Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಕರ್ನಾಟಕದಲ್ಲಿ ಜೈನ ಸನ್ಯಾಸಿಗೆ ಮುಸ್ಲಿಮರು ಥಳಿಸಿ ಕಾಂಗ್ರೆಸ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ
Fact
2018ರಲ್ಲಿ ಜೈನ ಮುನಿ ಉಪಾಧ್ಯಾಯ ಮಯಾಂಕ್ ಸಾಗರ್ ಜಿ ಮಹಾರಾಜ್ ಅವರಿಗೆ ದ್ವಿಚಕ್ರವಾಹನವೊಂದು ಡಿಕ್ಕಿಯಾಗಿ ಅಪಘಾತವಾಗಿದ್ದು, ಆ ಸಂದರ್ಭದ ಫೋಟೋ ಬಳಸಿ ಸುಳ್ಳು ಸುದ್ದಿ ಹರಡಲಾಗುತ್ತಿದೆ
ಕರ್ನಾಟಕದಲ್ಲಿ ಜೈನ ಸನ್ಯಾಸಿಗೆ ಮುಸ್ಲಿಮರು ಥಳಿಸಿ ಕಾಂಗ್ರೆಸ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ “ಕರ್ನಾಟಕದಲ್ಲಿ ಜೈನ ಸನ್ಯಾಸಿಗೆ ಮುಸಲ್ಮಾನರು ಥಳಿಸಿದರು, ಕಾಂಗ್ರೆಸ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದರು, ಈಗ ಕಾಂಗ್ರೆಸ್ ನಿಜವಾದ ರೂಪಕ್ಕೆ ಬಂದಿದೆ, ಕಾಂಗ್ರೆಸ್‌ಗೆ ಮತ ಹಾಕಿದ ಹಿಂದೂಗಳು ಕಾಂಗ್ರೆಸ್ ನಿಮಗೆ ಈ ರೀತಿಯ ಪ್ರೀತಿಯನ್ನು ನೀಡುತ್ತಲೇ ಇರುತ್ತದೆ. ಈ ಫೋಟೋವನ್ನು ಎಷ್ಟು ಕಳುಹಿಸಿ ಎಂದರೆ ಅದು ನಾಳೆಯೊಳಗೆ ನರೇಂದ್ರ ಮೋದಿ ಜಿ ಮತ್ತು ಯೋಗಿ ಜಿ ಅವರನ್ನು ತಲುಪುತ್ತದೆ… “ ಎಂದಿದೆ.
ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಕೊಂಡಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಫಲಿತಾಂಶ ಲಭ್ಯವಾಗಿದೆ. ಆ ಪ್ರಕಾರ, ಮಾರ್ಚ್ 21, 2018ರ ಬೆಂಗಳೂರು ಮಿರರ್ ವರದಿ ಪ್ರಕಾರ, ಕರ್ನಾಟಕದಲ್ಲಿ ಜೈನ ಮುನಿ ಮಯಾಂಕ್ ಸಾಗರ್ ಅವರ ಮೇಲೆ ಮುಸ್ಲಿಂ ಯುವಕರು ದಾಳಿ ಮಾಡಿದ್ದಾರೆ ಎನ್ನುವುದು ಸುಳ್ಳು ಸುದ್ದಿಯಾಗಿದೆ. ಈ ಕುರಿತ ನೈಜ ವರದಿ, ಜೈನ ಪ್ರಕಟಣೆಯಾದ ಅಹಿಂಸಾ ಕ್ರಾಂತಿಯಲ್ಲಿ ಮಾರ್ಚ್ 13ರಂದು ಪ್ರಕಟಗೊಂಡಿದೆ. ಶ್ರವಣಬೆಳಗೊಳದಿಂದ ವಾಪಸ್ಸಾಗುತ್ತಿರುವ ವೇಳೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದು ಮುನಿಗಳ ಭುಜಕ್ಕೆ ಗಾಯವಾಗಿತ್ತು. ಕನಕಪುರ ಸನಿಹ ಘಟನೆ ನಡೆದಿದ್ದು, ಇದರಲ್ಲಿ ಮುಸ್ಲಿಂ ಯುವಕರು ಭಾಗಿಯಾಗಿರಲಿಲ್ಲ ಎಂದಿದೆ.
