Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಹಮದಾಬಾದ್ ವಿಮಾನ ಅಪಘಾತಕ್ಕೆ ಏರ್ ಇಂಡಿಯಾ ಅಧಿಕಾರಿ ಹೊಣೆ
ಅಹಮದಾಬಾದ್ನಲ್ಲಿ ನಡೆದ ದುರಂತ ವಿಮಾನ ಅಪಘಾತಕ್ಕೆ ಏರ್ ಇಂಡಿಯಾ ಅಧಿಕಾರಿ ಪಾಯಲ್ ಅರೋರಾ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಹೇಳುವ ವೈರಲ್ ಪೋಸ್ಟ್ ಸುಳ್ಳು
ಜೂನ್ 12 ರಂದು ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI 171, ಅಹಮದಾಬಾದ್ನ ವೈದ್ಯಕೀಯ ಕಾಲೇಜಿನ ಆವರಣಕ್ಕೆ ಅಪ್ಪಳಿಸಿ 260 ಜನರು ಸಾವನ್ನಪ್ಪಿದರು. ಈ ದುರಂತಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶಕರು (DGCA) “ಪಾಯಲ್ ಅರೋರಾ” ಎಂಬವರು ಸೇರಿದಂತೆ ಮೂವರು ಏರ್ ಇಂಡಿಯಾ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿರುವ ಪೋಸ್ಟ್ ಒಂದು ಆನ್ಲೈನ್ನಲ್ಲಿ ವೈರಲ್ ಆಗಿದೆ.
ಮಹಿಳೆಯೊಬ್ಬರ ಫೋಟೋ ಹೊಂದಿರುವ ಪೋಸ್ಟ್ ನಲ್ಲಿ, “ಜೂನ್ 12, 2025 ರಂದು ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ಅಪಘಾತಕ್ಕೆ ಡಿಜಿಸಿಎ ಮೂವರು ಅಧಿಕಾರಿಗಳ ಮೇಲೆ ಆರೋಪಿಸಿದೆ, ಅವರಲ್ಲಿ ಸಿಬ್ಬಂದಿ ವೇಳಾಪಟ್ಟಿ ಮುಖ್ಯಸ್ಥ ಪಾಯಲ್ ಅರೋರಾ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಏರ್ ಇಂಡಿಯಾದ ಕಾರ್ಯಾಚರಣೆ ವ್ಯವಸ್ಥೆಯಲ್ಲಿನ ಪುನರಾವರ್ತಿತ ಲೋಪಗಳು, ಪರವಾನಗಿ ಮತ್ತು ನಿಯಮಗಳ ಅಜ್ಞಾನಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಕರ್ತವ್ಯ ನಿರ್ಣಯ ಮತ್ತು ವೇಳಾಪಟ್ಟಿಯಲ್ಲಿನ ಗಂಭೀರ ದೋಷಗಳಿಗೆ (ಗೂಗಲ್ ಮೂಲಕ ಹಿಂದಿಯಿಂದ ಅನುವಾದಿಸಲಾಗಿದೆ) ಪಾಯಲ್ ಅರೋರಾ ಅವರನ್ನು ನೇರವಾಗಿ ಹೊಣೆಗಾರರನ್ನಾಗಿ ಪರಿಗಣಿಸಿ ಡಿಜಿಸಿಎ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದೆ ” ಎಂದು ಹೇಳುತ್ತದೆ.
ಮೂವರು ವ್ಯಕ್ತಿಗಳ ಚಿತ್ರಗಳಿರುವ ಇನ್ನೊಂದು ಹೇಳಿಕೆ ಫೇಸ್ಬುಕ್ನಲ್ಲಿಯೂ ಕೂಡ ಕಾಣಿಸಿಕೊಂಡಿದೆ.


ಪತ್ರಿಕಾ ಸುದ್ದಿ ಸಂಸ್ಥೆ ಜೂನ್ 21, 2025 ರ ವರದಿಯಲ್ಲಿ, “ಅಹಮದಾಬಾದ್ ವಿಮಾನ ಅಪಘಾತ ಘಟನೆಯಲ್ಲಿ ಸಿಬ್ಬಂದಿ ವೇಳಾಪಟ್ಟಿಯನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲರಾದ” ಕಾರಣಕ್ಕಾಗಿ ಡಿಜಿಸಿಎ ಮೂವರು ಏರ್ ಇಂಡಿಯಾ ಅಧಿಕಾರಿಗಳನ್ನು ವಜಾಗೊಳಿಸಲು ಆದೇಶಿಸಿದೆ ಎಂದಿದೆ.
