Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಮೊದಲ ಕರ್ತವ್ಯದಲ್ಲಿ ಕಿರಣ್ ಶೇಖಾವತ್ ಹುತಾತ್ಮರಾಗಿದ್ದಾರೆ
ಪಾಕಿಸ್ತಾನದ ವಿರುದ್ಧದ ಯುದ್ಧದ ಸಂದರ್ಭದಲ್ಲಿ, ಮೊದಲ ಕರ್ತವ್ಯದಲ್ಲಿ ಕಿರಣ್ ಶೇಖಾವತ್ ಹುತಾತ್ಮರಾಗಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಸುಳ್ಳು
ಭಾರತ-ಪಾಕಿಸ್ತಾನದ ಮಧ್ಯೆ ಯುದ್ಧ ಸದೃಶ ವಾತಾವರಣ ಸೃಷ್ಟಿಯಾದ ಬೆನ್ನಲ್ಲೇ ಮೊದಲ ಕರ್ತವ್ಯದಲ್ಲಿ ಕಿರಣ್ ಶೇಖಾವತ್ ಹುತಾತ್ಮರಾಗಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಾದ್ದಲ್ಲ ಎಂದು ಕಂಡುಕೊಂಡಿದೆ.
Also Read: ಭಾರತ ದಾಳಿಯಲ್ಲಿ ಪಾಕಿಸ್ತಾನದ ನೂರ್ ಖಾನ್ ವಿಮಾನ ನಿಲ್ದಾಣ ಧ್ವಂಸ ಎಂದು ಸುಡಾನ್ ವೀಡಿಯೋ ವೈರಲ್
ವೈರಲ್ ವೀಡಿಯೋ ವನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದ ವೇಳೆ, ಇದರಲ್ಲಿ ಕ್ಯಾಮೆರಾದ ಭಾಗಶಃ ಚಿತ್ರವೊಂದು ನಮಗೆ ಕಂಡುಬಂದಿದೆ. ಇದು ಅನುಮಾನಕ್ಕೆ ಕಾರಣವಾಗಿದ್ದು, ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.

ಈ ಹುಡುಕಾಟದ ವೇಳೆ ವೈರಲ್ ವೀಡಿಯೋ ಹೋಲುವ ವೀಡಿಯೊವನ್ನು ಫೆಬ್ರವರಿ 27, 2025 ರಂದು “ವಿಟ್ಸಿಕ್” ನ ಟಿಕ್ಟಾಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಕಂಡುಬಂದಿದೆ .

ಆ ಪೋಸ್ಟ್ನಲ್ಲಿ ಉಕ್ರೇನಿಯನ್ ಭಾಷೆಯಲ್ಲಿ “ಸಹೋದರರು” ಮತ್ತು “ಶೂಟಿಂಗ್” ಎಂಬ ಹ್ಯಾಶ್ಟ್ಯಾಗ್ಗಳನ್ನು ಬಳಸಲಾಗಿದೆ.
ಇದರ ಆಧಾರದ ಮೇಲೆ, ಮತ್ತಷ್ಟು ಹುಡುಕಾಟ ನಡೆಸಿದಾಗ ಫೆಬ್ರವರಿ 24, 2025 ರಂದು ವಿಟ್ಸಿಕ್ ಅವರ ಯೂಟ್ಯೂಬ್ ಪುಟದಲ್ಲಿ ಬ್ರದರ್ಸ್ ಎಂಬ ಶೀರ್ಷಿಕೆಯ ಸಂಗೀತ ವೀಡಿಯೋ ಒಂದು ಪೋಸ್ಟ್ ಮಾಡಲಾಗಿರುವುದನ್ನು ಕಂಡಿದ್ದೇವೆ. ಈ ವೀಡಿಯೋ ವೈರಲ್ ವೀಡಿಯೋದ ಒಂದು ದೃಶ್ಯ ಹೊಂದಿರುವುದು ಕಂಡುಬಂದಿದೆ.

ಈ ವೀಡಿಯೊವನ್ನು ಉಕ್ರೇನಿಯನ್ ಭಾಷೆಯಲ್ಲಿ ಮಾಡಲಾಗಿದೆ. ವೀಡಿಯೊದ ವಿವರಣೆಯಲ್ಲಿ ಇದನ್ನು ಉಕ್ರೇನಿಯನ್ ಸೈನಿಕರ ಭಾಗವಹಿಸುವಿಕೆಯೊಂದಿಗೆ ರಚಿಸಲಾಗಿದೆ ಎಂದು ಹೇಳಲಾಗಿದೆ. ವೀಡಿಯೋದಲ್ಲಿ ಕಾಣುವ ಮಹಿಳೆಯ ಹೆಸರು ಮರಿಯಾನಾ ಸೆಸೆಲ್ವ್ ಎಂದು ಅದು ಹೇಳಿದೆ.

