Authors
Claim
ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮೇಲೆಯೇ ಪ್ರವಾಹ
Fact
ವೈರಲ್ ವೀಡಿಯೋದಲ್ಲಿ ತೋರಿಸಿದ ದೃಶ್ಯ ಚಾರ್ಮಾಡಿ ಘಾಟಿಯದ್ದಲ್ಲ. ಇದು ಮಹಾರಾಷ್ಟ್ರದ ಘಾಟಿ ರಸ್ತೆಯದ್ದಾಗಿದೆ
ಕರಾವಳಿ, ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವಂತೆಯೇ, ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿ ಚಾರ್ಮಾಡಿ ರಸ್ತೆಯಲ್ಲೇ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ ಎನ್ನುವ ಕ್ಲೇಮ್ ಒಂದು ಹರಿದಾಡಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ನಲ್ಲಿ “ಚಾರ್ಮಾಡಿ ರಸ್ತೆಯ ಪ್ರಸ್ತುತ ಸ್ಥಿತಿ ಪ್ರಯಾಣಿಸುವವರಿದ್ದರೆ ಎಚ್ಚರಿಕೆ ವಹಿಸಿ” ಎಂದು ಹೇಳಲಾಗಿದೆ.
Also Read: ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆಯೇ?
ಟ್ವಿಟರ್‌ನಲ್ಲೂ ಈ ಕ್ಲೇಮ್ ಕಂಡುಬಂದಿದ್ದು ಇಲ್ಲಿದೆ
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಕ್ಲೇಮ್ ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಶೇರ್ ಚಾಟ್ ನ ರೀಲ್ಸ್ ರಾಡಾ ಎಂಬ ಖಾತೆಯಿಂದ ಶೇರ್ ಮಾಡಲಾದ ವೈರಲ್ ವಿಡಿಯೋವನ್ನೇ ಹೋಲುವ ವೀಡಿಯೋ ಲಭ್ಯವಾಗಿದೆ. 1 ವರ್ಷಗಳ ಹಿಂದಿನ ಈ ಪೋಸ್ಟ್ ನಲ್ಲಿ ಮಹಾರಾಷ್ಟ್ರದ ಮಾಲ್ಶೆಜ್ ಘಾಟ್ ನ ದೃಶ್ಯ ಎಂದು ಹೇಳಲಾಗಿದೆ.
ಇನ್ನೊಂದು ಕೀಫ್ರೇಂನ ರಿವರ್ಸ್ ಇಮೇಜ್ ಸರ್ಚ್ ನಡೆಸಿದ ವೇಳೆ ಮತ್ತಷ್ಟು ಫಲಿತಾಂಶಗಳು ಲಭ್ಯವಾಗಿವೆ. ಇದರಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋಗಳನ್ನು ನಾವು ಪತ್ತೆ ಮಾಡಿದ್ದೇವೆ
Also Read: ಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು, ತಪ್ಪಿದ ಅನಾಹುತ ಎಂದ ಈ ವೈರಲ್ ವೀಡಿಯೋ ಸತ್ಯವೇ?
ಜುಲೈ 20, 2023ರ ಝೀನ್ಯೂಸ್‌ನಲ್ಲಿ ಮಳೆ ಕುರಿತ ಸುದ್ದಿಯಲ್ಲೂ ಮಾಲ್ಶೇಜ್ ಘಾಟಿಯಲ್ಲಿ ಮಳೆ ಸುದ್ದಿಯನ್ನು ಹೇಳಲಾಗಿದ್ದು, ವೈರಲ್ ಆಗಿರುವ ವೀಡಿಯೋವನ್ನೇ ಬಳಸಿರುವುದು ಗೊತ್ತಾಗಿದೆ.