ಈ ಸುದ್ದಿಯ ಆಧಾರದಲ್ಲಿ ನಾವು ಅಹಿಂಸಾ ಕ್ರಾಂತಿಯ ಬಗ್ಗೆ ಶೋಧ ನಡೆಸಿದ್ದು ಫೇಸ್‌ಬುಕ್ ನಲ್ಲಿ ಮಾರ್ಚ್ 13, 2018ರಂದು “ಅಹಿಂಸಾ ಕ್ರಾಂತಿ ಸಮಾಚಾರ್” ಪೇಜ್‌ನಲ್ಲಿ ಪೋಸ್ಟ್ ಒಂದು ಲಭ್ಯವಾಗಿದೆ. ಇದರಲ್ಲಿ “ಉಪಾಧ್ಯಾಯ ಮಯಾಂಕ್ ಸಾಗರ್ ಜಿ ಮಹಾರಾಜರಿಗೆ ಬೈಕ್ ಡಿಕ್ಕಿ, ಭುಜಕ್ಕೆ ಗಾಯ, ಆರೋಗ್ಯ ಈಗ ಚೆನ್ನಾಗಿದೆ- ಸನ್ಮತಿ ಜೈನ್ ವರದಿ” ಎಂದಿದೆ. ಇದರೊಂದಿಗೆ ಫೊಟೋವನ್ನೂ ಪೋಸ್ಟ್ ಮಾಡಲಾಗಿದ್ದು ವೈರಲ್ ಆಗುತ್ತಿರುವ ಚಿತ್ರ ಸಾಮ್ಯತೆಯನ್ನು ಕಂಡುಕೊಂಡಿದ್ದೇವೆ.
Also Read: ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?
ಆ ಬಳಿಕ ನಾವು ಗೂಗಲ್ ನಲ್ಲಿ ಇನ್ನಷ್ಟು ಶೋಧ ನಡೆಸಿದ್ದೇವೆ. ಈ ವೇಳೆ ಮಾರ್ಚ್ 30, 2018ರ ದಿ ಹಿಂದೂ ವರದಿ ಕಂಡುಬಂದಿದೆ. ಇದರಲ್ಲಿ ಆನ್‌ಲೈನ್ ಪೋರ್ಟಲ್ ‘ಪೋಸ್ಟ್‌ಕಾರ್ಡ್ ನ್ಯೂಸ್’ ಸಹ-ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ಗುರುವಾರ ಸಿಸಿಬಿ ಪೊಲೀಸರು ನಕಲಿ ಮತ್ತು ಕೋಮು ಸೂಕ್ಷ್ಮ ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಜೈನ ಸನ್ಯಾಸಿ ಉಪಾಧ್ಯಾಯ ಮಾಯಾಂಕ್ ಸಾಗರ್ ಜಿ ಮಹಾರಾಜ್ ಅವರ ಫೋಟೋವನ್ನು ಶೀರ್ಷಿಕೆಯಾಗಿ ಹೆಗ್ಡೆ ಅವರು ಮಾರ್ಚ್ 19 ರಂದು ಟ್ವೀಟ್ ಮಾಡಿದ್ದರು: “ಕರ್ನಾಟಕದಲ್ಲಿ ನಿನ್ನೆ ಜೈನ ಮುನಿ ಮೇಲೆ ಮುಸ್ಲಿಂ ಯುವಕರಿಂದ ದಾಳಿ ನಡೆದಿರುವುದು ಬಹಳ ದುಃಖದ ಸುದ್ದಿ. ಸಿದ್ದರಾಮಯ್ಯನವರ ಕರ್ನಾಟಕದಲ್ಲಿ ಯಾರೂ ಸುರಕ್ಷಿತವಾಗಿಲ್ಲ.” ಪೋಸ್ಟ್‌ಕಾರ್ಡ್ ನ್ಯೂಸ್ ಹ್ಯಾಂಡಲ್‌ನಲ್ಲಿಯೂ ಅದೇ ಟ್ವೀಟ್ ಮಾಡಲಾಗಿದೆ ಎಂದಿದೆ.
