Authors
Claim:
ಏಷ್ಯಾದ ಮೊದಲ ಮಸೀದಿ ಹಿಂದೆ ದೇಗುಲವಾಗಿತ್ತು
Fact
ಜೀನತ್ ಬಕ್ಷ್ ಹೆಸರಿನ ಈ ಮಸೀದಿ ಮಂಗಳೂರಿನ ಬಂದರು ಪ್ರದೇಶದಲ್ಲಿದ್ದು ಅತ್ಯಂತ ಹಳೆಯ ಮಸೀದಿ. ಇದು ದೇಗುಲವಾಗಿತ್ತು ಎನ್ನುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ
ಪ್ರಾಚೀನ ದೇಗುಲ ಈಗ ಮಸೀದಿಯಾಗಿದೆ ಎಂಬರ್ಥದಲ್ಲಿ ಪ್ರಾಚೀನ ವಾಸ್ತು ಶೈಲಿಯ ಮಸೀದಿ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ವೀಡಿಯೋವನ್ನು “ಏಷ್ಯಾದ ಮೊದಲ ಮಸೀದಿ ಮುಂಚೆ ದೇವಾಲಯವಾಗಿತ್ತು ಪಣವಿಡುವೆವು ಭಗವಂತನ ಪಾದದ ಮೆಲಾಣೆ.. ಮಂದಿರವಲ್ಲೇ ಕಟ್ಟುವೆವು” ಎಂಬ ಹೇಳಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ.
Also Read: ರಾಹುಲ್ ಗಾಂಧಿ ರಾಲಿಯಲ್ಲಿ ಮೋದಿ-ಮೋದಿ ಘೋಷಣೆ? ವೈರಲ್ ವೀಡಿಯೋದ ಸತ್ಯ ಇಲ್ಲಿದೆ
ಇದೇ ವೈರಲ್ ವೀಡಿಯೋದೊಂದಿಗೆ ವಿವಿಧ ರೀತಿಯ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ವೈರಲ್ ವೀಡಿಯೋದಲ್ಲಿ ಹೇಳಲಾದ ಮಸೀದಿ ಮೊದಲು ದೇವಾಲಯವಾಗಿತ್ತೇ? ಎಂಬ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಎಂದು ಕಂಡುಬಂದಿದೆ.
Fact Check/ Verification
ವೈರಲ್ ಕ್ಲೈಮ್ ಅನ್ನು ಪರಿಶೀಲಿಸಲು, ನಾವು ಮೊದಲು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಇದೇ ವೀಡಿಯೋವನ್ನು ಹಲವಾರು ಯೂಟ್ಯೂಬ್ ಚಾನೆಲ್ ಗಳಲ್ಲಿ ಕಂಡುಕೊಂಡಿದ್ದೇವೆ, ಆ ವೀಡಿಯೋಗಳಲ್ಲಿ ಕಂಡುಬರುವ ಸ್ಥಳವನ್ನು ‘ಜೀನತ್ ಬಕ್ಷ್ ಮಸೀದಿ’ ಎಂದು ವಿವರಿಸಲಾಗಿದೆ. ಆ ಪ್ರಕಾರ ನಾವು ಜೀನತ್ ಬಕ್ಷ್ ಮಸೀದಿ ಎಂದು ಕೀವರ್ಡ್ ಸರ್ಚ್ ನಡೆಸಿದ್ದೇವೆ.
ಈಗ ನಾವು ಗೂಗಲ್ನಲ್ಲಿ ‘ಜೀನತ್ ಬಕ್ಷ್ ಮಸೀದಿ’ ಎಂಬ ಕೀವರ್ಡ್ ಅನ್ನು ಹುಡುಕಿದ್ದೇವೆ. ಇದು ಮಂಗಳೂರಿನ ಮಸೀದಿಯಾಗಿದ್ದು, ಅತಿ ಪ್ರಾಚೀನ ಮಸೀದಿಗಳಲ್ಲಿ ಒಂದು ತಿಳಿದುಬಂದಿದೆ. ಕರ್ನಾಟಕ ಪ್ರವಾಸೋದ್ಯಮದ ಅಧಿಕೃತ ವೆಬ್ಸೈಟ್ನಲ್ಲಿ ಈ ಮಸೀದಿಯ ಕುರಿತ ವಿವರಗಳನ್ನು ಕಂಡುಕೊಂಡಿದ್ದೇವೆ. ನಾವು ವೈರಲ್ ವೀಡಿಯೊದಲ್ಲಿನ ದೃಶ್ಯವನ್ನು ಕರ್ನಾಟಕ ಪ್ರವಾಸೋದ್ಯಮ ವೆಬ್ಸೈಟ್ನಲ್ಲಿ ಮಸೀದಿಯ ಚಿತ್ರದೊಂದಿಗೆ ತಾಳೆ ನೋಡಿದ್ದೇವೆ.