Also Read: ಅಗ್ನಿಶಾಮಕ ದಳದ ಠಾಣೆ ಕುಸಿದು ಬಿದ್ದಿರುವ ವೀಡಿಯೋ ಹಿಂದಿನ ಸತ್ಯವೇನು?
ತನಿಖೆಯ ಆರಂಭದಲ್ಲಿ ಜೂನ್ 20, 2025 ರಂದು ಡಿಜಿಸಿಎ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಅವರು ಹೊರಡಿಸಿದ ಆದೇಶವನ್ನು ನಾವು ನೋಡಿದ್ದೇವೆ. “ಪರವಾನಗಿ, ವಿಶ್ರಾಂತಿ ಮತ್ತು ಇತ್ತೀಚಿನ ಅವಶ್ಯಕತೆಗಳಲ್ಲಿ ಲೋಪಗಳ ಹೊರತಾಗಿಯೂ ವಿಮಾನ ಸಿಬ್ಬಂದಿಯನ್ನು ನಿಗದಿಪಡಿಸಲಾಗಿದೆ ಮತ್ತು ನಿರ್ವಹಿಸಲಾಗುತ್ತಿದೆ ಎಂಬ ಬಗ್ಗೆ ಮೆಸರ್ಸ್ ಏರ್ ಇಂಡಿಯಾ ಸ್ವಯಂಪ್ರೇರಣೆಯಿಂದ ಬಹಿರಂಗಪಡಿಸಿದ ಪುನರಾವರ್ತಿತ ಮತ್ತು ಗಂಭೀರ ಉಲ್ಲಂಘನೆಗಳು ಕಂಡುಬಂದಿವೆ. ARMS ನಿಂದ CAE ವಿಮಾನ ಮತ್ತು ಸಿಬ್ಬಂದಿ ನಿರ್ವಹಣಾ ವ್ಯವಸ್ಥೆ ಪರಿವರ್ತನೆಯ ನಂತರದ ಪರಿಶೀಲನೆಯ ಸಮಯದಲ್ಲಿ ಈ ಉಲ್ಲಂಘನೆಗಳು ಪತ್ತೆಯಾಗಿವೆ” ಎಂದು ಅದರಲ್ಲಿದೆ.
“ಸಿಬ್ಬಂದಿ ವೇಳಾಪಟ್ಟಿ, ಅನುಸರಣೆ ಮೇಲ್ವಿಚಾರಣೆ ಮತ್ತು ಆಂತರಿಕ ಹೊಣೆಗಾರಿಕೆಯಲ್ಲಿ ವ್ಯವಸ್ಥಿತ ವೈಫಲ್ಯಗಳನ್ನು ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆ ಸೂಚಿಸುತ್ತವೆ. ಈ ಕಾರ್ಯಾಚರಣೆಯ ಲೋಪಗಳಿಗೆ ನೇರವಾಗಿ ಕಾರಣರಾದ ಪ್ರಮುಖ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳದೇ ಇರುವುದು ಇನ್ನಷ್ಟು ಕಳವಳಕಾರಿಯಾಗಿದೆ” ಎಂದು ಆದೇಶದಲ್ಲಿದೆ.
“ನಿರಂತರ ಅನುಸರಣೆಯ ಕೊರತೆಗೆ ಏರ್ ಇಂಡಿಯಾದ ಮೂವರು ಅಧಿಕಾರಿಗಳು, ವಿಭಾಗೀಯ ಉಪಾಧ್ಯಕ್ಷೆ ಚೂರ ಸಿಂಗ್, ಡಿಒಪಿಎಸ್ನ ಮುಖ್ಯ ವ್ಯವಸ್ಥಾಪಕಿ ಪಿಂಕಿ ಮಿತ್ತಲ್ ಮತ್ತು ಕ್ರೂ ಶೆಡ್ಯೂಲಿಂಗ್ – ಪ್ಲಾನಿಂಗ್ನ ಪಾಯಲ್ ಅರೋರಾ ಅವರನ್ನು ನೇರ ಹೊಣೆಗಾರರು” ಎಂದು ಅದು ಗುರುತಿಸಿದೆ.