ಮಾರ್ಚ್ 31, 2018ರಂದು ಡೆಕ್ಕನ್ ಕ್ರಾನಿಕಲ್ ಕೂಡ ಇದೇ ವಿದ್ಯಮಾನದ ವರದಿ ಮಾಡಿದ್ದು ಕೋಮು ಭಾವನೆ ಕೆರಳಿಸುವ ಸುಳ್ಳು ಟ್ವೀಟ್ ಮಾಡಿದ್ದಕ್ಕಾಗಿ ಪೋಸ್ಟ್ ಕಾರ್ಡ್ ನ್ಯೂಸ್‌ನ ಮಹೇಶ್ ವಿಕ್ರಂ ಹೆಗ್ಡೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೆಗ್ಡೆ ಅವರು ಉಪಾಧ್ಯಾಯ ಮಯಾಂಕ್ ಸಾಗರ್ ಜಿ ಮಹಾರಾಜ್ ಅವರ ಫೋಟೋವನ್ನು ಲಗತ್ತಿಸಿ, “ಅತ್ಯಂತ ದುಖಃದ ವಿಷಯ, ನಿನ್ನೆ ಕರ್ನಾಟಕದಲ್ಲಿ ಜೈನ ಮುನಿಗಳ ಮೇಲೆ ಮುಸ್ಲಿಂ ಯುವಕರು ದಾಳಿ ಮಾಡಿದರು. ಸಿದ್ದರಾಮಯ್ಯ ಅವರ ಕರ್ನಾಟಕದಲ್ಲಿ ಯಾರು ಸುರಕ್ಷಿತರಲ್ಲ” ಎಂದು ಟ್ವೀಟ್ ಮಾಡಿದ್ದರು ಎಂದಿದೆ.
2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕ “ಕರ್ನಾಟಕದಲ್ಲಿ ಜೈನ ಮುನಿಗಳ ಮೇಲೆ ದಾಳಿ” ಹೇಳಿಕೆಯುಳ್ಳ ಪೋಸ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ಇದನ್ನು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿ ಸುಳ್ಳು ಎಂದು ನಿರೂಪಿಸಿತ್ತು.
ಈ ತನಿಖೆಯ ಪ್ರಕಾರ, ಕರ್ನಾಟಕದಲ್ಲಿ ಜೈನ ಸನ್ಯಾಸಿಗೆ ಮುಸಲ್ಮಾನರು ಥಳಿಸಿ ಕಾಂಗ್ರೆಸ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂಬ ಪ್ರಕರಣ ಸುಳ್ಳಾಗಿದೆ.
Also Read: ಇಂದೋರ್ ನಲ್ಲಿ ಈದ್ ದಿನ ಹಿಂದೂ ಮನೆಗಳ ಮೇಲೆ ಮುಸ್ಲಿಂ ಗುಂಪು ಕಲ್ಲೆಸೆದಿದೆ ಎಂದ ವೈರಲ್ ವೀಡಿಯೋ ಸತ್ಯವೇ?
Our Sources
Report By Bangalore Mirror, Dated: March 21, 2018
Facebook Post By Ahimsa Kranti Samachar, Dated: March 13, 2018
Report By The Hindu, Dated: March 30, 2018
Report By Deccan Chronicle, Dated: March 31, 2018
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
April 16, 2025
Ishwarachandra B G
April 16, 2025
Ishwarachandra B G
April 1, 2025