Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ ಎಂದ ವೈರಲ್ ಫೋಟೋ, ಬ್ರಾಹ್ಮಣ ಹುಡುಗಿಯನ್ನು ಲಪಟಾಯಿಸಲು ಯತ್ನಿಸುತ್ತಿದ್ದ ಮುಸ್ಲಿಂ ಯುವಕನಿಗೆ ಏಟು, ರಾಹುಲ್ ಗಾಂಧಿ ಲೋಕಸಭೆಗೆ ಟಿ-ಶರ್ಟ್ ಧರಿಸಿ ಬಂದಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ, ಅಲೆಪ್ಪಿ ಹಿನ್ನೀರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೇಲುವ ಬ್ಯಾಂಕ್ ಸ್ಥಾಪಿಸಿದೆ, ಉತ್ತರಕಾಶಿ ಮೇಘಸ್ಫೋಟ ದುರಂತ ವೇಳೆ ರಕ್ಷಣಾ ಕಾರ್ಯಾಚರಣೆಗಾಗಿ ಐಎಎಫ್ ಚಿನೂಕ್ ಹೆಲಿಕಾಪ್ಟರ್ ಜೆಸಿಬಿ ಎಕ್ಸ್ಕವೇಟರ್ ಏರ್ ಲಿಫ್ಟ್ ಮಾಡಿದೆ, ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ ಕುಡಿದರೆ ಯಕೃತ್ತಿಗೆ ಹಾನಿ, ಆಸಿಡಿಟಿ ಹೆಚ್ಚಾಗುತ್ತದೆ ಎಂಬ ಹೇಳಿಕೆಗಳು ಈ ವಾರ ಹರಿದಾಡಿವೆ. ಈ ಕುರಿತು ನ್ಯೂಸ್ಚೆಕರ್ ಸತ್ಯಾಂಶಗಳನ್ನು ತೆರೆದಿಟ್ಟಿದ್ದು, ಇವುಗಳು ನಿಜವಲ್ಲ ಎಂದು ದೃಢೀಕರಿಸಿದೆ. ಈ ವರದಿಗಳ ಕುರಿತ ವಾರದ ನೋಡ ಇಲ್ಲಿದೆ.

ಧರ್ಮಸ್ಥಳದಲ್ಲಿ ಯುವತಿಯರು ಮತ್ತು ಅಪ್ರಾಪ್ತ ವಯಸ್ಕರ ಕೊಲೆಗಳು ನಡೆದಿದ್ದು ಅವರನ್ನು ಸಮಾಧಿ ಮಾಡಲಾಗಿದೆ ಎಂಬ ಆರೋಪಗಳು ಮತ್ತು ಅವುಗಳ ಕುರಿತ ಶೋಧದ ನಡುವೆ ಈ ಪ್ರಕರಣಕ್ಕೆ ಸಂಬಂಧ ಕಲ್ಪಿಸುವಂತೆ ಫೋಟೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ಮಾಡಿದಾಗ, ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ ಎಂದು ವೈರಲ್ ಆಗಿರುವ ಫೋಟೋಗಳು ಫ್ರಾನ್ಸ್ ಜಾಕೋಬಿನ್ ಕಾನ್ವೆಂಟ್ನಲ್ಲಿ ಸಮಾಧಿ ಮಾಡಲಾದ ಸೈನಿಕರದ್ದಾಗಿವೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಬ್ರಾಹ್ಮಣ ಹುಡುಗಿಯನ್ನು ಲಪಟಾಯಿಸಲು ಯತ್ನಿಸುತ್ತಿದ್ದ ಮುಸ್ಲಿಂ ಯುವಕನಿಗೆ ಏಟು ಬಿದ್ದಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಶೋಧ ನಡೆಸಿದಾಗ, ನೋಯ್ಡಾದಲ್ಲಿ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳ ಹೊಡೆದಾಟದ ದೃಶ್ಯವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ರಾಹುಲ್ ಗಾಂಧಿ ಲೋಕಸಭೆಗೆ ಟಿ-ಶರ್ಟ್ ಧರಿಸಿ ಬಂದಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸತ್ಯಶೋಧನೆ ನಡೆಸಿದಾಗ, ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ವಿರುದ್ಧ ಘೋಷಣೆಯುಳ್ಳ ಟಿ-ಶರ್ಟ್ ಗಳನ್ನು ಧರಿಸಿ ಡಿಎಂಕೆ ಸದಸ್ಯರು ಸದನಕ್ಕೆ ಬಂದಿದ್ದು, ಇದರ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಅವರು ಮಾತನಾಡಿದ ವೀಡಿಯೋವನ್ನು ಎಡಿಟ್ ಮಾಡಿ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇರಳದ ಅಲೆಪ್ಪಿ ಜಿಲ್ಲೆಯ ಹಿನ್ನೀರಿನ ಸರೋವರಗಳಲ್ಲಿ “ತೇಲುವ ಬ್ಯಾಂಕ್” ಪ್ರಾರಂಭಿಸಿದೆ ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ ಎಐ ಮೂಲಕ ಸೃಷ್ಟಿಸಲಾದ ಫೋಟೋ ಜೊತೆಗೆ ಅಲೆಪ್ಪಿ ಹಿನ್ನೀರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೇಲುವ ಬ್ಯಾಂಕ್ ಸ್ಥಾಪಿಸಿದೆ ಎನ್ನುವ ಹೇಳಿಕೆ ಸುಳ್ಳಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಆಗಸ್ಟ್ 5 ರಂದು ಸಂಭವಿಸಿದ ಭೀಕರ ಮೇಘಸ್ಫೋಟದಿಂದಾಗಿ ಭಾರಿ ಮಳೆ ಮತ್ತು ಪ್ರವಾಹಕ್ಕೆ ಕಾರಣವಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಐಎಎಫ್ ಚಿನೂಕ್ ಹೆಲಿಕಾಪ್ಟರ್ ಜೆಸಿಬಿ ಎಕ್ಸ್ಕವೇಟರ್ ಯಂತ್ರ ಏರ್ ಲಿಫ್ಟ್ ಮಾಡಿದೆ ಎಂಬಂತೆ ಫೊಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪರಿಶೀಲಿಸದಾಗ, ಇದು ಎಡಿಟ್ ಮಾಡಿದ ಫೋಟೋ ಆಗಿದ್ದು ಸುಳ್ಳು ಸುದ್ದಿ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ

ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ ಕುಡಿದರೆ ಯಕೃತ್ತಿಗೆ ಹಾನಿ, ಆಸಿಡಿಟಿ ಹೆಚ್ಚಾಗುತ್ತದೆ ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರ ಇಲ್ಲದೆ ಇರುವುದು ತನಿಖೆಯಲ್ಲಿ ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ
Ishwarachandra B G
November 21, 2025
Ishwarachandra B G
August 28, 2025
Newschecker Team
August 25, 2025