Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬಾಂಗ್ಲಾದೇಶದ ಧ್ವಜ ಮಾರಾಟ ಮಾಡಿದ್ದಕ್ಕೆ ಭಾರತೀಯ ಯೋಧ ಆತನನ್ನು ಥಳಿಸಿದ್ದಾನೆ
ಬಾಂಗ್ಲಾದೇಶದ ಧ್ವಜ ಮಾರಾಟ ಮಾಡಿದ್ದಕ್ಕೆ ಭಾರತೀಯ ಯೋಧ ಆತನನ್ನು ಥಳಿಸಿದ್ದಾನೆ ಎನ್ನುವುದು ಸುಳ್ಳು. ಈ ವೀಡಿಯೋ ಬಾಂಗ್ಲಾದೇಶದ್ದಾಗಿದೆ
ಬಾಂಗ್ಲಾದೇಶದ ಧ್ವಜ ಮಾರಾಟ ಮಾಡಿದ್ದಕ್ಕೆ ಧ್ವಜ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಭಾರತೀಯ ಯೋಧ ಥಳಿಸಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಆಗಿರುವ ಈ ವೀಡಿಯೋ 12 ಸೆಕೆಂಡುಗಳಷ್ಟು ಉದ್ದವಾಗಿದ್ದು, ಇದರಲ್ಲಿ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಬಾಂಗ್ಲಾದೇಶ ಧ್ವಜ ಮಾರುತ್ತಿದ್ದ ವ್ಯಕ್ತಿಯನ್ನು ಕೋಲಿನಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಈ ಘಟನೆಯನ್ನು ಅಲ್ಲಿದ್ದ ಜನರು ವೀಡಿಯೋ ಮಾಡಿದ್ದಾರೆ.

ಆದರೆ ನಮ್ಮ ತನಿಖೆಯಲ್ಲಿ ಈ ವೀಡಿಯೋ ಭಾರತದ್ದಲ್ಲ, ಬದಲಾಗಿ ಬಾಂಗ್ಲಾದೇಶದ ರಾಜಧಾನಿ ಢಾಕಾದ್ದು ಎಂಉ ಕಂಡುಬಂದಿದೆ. ಫುಟ್ಬಾಲ್ ಪಂದ್ಯದ ವೇಳೆ ಬಾಂಗ್ಲಾದೇಶದ ಸೇನೆಯು ಧ್ವಜ ಮಾರಾಟಗಾರನನ್ನು ಥಳಿಸಿತು. ನಂತರ, ಬಾಂಗ್ಲಾದೇಶ ಸೇನೆಯು ಮಾರಾಟಗಾರನಿಗೆ ಸುಮಾರು ಒಂದು ಲಕ್ಷ ರೂಪಾಯಿ ಪರಿಹಾರವನ್ನು ಸಹ ನೀಡಿತು ಎಂದು ಗೊತ್ತಾಗಿದೆ.
Also Read: ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಯುದ್ಧ ವಿಮಾನಗಳು ಹೊರಟಿವೆ ಎಂದು ಈಜಿಪ್ಟ್ ವೀಡಿಯೋ ವೈರಲ್
ಈ ವೀಡಿಯೋವನ್ನು ಹಲವಾರು ಎಕ್ಸ್ ಬಳಕೆದಾರರು ಕೂಡ ಹಂಚಿಕೊಂಡಿದ್ದಾರೆ. ಇವುಗಳನ್ನು ಇಲ್ಲಿ ಇಲ್ಲಿ ನೋಡಬಹುದು.


ಧ್ವಜ ಮಾರಾಟಗಾರನನ್ನು ಭಾರತೀಯ ಸೇನೆಯ ಯೋಧ ಥಳಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೋದ ಬಗ್ಗೆ ತನಿಖೆಯ ವೇಳೆ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ, ಜೂನ್ 12, 2025 ರಂದು ಢಾಕಾ ಪೋಸ್ಟ್ನ ಯೂಟ್ಯೂಬ್ ಖಾತೆಯಿಂದ ಪ್ರಕಟವಾದ ವೀಡಿಯೋ ಲಭ್ಯವಾಗಿದೆ.

