Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಸೌದಿ ಅರೇಬಿಯಾದ ಮಸೀದಿಯಲ್ಲಿ ಇಫ್ತಾರ್ ಆಯೋಜನೆಗೆ ಹಾಗೂ ಆಜಾನ್‌ಗೆ ನಿಷೇಧ ಹೇರಲಾಗಿದೆ
Fact
ರಮ್ಜಾನ್ ಮಾಸದಲ್ಲಿ ಮಸೀದಿಯ ಒಳಗಡೆ ಇಫ್ತಾರ್ ಕೂಟದ ಕುರಿತು ಮತ್ತು ಪ್ರಾರ್ಥನೆಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಕುರಿತು ಕೆಲವೊಂದು ಸೂಚನೆ ಹೊರಡಿಸಲಾಗಿದೆ. ನಿಷೇಧ ಹೇರಿಲ್ಲ
ಸೌದಿ ಅರೇಬಿಯಾದಲ್ಲಿ ಇಫ್ತಾರ್ ಆಯೋಜನೆಗೆ ಹಾಗೂ ಆಜಾನ್ ಗೆ ನಿಷೇಧ ಹೇರಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಗಳು ಹರಿದಾಡಿದೆ.
ಎಕ್ಸ್ ನಲ್ಲಿ ಮಾಡಲಾದ ಪೋಸ್ಟ್ ನಲ್ಲಿ “ಸೌದಿ ಅರೇಬಿಯಾದ ಮಸೀದಿಯಲ್ಲಿ ಇಪ್ತಾರ ಆಯೋಜನೆಯ ಮೇಲೆ ನಿಷೇಧ ಹಾಗೂ ಆಜಾನ್ ಧ್ವನಿಯ ಮೇಲೆ ಕೂಡ ನಿಯಂತ್ರಣ!” ಎಂದಿದೆ.
Also Read: ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆಯೇ?
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ. ಸೌದಿ ಅರೇಬಿಯಾ ಇಫ್ತಾರ್ ಕೂಟದ ಮೇಲೆ ನಿಷೇಧ ಹೇರಿಲ್ಲ ಜೊತೆಗೆ ಆಜಾನ್ ಗೂ ನಿಯಂತ್ರಣ ವಿಧಿಸಿಲ್ಲ ಎಂದು ಗೊತ್ತಾಗಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫೆಬ್ರವರಿ 23, 2024ರ ಗಲ್ಫ್ ನ್ಯೂಸ್.ಕಾಮ್ ನ ವರದಿ ಲಭ್ಯವಾಗಿದೆ. ಇದರಲ್ಲಿ “ಇಫ್ತಾರ್ ಬಗ್ಗೆ ಸೌದಿ ಮಸೀದಿಗಳಲ್ಲಿ ನಿಧಿ ಸಂಗ್ರಹಣೆಯನ್ನು ನಿಷೇಧಿಸಲಾಗಿದೆ” ಎಂಬ ಶೀರ್ಷಿಕೆಯಡಿ ಮಸೀದಿಯ ಇಮಾಮ್ ಗಳು ಇಫ್ತಾರ್ ಕೂಟಕ್ಕಾಗಿ ಹಣಸಂಗ್ರಹಿಸುವುದನ್ನು ಮುಂದಿನ ರಮ್ಜಾನ್ ತಿಂಗಳಲ್ಲಿ ನಿಷೇಧಿಸಲಾಗಿದೆ ಎಂದಿದೆ. ಇದೇ ಸುದ್ದಿಯಲ್ಲಿ ಪ್ರಾರ್ಥನೆಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಕ್ಕೂ ಇಸ್ಲಾಂ ವ್ಯವಹಾರಗಳ ಸಚಿವಾಲಯ ನಿಷೇಧ ಹೇರಿದೆ ಎಂದು ಇದೆ.
