Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಉತ್ತರಪ್ರದೇಶದಲ್ಲಿ ಅಕ್ರಮ ವಕ್ಫ್ ಆಸ್ತಿಗಳ ಮೇಲೆ ಕ್ರಮ ಶುರುವಾಗಿದೆ
ಉತ್ತರಪ್ರದೇಶದಲ್ಲಿ ಅಕ್ರಮ ವಕ್ಫ್ ಆಸ್ತಿಗಳ ಮೇಲೆ ಕ್ರಮ ಶುರುವಾಗಿದೆ ಎಂದ ಈ ವೀಡಿಯೋ ನಿಜವಾಗಿ ಉತ್ತರಾಖಂಡದ ಹರಿದ್ವಾರದ್ದಾಗಿದೆ
ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡ ನಂತರ, ಉತ್ತರ ಪ್ರದೇಶದಲ್ಲಿ ಮದರಸಾಗಳ ವಿರುದ್ಧ ಕ್ರಮ ಆರಂಭವಾಗಿದೆ ಎಂಬ ಹೇಳಿಕೆಯೊಂದಿಗೆ ಮದರಸಾವೊಂದರ ಎದುರು ಅಧಿಕಾರಿಗಳು ನಿಂತಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಆದರೆ ನಮ್ಮ ತನಿಖೆಯಲ್ಲಿ ಈ ವೀಡಿಯೋ ಉತ್ತರ ಪ್ರದೇಶದದ್ದಲ್ಲ, ಬದಲಾಗಿ ಮಾರ್ಚ್‌ನಲ್ಲಿ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಭಗವಾನ್‌ಪುರದಲ್ಲಿ ಮದರಸಾದ ಮೇಲೆ ನಡೆದ ಕ್ರಮದ ವೀಡಿಯೋ ಆಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
ವಕ್ಫ್ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ತಡರಾತ್ರಿ ಅಂಕಿತ ಹಾಕಿದರು. ಅನಂತರ ಕೇಂದ್ರ ಸರ್ಕಾರವು ಹೊಸ ಕಾನೂನಿಗೆ ಸಂಬಂಧಿಸಿದಂತೆ ಗೆಜೆಟ್ ಅಧಿಸೂಚನೆಯನ್ನು ಸಹ ಹೊರಡಿಸಿತು. ಇದಕ್ಕೆ ಪೂರ್ವಭಾವಿಯಾಗಿ ಏಪ್ರಿಲ್ 2 ರಂದು ಲೋಕಸಭೆಯಲ್ಲಿ ಮತ್ತು ಏಪ್ರಿಲ್ 3 ರಂದು ರಾಜ್ಯಸಭೆಯಲ್ಲಿ 12 ಗಂಟೆಗಳ ಚರ್ಚೆಯ ನಂತರ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ವೈರಲ್ ಆಗಿರುವ ಈ ವಿಡಿಯೋ ಸುಮಾರು 30 ಸೆಕೆಂಡುಗಳಷ್ಟು ಉದ್ದವಾಗಿದ್ದು, ಇದರಲ್ಲಿ ಕೆಲವು ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಮದರಸಾಕ್ಕೆ ಹೋಗಿ ನೋಂದಣಿಯನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು. ನೋಂದಣಿ ಇಲ್ಲದಿದ್ದರೆ ಮದರಸಾವನ್ನು ಮುಚ್ಚುವ ಬಗ್ಗೆಯೂ ಅವರು ಮಾತನಾಡುತ್ತಿರುವುದು ಕೇಳಿಬರುತ್ತಿದೆ.
ಇದೇ ವೀಡಿಯೋವನ್ನು ವಿವಿಧೆಡೆ ಹಂಚಿಕೊಳ್ಳುತ್ತಿರುವುದನ್ನು ನಾವು ಗಮನಿಸಿದ್ದೇವೆ.
ವಕ್ಫ್ ಮಸೂದೆ ಅಂಗೀಕಾರದ ನಂತರ ಉತ್ತರ ಪ್ರದೇಶದಲ್ಲಿ ಮದರಸಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿರುವ ವೀಡಿಯೋದ ಬಗ್ಗೆ ತನಿಖೆ ಮಾಡಲು ಕೀಫ್ರೇಂಗಳನ್ನು ತೆಗೆದು ಹುಡುಕಾಟ ನಡೆಸಿದ್ದೇವೆ. ಈ ವೇಳೆ ಮಾರ್ಚ್ 22, 2025 ರಂದು ರೂರ್ಕಿ ಹರಿದ್ವಾರ ಸಮಾಚಾರ್ ಎಂಬ ಫೇಸ್‌ಬುಕ್ ಪುಟದಿಂದ ಅಪ್‌ಲೋಡ್ ಮಾಡಲಾದ ಈ ವೀಡಿಯೋ ಸಿಕ್ಕಿದೆ . “ಅಕ್ರಮವಾಗಿ ನಡೆಸಲಾಗುತ್ತಿರುವ ಮದರಸಾಗಳ ಬಗ್ಗೆ ಭಗವಾನ್‌ಪುರ ತಾಲೂಕು ಆಡಳಿತವು ತನಿಖೆ ನಡೆಸಿತು” ಎಂದು ವೀಡಿಯೋ ಜೊತೆಗಿನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಇದಲ್ಲದೆ, ಮಾರ್ಚ್ 22, 2025 ರಂದು ಅದೇ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಲಾದ ಮತ್ತೊಂದು ವೀಡಿಯೋನ್ನು ನಾವು ನೋಡಿದ್ದೇವೆ , ಅದರಲ್ಲಿ ವೈರಲ್ ವೀಡಿಯೋದಲ್ಲಿ ಕಂಡುಬರುವ ಅದೇ ಅಧಿಕಾರಿಗಳು ಹಾಜರಿದ್ದರು.
