Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಸರ್ಕಾರದ ವಿರುದ್ಧವೇ ಇರಾನ್ ಜನ ತಿರುಗಿಬಿದ್ದಿದ್ದಾರೆ
ಸರ್ಕಾರದ ವಿರುದ್ಧವೇ ಇರಾನ್ ಜನ ತಿರುಗಿಬಿದ್ದಿದ್ದಾರೆ ಎನ್ನುವ ಈ ವೀಡಿಯೋ 2017ರದ್ದಾಗಿದ್ದು, ಸರ್ಕಾರದ ನೀತಿಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದ್ದಾಗಿದೆ
ಇರಾನ್-ಇಸ್ರೇಲ್ ಕದನ ತೀವ್ರವಾಗುತ್ತಿರುವಂತೆಯೇ, ಇರಾನ್ ನಲ್ಲಿ ಸರ್ಕಾರದ ವಿರುದ್ಧವೇ ಜನರು ತಿರುಗಿಬಿದ್ದಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ವೈರಲ್ ವೀಡಿಯೋದ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಈಗಿನ ಸಂದರ್ಭದ್ದಲ್ಲ, 2017ರದ್ದು ಎಂದು ಕಂಡುಕೊಂಡಿದೆ.
ಸತ್ಯಶೋಧನೆಗಾಗಿ ನ್ಯೂಸ್ಚೆಕರ್ ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದೆ.
ಈ ವೇಳೆ 7 ವರ್ಷಗಳ ಹಿಂದೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದನ್ನು ನೋಡಿದ್ದೇವೆ.
ಡಿಸೆಂಬರ್ 29, 2017ರಂದು VOAfarsi ಎಂಬ ಬಳಕೆದಾರರು ವೈರಲ್ ವೀಡಿಯೋ ಹೋಲುವ ವೀಡಿಯೋವನ್ನು ಹಂಚಿಕೊಂಡಿದ್ದು, ಕೆರ್ಮೆನ್ ಶಾದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ದಾಳಿ ಮಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಸಭೆ ಶಾಂತಿಯುತವಾಗಿತ್ತು, ಆದರೆ ಪೊಲೀಸರು ಜನರನ್ನು ಜನಸಮೂಹದಿಂದ ಬೇರ್ಪಡಿಸಿ ಬಂಧಿಸಿದರು. (ಪಾರ್ಸಿಯಿಂದ ಭಾಷಾಂತರಿಸಲಾಗಿದೆ) ಎಂದಿದೆ.
ಇದೇ ರೀತಿಯ ವಿವರಣೆಯೊಂದಿಗೆ,ಪೋಸ್ಟ್ ಅನ್ನು voafars ಇನ್ಸ್ಟಾಗ್ರಾಂ ಪೇಜ್ ನಲ್ಲೂ ಕಂಡಿದ್ದೇವೆ.

ಆ ಬಳಿಕ ನಾವು ಘಟನೆಯ ಕುರಿತಾದ ವರದಿಗಳ ಬಗ್ಗೆ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಇರಾನ್ ನ ವಿವಿಧ ಮಾಧ್ಯಮಗಳೂ ಇದನ್ನು ವರದಿ ಮಾಡಿವೆ.
ಜನವರಿ 28, 2017ರ ir.voanews ವರದಿ (ಜೂನ್ 16, 2021ರಂದು ಈ ವರದಿ ಅಪ್ಡೇಟ್ ಆಗಿದೆ) ಪ್ರಕಾರ, ಮಷಾದ್ ಮತ್ತು ಖೊರಾಸನ್ ಮತ್ತು ಶಹರೂದ್ನ ಹಲವಾರು ಇತರ ನಗರಗಳಲ್ಲಿ ನಡೆದ ಪ್ರತಿಭಟನಾ ರಾಲಿಯ ಒಂದು ದಿನದ ನಂತರ, ಇರಾನ್ನ ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿಭಟಿಸಿದ ಜನರು ಕೆರ್ಮನ್ಶಾ ಮತ್ತು ಖೊರಾಮಾಬಾದ್ ನಗರಗಳಲ್ಲಿ ಜಮಾಯಿಸಿ ಇಸ್ಲಾಮಿಕ್ ಗಣರಾಜ್ಯ ಇರಾನ್ನ ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದಿದೆ. ಈ ವರದಿಯಲ್ಲಿ ಪ್ರತಿಭಟನೆ ಬೆಲೆ ಏರಿಕೆ ಮತ್ತು ಭೂಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ, ಸರ್ಕಾರದ ನೀತಿಗಳ ವಿರುದ್ಧ ಆಗಿತ್ತು ಎಂದಿದೆ.

ಡಿಸೆಂಬರ್ 8, 2017ರ radiofarda ವರದಿಯಲ್ಲೂ (ಜೂನ್ 16, 2021ರಂದು ಈ ವರದಿ ಅಪ್ಡೇಟ್ ಆಗಿದೆ) ಕೆರ್ಮನ್ ಶಾದಲ್ಲಿ ಬೆಲೆ ಏರಿಕೆ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆದಿದೆ ಎಂದಿದೆ.

ಆದ್ದರಿಂದ ಈ ಸಾಕ್ಷ್ಯಾಧಾರಗಳ ಪ್ರಕಾರ, ಇದು 2017ರಲ್ಲಿ ಇರಾನ್ ನಲ್ಲಿ ಸರ್ಕಾರದ ನೀತಿಗಳ ವಿರುದ್ಧ ನಡೆದ ಪ್ರತಿಭಟನೆಯಾಗಿದ್ದು, ಈಗಿನ ಇಸ್ರೇಲ್-ಇರಾನ್ ಕದನಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ.
Also Read: ಜೂನ್ 15ರಿಂದ ಎಲ್ಲ ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಎನ್ನುವುದು ನಿಜವೇ?
Our Sources
X Post By VOAfarsi, Dated: December 29, 2017
Instagram Post By voafars, Dated: December 29, 2017
Report By ir.voanews Dated: January 28, 2017
Report By radiofarda, Dated: December 8, 2017
Ishwarachandra B G
November 19, 2025
Ishwarachandra B G
November 7, 2025
Vasudha Beri
October 9, 2025