ಈ ವರದಿಯನ್ನು ಸಾಕ್ಷ್ಯವಾಗಿ ಪರಿಗಣಿಸಿ ನಾವು ಸೌದಿಯ ಇಸ್ಲಾಂ ವ್ಯವಹಾರಗಳ ಸಚಿವಾಲಯ ಎಕ್ಸ್ ಖಾತೆಯನ್ನು ಪರಿಶೀಲಿಸಿದ್ದೇವೆ.
ಫೆಬ್ರವರಿ 21, 2024ರಂದು ಮಾಡಲಾದ ಎಕ್ಸ್ ಪೋಸ್ಟ್ ನಲ್ಲಿ ಸೌದಿಯ ಇಸ್ಲಾಂ ವ್ಯವಹಾರಗಳ ಸಚಿವಾಲಯ ರಮ್ಜಾನ್ ನಿಮಿತ್ತ ಹಲವು ನಿಯಮಗಳನ್ನು ಜಾರಿಗೊಳಿಸಿದ್ದು, ಇದರಲ್ಲಿ ಇಫ್ತಾರ್ ಕೂಟವನ್ನು ಶುಚಿತ್ವದ ಕಾರಣಕ್ಕೆ ಮಸೀದಿಯ ಒಳಗಡೆ ನಡೆಸುವಂತಿಲ್ಲ ಮತ್ತು ಅದಕ್ಕೆ ಸಂಬಂಧಿಸಿದ ಹೊರಾಂಗಣ ಅಥವಾ ಪ್ರತ್ಯೇಕ ಸ್ಥಳದಲ್ಲಿ ನಡೆಸಬಹುದು, ಇದಕ್ಕಾಗಿ ಪ್ರತ್ಯೇಕ ತಾತ್ಕಾಲಿಕ ಕೋಣೆ, ಟೆಂಟ್ ಗಳನ್ನು ಹಾಕುವಂತಿಲ್ಲ, ಇಫ್ತಾರ್ ಕೂಟಗಳನ್ನು ಇಮಾಮ್ ಅವರ ಹೊಣೆಗಾರಿಕೆಯ ಮೇಲೆಯೇ ಆಯೋಜಿಸಬೇಕು, ಪ್ರಾರ್ಥನೆಗಳನ್ನು ಮಾಧ್ಯಮದಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.
Also Read: ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ರೈತ ಪ್ರತಿಭಟನಕಾರರು?
ಇದೇ ರೀತಿಯ ಸೂಚನೆಗಳನ್ನು ಸೌದಿ ಇಸ್ಲಾಂ ವ್ಯವಹಾರಗಳ ಸಚಿವಾಲಯ ಕಳೆದ ವರ್ಷವೂ ನೀಡಿತ್ತು. ಆ ಕುರಿತ ಎಕ್ಸ್ ಪೋಸ್ಟ್ ಇಲ್ಲಿದೆ.
ಈ ಸೂಚನೆಗಳಲ್ಲಿ ಎಲ್ಲೂ ಇಫ್ತಾರ್ ನಡೆಸುವಂತಿಲ್ಲ ಮತ್ತು ಆಜಾನ್ ಗೆ ನಿಷೇಧ ಹೇರಲಾಗಿದೆ ಎಂಬ ಸೂಚನೆಗಳು ಕಂಡುಬಂದಿಲ್ಲ ಆದ್ದರಿಂದ ನಮ್ಮ ಸತ್ಯಶೋಧನೆಯ ಪ್ರಕಾರ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದ ಹೇಳಿಕೆಯು ಸುಳ್ಳಾಗಿದೆ.
Also Read: ರೈತರ ಅನ್ನದ ಪಾತ್ರೆಗೆ ಗುಂಡೇಟು ಬಿದ್ದಿದೆ ಎಂಬುದು ನಿಜವೇ?
Our Sources:
Report By Gulf News, Dated: February 23, 2024
Tweet By Ministry of Islamic Affairs Saudi, Dated: February 21, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
June 28, 2025
Mohammed Zakariya
June 26, 2025
Ishwarachandra B G
March 29, 2025