Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹಿಂದೂ ಶಿಕ್ಷಕನ ನಿವೃತ್ತಿ ದಿನ ಮುಸ್ಲಿಮರು ಚಪ್ಪಲಿ ಹಾರ ಹಾಕಿ ಅವಮಾನಿಸಿದರು, ಲಕ್ನೋದ ಸಲಾಹುದ್ದೀನ್ ಮನೆಯಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳ ಫೋಟೋ, ಅಗ್ನಿಶಾಮಕ ದಳದ ಠಾಣೆ ಕುಸಿದು ಬಿದ್ದಿರುವ ವೀಡಿಯೋ, ಅಹಮದಾಬಾದ್ ವಿಮಾನ ಅಪಘಾತಕ್ಕೆ ಏರ್ ಇಂಡಿಯಾ ಅಧಿಕಾರಿ ಹೊಣೆ, ಹೆದ್ದಾರಿ ಮಧ್ಯೆ ವನ್ಯಪ್ರಾಣಿಗಳಿಗೆ ಸೇತುವೆ ಎಂದ ಈ ವೈರಲ್ ಫೋಟೋ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ, ಬಾದಾಮಿ ತಿನ್ನುವುದು ಆಸ್ಪಿರಿನ್ ತಿನ್ನುವುದಕ್ಕೆ ಸಮ ಎನ್ನುವ ಹೇಳಿಕೆಗಳು ಈ ವಾರ ಪ್ರಮುಖವಾಗಿದ್ದವು. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ನಿಜವಲ್ಲ ಎಂದು ಸಾಕ್ಷ್ಯಗಳ ಸಮೇತ ಋಜುವಾತು ಪಡಿಸಿದೆ.

ಹಿಂದೂ ಶಿಕ್ಷಕನ ನಿವೃತ್ತಿ ದಿನ ಮುಸ್ಲಿಮರು ನೀಡಿದ ಗೌರವ ಎಂಬ ಹೇಳಿಕೆಯೊಂದಿಗೆ, ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ವ್ಯಕ್ತಿಯೊಬ್ಬರಿಗೆ ಚಪ್ಪಲಿ ಹಾರ ಹಾಕಿದ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇದರಲ್ಲಿ ಸತ್ಯಾಂಶವಿಲ್ಲ, ಪ್ರವಾದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿಯೊಬ್ಬನನ್ನು ಥಳಿಸಿದ ಪ್ರಕರಣ ಇದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಉತ್ತರ ಪ್ರದೇಶದ ಲಕ್ನೋದಲ್ಲಿರುವ ಹಕೀಮ್ ಸಲಾಹುದ್ದೀನ್ ಅವರ ಮನೆಯಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳ ಫೋಟೋ ಎಂದು ಚಿತ್ರವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿದಾಗ, ಇದು ಅಮೆರಿಕದ ಅಯೋವಾದ ಕ್ರಿಮಿನಲ್ಸ್ ಲ್ಯಾಬ್ ಫೋಟೋ ಅಗಿದ್ದು ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ

ಅಗ್ನಿಶಾಮಕ ದಳದ ಠಾಣೆ ಕುಸಿದು ಬಿದ್ದಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನಲ್ಲಿ #Udupi ಎಂದು ಟ್ಯಾಗ್ ಮಾಡಲಾಗಿದೆ. ಈ ಕುರಿತು ನಾವು ಸತ್ಯಶೋಧನೆ ನಡೆಸಿದಾಗ, ಭೂಕಂಪದಿಂದಾಗಿ ಮ್ಯಾನ್ಮಾರ್ ನಲ್ಲಿ ಅಗ್ನಿಶಾಮಕ ದಳದ ಠಾಣೆ ಕುಸಿದು ಬಿದ್ದ ವಿದ್ಯಮಾನವಾಗಿದೆ ಎಂದು ಬಹಿರಂಗವಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಅಹಮದಾಬಾದ್ ವಿಮಾನ ಅಪಘಾತಕ್ಕೆ ಏರ್ ಇಂಡಿಯಾ ಅಧಿಕಾರಿ ಹೊಣೆ ಎಂದು ವಿಮಾನಯಾನ ಮಹಾನಿರ್ದೇಶನಾಲಯ ಹೇಳಿದೆ ಎಂಬಂತೆ ಪೋಸ್ಟ್ ಒಂದು ವೈರಲ್ ಆಗಿದೆ. ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದಾಗ, ಅಹಮದಾಬಾದ್ನಲ್ಲಿ ನಡೆದ ದುರಂತ ವಿಮಾನ ಅಪಘಾತಕ್ಕೆ ಏರ್ ಇಂಡಿಯಾ ಅಧಿಕಾರಿ ಪಾಯಲ್ ಅರೋರಾ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಹೇಳುವ ವೈರಲ್ ಪೋಸ್ಟ್ ಸುಳ್ಳು ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ

ಹೆದ್ದಾರಿ ಮಧ್ಯೆ ವನ್ಯಪ್ರಾಣಿಗಳಿಗೆ ಸೇತುವೆಯನ್ನು ಮೊದಲ ಬಾರಿಗೆ ಭಾರತದಲ್ಲಿ ನಿರ್ಮಿಸಲಾಗುತ್ತಿದೆ ಎಂಬಂತೆ ಫೊಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ತನಿಖೆಯ ಪ್ರಕಾರ, ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇಯಲ್ಲಿ ವನ್ಯಪ್ರಾಣಿಗಳ ಸೇತುವೆ ಎಂದ ಈ ವೈರಲ್ ಫೋಟೋ ಸಿಂಗಾಪುರದ್ದು ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ

10-12 ಬಾದಾಮಿಗಳನ್ನು ತಿನ್ನಿ, ಇದು ತಲೆನೋವು ಅಥವಾ ಮೈಗ್ರೇನ್ ನಿವಾರಿಸಲು ಎರಡು ಆಸ್ಪಿರಿನ್ ಪರಿಣಾಮಕ್ಕೆ ಸಮನಾಗಿರುತ್ತದೆ ಎಂಬ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಶೋಧ ನಡೆಸಿದಾಗ, ಬಾದಾಮಿಯು ಆಸ್ಪಿರಿನ್ನಂತೆಯೇ ನೋವು ನಿವಾರಕ ಪರಿಣಾಮಗಳನ್ನು ನೀಡುವುದಿಲ್ಲ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ
Ishwarachandra B G
September 25, 2025
Ishwarachandra B G
July 4, 2025
Newschecker and THIP Media
July 4, 2025