ಇದರಲ್ಲಿ ವೈರಲ್ ವೀಡಿಯೋ ದೃಶ್ಯಗಳಿವೆ. ಜೂನ್ 10 ರಂದು, ಬಾಂಗ್ಲಾದೇಶದ ಢಾಕಾದಲ್ಲಿ ಸಿಂಗಾಪುರ ಮತ್ತು ಬಾಂಗ್ಲಾದೇಶ ನಡುವೆ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತು. ಈ ಸಮಯದಲ್ಲಿ, ಕೆಲವರು ಗೇಟ್ ಸಂಖ್ಯೆ 4 ರಲ್ಲಿ ಟಿಕೆಟ್ ಖರೀದಿಸದೆ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು. ಅನಂತರ, ಭದ್ರತೆಯ ಕರ್ತವ್ಯದಲ್ಲಿದ್ದ ಬಾಂಗ್ಲಾದೇಶ ಸೇನಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಲಾಠಿ ಪ್ರಹಾರ ನಡೆಸಿದರು.
ಲಾಠಿ ಚಾರ್ಜ್ ಸಮಯದಲ್ಲಿ, ಒಬ್ಬ ಸೈನಿಕ ಅಲ್ಲಿ ಧ್ವಜಗಳನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಲಾಠಿ ಚಾರ್ಜ್ ಮಾಡಿದ್ದ. ಅನಂತರ, ಇದನ್ನು ಅರಿತುಕೊಂಡ ಬಾಂಗ್ಲಾದೇಶಿ ಸೇನೆ ಆ ವ್ಯಕ್ತಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿತು. ಬಳಿಕ, ಆ ವ್ಯಕ್ತಿಗೆ ಒಂದು ಲಕ್ಷ ಬಾಂಗ್ಲಾದೇಶಿ ಟಾಕಾ ಪರಿಹಾರವನ್ನು ಕೂಡ ನೀಡಲಾಗಿದೆ.
ಜೂನ್ 11, 2025ರಂದು ಜಮುನಾ ಟಿವಿ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯಲ್ಲಿ, ಜೂನ್ 10 ರಂದು ಢಾಕಾದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜನಸಮೂಹವನ್ನು ನಿಯಂತ್ರಿಸುವಾಗ ಧ್ವಜ ಮಾರಾಟಗಾರನ ಮೇಲೆ ಲಾಠಿ ಚಾರ್ಜ್ ಮಾಡಿದ ಪ್ರಕರಣ ಬೆಳಕಿಗೆ ಬಂದ ನಂತರ, ಸೇನೆಯು ಧ್ವಜ ಮಾರಾಟಗಾರನಿಗೆ ಹುಡುಕಾಟ ನಡೆಸಿದೆ. ಬಾಂಗ್ಲಾದೇಶ ಸೇನಾ ಲೆಫ್ಟಿನೆಂಟ್ ಕರ್ನಲ್ ಅಫ್ಜಲುರ್ ರೆಹಮಾನ್ ಚೌಧರಿ ಜೂನ್ 11 ರಂದು ಧ್ವಜ ಮಾರಾಟಗಾರನನ್ನು ಭೇಟಿಯಾಗಿ ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಏತನ್ಮಧ್ಯೆ, ಸೈನ್ಯವು ಧ್ವಜ ಮಾರಾಟಗಾರನಿಗೆ ಸಹಾನುಭೂತಿಯ ಸಂಕೇತವಾಗಿ 1 ಲಕ್ಷ ರೂ.ಗಳನ್ನು ನೀಡಿತು.

ಇದಲ್ಲದೆ, ಬಾಂಗ್ಲಾದೇಶದ ಸುದ್ದಿವಾಹಿನಿ ಗ್ಲೋಬಲ್ ಟಿವಿ ನ್ಯೂಸ್ನ ಯೂಟ್ಯೂಬ್ ಖಾತೆಯಲ್ಲಿ ಈ ವಿಷಯದ ಕುರಿತು ಅಪ್ಲೋಡ್ ಮಾಡಲಾದ ವೀಡಿಯೋ ವರದಿಯನ್ನು ಸಹ ನಾವು ನೋಡಿದ್ದೇವೆ . ಈ ವೀಡಿಯೋ ವರದಿ ಕೂಡ ಮೇಲೆ ತಿಳಿಸಲಾದ ಮಾಹಿತಿಯನ್ನು ಒಳಗೊಂಡಿದೆ. ಅಲ್ಲದೆ, ಈ ವೀಡಿಯೋ ವರದಿಯಲ್ಲಿ, ಕೆಂಪು ಮತ್ತು ಬಿಳಿ ಟಿ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಬಾಂಗ್ಲಾದೇಶ ಸೇನೆಯ ಲಾಠಿಚಾರ್ಜ್ಗೆ ಈಡಾಗಿರುವುದನ್ನು ಕಾಣಬಹುದು.

ಬಾಂಗ್ಲಾದೇಶದ ಧ್ವಜ ಮಾರಾಟ ಮಾಡಿದ ಮುಸ್ಲಿಂ ವ್ಯಕ್ತಿಯನ್ನು ಭಾರತೀಯ ಸೇನಾ ಯೋಧ ಥಳಿಸಿದ್ದಾನೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ವಾಸ್ತವವಾಗಿ ಬಾಂಗ್ಲಾದೇಶದ ರಾಜಧಾನಿ ಢಾಕಾದ್ದಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಜೂನ್ 10 ರಂದು ಢಾಕಾದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫುಟ್ಬಾಲ್ ಪಂದ್ಯದ ಸಂದರ್ಭದಲ್ಲಿ ಬಾಂಗ್ಲಾದೇಶದ ಪಡೆಗಳು ಲಾಠಿ ಚಾರ್ಜ್ ನಡೆಸಿದ್ದವು.
Our Sources
YouTube Video By Dhaka Post Dated: June 12, 2025
Article By Jamuna TV Dated: June 11, 2025
YouTube Video By Global TV News Dated: June 12, 2025
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 22, 2025
Vasudha Beri
November 20, 2025
Tanujit Das
November 17, 2025