಚಿವರೊಬ್ಬರು ರಾಹುಲ್‌ ಗಾಂಧಿಯವರ ಶೂ ಲೇಸ್‌ ಕಟ್ಟುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಕುರಿತ ಟ್ವೀಟ್‌ನಲ್ಲಿ ಕ್ಲೇಮ್‌ನಲ್ಲಿ “ಮಾಜಿ ಕೇಂದ್ರ ಸಚಿವ ಭನ್ವರ್‌ ಜಿತೇಂದ್ರ ಸಿಂಗ್ ಅವರು ತಮಗಿಂತ ಕಿರಿಯರಾದ ರಾಹುಲ್‌ ಗಾಂಧಿ ಅವರ ಶೂ ಲೇಸ್‌ ಕಟ್ಟುವ ಮೂಲಕ ತಮ್ಮ ನಿಷ್ಠೆ ಇಟಲಿ ಕುಟುಂಬದ ಮೇಲಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ” ಎಂದಿದೆ.

ರಾಹುಲ್‌ ಗಾಂಧಿ, ಶೂ ಲೇಸ್‌, ಮಾಜಿ ಸಚಿವ, ಭನ್ವರ್‌ ಜಿತೇಂದ್ರ ಸಿಂಗ್‌, ವೈರಲ್‌ ವೀಡಿಯೋ
ಶಕುಂತಲ ಅವರ ಟ್ವೀಟ್‌

ಇದೇ ರೀತಿಯ ಹೇಳಿಕೆಯುಳ್ಳ ಟ್ವೀಟ್‌ ಅನ್ನು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಅಮಿತ್‌ ಮಾಳವೀಯ ಕೂಡ ಹಂಚಿಕೊಂಡಿದ್ದಾರೆ.

ಅಮಿತ್‌ ಮಾಳವೀಯ ಅವರ ಟ್ವೀಟ್‌

ಇದರೊಂದಿಗೆ ವಿವಿಧ ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಲ್ಲೂ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಂತೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿಯವರ ಶೂ ಲೇಸ್‌ ಅನ್ನು ಮಾಜಿ ಕೇಂದ್ರ ಸಚಿವ ಭನ್ವರ್‌ ಜಿತೇಂದ್ರ ಸಿಂಗ್‌ ಅವರು ಕಟ್ಟಿದ್ದಾರೆ ಎಂಬ ಬಗ್ಗೆ ಸತ್ಯಶೋಧನೆ ನಡೆಸಲಾಗಿದ್ದು ಇದು ಸತ್ಯವೇ ಎಂಬುದನ್ನು ಪರಿಶೀಲಿಸೋಣ.  