Also Read: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ಬಳಿಕ ಓವೈಸಿ-ಬಿಜೆಪಿ ಸಂಸದರ ಹರಟೆ; ವೀಡಿಯೋ ಸತ್ಯವೇ?
ಈ ವೀಡಿಯೋ ಜೊತೆ ಹಾಕಿರುವ ಅಡಿಬರಹದಲ್ಲಿ ಭಗವಾನ್‌ಪುರ ತಾಲೂಕು ಆಡಳಿತವು ಅಕ್ರಮವಾಗಿ ನಡೆಸುತ್ತಿರುವ ಮದರಸಾಗಳ ವಿರುದ್ಧ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದೆ.
ಇದಾದ ನಂತರ, ಪೋಸ್ಟ್ ನಲ್ಲಿ ನೀಡಲಾದ ಮಾಹಿತಿಯ ಆಧಾರದ ಮೇಲೆ ನಾವು ಸುದ್ದಿ ವರದಿಗಳನ್ನು ಹುಡುಕಿದಾಗ, ಹರಿದ್ವಾರದಲ್ಲಿ ಅಕ್ರಮ ಮದರಸಾಗಳ ವಿರುದ್ಧ ತೆಗೆದುಕೊಂಡ ಕ್ರಮಕ್ಕೆ ಸಂಬಂಧಿಸಿದ ಅನೇಕ ವರದಿಗಳು ಕಂಡುಬಂದವು. ಉತ್ತರಾಖಂಡ ಆಡಳಿತವು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿಸದ ಮದರಸಾಗಳ ವಿರುದ್ಧ ಕ್ರಮ ಕೈಗೊಂಡಿದೆ ಮತ್ತು ಅವುಗಳನ್ನು ಸೀಲ್ ಮಾಡುವ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಸುದ್ದಿಯಲ್ಲಿ ವರದಿಯಾಗಿತ್ತು . ಉತ್ತರಾಖಂಡ ಆಡಳಿತದ ಈ ಕ್ರಮವನ್ನು ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ಆದಾಗ್ಯೂ, ವೈರಲ್ ವೀಡಿಯೊದ ದೃಶ್ಯಗಳು ಯಾವುದೇ ವರದಿಗಳಲ್ಲಿ ಇರಲಿಲ್ಲ.
ನಮ್ಮ ತನಿಖೆಯ ಭಾಗವಾಗಿ ನಾವು ನಾವು ಭಗವಾನ್‌ಪುರ ತಾಲೂಕಿನ ಪತ್ರಕರ್ತ ಹರಿಓಂ ಗಿರಿಯನ್ನು ಸಂಪರ್ಕಿಸಿದೆವು. ಈ ವೈರಲ್ ವಿಡಿಯೋ ಹರಿದ್ವಾರದ ಭಗವಾನ್‌ಪುರದ್ದು ಎಂದು ಅವರು ಹೇಳಿದರು. ಭಗವಾನ್‌ಪುರ ಎಸ್‌ಡಿಎಂ ಜಿತೇಂದ್ರ ಕುಮಾರ್, ಕೊತ್ವಾಲಿ ಪೊಲೀಸ್ ಠಾಣೆಯ ಮುಖ್ಯಸ್ಥ ಸೂರ್ಯಭೂಷಣ ನೇಗಿ ಮತ್ತು ತಹಸೀಲ್ದಾರ್ ಅನಿಲ್ ಗುಪ್ತಾ ಅವರು ಈ ವೀಡಿಯೋದಲ್ಲಿದ್ದಾರೆ ಎಂದು ಖಚಿತಪಡಿಸಿದರು.
ಆ ಬಳಿಕ ನಾವು ಭಗವಾನ್‌ಪುರದ ಎಸ್‌ಡಿಎಂ ಜಿತೇಂದ್ರ ಕುಮಾರ್ ಅವರನ್ನೂ ಸಂಪರ್ಕಿಸಿದೆವು. ಈ ವೀಡಿಯೋ ಹರಿದ್ವಾರದ ಭಗವಾನ್‌ಪುರದಿಂದ ಬಂದಿದೆ ಎಂದೂ ಅವರು ಹೇಳಿದರು.
ನಮ್ಮ ತನಿಖೆಯಲ್ಲಿ ದೊರೆತ ಸಾಕ್ಷ್ಯಾಧಾರಗಳ ಪ್ರಕಾರ, ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದ ಅನಂತರ ಉತ್ತರ ಪ್ರದೇಶದಲ್ಲಿ ಮದರಸಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿರುವ ಈ ವೀಡಿಯೋ ಉತ್ತರಾಖಂಡದ ಹರಿದ್ವಾರದ್ದು ಎಂಬುದು ಸ್ಪಷ್ಟವಾಗಿದೆ.
Also Read: ಶಿರಾದಲ್ಲಿ ದೊಡ್ಡ ಡ್ಯಾಮ್ ನಿರ್ಮಿಸಲಾಗುತ್ತಿದೆ ಎಂದು ಚೀನಾ ವೀಡಿಯೋ ವೈರಲ್
Our Sources
Video by a facebook page Dated: 22nd March 2025
Telephonic Conversation with Bhagwanpur Journalist Hariom Giri
Telephonic Conversation with Bhagwanpur SDM Jitendra Kumar
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
Ishwarachandra B G
April 12, 2025
Ishwarachandra B G
April 4, 2025
Ishwarachandra B G
March 22, 2025