“ಈ ಅಧಿಕಾರಿಗಳು ಅನಧಿಕೃತ ಮತ್ತು ಅನುಸರಣೆಯಿಲ್ಲದ ಸಿಬ್ಬಂದಿ ಜೋಡಣೆ, ಕಡ್ಡಾಯ ಪರವಾನಗಿ ಮತ್ತು ಇತ್ತೀಚಿನ ಮಾನದಂಡಗಳ ಉಲ್ಲಂಘನೆ ಮತ್ತು ಶಿಷ್ಟಾಚಾರ ಮತ್ತು ಮೇಲ್ವಿಚಾರಣೆಯನ್ನು ನಿಗದಿಪಡಿಸುವಲ್ಲಿ ವ್ಯವಸ್ಥಿತ ವೈಫಲ್ಯಗಳು ಸೇರಿದಂತೆ ಗಂಭೀರ ಮತ್ತು ಪುನರಾವರ್ತಿತ ಲೋಪಗಳಲ್ಲಿ ಭಾಗಿಯಾಗಿದ್ದಾರೆ” ಎಂದು ಅದು ಹೇಳಿದೆ.
ಈ ಆದೇಶವು ಏರ್ ಇಂಡಿಯಾಗೆ “ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್ಗೆ ಸಂಬಂಧಿಸಿದ ಎಲ್ಲಾ ಪಾತ್ರಗಳು ಮತ್ತು ಜವಾಬ್ದಾರಿಗಳಿಂದ ಮೇಲೆ ತಿಳಿಸಿದ ಅಧಿಕಾರಿಗಳನ್ನು ತೆಗೆದುಹಾಕಬೇಕು” ಮತ್ತು ಅವರ ವಿರುದ್ಧ ಆಂತರಿಕ ಶಿಸ್ತು ಕ್ರಮಗಳನ್ನು ವಿಳಂಬವಿಲ್ಲದೆ ಪ್ರಾರಂಭಿಸಬೇಕು ಎಂದು ನಿರ್ದೇಶಿಸಿದೆ. ಪ್ರಕ್ರಿಯೆಗಳ ಫಲಿತಾಂಶವನ್ನು “ಈ ಪತ್ರ ನೀಡಿದ ದಿನಾಂಕದಿಂದ 10 ದಿನಗಳಲ್ಲಿ ಕಚೇರಿಗೆ ವರದಿ ಮಾಡಬೇಕು” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
“ಶೆಡ್ಯೂಲಿಂಗ್ ಕ್ರಮಗಳನ್ನು ಸರಿಪಡಿಸುವ ಸುಧಾರಣೆಗಳ ತೀರ್ಮಾನದವರೆಗೆ ಮೇಲೆ ತಿಳಿಸಿದ ಅಧಿಕಾರಿಗಳನ್ನು ಕಾರ್ಯಾಚರಣೆಯೇತರ ಪಾತ್ರಗಳಿಗೆ ಮರು ನಿಯೋಜಿಸಲಾಗುತ್ತದೆ ಮತ್ತು ಮುಂದಿನ ಸೂಚನೆ ಬರುವವರೆಗೆ ವಿಮಾನ ಸುರಕ್ಷತೆ ಮತ್ತು ಸಿಬ್ಬಂದಿ ಅನುಸರಣೆಯ ಮೇಲೆ ನೇರ ಪ್ರಭಾವ ಬೀರುವ ಯಾವುದೇ ಹುದ್ದೆಯನ್ನು ನೀಡಲಾಗುವುದಿಲ್ಲ. ನಂತರದ ಲೆಕ್ಕಪರಿಶೋಧನೆ ಅಥವಾ ತಪಾಸಣೆಯಲ್ಲಿ ಪತ್ತೆಯಾದ ಸಿಬ್ಬಂದಿ ವೇಳಾಪಟ್ಟಿ ಮಾನದಂಡಗಳು, ಪರವಾನಗಿ ಅಥವಾ ಹಾರಾಟದ ಸಮಯದ ಮಿತಿಗಳ ವಿಚಾರದಲ್ಲಿ ಯಾವುದೇ ಭವಿಷ್ಯದ ಉಲ್ಲಂಘನೆಯು ದಂಡಗಳು, ಪರವಾನಗಿ ಅಮಾನತು ಅಥವಾ ಆಪರೇಟರ್ ಅನುಮತಿಗಳನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ಅವುಗಳಿಗೆ ಸೀಮಿತವಾಗಿರದೆ ಕಠಿಣ ಕ್ರಮದ ಜಾರಿಗೆ ಕಾರಣವಾಗುತ್ತದೆ” ಎಂದು ಡಿಜಿಸಿಎ ಆದೇಶದಲ್ಲಿ ತಿಳಿಸಲಾಗಿದೆ.