ಹೆಚ್ಚಿನ ಹುಡುಕಾಟದಲ್ಲಿ ಮರಿಯಾನಾ ಸೆಸೆಲು ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ರೆಕಾರ್ಡಿಂಗ್ನ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ ಮತ್ತು ಅದನ್ನು ಬ್ರದರ್ಸ್ ಸೆಟ್ನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ .
ಇದರ ನಂತರ, ಕಿರಣ್ ಶೇಖಾವತ್ ಇತ್ತೀಚಿನ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಮೃತಪಟ್ಟಿದ್ದಾರೆಯೇ ಎಂದು ನೋಡಲು ನಾವು ಹುಡುಕಿದೆವು. ಈ ಹುಡುಕಾಟದಲ್ಲಿ, ಇತ್ತೀಚಿನ ಯುದ್ಧದಲ್ಲಿ ಈ ಹೆಸರಿನ ಯಾರೂ ಸಾವನ್ನಪ್ಪಿದ ಬಗ್ಗೆ ನಮಗೆ ಯಾವುದೇ ಸುದ್ದಿ ಸಿಕ್ಕಿಲ್ಲ.
ಆದರೆ 2015 ರಲ್ಲಿ, ನೌಕಾಪಡೆಯ ಲೆಫ್ಟಿನೆಂಟ್ ಕಿರಣ್ ಶೇಖಾವತ್ ಡಾರ್ನಿಯರ್ ವಿಮಾನ ಅಪಘಾತದಲ್ಲಿ ನಿಧನರಾದರು. ಮಾರ್ಚ್ 26, 2015 ರಂದು NDTV ಅವರು ಕರ್ತವ್ಯದ ವೇಳೆ ಮಡಿದ ಮೊದಲ ಮಹಿಳಾ ಸೈನಿಕರು ಎಂದು ವರದಿ ಮಾಡಿತ್ತು. ಇವರು 2010ರಲ್ಲಿ ನೌಕಾಪಡೆಗೆ ಸೇರಿದ್ದರು.

ಆ ಸಮಯದಲ್ಲಿ ಇತರ ಕೆಲವು ಮಾಧ್ಯಮಗಳು ಸಹ ಈ ಘಟನೆಯ ಬಗ್ಗೆ ಸುದ್ದಿಗಳನ್ನು ಪ್ರಕಟಿಸಿದ್ದನ್ನು ಕಾಣಬಹುದು. ಆ ಲೇಖನಗಳನ್ನು ನೀವು ಇಲ್ಲಿ , ಇಲ್ಲಿ ಮತ್ತು ಇಲ್ಲಿ ಕಾಣಬಹುದು .
ಲಭ್ಯವಿರುವ ಪುರಾವೆಗಳಿಂದ ಸ್ಪಷ್ಟವಾಗುವುದೇನೆಂದರೆ, ಕಿರಣ್ ಶೇಖಾವತ್ ಎಂಬ ನೌಕಾಪಡೆ ಮಹಿಳಾ ಅಧಿಕಾರಿ ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಸತ್ತಿಲ್ಲ ಅವರು 2015 ರಲ್ಲಿ ನಿಧನರಾದರು. ಅದೇ ರೀತಿ, ಕಿರಣ್ ಶೇಖಾವತ್ ನಿಧನರಾಗಿದ್ದಾರೆ ಎಂದು ಹೇಳಿಕೊಂಡು ಪ್ರಸಾರವಾಗುತ್ತಿರುವ ವೀಡಿಯೋ ಕೂಡ ನಿಜವಲ್ಲ ಅದು ಒಂದು ಮ್ಯೂಸಿಕ್ ವೀಡಿಯೋ. ವೀಡಿಯೋದಲ್ಲಿ ಕಾಣುವ ಮಹಿಳೆಯ ಹೆಸರು ಮರಿಯಾನಾ ಸೆಸೆಲ್ವ್ ಎಂಬವರಾಗಿದ್ದಾರೆ.
ಪಾಕಿಸ್ತಾನದ ವಿರುದ್ಧದ ಯುದ್ಧದ ಸಂದರ್ಭದಲ್ಲಿ, ಮೊದಲ ಕರ್ತವ್ಯದಲ್ಲಿ ಕಿರಣ್ ಶೇಖಾವತ್ ಹುತಾತ್ಮರಾಗಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಸುಳ್ಳು ಎಂದು ಕಂಡುಬಂದಿದೆ.
Also Read: ಪಾಕಿಸ್ತಾನದ ವಿವಿಧೆಡೆಗಳಲ್ಲಿ ಭಾರತ ದಾಳಿ ಎಂದು ಲೆಬನಾನ್ ವೀಡಿಯೋ ವೈರಲ್
Our Sources
TikTok post from Vitsik, Dated: February 27, 2025
YouTube Video from Vitsik, Dated: February 24, 2025
Instagram post from Mariana Checheliuk, Dated: March 2, 2025
Report by NDTV, Dated: March 26, 2015
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Vasudha Beri
November 20, 2025
Vasudha Beri
October 15, 2025
Vasudha Beri
October 9, 2025