Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಗಣೇಶ ಮೆರವಣಿಗೆ ವೇಳೆ ಮುಸ್ಲಿಮರು ಕಲ್ಲುತೂರಿದರು, ಹಾಸನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಎರಗಿದ ಲಾರಿ; ಚಾಲಕ ಮುಸ್ಲಿಂ ಎಂಬ ಎರಡು ಪ್ರಮುಖ ಕೋಮು ಆಯಾಮದ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇವುಗಳನ್ನು ನ್ಯೂಸ್ಚೆಕರ್ ಸತ್ಯಶೋಧನೆಗೊಳಪಡಿಸಿ, ಅವುಗಳು ಸುಳ್ಳು ಎಂದು ನಿರೂಪಿಸಿದೆ. ಇದರೊಂದಿಗೆ, ಕಥುವಾದಲ್ಲಿ ಮುಸ್ಲಿಮರು ಸಿಹಿತಿಂಡಿಗೆ ಉಚ್ಚೆ ಸಿಂಪಡಿಸಿ ಗ್ರಾಹಕರಿಗೆ ಕೊಡುತ್ತಿದ್ದರು, ಹೆರಿಗೆಯ ಸಮಯದಲ್ಲಿ ತಾಯಿ ಸಾವನ್ನಪ್ಪಿದಾಗ ವೈದ್ಯರು ದುಃಖಿತರಾದರು, ನೇಪಾಳದವರೂ ಪ್ರಧಾನಿ ಮೋದಿಯವರನ್ನು ನಾಯಕರಾಗಿ ಬಯಸುತ್ತಿದ್ದಾರೆ, ನೇಪಾಳ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫೋಟೋ ಪ್ರದರ್ಶಿಸಲಾಗಿದೆ, ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ ಎಂಬ ಹೇಳಿಕೆಗಳೂ ಇದ್ದವು. ಇವುಗಳನ್ನೂ ಸತ್ಯಶೋಧನೆಗೊಳಪಡಿಸಲಾಗಿದ್ದು, ಇದು ನಿಜವಲ್ಲ ಎಂದು ಕಂಡುಬಂದಿದೆ.

ಗಣೇಶ ಮೆರವಣಿಗೆ ವೇಳೆ ಮುಸ್ಲಿಮರು ಕಲ್ಲುತೂರಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ಆದರೆ ಕರ್ನಾಟಕದ ರಾಯಚೂರಿನಲ್ಲಿ ನಡೆದ ಈ ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ. ಇದು ಯುವಕರ ತಂಡಗಳ ನಡುವಿನ ಘರ್ಷಣೆ ಎಂದು ತಿಳಿದುಬಂದಿದೆ. ಈ ಕುರಿತ ಸತ್ಯಶೋಧನೆಯನ್ನು ಇಲ್ಲಿ ಓದಿ

ಕಥುವಾದಲ್ಲಿ ಮುಸ್ಲಿಮರು ಸಿಹಿತಿಂಡಿಗೆ ಉಚ್ಚೆ ಸಿಂಪಡಿಸಿ ಗ್ರಾಹಕರಿಗೆ ಕೊಡುತ್ತಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿಕೆ ಹಂಚಿಕೊಳ್ಳಲಾಗಿದೆ. ಆದರೆ ಇದು ದಾರಿ ತಪ್ಪಿಸುವ ಹೇಳಿಕೆ, ಪ್ರಿಟಿಂಗ್ ಪ್ರೆಸ್ ಒಂದರಲ್ಲಿ ಅಶ್ಲೀಲ ಕೃತ್ಯ ರೆಕಾರ್ಡ್ ಮಾಡಲಾಗಿದೆ ಎಂಬ ಆರೋಪದಡಿ ಸ್ಥಳೀಯರ ಪ್ರತಿಭಟನೆ, ಪೊಲೀಸರು ಆರೋಪಿಗಳನ್ನು ಬಂಧಿಸಿದ ಪ್ರಕರಣ ಇದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಹೆರಿಗೆಯ ಸಂದರ್ಭದಲ್ಲಿ ತಾಯಿ ಸಾವನ್ನಪ್ಪಿದಾಗ, ಅದರಿಂದಾಗಿ ವೈದ್ಯರು ದುಃಖಿತರಾದರು ಎಂದು ಹೇಳಿ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳು, ಒಂದು ಕಟ್ಟು ಕಥೆಗೆ ಪೂರಕವಾಗಿ ಸಂಬಂಧವೇ ಇಲ್ಲದ ಎರಡು ಪ್ರತ್ಯೇಕ ಫೋಟೋಗಳನ್ನು ಒಟ್ಟಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ನೇಪಾಳದಲ್ಲಿ ನಾಗರಿಕ ದಂಗೆ ಭುಗಿಲೆದ್ದ ಬಳಿಕ ಅಲ್ಲಿನ ಜನ ಬದಲಾವಣೆ ಬಯಸುತ್ತಿದ್ದು, ಅಲ್ಲಿನವರೂ ಪ್ರಧಾನಿ ನರೇಂದ್ರ ಮೋದಿಯನ್ನು ನಾಯಕನ್ನಾಗಿ ಬಯಸುತ್ತಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ವೀಡಿಯೋ ಸಿಕ್ಕಿಂನದ್ದಾಗಿದೆ. ಪ್ರಧಾನಿ ಆಗಮನದ ವೇಳೆ ಸ್ವಾಗತಿಸಿದ ವೀಡಿಯೋ ಇದಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ನೇಪಾಳದಲ್ಲಿ ನಾಗರಿಕ ದಂಗೆ ಭುಗಿಲೆದ್ದಿರುವಂತೆಯೇ ಪ್ರತಿಭಟನೆ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋ ಪ್ರದರ್ಶಿಸಲಾಗಿದೆ ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಬೇರೆ ಸಂದರ್ಭದ್ದು ಎಂದು ಗೊತ್ತಾಗಿದೆ. ಕಳೆದ ಮಾರ್ಚ್ ನಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ರಾಜಪ್ರಭುತ್ವ ಪರ ರಾಲಿಯಲ್ಲಿ ಆದಿತ್ಯನಾಥ್ ಫೊಟೋ ಪ್ರದರ್ಶಿಸಲಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ನಿಜವಲ್ಲ, ಎಐನಿಂದ ಮಾಡಿದ್ದು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಹಾಸನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಎರಗಿದ ಲಾರಿಯ ಚಾಲಕ ಮುಸ್ಲಿಂ ಎಂದು ಹೇಳಿಕೆಯೊಂದು ವೈರಲ್ ಆಗುತ್ತಿದೆ. ಅದರೆ ಹಾಸನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಎರಗಿದ ಲಾರಿ ಚಾಲಕ ಮುಸ್ಲಿಂ ಎಂಬುದು ನಿಜವಲ್ಲ, ಆತ ಭುವನೇಶ್ ಎಂಬಾತ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ
Ishwarachandra B G
November 22, 2025
Ishwarachandra B G
November 18, 2025
Kushel Madhusoodan
November 15, 2025