Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಉಕ್ರೇನ್ ಮೇಲೆ ರಷ್ಯಾ ದಾಳಿ
ಉಕ್ರೇನ್ ಮೇಲೆ ರಷ್ಯಾ ದಾಳಿ ಎಂದು ಹಂಚಿಕೊಂಡ ವೀಡಿಯೋಗಳು ಯುಎಇ ಶಾರ್ಜಾದ ಅಲ್ ಹಮ್ರಿಯಾ ಬಂದರಿನ ಇಂದನ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅನಾಹುತದ ವೀಡಿಯೋ
ಉಕ್ರೇನ್-ರಷ್ಯಾ ಕದನ ತೀವ್ರಗೊಂಡಿರುವಂತೆಯೇ, ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
0.48 ಸೆಕೆಂಡ್ ಗಳ ಈ ವೀಡಿಯೋ ಭಾರೀ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿರುವುದನ್ನು ಕಾಣಬಹುದು.


ಫೇಸ್ಬುಕ್ ನ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು, ಇದು ಯುಎಇಯ ಅಲ್ ಹಮಾರಿಯಾ ಬಂದರಿನಲ್ಲಿ ಸಂಭವಿಸಿದ ಅಗ್ನಿ ಅನಾಹುತದ ದೃಶ್ಯಗಳು ಎಂದು ಕಂಡುಕೊಂಡಿದೆ.
Also Read: ರೈಲಿನಲ್ಲಿ ಶ್ರೀರಾಮನ ಫೋಟೋ ನಿಜವಾದದ್ದೇ?
ಸತ್ಯಶೋಧನೆಗಾಗಿ ನ್ಯೂಸ್ ಚೆಕರ್ ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದೆ.
ಮೇ 31, 2025ರ ಫಾಕಸ್ ನ್ಯೂಸ್ ಟುಡೇ ಫೇಸ್ ಬುಕ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ, ವೈರಲ್ ವೀಡಿಯೋ ಕೀಫ್ರೇಮ್ ಗಳನ್ನು ಹೋಲುವ ಫೋಟೋ ಕಾಣಿಸುತ್ತದೆ. ಇದರೊಂದಿಗಿನ ವಿವರಣೆಯಲ್ಲಿ, “ಎಮಿರೇಟ್ಸ್: ಅಲ್-ಹಮ್ರಿಯಾ ಬಂದರಿನಲ್ಲಿ ಸುಡುವ ವಸ್ತುಗಳಲ್ಲಿ ಭಾರಿ ಬೆಂಕಿ ಅವಘಡ, ಅದನ್ನು ನಿಯಂತ್ರಿಸಲು ತ್ವರಿತ ಪ್ರಯತ್ನಗಳು ನಡೆದಿವೆ. ಇಂದು ಬೆಳಿಗ್ಗೆ, ನಾಗರಿಕ ರಕ್ಷಣಾ ಮತ್ತು ಸಂಬಂಧಿತ ಸಂಸ್ಥೆಗಳು ಬೆಂಕಿಯನ್ನು ನಿಯಂತ್ರಿಸಲು ವ್ಯಾಪಕ ಪ್ರಯತ್ನಗಳ ನಡುವೆಯೂ, ಎಮಿರೇಟ್ಸ್ ಅಲ್-ಹಮ್ರಿಯಾ ಬಂದರಿನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ…..” ಎಂದಿದೆ.