Fact Check/ Verification

ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ನ್ಯೂಸ್‌ಚೆಕರ್‌ ಪರಿಶೀಲನೆ ನಡೆಸಿದಾಗ, ಕಾಂಗ್ರೆಸ್‌ ನಾಯಕರಾದ ಸುಪ್ರಿಯಾ ಶ್ರೀನಾತೆ ಅವರು ಈ ವೈರಲ್‌ ವೀಡಿಯೋದ ಹಿನ್ನೆಲೆಯನ್ನು ಟ್ವೀಟ್‌ ಮೂಲಕ ಶೇರ್‌ ಮಾಡಿದ್ದಾರೆ. ಆ ಪ್ರಕಾರ ಬಿಜೆಪಿ ನಾಯಕರು ಹಂಚಿಕೊಂಡ ವೀಡಿಯೋ, ಮುಖ್ಯ ವಿಚಾರವನ್ನು ಹೊರತಾಗಿ ಇದೆ. ವೈರಲ್‌ ವೀಡಿಯೋದ ಇನ್ನೊಂದು ಆಯಾಮದ ವೀಡಿಯೋವನ್ನು ಸುಪ್ರಿಯಾ ಅವರು ಹಂಚಿಕೊಂಡಿದ್ದು, ಈ ಬಗ್ಗೆ ಅವರು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. “ಸುಳ್ಳುಗಾರ ಮತ್ತೊಮ್ಮೆ ಸಿಕ್ಕಿ ಬಿದ್ದಿದ್ದಾರೆ. ವಾಸ್ತವದಲ್ಲಿ ಬಿಜೆಪಿ ಅಧ್ಯಕ್ಷ ನಡ್ಡಾ ಮತ್ತು ಪ್ರಧಾನಿ ಮೋದಿ ಅವರು ಸುಳ್ಳು ಹೇಳಲು ಈ ಪಾನ್‌ ಬಳಸುತ್ತಿದ್ದಾರೆ. ಹಾಗಾಗಿ ಈಗ ಮೂವರೂ ಕೂಡ ಕ್ಷಮೆ ಕೇಳಬೇಕು. ನಿಮ್ಮ ಟ್ವೀಟ್‌ ಅನ್ನು ಅಳಿಸಿ ಹಾಕಿ ಅಮಿತ್‌ ಮಾಳವೀಯ – ನಕಲಿ ಸುದ್ದಿಗಳ ಮಾಸ್ಟರ್‌ ಮೈಂಡ್‌ ಭಾರತ್‌ ಜೋಡೋ ಯಾತ್ರೆಯ ಯಶಸ್ಸಿನಿಂದ ನೀವು ಹುಚ್ಚರಾಗಿದ್ದೀರಾ?” ಎಂದವರು ಹೇಳಿದ್ದಾರೆ.

ಸುಪ್ರಿಯಾ ಅವರು ಶೇರ್ ಮಾಡಿದ ವೀಡಿಯೋದಲ್ಲಿ ಜಿತೇಂದ್ರ ಸಿಂಗ್‌ ಅಲ್ವಾರ್‌ ಅವರು ರಾಹುಲ್‌ ಗಾಂಧಿ ಅವರ ಎದುರಾಗಿ ಬಗ್ಗಿ ತಮ್ಮ ಶೂ ಲೇಸ್‌ ಅನ್ನು ಹಿಡಿದುಕೊಂಡಿರುವುದು ಕಾಣಿಸುತ್ತದೆ. ಈ ವೇಳೆ ರಾಹುಲ್‌ ನಡೆದುಕೊಂಡು ಬರುತ್ತಿದ್ದು ಅವರಿನ್ನೂ ಕೆಲವು ಅಡಿಗಳ ಅಂತರದಲ್ಲಿರುವುದು ಕಾಣಿಸುತ್ತದೆ.

ಸುಪ್ರಿಯಾ ಅವರು ಶೇರ್‌ ಮಾಡಿದ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್‌

ಇನ್ನೊಂದು ಟ್ವೀಟ್‌ನಲ್ಲಿ ನೆಟ್‌ವರ್ಕ್‌ 18 ಇದರ ಪತ್ರಕರ್ತರಾದ ಅಮನ್‌ ಚೋಪ್ರಾ ಅವರು ಇದೇ ಘಟನೆಯನ್ನು ಇನ್ನೊಂದು ಆಯಾಮವನ್ನು ತೋರಿಸಿದ್ದು, ಅದರಲ್ಲೂ ಜಿತೇಂದ್ರ ಅವರು ಮೊದಲೇ ಬಗ್ಗಿರುವುದು ಮತ್ತು ರಾಹುಲ್‌ ಗಾಂಧಿಯವರು ಜಿತೇಂದ್ರ ಅವರಿಗೆ ಮುಂದೆ ಏನೋ ಸೂಚನೆ ಕೊಟ್ಟಿರುವುದು ಕಾಣುತ್ತದೆ. ಇದೇ ವೇಳೆ ರಾಹುಲ್‌ ಗಾಂಧಿಯವರ ಪಕ್ಕದಲ್ಲಿರುವ ಮಹಿಳೆಯರೊಬ್ಬರು ಸಿಂಗ್‌ ಅವರ ಪಾದಗಳತ್ತ ನೋಡುತ್ತಿರುವುದು ಮತ್ತು ಕೂಡಲೇ ಜಿತೇಂದ್ರ ಸಿಂಗ್‌ ಅವರು ರಾಹುಲ್‌ ಅವರಿಗೆ ಎದುರಾಗಿ ಬಾಗಿರುವುದನ್ನು ಈ ವೀಡಿಯೋದಲ್ಲಿ ನೋಡಬಹುದು.

