Fact Check: ಕಿತ್ತಳೆಯಲ್ಲಿರುವ ವಿಟಮಿನ್ ಸಿ ಕಣ್ಣಿನ ಪೊರೆ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆಯೇ?

ವಿಟಮಿನ್‌ ಸಿ, ಕಿತ್ತಳೆ, ಕಣ್ಣಿನ ಪೊರೆ

Claim
ಕಿತ್ತಳೆಯಲ್ಲಿರುವ ವಿಟಮಿನ್ ಸಿ ಕಣ್ಣಿನ ಪೊರೆ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆ

Fact
ವಿಟಮಿನ್‌ ಸಿ ಇರುವ ಕಿತ್ತಳೆ ಸೇರಿದಂತೆ ಸಮತೋಲಿತ ಆಹಾರ, ಜೀವನಶೈಲಿ ಕಣ್ಣಿನ ಪೊರೆ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆ

ಕಿತ್ತಳೆ ಹಣ್ಣು ತಿನ್ನುವುದರಿಂದ, ಅದರಲ್ಲಿರುವ ವಿಟಮಿನ್‌ ಸಿ ಕಣ್ಣಿನ ಪೊರೆ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಇನ್‌ಸ್ಟಾ ಗ್ರಾಂನಲ್ಲಿರುವ ಈ ಪೋಸ್ಟ್‌ನಲ್ಲಿ “ಕಿತ್ತಳೆಯಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿದೆ. ಇದು ಕಣ್ಣಿನ ಪೊರೆ ಅಭಿವೃದ್ಧಿಯಾಗುವ ಅಪಾಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ.” ಎಂದಿದೆ.

Also Read: ಋತುಚಕ್ರದ ವೇಳೆ ಮಹಿಳೆಯರು ನೆಲ್ಲಿಕಾಯಿ ತಿನ್ನುವುದರಿಂದ ಫಲವತ್ತತೆ ಹೆಚ್ಚಾಗುತ್ತದೆ ಎನ್ನೋದು ಸತ್ಯವೇ?

ಕಿತ್ತಳೆಯಲ್ಲಿರುವ ವಿಟಮಿನ್ ಸಿ ಕಣ್ಣಿನ ಪೊರೆ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆಯೇ?

Fact Check/Verification

ವಿಟಮಿನ್ ಸಿ ಎಂದರೇನು?

ವಿಟಮಿನ್ ಸಿ, ಅಥವಾ ಆಸ್ಕೋರ್ಬಿಕ್ ಆಮ್ಲವು ನೀರಿನಲ್ಲಿ ಕರಗುವ ವಿಟಮಿನ್‌ಗಳ ಗುಣಲಕ್ಷಣಗಳೊಂದಿಗೆ ಆಂಟಿ ಆಕ್ಸಿಂಡೆಟ್ಗಳನ್ನು ಒಳಗೊಂಡಿದೆ. ಇದು ಕಾಲಜನ್ ಸಂಶ್ಲೇಷಣೆ, ರೋಗನಿರೋಧಕದೊಂದಿಗೆ ಮತ್ತು ಕಬ್ಬಿಣಾಂಶ ಹೀರುವಿಕೆಗೆ ಸಹಾಯ ಮಾಡುತ್ತದೆ. ದೇಹವು ಅವುಗಳನ್ನು ಸ್ವಾಭಾವಿಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ ಇದನ್ನು ಆಹಾರಗಳ ಮೂಲಕ ಪಡೆಯಬೇಕು.

ಕಿತ್ತಳೆಯಲ್ಲಿರುವ ವಿಟಮಿನ್‌ ಸಿ ಕಣ್ಣಿನ ಪೊರೆ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಯೇ?

ಈ ಬಗ್ಗೆ ಸಾಕಷ್ಟು ಪುರಾವೆಗಳಿಲ್ಲ. ವಿಟಮಿನ್ ಸಿ ಅತ್ಯಗತ್ಯ ಪೋಷಕಾಂಶವಾಗಿದ್ದು, ಕಣ್ಣುಗಳು ಸೇರಿದಂತೆ ದೇಹದ ವಿವಿಧ ಅಂಗಗಳ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಸಿ ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ ಆದರೆ ಈ ನಿರ್ದಿಷ್ಟ ವಿಚಾರದ ಮೇಲೆ ವೈಜ್ಞಾನಿಕ ಪುರಾವೆಗಳು ನಿರ್ಣಾಯಕವಾಗಿಲ್ಲ.

Also Read: ಮೋದಿ ಸರ್ಕಾರ ಸ್ತನ ಕ್ಯಾನ್ಸರ್ ಔಷಧ ಬೆಲೆಯನ್ನು ₹95 ಸಾವಿರದಿಂದ ₹5 ಸಾವಿರಕ್ಕೆ ಇಳಿಸಿದೆಯೇ?