ಆದರೆ ಇದರಲ್ಲಿ ಜೂನ್ 12ರ ಅಹಮದಾಬಾದ್ ವಿಮಾನ ಅಪಘಾತದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂಬುದನ್ನು ಗಮನಿಸಿದ್ದೇವೆ.
ಡಿಜಿಸಿಎ ಛೀಮಾರಿಯ ಬಳಿಕ, ಏರ್ ಇಂಡಿಯಾ ತನ್ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಬಾಸಿಲ್ ಕ್ವಾಕ್ ಐಒಸಿಸಿ ನೇರ ಮೇಲ್ವಿಚಾರಣೆಯಲ್ಲಿರಲಿದ್ದಾರೆ ಎಂದು ಹೇಳಿದೆ. ಕ್ವಾಕ್ ಸಿಂಗಾಪುರ್ ಏರ್ಲೈನ್ಸ್ನಿಂದ ಡೆಪ್ಯುಟೇಶನ್ನಲ್ಲಿ ಏರ್ ಇಂಡಿಯಾವನ್ನು ಸೇರಿದ್ದಾರೆ ಮತ್ತು ಈ ಹಿಂದೆ ವಿಸ್ತಾರಾದಲ್ಲಿಯೂ ಡೆಪ್ಯುಟೇಶನ್ನಲ್ಲಿ ಸೇವೆ ಸಲ್ಲಿಸಿದ್ದರು ಎಂದು ಜೂನ್ 21, 2025 ರಂದು ದಿ ಹಿಂದೂ ವರದಿ ಮಾಡಿದೆ.
ಆದೇಶದಲ್ಲಿ ಉಲ್ಲೇಖಿಸಿರುವಂತೆ, ವಿಮಾನಯಾನ ಸಂಸ್ಥೆಯು ಹೊಸ ಸಾಫ್ಟ್ವೇರ್ಗೆ ಬದಲಾದ ಬಳಿಕ ಮೇ 2024 ರಲ್ಲಿ ಸಿಬ್ಬಂದಿ ವೇಳಾಪಟ್ಟಿ ಪರಿಶೀಲನೆಯ ಸಮಯದಲ್ಲಿ ಈ ಉಲ್ಲಂಘನೆಗಳು ಪತ್ತೆಯಾಗಿವೆ ಮತ್ತು ವಿಮಾನಯಾನ ಸಂಸ್ಥೆಯು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಿದೆ. “ಫೆಬ್ರವರಿ 2025 ರಲ್ಲಿ ಏರ್ ಇಂಡಿಯಾದಲ್ಲಿ ಆಂತರಿಕ ಲೆಕ್ಕಪರಿಶೋಧನೆ ನಡೆದಿತ್ತು, ಈ ಸಮಯದಲ್ಲಿ ಹಲವಾರು ಲೋಪಗಳು ಕಂಡುಬಂದವು ಮತ್ತು ಅವುಗಳನ್ನು ಉನ್ನತ ಅಧಿಕಾರಿಗಳಿಗೆ ವರದಿ ಮಾಡಲಾಯಿತು ಮತ್ತು ನಂತರ ನಿಯಂತ್ರಕರ ಗಮನಕ್ಕೆ ತರಲಾಯಿತು. ನಂತರ ಡಿಜಿಸಿಎ ಈ ಲೋಪಗಳನ್ನು ಸರಿಪಡಿಸಲು ಏರ್ ಇಂಡಿಯಾಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಿತ್ತು” ಎಂದು ವರದಿ ತಿಳಿಸಿದೆ.