ಕರ್ನಾಟಕ ಪ್ರವಾಸೋದ್ಯಮದ ಅಧಿಕೃತ ವೆಬ್ಸೈಟ್ನಲ್ಲಿ ಮಸೀದಿಯ ವಿವರಗಳನ್ನು ನ್ಯೂಸ್ ಚೆಕರ್ ಕಂಡುಕೊಂಡಿದೆ, “ಮಸ್ಜಿದ್ ಜೀನತಾ ಬಕ್ಷ್ ಮಂಗಳೂರಿನ ಬಂದರ್ ಪ್ರದೇಶದಲ್ಲಿದೆ ಮತ್ತು ಈ ಮಸೀದಿಯು ಪ್ರವಾದಿ ಮೊಹಮ್ಮದ್ ಅವರ ಜೀವನ ಕಥೆಗಳನ್ನು ಚಿತ್ರಿಸುತ್ತದೆ. ಇದನ್ನು ಕ್ರಿ.ಶ 644 ರಲ್ಲಿ ಅರಬ್ ಮುಸ್ಲಿಂ ವ್ಯಾಪಾರಿಗಳು ಸ್ಥಾಪಿಸಿದರು ಎಂದು ನಂಬಲಾಗಿದೆ. ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿರುವ ಕರ್ನಾಟಕದ ಏಕೈಕ ಮಸೀದಿ ಇದು ಎಂದು ಇಲ್ಲಿ ಉಲ್ಲೇಖಿಸಲಾಗಿದೆ. ತೇಗದಿಂದ ಮಾಡಿದ 16 ಸ್ತಂಭಗಳನ್ನು ಹೊಂದಿರುವ ಮರದ ಒಳ ಗರ್ಭಗುಡಿಯ ರೀತಿಯ ಶೈಲಿಯು ಮಸೀದಿಯ ಪ್ರಮುಖ ಆಕರ್ಷಣೆಯಾಗಿದೆ.
Also Read: ಉತ್ತರ ಪ್ರದೇಶದಲ್ಲಿ ಚಾಕು ಹಿಡಿದು ಅಂಗಡಿಯವರನ್ನು ಬೆದರಿಸಿದ ವ್ಯಕ್ತಿಗೆ ಗುಂಡೇಟು ಎಂದ ವೀಡಿಯೋ ಕಲಬುರಗಿಯದ್ದು!
ಮಂಗಳೂರಿನ ಈ ವಿಶೇಷ ಮಸೀದಿಯ ಬಗ್ಗೆ ಇನ್ನೂ ಹಲವು ಲೇಖನಗಳನ್ನು ನಾವು ಕಂಡುಕೊಂಡಿದ್ದು ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಓದಬಹುದು.
2022 ರಲ್ಲಿಯೂ ಪ್ರಾಚೀನ ದೇವಾಲಯವನ್ನು ಮುಸ್ಲಿಮರು ‘ಜೀನತ್ ಬಕ್ಷ್ ಮಸೀದಿ’ಯನ್ನಾಗಿ ಮಾಡಿದ್ದಾರೆ ಎಂಬ ಹೇಳಿಕೆ ವೈರಲ್ ಆಗಿತ್ತು. ಆ ಸಮಯದಲ್ಲಿ ನ್ಯೂಸ್ ಚೆಕರ್ ಮಾಡಿದ ಫ್ಯಾಕ್ಟ್ ಚೆಕ್ ಅನ್ನು ಇಲ್ಲಿ ಓದಬಹುದು.
Conclusion
ನಮ್ಮ ತನಿಖೆಯಲ್ಲಿ, ವೈರಲ್ ಕ್ಲೈಮ್ನಲ್ಲಿ ದೇವಾಲಯ ಎಂದು ವಿವರಿಸಲಾದ ಸ್ಥಳವು ಮಂಗಳೂರಿನಲ್ಲಿರುವ ಪ್ರಾಚೀನ ಮಸೀದಿ ಎಂದು ತಿಳಿದುಬಂದಿದೆ. ಅಲ್ಲದೇ ಮುಸ್ಲಿಮರು ದೇವಾಲಯವನ್ನು ಸ್ವಾಧೀನ ಪಡಿಸಿ ಮಸೀದಿ ಮಾಡಿಕೊಂಡಿದ್ದಾರೆ ಎಂಬ ಹೇಳಿಕೆಗಳೂ ಸುಳ್ಳು ಎಂದು ಗೊತ್ತಾಗಿದೆ.
Also Read: ಬೆಂಗಳೂರು-ಮೈಸೂರು ಹೈವೇಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದ ವೀಡಿಯೋ ಗದಗಿನದ್ದು!
Result: False
Our Sources
YouTube Posts
Karnataka tourism Website
Article by Mangaluruonline.in
Article by Mangaloretoday.com, Dated: May 30, 2014
Article by The Hindu, Dated: April 23, 2014
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.