ಕಣ್ಣಿನ ಪೊರೆಯು ಕಣ್ಣಿನ ಮಸೂರದ ಮೇಲೆ ಮೋಡದ ರೀತಿ ಆದ ಒಂದು ಸ್ಥಿತಿ. ಇದರಿಂದ ದೃಷ್ಟಿ ದುರ್ಬಲವಾಗುತ್ತದೆ. ವಯಸ್ಸು, ಆನುವಂಶಿಕ ಅಂಶ, ಧೂಮಪಾನ, ಅತಿಯಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮತ್ತು ಕೆಲವು ವೈದ್ಯಕೀಯ ಪರಿಸ್ಥಿತಿಗಳು ಸೇರಿದಂತೆ ಹಲವಾರು ಅಂಶಗಳು ಕಣ್ಣಿನ ಪೊರೆಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಆಕ್ಸಿಡೇಟಿವ್ ಒತ್ತಡ, ಹಾನಿಕಾರಕವಲ್ಲದ ಸ್ವತಂತ್ರ ರಾಡಿಕಲ್‌ಗಳು ಮತ್ತು ದೇಹದ ಆಂಟಿಆಕ್ಸಿಡೆಂಟ್ ನಿರೋಧಕ ವ್ಯವಸ್ಥೆಗಳ ನಡುವಿನ  ನಡುವಿನ ಅಸಮತೋಲನದಿಂದಲೂ ಕಣ್ಣಿನ ಪೊರೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.

ವಿಟಮಿನ್ ಸಿ  ಒಂದು ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್‌ ಆಗಿದ್ದು  ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸಿ ಜೀವಕೋಶಗಳನ್ನು ಆಕ್ಸಿಡೇಟಿವ್‌ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಕೆಲವೊಂದು ಅಧ್ಯಯನಗಳು ಹೆಚ್ಚಿನ ವಿಟಮಿನ್ ಸಿ ಸೇವನೆ ಮತ್ತು ಕಣ್ಣಿನ ಪೊರೆಗಳ ಅಪಾಯದ ನಡುವೆ ಸಂಭಾವ್ಯ ಸಂಬಂಧವನ್ನು ಸೂಚಿಸಿವೆ. ಆದಾಗ್ಯೂ, ಇತರ ಅಧ್ಯಯನಗಳು ಮಹತ್ವದ ಸಂಬಂಧ ಬಗ್ಗೆ ಹೇಳಿಲ್ಲ

ಅವಲೋಕನ ಅಧ್ಯಯನಗಳು ಯಾವುದೇ ಕಾರಣವನ್ನು ಹೇಳಲು ಸಾಧ್ಯವಾಗಲಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಆದರೆ ಯಾದೃಚ್ಛಿಕ ನಿಯಂತ್ರಿತ ಪ್ರಯೋಗಗಳಂತಹ ಸಂಶೋಧನೆಯು ವಿಟಮಿನ್ ಸಿ ಪೂರಕ ಅಥವಾ ಹೆಚ್ಚಿನ ಸೇವನೆ ಕಣ್ಣಿನ ಪೊರೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ನಿರ್ಧರಿಸಲು ಅಗತ್ಯವಿದೆ.

ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಸಾಮಾನ್ಯವಾಗಿ ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ ವಿವಿಧ ಪೋಷಕಾಂಶಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ನಿರ್ವಹಿಸುವುದು ಹೆಚ್ಚು  ಉತ್ತಮವಾಗಿದೆ. ಹೆಚ್ಚುವರಿಯಾಗಿ, ನಿಮ್ಮ ಕಣ್ಣಿನ ಆರೋಗ್ಯ ಮತ್ತು ಪೌಷ್ಟಿಕಾಂಶದ ಅಗತ್ಯಗಳಿಗೆ ಸಂಬಂಧಿಸಿದಂತೆ ಸಲಹೆಗಾಗಿ ಆರೋಗ್ಯ ವೃತ್ತಿಪರರೊಂದಿಗೆ ಸಮಾಲೋಚಿಸುವುದು ಮುಖ್ಯವಾಗಿದೆ.

Also Read: ಈರುಳ್ಳಿ ರಸ ಹಾಕುವುದರಿಂದ ಕಿವಿ ನೋವು ಗುಣವಾಗುತ್ತಾ?

Conclusion

ಈ ಸತ್ಯಶೋಧನೆಯ ಪ್ರಕಾರ, ವಿಟಮಿನ್ಕಿ‌ ಸಿ ಇರುವ ಕಿತ್ತಳೆ ತಿನ್ನುವುದರಿಂದ ಮಾತ್ರವೇ ಕಣ್ಣಿನ ಪೊರೆ ಅಪಾಯ ತಗ್ಗಿಸುವುದು ಸಾಧ್ಯವಿಲ್ಲ. ಇದಕ್ಕೆ ಕಿತ್ತಳೆ ಸೇರಿದಂತೆ ಸಮತೋಲಿತ ಆಹಾರ, ಜೀವನಶೈಲಿ ಕಣ್ಣಿನ ಪೊರೆ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ.

Result: Missing Context

Our Sources
Genetic and Dietary Factors Influencing the Progression of Nuclear Cataract – Ophthalmology (aaojournal.org)

Cataract – PubMed (nih.gov)

Oxidative stress in cataracts – PubMed (nih.gov)

(PDF) Vitamin C: An Antioxidant Agent (researchgate.net)

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.