ತನಿಖೆಯ ಭಾಗವಾಗಿ ನ್ಯೂಸ್ ಚೆಕರ್ ಏರ್ ಇಂಡಿಯಾದ ಮೂಲಗಳನ್ನು ಸಂಪರ್ಕಿಸಿದೆ, ಅವರು ವೈರಲ್ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. “ಇದು ಸಂಪೂರ್ಣವಾಗಿ ಸುಳ್ಳು. ಡಿಜಿಸಿಎಯ ಈ ಆದೇಶವು ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದ್ದಲ್ಲ. ಸಿಬ್ಬಂದಿ ವೇಳಾಪಟ್ಟಿಗಾಗಿ ಬಳಸುವ ಸಾಫ್ಟ್ವೇರ್ನಲ್ಲಿ ಬದಲಾವಣೆಗಳನ್ನು ಮಾಡಿದ ನಂತರ ಬೆಳಕಿಗೆ ಬಂದ ಉಲ್ಲಂಘನೆಗೆ ಇದು ಸಂಬಂಧಿಸಿದೆ. ಈ ಉಲ್ಲಂಘನೆಯನ್ನು ಏರ್ ಇಂಡಿಯಾ ಸ್ವಯಂಪ್ರೇರಣೆಯಿಂದ ಬಹಿರಂಗಪಡಿಸಿದೆ” ಎಂದು ಹೇಳಿದ್ದಾರೆ.
ವಿಮಾನ ಅಪಘಾತದ ಕುರಿತ ತನಿಖೆಯ ವಿಚಾರದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಜೂನ್ 26, 2025 ರಂದು “ಏರ್ ಇಂಡಿಯಾ ವಿಮಾನ AI-171ದ ಬ್ಲ್ಯಾಕ್ ಬಾಕ್ಸ್ ನಿಂದ ದತ್ತಾಂಶ ಪಡೆಯುವಿಕೆ ಮತ್ತು ಪರೀಕ್ಷೆಯ ಸ್ಥಿತಿಗತಿ ಕುರಿತು ವರದಿ” ಲಭ್ಯವಾಗಿದೆ.
ತನಿಖೆಯ ವಿಚಾರದಲ್ಲಿ ವಿವರವಾಗಿ ಅದು ಹೀಗೆ ಹೇಳಿದೆ, “ಕಾಕ್ಪಿಟ್ ವಾಯ್ಸ್ ರೆಕಾರ್ಡರ್ಗಳು (CVR) ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ಗಳು (FDR) ಎರಡನ್ನೂ ಜೂನ್ 13, 2025 ರಂದು ಅಪಘಾತದ ಸ್ಥಳದ ಕಟ್ಟಡದ ಮೇಲ್ಛಾವಣಿಯಿಂದ ಮತ್ತು ಜೂನ್ 16, 2025 ರಂದು ಅವಶೇಷಗಳಿಂದ ವಶಪಡಿಸಿಕೊಳ್ಳಲಾಗಿದೆ. ಅವುಗಳ ಸುರಕ್ಷಿತ ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಣೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಮಾಡಲಾಗಿದೆ. ಈ ಸಾಧನಗಳನ್ನು ಅಹಮದಾಬಾದ್ನಲ್ಲಿ 24×7 ಪೊಲೀಸ್ ರಕ್ಷಣೆ ಮತ್ತು ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿತ್ತು.”
