Authors
Claim
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್ ವರ್ಷ ಹಳೆಯ ಡ್ರೋನ್ ಸಿಕ್ಕಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹರಿದಾಡಿದೆ.
ಎಕ್ಸ್ ನಲ್ಲಿ ಕಂಡುಬಂದ ಕ್ಲೇಮಿನ ಪ್ರಕಾರ, “ಉತ್ತರ ಪ್ರದೇಶದ ಪ್ರಯಾಗರಾಜ್ ಅಲ್ಲಿ ಉತ್ಖತನ ಮಾಡುವಾಗ ಸಿಕ್ಕಿದ 21 ಬಿಲಿಯನ್ ವರ್ಷ ಹಳೆಯ ಸನಾತನ ಡ್ರೋನ್. ಜಗತ್ತಿನ ಅತ್ಯಂತ ಹಳೆಯ ಮತ್ತು ಮೂಲ ನಾಗರೀಕತೆ ನನ್ನ ಸನಾತನ ಆರ್ಯ ನಾಗರೀಕತೆ. ಜೈ ಸನಾತನ” ಎಂದಿದೆ.
Also Read: ಹಿಂದೂ ಹುಡುಗಿಗೆ ಬ್ರೈನ್ ವಾಶ್ ಮಾಡಿ ಬುರ್ಖಾ ತೊಡುವಂತೆ ಮುಸ್ಲಿಂ ಹುಡುಗಿಯಿಂದ ಬಲವಂತ, ಸತ್ಯ ಏನು?
ಈ ಚಿತ್ರದ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ. ಮತ್ತು ಇದೊಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಮಾಡಿದ ಚಿತ್ರ ಎಂದು ಕಂಡುಕೊಂಡಿದ್ದೇವೆ.
Fact
ಸತ್ಯಶೋಧನೆಗಾಗಿ ನಾವು ವೈರಲ್ ಚಿತ್ರದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಚೀನದ ಇಕ್ಸಿಗುವಾ ವೀಡಿಯೋ ಚಾನೆಲ್‌ನಲ್ಲಿ ಮಾರ್ಚ್ 7, 2024ರಂದು ಅಪ್ ಲೋಡ್ ಆದ ವೀಡಿಯೋ ಒಂದರಲ್ಲಿ ನೀಡಿದ ಶೀರ್ಷಿಕೆ ಪ್ರಕಾರ, “ಈ ಕಂಚಿನ ವಿಮಾನ ಎ ಸೃಷ್ಟಿಯಾಗಿದ್ದು, ಸಂಪೂರ್ಣ ಕಾಲ್ಪನಿಕವಾಗಿದೆ. ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಬೇಡಿ” ಎಂದಿದೆ (ಚೀನ ಭಾಷೆಯಿಂದ ಭಾಷಾಂತರಿಸಲಾಗಿದೆ)
ಆ ಬಳಿಕ ನಾವು ಎಕ್ಸ್ ನಲ್ಲಿ Convomf ಎಂಬ ಖಾತೆಯನ್ನು ಪರಿಶೀಲಿಸಿದ್ದೇವೆ. ಮಾರ್ಚ್ 7, 2024ರಂದು ಇದರಲ್ಲೂ ಡ್ರೋನ್ ಚಿತ್ರವನ್ನು ಅಪ್‌ಲೋಡ್ ಮಾಡಲಾಗಿದ್ದು, ಇದನ್ನು ಎಐ ಮೂಲಕ ಮಾಡಲಾಗಿದೆ ಎಂದಿದೆ.
ಹೆಚ್ಚಿನ ಖಚಿತ ಪಡಿಸುವಿಕೆಗೆ ನಾವು ವೈರಲ್ ಚಿತ್ರವು ನಿಜಕ್ಕೂ ಎಐ ಚಿತ್ರವೇ ಎಂದು ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಇದು ಎಐ ನಿರ್ಮಿತ ಚಿತ್ರವೆಂದು ಖಚಿತವಾಗಿದೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್ ವರ್ಷ ಹಳೆಯ ಡ್ರೋನ್ ಸಿಕ್ಕಿದೆ ಎಂದು ಹೇಳಿರುವ ವೈರಲ್ ಚಿತ್ರವು ಎಐ ಮೂಲಕ ಮಾಡಿದ್ದಾಗಿದೆ.
Also Read: ಸೋನಿಯಾ ಗಾಂಧಿಯವರಿಗೆ ಒಂದು ಮನೆಯೂ ಇಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಸತ್ಯವೇ?
Result: False
Our Sources
Video By ixigua, Dated: March 7, 2024
X post By Convomf, Dated: March 7, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.