ನಾವು ಯೂಟ್ಯೂಬ್‌ನಲ್ಲಿ ಈ ಬಗ್ಗೆ ಸರ್ಚ್ ನಡೆಸಿದ ವೇಳೆ, ಜುಲೈ 23, 2021ರಂದು ಖಾನಾ ಪಖಾನಾ ಖಾತೆಯಿಂದ ಪೋಸ್ಟ್ ಮಾಡಲಾದ ಯೂಟ್ಯೂಬ್ ರೀಲ್ಸ್ ಲಭ್ಯವಾಗಿದ್ದು, ಇದರಲ್ಲಿ ಮುಂಗಾರು ಅವಧಿಯಲ್ಲಿ ಮಾಲ್ಶೆಜ್ ಘಾಟಿಯ ದೃಶ್ಯ ಎಂದು ಹೇಳಲಾಗಿದೆ.
ವೀಡಿಯೋಗಳನ್ನು ಪೋಸ್ಟ್ ಮಾಡಿದ ಹಲವು ಬಳಕೆದಾರರು ಇದನ್ನು ಮಹಾರಾಷ್ಟ್ರದ ಮಾಲ್ಶೆಜ್ ಘಾಟಿಯ ದೃಶ್ಯ ಎಂದೂ, ಇನ್ನೂ ಕೆಲವರು ಇದನ್ನು ಅಂಬೋಲಿ ಘಾಟ್‌ನ ದೃಶ್ಯ ಎಂದೂ ಹೇಳಿದ್ದಾರೆ. ಮಾಲ್ಶೆಜ್ ಮತ್ತು ಅಂಬೋಲಿ ಘಾಟಿಯ ಹೆಸರುಗಳಲ್ಲಿ ಈ ವೀಡಿಯೋ 2021ರಿಂದ ಹರಿದಾಡುತ್ತಿರುವುದನ್ನು ನಾವು ಖಚಿತಪಡಿಸಿದ್ದೇವೆ. ಆದರೆ ಇದು ಯಾವ ಘಾಟಿಯ ದೃಶ್ಯ ಎಂಬುದನ್ನು ಸ್ವತಂತ್ರ್ಯವಾಗಿ ತನಿಖೆ ಮಾಡುವುದಕ್ಕೆ ಸಾಧ್ಯವಾಗಿಲ್ಲ.
ಇನ್ನು ವೈರಲ್ ವೀಡಿಯೋ ಚಾರ್ಮಾಡಿ ಘಾಟಿಯದ್ದೇ ಎಂದು ಖಚಿತಪಡಿಸಲು ನಾವು ಉದಯವಾಣಿ ಪತ್ರಿಕೆಯ ಸ್ಥಳೀಯ ವರದಿಗಾರರಾದ ಚೈತ್ರೇಶ್ ಇಳಂತಿಲ ಅವರನ್ನು ಸಂಪರ್ಕಿಸಿದ್ದು, ಅವರು ವೈರಲ್ ವೀಡಿಯೋ ಚಾರ್ಮಾಡಿಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವೀಡಿಯೋ ಕಳೆದ ಒಂದು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಾಗಿಯೂ ಹೇಳಿದ್ದಾರೆ.
Also Read: ಲುಪ್ಪೋ ಕೇಕ್ ನಲ್ಲಿ ಮಾತ್ರೆಗಳನ್ನಿಟ್ಟು ಮಾರಾಟ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
Conclusion
ಈ ಸತ್ಯಶೋಧನೆಯ ಪ್ರಕಾರ, ಚಾರ್ಮಾಡಿ ಘಾಟಿಯಲ್ಲಿ ರಸ್ತೆಯ ಮೇಲೆ ತೀವ್ರವಾಗಿ ನೀರು ಹರಿಯುತ್ತಿದೆ ಎನ್ನುವ ಕ್ಲೇಮ್ ಸುಳ್ಳಾಗಿದೆ.
Result: False
Our Sources
Reels By Khanapakana1017, Dated: July 23, 2021
Conversation with Chaitresh Ilantila, Reporter of Udayvani Kannada Daily
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.