ಅನಂತರ ಜೂನ್ 24, 2025 ರಂದು IAF ವಿಮಾನದ ಮೂಲಕ ಕಪ್ಪು ಪೆಟ್ಟಿಗೆಗಳನ್ನು ಸಂಪೂರ್ಣ ಭದ್ರತೆಯೊಂದಿಗೆ ದೆಹಲಿಗೆ ವರ್ಗಾಯಿಸಿತು. “ಜೂನ್ 24, 2025 ರ ಸಂಜೆ, AAIB (ವಿಮಾನ ಅಪಘಾತ ತನಿಖಾ ಬ್ಯೂರೋ) ಮತ್ತು NTSB ಯ ತಾಂತ್ರಿಕ ಸದಸ್ಯರೊಂದಿಗೆ DG AAIB ನೇತೃತ್ವದ ತಂಡವು ಡೇಟಾ ಹೊರತೆಗೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಮುಂಭಾಗದ ಬ್ಲ್ಯಾಕ್ ಬಾಕ್ಸ್ ನಿಂದ ಕ್ರ್ಯಾಶ್ ಪ್ರೊಟೆಕ್ಷನ್ ಮಾಡ್ಯೂಲ್ (CPM) ಅನ್ನು ಸುರಕ್ಷಿತವಾಗಿ ಹಿಂಪಡೆಯಲಾಯಿತು, ಮತ್ತು ಜೂನ್ 25, 2025 ರಂದು, ಮೆಮೊರಿ ಮಾಡ್ಯೂಲ್ ಅನ್ನು ಯಶಸ್ವಿಯಾಗಿ ತೆರೆಯಲಾಗಿದ್ದು ಅದರ ಡೇಟಾವನ್ನು AAIB ಲ್ಯಾಬ್ನಲ್ಲಿ ಡೌನ್ಲೋಡ್ ಮಾಡಲಾಯಿತು. CVR ಮತ್ತು FDR ಡೇಟಾದ ವಿಶ್ಲೇಷಣೆ ನಡೆಯುತ್ತಿದೆ” ಎಂದು ಅದು ಹೇಳಿದೆ.
ಅನಂತರ ನಾವು ವೈರಲ್ ಪೋಸ್ಟ್ನಲ್ಲಿ ಕಾಣಿಸಿಕೊಂಡ ಚಿತ್ರಗಳ ಮೇಲೆ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಆ ವ್ಯಕ್ತಿ ಪತನಗೊಂಡ AI 171 ವಿಮಾನದ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಎಂದು ಗುರುತಿಸಲಾಗಿದೆ ಮತ್ತು ಸೀರೆಯುಟ್ಟ ಮಹಿಳೆ ಅದೇ ವಿಮಾನದಲ್ಲಿ ಸಿಬ್ಬಂದಿ ರೋಶ್ನಿ ರಾಜೇಂದ್ರ ಸೊಂಘರೆ ಎಂದು ಗುರುತಿಸಲಾಗಿದೆ.

ಅನೇಕ ಪ್ರಯತ್ನಗಳ ಹೊರತಾಗಿಯೂ, ವೈರಲ್ ಹೇಳಿಕೆಯಲ್ಲಿ ಕಂಡುಬರುವ ಎರಡನೇ ಮಹಿಳೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ, ಆದರೂ ಬಳಕೆದಾರರು ಅವರು ಪಾಯಲ್ ಅರೋರಾ ಎಂದು ಆರೋಪಿಸಿದ್ದಾರೆ. ಆದಾಗ್ಯೂ, ಏರ್ ಇಂಡಿಯಾದ ನಮ್ಮ ಮೂಲಗಳು ಡಿಜಿಸಿಎ ವರದಿಯಲ್ಲಿ ಉಲ್ಲೇಖಿಸಲಾದ ಪಾಯಲ್ ಅರೋರಾ ಅವರಲ್ಲ ಮತ್ತು ಅವರು ಬೇರೆ ಇಲಾಖೆಯೊಂದಿಗೆ ಸಂಬಂಧಪಟ್ಟವರಾಗಿದ್ದಾರೆ ಎಂದು ಹೇಳಿದ್ದಾರೆ.
ಈ ತನಿಖೆಯ ಪ್ರಕಾರ, ಅಹಮದಾಬಾದ್ನಲ್ಲಿ ನಡೆದ ದುರಂತ ವಿಮಾನ ಅಪಘಾತಕ್ಕೆ ಏರ್ ಇಂಡಿಯಾ ಅಧಿಕಾರಿ ಪಾಯಲ್ ಅರೋರಾ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಹೇಳುವ ವೈರಲ್ ಪೋಸ್ಟ್ ಸುಳ್ಳು ಎಂದು ಕಂಡುಬಂದಿದೆ.
Also Read: ಇಲ್ಲ, ಈ ಫೋಟೋ ಲಕ್ನೋದ ಸಲಾಹುದ್ದೀನ್ ಮನೆಯಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳದ್ದಲ್ಲ
Our Sources
DGCA Order, Dated: June 20, 2025
Report By The Hindu, Dated: June 21, 2025
Release By Ministry Of Civil Aviation, Dated: June 26, 2025
Conversation With Air India Source
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
July 23, 2025
Ishwarachandra B G
July 5, 2025
Vasudha Beri
June 13, 2025