ಕಾಂಗ್ರೆಸ್ಸಿನ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರಶಾಂತ್‌ ಪ್ರತಾಪ್ ಅವರೂ ವೀಡಿಯೋವೊಂದನ್ನು ಶೇರ್‌ ಮಾಡಿದ್ದು, ಇದು ಅಮನ್‌ ಚೋಪ್ರಾ ಅವರು ಟ್ವೀಟ್‌ ಮಾಡಿದ ವೀಡಿಯೋವನ್ನೇ ಝೂಮ್‌ ಮಾಡಿದಂತೆ ಇದೆ. ಇದು ಕೂಡ ಈ ಮೇಲೆ ಹೇಳಿದ ಘಟನೆಯನ್ನು ತೋರಿಸುತ್ತದೆ.

ಸುಪ್ರಿಯಾ ಶ್ರೀನಾತೆ ಅವರದ್ದೂ ಸೇರಿದಂತೆ ಈ ಎಲ್ಲ ವೀಡಿಯೋಗಳನ್ನು ಒಟ್ಟು ಸೇರಿಸಿದಾಗ, ಜಿತೇಂದ್ರ ಸಿಂಗ್‌ ಅವರು ರಾಹುಲ್‌ ಗಾಂಧಿ ಅವರಿಗೆ ಎದುರಾಗಿ ಶೂ ಲೇಸ್‌ ಕಟ್ಟಲು ಬಾಗಿದರು ಎಂಬುದನ್ನು ಹೇಳಬಹುದು.

ಈ ಘಟನೆಯ ಬಗ್ಗೆ ಜಿತೇಂದ್ರ ಸಿಂಗ್‌ ಅಲ್ವಾರ್‌ ಅವರೂ ಸ್ಪಷ್ಟನೆ ನೀಡಿದ್ದು, ಇದನ್ನು ಐಎನ್‌ಸಿ ಇಂಡಿಯಾ ಟ್ವೀಟ್‌ ಮೂಲಕ ಶೇರ್‌ ಮಾಡಿದೆ.

Also Read: ರೈಲ್ವೇ ಫ್ಲ್ಯಾಟ್‌ ಫಾರಂನಲ್ಲಿ ಮೊಬೈಲ್‌ ಬಳಕೆ ಮಾಡಿದ್ದರಿಂದ ಕರೆಂಟ್‌ ಶಾಕ್‌ ಹೊಡೆದು ಸಾವು; ವೈರಲ್ ವೀಡಿಯೋ ಸತ್ಯವೇ?

Conclusion

ಜಿತೇಂದ್ರ ಸಿಂಗ್‌ ಅಲ್ವಾರ್‌ ಅವರು ತಮ್ಮದೇ ಶೂ ಲೇಸ್‌ ಕಟ್ಟಲು ಬಾಗಿರುವುದು ವೀಡಿಯೋಗಳಲ್ಲಿ ಕಂಡುಬಂದಿದ್ದು, ಅವರು ರಾಹುಲ್‌ ಗಾಂಧಿ ಶೂ ಲೇಸ್ ಕಟ್ಟಲು ಬಗ್ಗಿದ್ದಾರೆ ಎನ್ನುವುದು ತಪ್ಪಾಗುತ್ತದೆ.

Result: False

Our sources
Self-analyses
Video shared by Supriya Shrinate, Dated December 21, 2022
Video shared by Aman Chopra, Dated December 21, 2022

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
ifcn
fcp
fcn
fl
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

20,439

Fact checks done

FOLLOW US
imageimageimageimageimageimageimage