Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹೆದ್ದಾರಿ ಮಧ್ಯೆ ವನ್ಯಪ್ರಾಣಿಗಳಿಗೆ ಸೇತುವೆಯನ್ನು ಮೊದಲ ಬಾರಿಗೆ ಭಾರತದಲ್ಲಿ ನಿರ್ಮಿಸಲಾಗುತ್ತಿದೆ ಎಂಬಂತೆ ಫೊಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ವಾಟ್ಸಪ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಭಾರತದ ಮೊದಲ ಪ್ರಾಣಿ ಸೇತುವೆಯನ್ನು ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇಯಲ್ಲಿ ನಿರ್ಮಿಸಲಾಗಿದೆ, ಪ್ರಾಣಿಗಳು ಡಿಕ್ಕಿ ಹೊಡೆಯದಂತೆ ರಕ್ಷಿಸಲು ಇದನ್ನು ನಿರ್ಮಿಸಲಾಗಿದೆ.” ಎಂದಿದೆ.
Also Read: ಅಹಮದಾಬಾದ್ ವಿಮಾನ ಅಪಘಾತಕ್ಕೆ ಏರ್ ಇಂಡಿಯಾ ಅಧಿಕಾರಿ ಹೊಣೆ? ವೈರಲ್ ಹೇಳಿಕೆಯ ಹಿಂದಿನ ಸತ್ಯ ಇಲ್ಲಿದೆ

ಈ ಬಗ್ಗೆ ನ್ಯೂಸ್ಚೆಕರ್ ತನಿಖೆ ನಡೆಸಿದ್ದು, ಈ ಫೋಟೋ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇಯದ್ದಲ್ಲ ಬದಲಾಗಿ ಸಿಂಗಾಪುರದ್ದು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಚೀನದ static.nfapp.southcn ಹೆಸರಿನ ವೆಬ್ ಸೈಟ್ ಒಂದರಲ್ಲಿ ಮಾರ್ಚ್ 9, 2017 ವನ್ಯಪ್ರಾಣಿಗಳ ಕ್ರಾಸಿಂಗ್ ಪ್ರದೇಶದ ಕುರಿತ ಲೇಖನದಲ್ಲಿ “ವನ್ಯಜೀವಿ ದಾಟುವಿಕೆಯು ಸಿಂಗಾಪುರದ ಆರು ಪಥಗಳ ರಸ್ತೆಯ ಮೇಲೆ ಇದೆ ಮತ್ತು ಮರಗಳು ಮತ್ತು ಪೊದೆಗಳಿಂದ ಕೂಡಿದೆ.” (ಚೀನಿ ಭಾಷೆಯಿಂದ ಅನುವಾದಿಸಲಾಗಿದೆ) ಎಂಬ ವಿವರಣೆಯೊಂದಿಗೆ ವೈರಲ್ ಫೋಟೋವನ್ನು ಹೋಲುವ ವನ್ಯಪ್ರಾಣಿಗಳ ಸೇತುವೆಯನ್ನು ನೀಡಲಾಗಿದೆ.

ಇನ್ನಷ್ಟು ಶೋಧ ನಡೆಸಿದಾಗ, ಸಿಂಗಾಪುರ ನ್ಯಾಷನಲ್ ಪಾರ್ಕ್ ವೆಬ್ ಸೈಟ್ ಆದ nparks.gov.sg ಪ್ರಕಟಿಸಿದ ಫೋಟೋ ಪ್ರಬಂಧದಲ್ಲಿ 9ನೇ ಫೋಟೋದ ವಿವರಣೆಯಲ್ಲಿ, “Eco-Link@BKE ಬುಕಿಟ್ ತಿಮಾ ನೇಚರ್ ರಿಸರ್ವ್ ಮತ್ತು ಸೆಂಟ್ರಲ್ ಕ್ಯಾಚ್ಮೆಂಟ್ ನೇಚರ್ ರಿಸರ್ವ್ ನಡುವೆ ಪ್ರಾಣಿಗಳು ಪ್ರಯಾಣಿಸಲು ಸುರಕ್ಷಿತ ಮಾರ್ಗವನ್ನು ಒದಗಿಸುತ್ತದೆ.” ಎಂದಿದೆ.
ಇದೇ ವೆಬ್ಸೈಟ್ ನಲ್ಲಿ Eco-Link@BKE ಕುರಿತ ವಿವರಣೆಯನ್ನು ನಾವು ನೋಡಿದ್ದು “ಬುಕಿಟ್ ತಿಮಾ ಎಕ್ಸ್ಪ್ರೆಸ್ವೇ (BKE) ಮೇಲಿರುವ ಪರಿಸರ ಸೇತುವೆಯಾಗಿದೆ. ಇದು ಪ್ರಾಣಿಗಳು ಬುಕಿಟ್ ತಿಮಾ ನೇಚರ್ ರಿಸರ್ವ್ ಮತ್ತು ಸೆಂಟ್ರಲ್ ಕ್ಯಾಚ್ಮೆಂಟ್ ನೇಚರ್ ರಿಸರ್ವ್ ನಡುವೆ ಸುರಕ್ಷಿತವಾಗಿ ದಾಟಲು ಅನುವು ಮಾಡಿಕೊಡುತ್ತದೆ, ಇದು ವನ್ಯಜೀವಿಗಳು ತಮ್ಮ ಆವಾಸ ಸ್ಥಾನ ವಿಸ್ತರಿಸಲು ಮತ್ತು ಅವುಗಳ ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. 1986 ರಲ್ಲಿ BKE ಅನ್ನು ನಿರ್ಮಿಸುವ ಮೊದಲು 2 ಪ್ರಕೃತಿ ಮೀಸಲುಗಳನ್ನು ಸಂಪರ್ಕಿಸಲಾಗುತ್ತಿತ್ತು.” ಎಂದಿದೆ.

2016 ಏಪ್ರಿಲ್ 16ರಂದು LOVE ROCKS WHERE LOVE NEVER ENDS ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ Eco-Link@BKE ಸೇತುವೆ ಬಗ್ಗೆ ವಿವರಣೆಯಿದ್ದು ಅದನ್ನು ಇಲ್ಲಿ ನೋಡಬಹುದು.
ಈ ತನಿಖೆಯ ಪ್ರಕಾರ, ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇಯಲ್ಲಿ ವನ್ಯಪ್ರಾಣಿಗಳ ಸೇತುವೆ ಎಂದ ಈ ವೈರಲ್ ಫೋಟೋ ಸಿಂಗಾಪುರದ್ದು ಎಂದು ಕಂಡುಬಂದಿದೆ.
Also Read: ಅಗ್ನಿಶಾಮಕ ದಳದ ಠಾಣೆ ಕುಸಿದು ಬಿದ್ದಿರುವ ವೀಡಿಯೋ ಹಿಂದಿನ ಸತ್ಯವೇನು?
Our Sources
Article By static.nfapp.southcn, March 9, 2017
Photo Essay By nparks.gov.sg
Article By nparks.gov.sg on Eco-Link@BKE
YouTube Video By LOVE ROCKS WHERE LOVE NEVER ENDS, Dated April 16, 2016