ಈ ಪೋಸ್ಟ್ ನ ಮಾಹಿತಿ ಪ್ರಕಾರ, ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಆಗ ಮಾಧ್ಯಮ ವರದಿಗಳು ಲಭ್ಯವಾಗಿವೆ. ಮೇ 31, 2025ರ ದಿ ಪೆನಿಸುಲಾಖತಾರ್ ವರದಿಯ ಪ್ರಕಾರ, “ಶಾರ್ಜಾದ ಅಲ್ ಹಮ್ರಿಯಾ ಬಂದರಿನಲ್ಲಿ ಇಂದು ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಡುವ ವಸ್ತುಗಳು ಸುಟ್ಟುಹೋಗಿವೆ ಮತ್ತು ಯುಎಇ ನಾಗರಿಕ ರಕ್ಷಣಾ, ಶಾರ್ಜಾ ಪೊಲೀಸರು ಮತ್ತು ರಾಷ್ಟ್ರೀಯ ಗಾರ್ಡ್ನಿಂದ ವ್ಯಾಪಕ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಶಾರ್ಜಾ ಪೊಲೀಸರು ಮತ್ತು ರಾಷ್ಟ್ರೀಯ ಗಾರ್ಡ್ಗಳ ಸಮನ್ವಯದೊಂದಿಗೆ ನಾಗರಿಕ ರಕ್ಷಣಾ ತಂಡಗಳು ಘಟನೆಗೆ ತ್ವರಿತವಾಗಿ ಪ್ರತಿಕ್ರಿಯಿಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ, ಅದರ ಹರಡುವಿಕೆಯನ್ನು ತಡೆಗಟ್ಟಿವೆ ಮತ್ತು ಹೆಚ್ಚಿನ ಅಪಾಯಗಳನ್ನು ಕಡಿಮೆ ಮಾಡಿವೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಕಿಯ ಕಾರಣವನ್ನು ನಿರ್ಧರಿಸಲು ಪ್ರಾಥಮಿಕ ತನಿಖೆಗಳು ನಡೆಯುತ್ತಿವೆ. ಬೆಂಕಿಯಿಂದ ಉಂಟಾದ ವಸ್ತು ನಷ್ಟ ಅಥವಾ ಮಾನವ ಸಾವುನೋವುಗಳ ಪ್ರಮಾಣದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆಗಳು ಬಂದಿಲ್ಲ.” ಎಂದಿದೆ.
ಇದೇ ವರದಿಯೊಂದಿಗಿರುವ ಪೆನಿಸುಲಾಖತಾರ್ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ವೀಡಿಯೋ ಕೂಡ ಇದ್ದು ಇದು ವೈರಲ್ ವೀಡಿಯೋವನ್ನು ಹೋಲುತ್ತದೆ.

ಜೂನ್ 1, 2025ರ ದಿ ನ್ಯಾಷನಲ್ ವರದಿಯ ಪ್ರಕಾರ, ಶಾರ್ಜಾದ ಅಲ್ ಹಮ್ರಿಯಾ ಇಂಧನ ಡಿಪೋದಲ್ಲಿ ಹತ್ತಿಕೊಂಡ ಬೆಂಕಿಯನ್ನು 24 ತಾಸಿನ ಕಾರ್ಯಾಚರಣೆ ಬಳಿಕ ತಹಬಂದಿಗೆ ತರಲಾಗಿದೆ. ಹೆಲಿಕಾಪ್ಟರ್ ಮತ್ತು ಇತರ ಅಗ್ನಿಶಾಮಕ ವ್ಯವಸ್ಥೆ ಬಳಸಲಾಗಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಮತ್ತು ಜೀವಹಾನಿಯಾಗಿಲ್ಲ ಎಂದಿದೆ. ಈ ವರದಿಯೊಂದಿಗೆ ನೀಡಲಾದ ವೀಡಿಯೋದಲ್ಲಿಯೂ ವೈರಲ್ ವೀಡಿಯೋವನ್ನು ಹೋಲುವ ದೃಶ್ಯಾವಳಿಗಳನ್ನು ನಾವು ನೋಡಿದ್ದೇವೆ.

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ಸತ್ಯಶೋಧನೆ ಪ್ರಕಾರ, ಉಕ್ರೇನ್ ಮೇಲೆ ರಷ್ಯಾ ದಾಳಿ ಎಂದು ಹಂಚಿಕೊಂಡ ವೀಡಿಯೋಗಳು ಯುಎಇ ಶಾರ್ಜಾದ ಅಲ್ ಹಮ್ರಿಯಾ ಬಂದರಿನ ಇಂದನ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅನಾಹುತದ ವೀಡಿಯೋ ಆಗಿದೆ ಎಂದು ತಿಳಿದುಬಂದಿದೆ.
Our Sources
Facebook post By Faqus News Today, Dated: May 31, 2025
Report By thepeninsulaqatar, Dated: May 31, 2025
Report By The Nationa, Dated: June 1, 2025