ಮುಸ್ಲಿಂ ವ್ಯಕ್ತಿಯೊಬ್ಬ ಸ್ವಂತ ಮಗಳನ್ನೇ ಮದುವೆಯಾಗಿ ಗರ್ಭಿಣಿಯಾಗಿಸಿದ್ದಾನೆ ಎಂಬಂತೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ನನ್ನ ಮಗಳನ್ನು ಬೇರೆ ಮನೆಗೆ ಕಳುಹಿಸಲು ನನಗೆ ಇಷ್ಟವಿರಲಿಲ್ಲ, ಆದ್ದರಿಂದ ನಾನೇ ಮದುವೆಯಾದೆ. ಈಗ ನನ್ನ ಮಗಳು(ರು) 2 ತಿಂಗಳ ಗರ್ಭಿಣಿ.” ಎಂದಿದೆ. ಇದೇ ರೀತಿಯ ಪೋಸ್ಟ್ ಇಲ್ಲಿದೆ


ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಮಾಹಿತಿಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು, ನಾವು ತನಿಖೆ ನಡೆಸಿದ್ದೇವೆ.
Also Read: ಪೋಲಂಡ್ ಪ್ರವೇಶಿಸುತ್ತಿದ್ದ ಜಿಹಾದಿಗಳಿಗೆ ಗುಂಡಿಕ್ಕಿ ಕೊಲ್ಲಲಾಗಿದೆ ಎಂದ ಈ ವೀಡಿಯೋ ಹಿಂದಿನ ಸತ್ಯವೇನು?
Fact Check/Verification
ವೈರಲ್ ಆದ ವೀಡಿಯೋದ ಕೀಫ್ರೇಂಗಳನ್ನು ನಾವು ತೆಗೆದಿದ್ದು, ಅದನ್ನು ರಿವರ್ಸ್ ಜಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಅದೇ ವೀಡಿಯೋ ರಾಜ್ ಠಾಕೂರ್ ಎಂಬ ವ್ಯಕ್ತಿಯ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕಂಡುಬಂದಿದೆ.

ಇದು “ಫೇಸ್‌ಬುಕ್‌ನಲ್ಲಿ ಪೂರ್ಣ ವೀಡಿಯೊ:- ರಾಜ್ ಠಾಕೂರ್. ಈ ವೀಡಿಯೋ ಸಂಪೂರ್ಣವಾಗಿ ಸ್ಕ್ರಿಪ್ಟ್ ಮಾಡಲ್ಪಟ್ಟಿದೆ, ನಿಜವಲ್ಲ” ಎಂಬ ಪದಗಳನ್ನು ಸಹ ಒಳಗೊಂಡಿತ್ತು. ತರುವಾಯ, ಇದನ್ನು ಚಿತ್ರಿಸುವ ವಿವಿಧ ವೀಡಿಯೊಗಳನ್ನು ಅವರ ಸಾಮಾಜಿಕ ಮಾಧ್ಯಮ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಇದಲ್ಲದೆ, ಈ ವೀಡಿಯೊಗಳು ಅವರ ಯೂಟ್ಯೂಬ್ ಪುಟದಲ್ಲಿಯೂ ಕಂಡುಬಂದಿದೆ.
ಅವರ ಸಾಮಾಜಿಕ ಮಾಧ್ಯಮ ಪುಟದಲ್ಲಿ ಅವರು ಯೂಟ್ಯೂಬರ್ ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ, ವಿಡಿಯೋ ನಿಜವಾದ್ದಲ್ಲ ಎಂದು ದೃಢಪಟ್ಟಿದೆ.
ಇದರೊಂದಿಗೆ ವೀಡಿಯೋ ಮಾಡಿರುವ ರಾಜ್ ಠಾಕೂರ್ ಅವರನ್ನು ಸಂಪರ್ಕಿಸಲು ನ್ಯೂಸ್ ಚೆಕರ್ ಪ್ರಯತ್ನಿಸಿದೆ. ಆದರೆ ಅವರ ಸಂಪರ್ಕ ಸಾಧ್ಯವಾಗಿಲ್ಲ. ಈ ಕುರಿತು ಅವರ ಪ್ರತಿಕ್ರಿಯೆ ಬಂದ ಬಳಿಕ ಈ ಲೇಖನವನ್ನು ನವೀಕರಿಸಲಾಗುವುದು.
Conclusion
ಸಾಕ್ಷ್ಯಗಳ ಪ್ರಕಾರ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಮಗಳನ್ನು ಮದುವೆಯಾಗಿ ಗರ್ಭಿಣಿಯಾಗುವಂತೆ ಮಾಡಿದ್ದಾರೆ ಎಂದು ಪ್ರಸಾರವಾಗುತ್ತಿರುವ ವೀಡಿಯೋ ನಿಜವಾದ್ದಲ್ಲ, ಅದು ಸ್ಕ್ರಿಪ್ಟೆಡ್ ವೀಡಿಯೋ ಎಂದು ಗೊತ್ತಾಗಿದೆ.
Also Read: ಬುರ್ಖಾ ಮತ್ತು ಹಿಜಾಬ್ ನಲ್ಲಿ ಇಂದಿರಾ ಗಾಂಧಿ ಎಂದು ಕ್ರಾಪ್ ಮಾಡಲಾದ ಫೋಟೋ ಹಂಚಿಕೆ
Our Sources
Instagram Post From, Raj Thakur, Dated: March 06, 2025
YouTube Video From, @RajThakurrrrOfficial, Dated: March 05, 2025
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)