ಬೀದರ್ ನಲ್ಲಿ ಗಾಂಜಾ ಮಾರಾಟವನ್ನು ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಬೀದರನಲ್ಲಿಗಾಂಜಾ ಮಾರುವುದನ್ನು ಪ್ರಶ್ಮಿಸಿದಕ್ಕೆ ಹಿಂದೂಗಳ ಮನೆಗಳ ಮೇಲೆ ದಾಳಿ ಮಾಡಿದ ಜಿಹಾದಿಗಳು. ರಾಜ್ಯದಲ್ಲಿ ಪೋಲಿಸ್ ಇಲಾಖೆ ಇದೆಯೇ ಅಥವಾ…?” ಎಂದಿದೆ.
ಇದೇ ರೀತಿಯ ಪೋಸ್ಟ್ ನ್ನು ಎಕ್ಸ್ ನಲ್ಲೂ ನಾವು ಕಂಡಿದ್ದೇವೆ. ಅದನ್ನು ಇಲ್ಲಿ ನೋಡಬಹುದು.


ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ.
Also Read: ಮುಸ್ಲಿಂ ವ್ಯಕ್ತಿಯೊಬ್ಬ ಸ್ವಂತ ಮಗಳನ್ನು ಮದುವೆಯಾಗಿ ಗರ್ಭಿಣಿಯಾಗುವಂತೆ ಮಾಡಿದ್ದಾನೆಯೇ?
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ಮಾರ್ಚ್ 24, 2025ರ ವಾರ್ತಾಭಾರತಿ ವರದಿ ಲಭ್ಯವಾಗಿದೆ. ಅದರಲ್ಲಿ, “ಗಾಂಜಾ ಮಾರುವುದನ್ನು ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ ಮಾಡಿದ ಜಿಹಾದಿಗಳು” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟವರ ವಿರುದ್ಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…” ಎಂದಿದೆ. ಇದೇ ವರದಿಯಲ್ಲಿ ”ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು, ಮಹಿಳೆಯರ ಮಧ್ಯೆ ವಾಹನ ಪಾರ್ಕಿಂಗ್ ಸಂಬಂಧ ವೈಯಕ್ತಿಕ ಜಗಳ ನಡೆದಿತ್ತು. ಆದರೆ ಇದನ್ನು ಕೆಲವರು ಕೋಮು ಸೌಹಾರ್ಧಕ್ಕೆ ಧಕ್ಕೆ ತರುವಂತೆ ಸುಳ್ಳು ಸುದ್ದಿಯನ್ನು ಹರಿಬಿಡುತ್ತಿದ್ದು, ಸಾರ್ವಜನಿಕರು ಗಮನ ಕೊಡಬಾರದು ಎಂದು ಕೋರಿದ್ದಾರೆ.” ಎಂದಿದೆ.

ಆ ಬಳಿಕ ನಾವು ಬೀದರ್ ಪೊಲೀಸ್ ವರಿಷ್ಠಾಧಿಕಾರಿಯವರ ಪೋಸ್ಟ್ ಅನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ಗಮನಿಸಿದ್ದೇವೆ.
ಮಾರ್ಚ್ 24, 2025ರಂದು ಎಕ್ಸ್ ನಲ್ಲಿ ಎಸ್ಪಿ ಬೀದರ್ ಖಾತೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಟ್ವೀಟ್ ಮಾಡಿದ್ದಾರೆ. “ಬೀದರ ಜಿಲ್ಲಾ ಪೊಲೀಸ್ ರಿಂದ ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌವರ್ಧಕ್ಕೆ ಧಕ್ಕೆ ತರುವಂತೆ ಸುಳ್ಳು ಸುದ್ದಿಯನ್ನು ಹರಿಬಿಡುವವರಿಗೆ ಎಚ್ಚರಿಕೆಯ ಸಂದೇಶ” ಎಂದಿದೆ. ಈ ಪ್ರಕರಣದ ಕುರಿತ ವಿವರವೂ ಇದರಲ್ಲಿದ್ದು, ಬೀದರಿನ ಗಾಂಧಿಗಂಜ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ಮಧ್ಯೆ ವಾಹನ ಪಾರ್ಕಿಂಗ್ ವಿಚಾರದಲ್ಲಿ ವೈಯಕ್ತಿಕ ಜಗಳವಾಗಿದೆ. ಆದರೆ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತೆ ಸುಳ್ಳು ಸುದ್ದಿ ಹರಿಯಬಿಡಲಾಗುತ್ತಿದ್ದು, ಜನರು ಗಮನ ಕೊಡಬಾರದ” ಎಂದು ಮನವಿ ಮಾಡಲಾಗಿದೆ.
ಇದೇ ರೀತಿಯ ಪೋಸ್ಟ್ ಅನ್ನು ಎಸ್‌ಪಿ ಬೀದರ್ ಅವರ ಫೇಸ್ ಬುಕ್ ಖಾತೆಯಿಂದಲೂ ಪ್ರಕಟಿಸಲಾಗಿದೆ. ಅದನ್ನು ಇಲ್ಲಿ ನೋಡಬಹುದು.

ಪ್ರಕರಣ ಕುರಿತಂತೆ ಬೀದರ್ ನ ಗಾಂಧಿ ಗಂಜ್ ಪೊಲೀಸ್ ಠಾಣೆಯ ಅಧಿಕಾರಿಯವರನ್ನು ನ್ಯೂಸ್ ಚೆಕರ್ ಸಂಪರ್ಕಿಸಿದಾಗ, ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆಯ ವೀಡಿಯೋವನ್ನು ಸುಳ್ಳು ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಹೇಳಿದ್ದಾರೆ.
Conclusion
ಈ ಸಾಕ್ಷ್ಯಗಳ ಪ್ರಕಾರ, ಬೀದರ್ ನಲ್ಲಿ ಗಾಂಜಾ ಮಾರಾಟವನ್ನು ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ ಎನ್ನವುದು ತಪ್ಪಾಗಿದ್ದು, ಅಪಘಾತ ಪ್ರಕರಣವೊಂದರ ಕುರಿತ ವೀಡಿಯೋವನ್ನು ಕೋಮು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
Also Read: ಪೋಲಂಡ್ ಪ್ರವೇಶಿಸುತ್ತಿದ್ದ ಜಿಹಾದಿಗಳಿಗೆ ಗುಂಡಿಕ್ಕಿ ಕೊಲ್ಲಲಾಗಿದೆ ಎಂದ ಈ ವೀಡಿಯೋ ಹಿಂದಿನ ಸತ್ಯವೇನು?
Our Sources
Report By Vartabharathi, Dated: March 24, 2025
X post By SP Bidar, Dated: March 24, 2025
Conversation with SI, Gandhi Ganj police station Bidar