Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಇರಾನ್ ನಲ್ಲಿ ಅಣ್ವಸ್ತ್ರ ಘಟಕವನ್ನು ಇಸ್ರೇಲ್ ಧ್ವಂಸ ಮಾಡಿದೆ
ಚೀನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ದುರಂತ ದೃಶ್ಯವನ್ನು ಇರಾನ್ ಅಣ್ವಸ್ತ್ರ ಘಟಕದ ಮೇಲೆ ನಡೆದ ದಾಳಿ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ
ಇರಾನ್ ನಲ್ಲಿ ಅಣ್ವಸ್ತ್ರ ಘಟಕವನ್ನು ಇಸ್ರೇಲ್ ಧ್ವಂಸ ಮಾಡಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಈ ಪೋಸ್ಟ್ ಕಂಡುಬಂದಿದ್ದು, ಘಟಕವೊಂದು ಸ್ಫೋಟಗೊಳ್ಳುವುದು ಕಾಣಿಸುತ್ತದೆ. 28 ಸೆಕೆಂಡ್ ಗಳ ವೀಡಿಯೋ ಇದಾಗಿದೆ.

ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಚೀನದಲ್ಲಿ ರಾಸಾಯನಿಕ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ದುರಂತವಾಗಿದೆ. ಇದು ಇಸ್ರೇಲ್ ದಾಳಿಯ ವೀಡಿಯೋ ಅಲ್ಲ ಎಂದು ತಿಳಿದುಬಂದಿದೆ.
Also Read: ಇರಾನ್-ಇಸ್ರೇಲ್ ಕದನ; ಸರ್ಕಾರದ ವಿರುದ್ಧವೇ ಇರಾನ್ ಜನ ತಿರುಗಿಬಿದ್ದಿದ್ದಾರೆಯೇ?
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಯೂಟ್ಯೂಬ್ ನಲ್ಲಿ ವೀಡಿಯೋ ಒಂದು ಕಂಡುಬಂದಿದ್ದು, ಇದು ಚೀನದ ವೀಡಿಯೋ ಎಂದು ಹೇಳಿದೆ.
2015 ನವೆಂಬರ್ 19ರಂದು Ahmed Treiban ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಆದ ವೀಡಿಯೋದಲ್ಲಿ ವೈರಲ್ ವೀಡಿಯೋ ಹೋಲುವ ದೃಶ್ಯಗಳಿದ್ದು, ಚೀನದ ಕೆಮಿಕಲ್ ಪ್ಲಾಂಟ್ ಸ್ಫೋಟ ಎಂಬ ಶೀರ್ಷಿಕೆ ಇದೆ.
ಈ ಕುರಿತು ಹೆಚ್ಚಿನ ಶೋಧನೆ ನಡೆಸಿದಾಗ, 2015 ನವೆಂಬರ್ 26ರಂದು ಮಿರರ್ ವರದಿ ಲಭ್ಯವಾಗಿದೆ.
“ಚೀನಾದ ರಾಸಾಯನಿಕ ಸ್ಥಾವರದಲ್ಲಿ ಮತ್ತೊಂದು ದೊಡ್ಡ ಸ್ಫೋಟ ಸಂಭವಿಸಿದೆ. ಝೆಜಿಯಾಂಗ್ ಪ್ರಾಂತ್ಯದ ಕಾರ್ಖಾನೆಯೊಂದು ದೈತ್ಯ ಬೆಂಕಿಯ ಉಂಡೆಯಾಗಿ ಸ್ಫೋಟಗೊಳ್ಳುವ ಕ್ಷಣದ ಅದ್ಭುತ ದೃಶ್ಯಗಳನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಮೊದಲಿಗೆ ಕ್ಲಿಪ್ ಕಟ್ಟಡವು ಹೊತ್ತಿ ಉರಿಯುತ್ತಿರುವುದನ್ನು ತೋರಿಸುತ್ತದೆ, ತುರ್ತು ಸೈರನ್ಗಳ ಶಬ್ದದ ನಡುವೆ ಛಾವಣಿಯ ಮೇಲೆ ಹೊತ್ತಿಕೊಂಡ ಜ್ವಾಲೆಗಳನ್ನು ನಂದಿಸಲು ಅಗ್ನಿಶಾಮಕ ಕೊಳವೆಗಳು ಪ್ರಯತ್ನಿಸುತ್ತಿವೆ. ಇದ್ದಕ್ಕಿದ್ದಂತೆ ಇಡೀ ಕಟ್ಟಡವು ಕಿವಿಗಡಚಿಕ್ಕುವಷ್ಟು ಸ್ಫೋಟದೊಂದಿಗೆ ಮೇಲಕ್ಕೆ ಏರುತ್ತದೆ, ದೊಡ್ಡ ಜ್ವಾಲೆಗಳು ಮತ್ತು ಕಪ್ಪು ಹೊಗೆ ಆಕಾಶಕ್ಕೆ ಹಾರುತ್ತದೆ. ಈ ವಿಡಿಯೋವನ್ನು ರಾಸಾಯನಿಕ ಸ್ಥಾವರದ ಮೇಲಿರುವ ಬಾಲ್ಕನಿಯಿಂದ ಮತ್ತು ತುಂಬಾ ಹತ್ತಿರದಿಂದ ಚಿತ್ರೀಕರಿಸಲಾಗಿದೆ ಎಂದಿದೆ.”

2015 ನವೆಂಬರ್ 30ರ ಮ್ಯಾನ್ಯುಫ್ಯಾಕ್ಚರಿಂಗ್ ನೆಟ್ ವರದಿ ಪ್ರಕಾರ, “ಕಳೆದ ವಾರ ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾದ ವೀಡಿಯೊವುದೇಶದ ರಾಸಾಯನಿಕ ವಲಯವನ್ನು ಬೆಚ್ಚಿಬೀಳಿಸಿದ ಮಾರಕ ಸ್ಫೋಟಗಳ ಕೆಲವೇ ವಾರಗಳ ನಂತರ ಚೀನಾದ ರಾಸಾಯನಿಕ ಸ್ಥಾವರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ ಎಂದು ಹೇಳುತ್ತದೆ. 52 ಸೆಕೆಂಡುಗಳ ಈ ಕ್ಲಿಪ್, ಸ್ಥಾವರದ ಮೇಲಿರುವ ವೇದಿಕೆಯಿಂದ ದೃಶ್ಯಗಳನ್ನು ತೋರಿಸುತ್ತದೆ, ಇದು ಚೀನಾದ ಮಧ್ಯ ಕರಾವಳಿಯ ಝೆಜಿಯಾಂಗ್ ಪ್ರಾಂತ್ಯದಲ್ಲಿದೆ ಎಂದು ವರದಿಯಾಗಿದೆ.” ಎಂದಿದೆ.

ಈ ಸಾಕ್ಷ್ಯಾಧಾರಗಳ ಪ್ರಕಾರ, ಇರಾನ್ ನಲ್ಲಿ ಅಣ್ವಸ್ತ್ರ ಘಟಕವನ್ನು ಇಸ್ರೇಲ್ ಧ್ವಂಸ ಮಾಡಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡ ವೀಡಿಯೋ ನಿಜವಾಗಿ ಚೀನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ದುರಂತದ್ದು ಎಂದು ಕಂಡುಬಂದಿದೆ.
Our Sources
YouTube Video By Ahmed Treiban, Dated: November 15, 2015
Report By Mirror, Dated: November 26, 2015
Report By Manufacturing Net, Dated: November 30, 2015
Ishwarachandra B G
November 7, 2025
Ishwarachandra B G
October 23, 2025
Ishwarachandra B G
June 25, 2025