Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಸಂಚಿನಲ್ಲಿ ತಮಿಳುನಾಡಿನ ಸಂಸದ ಸಸಿಕಾಂತ್ ಸೆಂಥಿಲ್ ಅವರಿದ್ದಾರೆ ಎಂಬ ಆರೋಪಗಳ ಮಧ್ಯೆಯೇ, ಅವರು ಯೂಟ್ಯೂಬರ್ ಸಮೀರ್ ಅವರೊಂದಿಗೆ ಇದ್ದರು ಎಂಬಂತೆ ಫೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಪ್ ನಲ್ಲಿ ಕಂಡುಬಂದ ಫೊಟೋ ಜೊತೆಗೆ “ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಚಿಕ್ಕನೇರಳೆ ಮತ್ತು ತಮಿಳುನಾಡಿನ ಕಾಂಗ್ರೆಸ್ ಸಂಸದ ಶಶಿಕುಮಾರ್ ಸೆಂಥಿಲ್ ಜೊತೆಯಲ್ಲಿ ಧರ್ಮಸ್ಥಳದ ರೂವಾರಿ ಸಮೀರ್?” ಎಂಬ ಹೇಳಿಕೆಯಿದೆ.

ಈ ಫೋಟೋ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಫೋಟೋದಲ್ಲಿ ಸಸಿಕಾಂತ್ ಸೆಂಥಿಲ್ ಅವರು ಇಲ್ಲ ಎಂಬುದನ್ನು ಗುರುತಿಸಿದ್ದೇವೆ.
Claim: ಬಿಹಾರದ ಕಾಂಗ್ರೆಸ್ ಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಡೆಗಣಿಸಲಾಗಿದೆಯೇ?
ಸತ್ಯಶೋಧನೆಗಾಗಿ ನಾವು ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಪತ್ರಕರ್ತ ನವೀನ್ ಸೂರಿಂಜೆ ಅವರು ಹಾಕಿರುವ ಫೇಸ್ಬುಕ್ ಪೋಸ್ಟ್ ಲಭ್ಯವಾಗಿದೆ.
ಈ ಪೋಸ್ಟ್ ನಲ್ಲಿ ಬಳಕೆದಾರರು, “ಎಂ ಡಿ ಸಮೀರ್ ಗೆ ನಿರೀಕ್ಷಣಾ ಜಾಮೀನು ಮಂಜೂರು. ಬಂಧನ ಇಲ್ಲ” ಎಂದು ಬರೆದುಕೊಂಡಿದ್ದಾರೆ. ಹೇಳಿಕೆಯೊಂದಿಗೆ ಲಗತ್ತಿಸಲಾದ ಫೋಟೋ ವೈರಲ್ ಫೋಟೋದಲ್ಲಿ ಇನ್ನೊಂದು ಆಂಗಲ್ ನಲ್ಲಿದೆ ಎಂಬುದನ್ನು ನಾವು ಗುರುತಿಸಿದ್ದೇವೆ.

ಇನ್ನು ಈ ಫೋಟೋ ಬಗ್ಗೆ ಪರಿಶೀಲನೆ ನಡೆಸಿದಾಗ, ಫೋಟೋದಲ್ಲಿರುವ ಇತರ ವ್ಯಕ್ತಿಗಳಲ್ಲಿ ಒಬ್ಬರು ರಾಜ್ಯ ಕಾಂಗ್ರೆಸ್ ವಕ್ತಾರೆ ನಜ್ಮಾ ನಜೀರ್ ಚಿಕ್ಕನೇರಳೆ ಮತ್ತು ಯೂಟ್ಯೂಬರ್ ಸಮೀರ್ ಎಂ.ಡಿ. ಎಂದು ಗೊತ್ತಾಗಿದೆ.
ವೈರಲ್ ಫೋಟೋದಲ್ಲಿ ಇನ್ನಿಬ್ಬರು ವ್ಯಕ್ತಿಗಳು ಇದ್ದರೂ ಅವರನ್ನು ಗುರುತಿಸಲು ಸಾಧ್ಯವಾಗಿಲ್ಲ.
ತನಿಖೆಯ ಭಾಗವಾಗಿ ನಾವು ತಮಿಳುನಾಡು ಸಂಸದ ಸಸಿಕಾಂತ್ ಸೆಂಥಿಲ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದ್ದೇವೆ. ಸಸಿಕಾಂತ್ ಸೆಂಥಿಲ್ ಅವರಾಗಲಿ, ಅವರ ಚಹರೆಯನ್ನು ಹೋಲುವ ವ್ಯಕ್ತಿಯಾಗಲಿ ವೈರಲ್ ಫೋಟೋದಲ್ಲಿ ಇಲ್ಲ ಎಂಬುದನ್ನು ಗಮನಿಸದ್ದೇವೆ. ಸಸಿಕಾಂತ್ ಸೆಂಥಿಲ್ ಅವರ ಮುಖದ ಚಹರೆ ನೋಡಲು ಅವರ ಸಾಮಾಜಿಕ ಖಾತೆಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ವೈರಲ್ ಫೋಟೋದ ಕುರಿತಾಗಿ ನಾವು ಫೋಟೋದಲ್ಲಿರುವ ಮತ್ತು ಕಾಂಗ್ರೆಸ್ ವಕ್ತಾರರಾದ ನಜ್ಮಾ ನಜೀರ್ ಚಿಕ್ಕನೇರಳೆ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್ಚೆಕರ್ ನೊಂದಿಗೆ ಮಾತನಾಡಿ, “ವೈರಲ್ ಫೋಟೋದಲ್ಲಿ ಸಸಿಕಾಂತ್ ಸೆಂಥಿಲ್ ಅವರಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಫೋಟೋ “ತಮ್ಮ ವಿರುದ್ಧವೂ ಸೇರಿದಂತೆ ಹಲವರಿಗೆ ನೋಟಿಸ್ ಮಾಡಲಾಗಿದ್ದ ಧರ್ಮಸ್ಥಳ ಮಾನಹಾನಿ ಕುರಿತ ಗ್ಯಾಗ್ ಆದೇಶದ ವಿರುದ್ಧವಾಗಿ ವಕಾಲತ್ತಿಗೆ ಸಹಿ ಮಾಡುವ ವೇಳೆ ತೆಗೆದ ಫೋಟೋ ಆಗಿದೆ.” ಎಂದವರು ತಿಳಿಸಿದ್ದಾರೆ.
ಆದ್ದರಿಂದ ಈ ತನಿಖೆಯ ಪ್ರಕಾರ, ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಚಿಕ್ಕನೇರಳೆ ಮತ್ತು ತಮಿಳುನಾಡಿನ ಕಾಂಗ್ರೆಸ್ ಸಂಸದ ಶಶಿಕುಮಾರ್ ಸೆಂಥಿಲ್ ಜೊತೆಯಲ್ಲಿ ಧರ್ಮಸ್ಥಳದ ರೂವಾರಿ ಸಮೀರ್ ಎಂಬ ಹೇಳಿಕೆ ತಪ್ಪಾಗಿದ್ದು ಫೋಟೋದಲ್ಲಿ ಸಸಿಕಾಂತ್ ಸೆಂಥಿಲ್ ಅವರಿಲ್ಲ ಎಂದು ಗೊತ್ತಾಗಿದೆ.
Our Sources
Facebook Post by Naveen Soorinje, Dated: August 21, 2025
Conversation with Najma Nazeer Chikkanerale State Congress spokesperson