Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಮೆರಿಕ ಇರಾನ್ ನ ಫೊರ್ಡೋ ಪರಮಾಣು ಘಟಕದ ಮೇಲೆ ದಾಳಿ ನಡೆಸಿದ ವೀಡಿಯೋ, ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿದ್ದಾನೆ ಎಂದ ವೀಡಿಯೋಗಳು ಈ ವಾರ ವೈರಲ್ ಆಗಿದ್ದು ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ ಇದು ಸುಳ್ಳು ಎಂದು ಸತ್ಯಾಂಶವನ್ನೂ ತೆರೆದಿಟ್ಟಿದೆ. ಇದರೊಂದಿಗೆ 2ನೇ ಮತ್ತು 4ನೇ ಶನಿವಾರ ಮತ್ತೆ ಕೆಲಸದ ದಿನಗಳಾಗಿ, ಸರ್ಕಾರಿ ರಜೆ ರದ್ದು ಮಾಡಲಾಗಿದೆ, ಶ್ವೇತಭವನದಲ್ಲಿ ಊಟಕ್ಕೆ ಪಾಕಿಸ್ತಾನೀಯರ ನೂಕುನುಗ್ಗಲು, ತಿರುಪತಿ ದೇಗುಲದ ಹುಂಡಿ ಹಣ ಕಳವು ಎಂದ ವೀಡಿಯೋ, ಈರುಳ್ಳಿ ತಿನ್ನುವುದರಿಂದ ಕೊಲೆಸ್ಟ್ರಾಲ್, ಪಾರ್ಶ್ವವಾಯು, ಕ್ಯಾನ್ಸರ್ ಅಪಾಯ ತಪ್ಪಿಸಬಹುದು ಎಂಬ ಹೇಳಿಕೆಗಳೂ ಇದ್ದವು. ಇವುಗಳೂ ನಿಜವಲ್ಲ ಎಂದು ತನಿಖೆ ವೇಳೆ ಬಹಿರಂಗವಾಗಿದೆ. ಈ ಕುರಿತ ವಾರದ ನೋಟ ಇಲ್ಲಿದೆ

ಅಮೆರಿಕ ಇರಾನ್ ನ ಫೊರ್ಡೋ ಪರಮಾಣು ಘಟಕದ ಮೇಲೆ ದಾಳಿ ಮಾಡಿದ ದೃಶ್ಯ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇದು ಸಿರಿಯಾ ಮೇಲೆ ಇಸ್ರೇಲ್ 2024ರ ಡಿಸೆಂಬರ್ ಹೊತ್ತಿಗೆ ನಡೆಸಿದ ದಾಳಿಯಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿಕೊಳ್ಳುತ್ತಿದ್ದಾನೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿದ್ದಾನೆ ಎಂದ ವೀಡಿಯೋ ಎಐ ಕರಾಮತ್ತು, ಇದು ನಿಜವಲ್ಲ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿದೆ

ಜುಲೈ 14ರಿಂದ 2ನೇ ಮತ್ತು ನಾಲ್ಕನೇ ಶನಿವಾರ ಮತ್ತೆ ಕೆಲಸದ ದಿನಗಳಾಗಿ ಸರ್ಕಾರಿ ರಜೆ ರದ್ದು ಮಾಡಲಾಗಿದೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ, ರಜೆಗಳನ್ನು ರದ್ದು ಮಾಡಲಾಗಿದೆ ಎನ್ನುವುದು ನಿಜವಲ್ಲ. ರಜೆ ರದ್ದತಿಯು ಸುಪ್ರೀಂಕೋರ್ಟ್ ಕಚೇರಿಗೆ ಸೀಮಿತವಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಅಮೆರಿಕದ ಶ್ವೇತಭವನದಲ್ಲಿ ಪಾಕಿಸ್ತಾನೀಯರು ಆಹಾರಕ್ಕಾಗಿ ನೂಕುನುಗ್ಗಲು ಮಾಡಿದ ದೃಶ್ಯ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದರ ಬಗ್ಗೆ ತನಿಖೆ ನಡೆಸಿದಾಗ, ಆಹಾರಕ್ಕಾಗಿ ಪಾಕಿಸ್ತಾನೀಯರ ನೂಕುನುಗ್ಗಲು ಅಮೆರಿಕದ ಶ್ವೇತಭವನದ್ದಲ್ಲ, 2020ರಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ಬಾರ್ ಕೌನ್ಸಿಲ್ ಚುನಾವಣೆ ಸಂದರ್ಭದ ಘಟನೆಯ ವೀಡಿಯೋ ಇದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಸೌದಿ ಅರೇಬಿಯಾ ಮದ್ಯ ಮಾರಾಟಕ್ಕೆ ಅವಕಾಶ, 600 ಸ್ಥಳಗಳಲ್ಲಿ ಮದ್ಯ ಲಭ್ಯ ಎಂದು ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ನ್ಯೂಸ್ ಚೆಕರ್ ತನಿಖೆಯಲ್ಲಿ ಕಂಡುಬಂದಂತೆ ಸೌದಿ ಅರೇಬಿಯಾದಲ್ಲಿ ಮದ್ಯದ ಮೇಲಿನ ನಿಷೇಧವನ್ನು ತೆಗೆದುಹಾಕುವ ಹೇಳಿಕೆ ಆಧಾರರಹಿತವಾಗಿದೆ, ಅಲ್ಲಿನ ಸರ್ಕಾರ ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಇನ್ನು ಮುಂದೆ ಬೈಕ್ ಸವಾರರಿಗೂ ಟೋಲ್ ಅನ್ವಯವಾಗಲಿದೆ ಎಂದು ಸುದ್ದಿಯೊಂದು ಹರಿದಾಡಿದೆ. ನಾಲ್ಕು ಚಕ್ರದ ವಾಹನಗಳಂತೆ ದ್ವಿಚಕ್ರ ವಾಹನದವೂ ಫಾಸ್ಟ್ಯಾಗ್ ಅಳವಡಿಸಿ, ಟೋಲ್ ಪಾವತಿ ಮಾಡಬೇಕು ಎಂಬರ್ಥದಲ್ಲಿ ಈ ಸುದ್ದಿಯಿದೆ. ಇದರ ಬಗ್ಗೆ ನ್ಯೂಸ್ಚೆಕರ್ ನಡೆಸಿದ ತನಿಖೆಯ ಪ್ರಕಾರ, ಹೆದ್ದಾರಿ ಪ್ರಯಾಣಕ್ಕೆ ಇನ್ನು ಮುಂದೆ ಬೈಕ್ ಸವಾರರಿಗೂ ಟೋಲ್ ಅನ್ವಯವಾಗಲಿದೆ ಎನ್ನುವ ಸುದ್ದಿ ಸುಳ್ಳಾಗಿದೆ. ಈ ಕುರಿತ ವರದಿ ಇಲ್ಲಿದೆ

ತಿರುಪತಿ ದೇಗುಲದ ಹುಂಡಿಯಿಂದ ಹಣ ಕಳವು ಮಾಡಲಾಗಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಘಟನೆ ಬೆಂಗಳೂರಿನ ಗಾಳಿ ಆಂಜನೇಯ ದೇಗುಲದಲ್ಲಿ ನಡೆದಿದ್ದಾಗಿದ್ದು ತಿರುಪತಿಯದ್ದಾಗಿದೆ ಎನ್ನುವುದು ಸುಳ್ಳು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಈರುಳ್ಳಿ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಪಾರ್ಶ್ವವಾಯು, ಮತ್ತು ಕ್ಯಾನ್ಸರ್ ತಡೆಯುತ್ತದೆ ಎಂಬ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯ ಪ್ರಕಾರ ಈರುಳ್ಳಿ ಒಳ್ಳೆಯದು, ಆದರೆ ಅದು ಪವಾಡ ಮಾಡುವುದಕ್ಕೆ ಸಾಧ್ಯವಿಲ್ಲ. ಕೇವಲ ಈರುಳ್ಳಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಅಥವಾ ಪಾರ್ಶ್ವವಾಯು, ಕ್ಯಾನ್ಸರ್ ಬರದಂತೆ ತಡೆಯುತ್ತದೆ ಎಂದು ಹೇಳವುದು ಪೇಲವ ಮಾತು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
Ishwarachandra B G
November 8, 2025
Ishwarachandra B G
November 7, 2025
Ishwarachandra B G
October 29, 2025