Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸಿಎಸ್ ಕೆ (ಚೆನ್ನೈ ಸೂಪರ್ ಕಿಂಗ್ಸ್ ) ಅಭಿಮಾನಿಯೊಬ್ಬರು ಪದ್ಯಾಂಟದ ವೇಳೆ ಮೊಘಲ್ ದೊರೆ ಔರಂಗಜೇಬನನ್ನು ನಿಂದಿಸುವ ಫಲಕ ಹಿಡಿದಿದ್ದರು ಎಂದು ಫೋಟೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ತಿರುಚಿದ ಚಿತ್ರ ಎಂದು ಕಂಡುಕೊಂಡಿದ್ದೇವೆ.
Also Read: ಬೀದರ್ ನಲ್ಲಿ ಗಾಂಜಾ ಮಾರಾಟವನ್ನು ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ, ಸುಳ್ಳು ಹೇಳಿಕೆ ವೈರಲ್!
ಸತ್ಯಶೋಧನೆಗಾಗಿ ನಾವು ಗೂಗಲ್ ಲೆನ್ಸ್ ಬಳಸಿ ಚಿತ್ರವನ್ನು ರಿವರ್ಸ್ ಸರ್ಚ್ ಮಾಡಿದೆವು.
ಈ ಹುಡುಕಾಟದಲ್ಲಿ ವೈರಲ್ ಆಗಿರುವ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಚಿತ್ರದಲ್ಲಿರುವ ವ್ಯಕ್ತಿ ಚಲನಚಿತ್ರ ನಿರ್ದೇಶಕ ರತ್ನ ಕುಮಾರ್ ಎಂದು ತಿಳಿದುಬಂದಿದೆ.
ರತ್ನಕುಮಾರ್ ತಮ್ಮ ಎಕ್ಸ್ ಪುಟದಲ್ಲಿ ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯವನ್ನು ಕ್ರೀಡಾಂಗಣದಿಂದ ವೀಕ್ಷಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು . ಆ ಚಿತ್ರದಲ್ಲಿ , ಅವರು “ದಿ ಮ್ಯಾನ್, ದಿ ಮಿಥ್, ದಿ ಮಹಿ” ಎಂದು ಬರೆದ ಫಲಕ ಹಿಡಿದಿದ್ದರು.

ವೈರಲ್ ಚಿತ್ರ ಸೃಷ್ಟಿಸಲು ಮೂಲ ಚಿತ್ರವನ್ನು ತಿರುಚಿರುವುದನ್ನು ನಾವು ನೋಡಿದ್ದೇವೆ. ಈ ಕೆಳಗೆ ಮೂಲ ಚಿತ್ರ ಮತ್ತು ವೈರಲ್ ಚಿತ್ರವನ್ನು ಹೋಲಿಸಲಾಗಿದೆ.


ಇನ್ನಷ್ಟು ಹುಡುಕಿದಾಗ, ಎಕ್ಸ್ ಪೋಸ್ಟ್ ನಲ್ಲಿ ರತ್ನಕುಮಾರ್ ಅವರ ವೈರಲ್ ಚಿತ್ರವನ್ನು ಮಾರ್ಫ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸುವ ಪೋಸ್ಟ್ ನಮಗೆ ಲಭ್ಯವಾಗಿದೆ.

ನ್ಯೂಸ್‌ಚೆಕರ್ ರತ್ನಕುಮಾರ್ ಅವರನ್ನು ಸಂಪರ್ಕಿಸಿದಾಗ, ಅವರು ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಫಲಕ ಹಿಡಿದು ಕ್ರೀಡಾಂಗಣದಲ್ಲಿ ನಿಂತಿದ್ದ ನಿಜವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ವೈರಲ್ ಆಗಿರುವ ಚಿತ್ರವನ್ನು ತಿದ್ದಲಾಗಿದೆ ಎಂದು ದೃಢಪಡಿಸಿದ್ದಾರೆ.
ಈ ಸಾಕ್ಷ್ಯಗಳ ಪ್ರಕಾರ ಔರಂಗಜೇಬನನ್ನು ನಿಂದಿಸುವ ಫಲಕ ಹಿಡಿದಿರುವುದು ನಿಜವಲ್ಲ, ಅದು ತಿರುಚಲಾದ ಚಿತ್ರ ಎಂದು ಕಂಡುಬಂದಿದೆ.
Also Read: ಮುಸ್ಲಿಂ ವ್ಯಕ್ತಿಯೊಬ್ಬ ಸ್ವಂತ ಮಗಳನ್ನು ಮದುವೆಯಾಗಿ ಗರ್ಭಿಣಿಯಾಗುವಂತೆ ಮಾಡಿದ್ದಾನೆಯೇ?
Our Sources
X post by Rathna Kumar, Film Director, Dated: March 23, 2025
X post by Rathna Kumar, Film Director, Dated: March 24, 2025
Conversation with Rathna Kumar
(With Reporting Inputs from Vasudha, Newschecker)
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)